ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು..
೩
ನಮ್ಮ ಯಜಮಾನನ ಮನೆಯಲ್ಲಿ ಎಂದಿನಂತೆ... ಹೋದೆ.. ಇಂದು ನಾನು ಇನ್ನೂ ಮುಂದೆ ನಿಮ್ಮಲ್ಲಿ ಕೆಲಸ ಮಾಡಲಾರೆ ಎಂದು ಹೇಳೇ ಬಿಡಬೇಕು ಅನ್ನಿಸಿದರು.. ಬಾಯಿ ಯಾಕೋ ಸಹಕರಿಸಲಿಲ್ಲ.. ಮಾಮೂಲಿನಂತೆ ಕೆಲಸ ಮಾಡಿದೆ.. ನಮ್ಮ ಯಜಮಾನರಿಗೆ ಯಾಕೋ ಅಶ್ವಿನ ಮೇಲೆ ಸಿಟ್ಟು ಆರಿದಂತಿತ್ತು.. ಬಹುಶಃ ಅವನಿರದಿರುವ ದಿನಗಳಲ್ಲಿ ಯಾವದೋ ಸೂಳೆಯರೊಂದಿಗೆ ಮಜಾ ಮಾಡಿರಬೇಕು.. ಅಥವಾ ಅಶ್ವಿನನ ಊರಿನಿಂದಲೇ ಬಂದಿರುವ ಇಲ್ಲಿನ ಎಲ್ಲಾ ಸ್ಥಿತಿಗೂ ಹೊಂದಿಕೊಂಡಿರುವ ಕೆಲವೊಮ್ಮೆ ನನಗೆ ಹೇಸಿಗೆ ಹುಟ್ಟಿಸುವನ್ತೆಲ್ಲ ನಮ್ಮ ಯಜಮನನೊಂದಿಗೆ ನಡೆದು ಕೊಳ್ಳುವ ಶರತ್ ಎಂಬ ಹುಡುಗ ಚನ್ನಾಗಿ ಯಜಮಾನನ ಸೇವೆ ಮಾಡಿರಬೇಕು.. ಹಲವು ಬಾರಿ ಯೋಚಿಸಿದ್ದಿದೆ.. ಇಬ್ಬರು ಒಂದೇ ಕಡೆಯಿಂದ ಬಂದರು.. ಇವರಿಬ್ಬರ ನಡುವೆ ಅದೆಂತಾ ಭಿನ್ನತೆ.. ಹಲವು ಬಾರಿ ಅವರಿಬ್ಬರ ನಡುವೆಯೇ ಅದೇ ಯಾವುದೊ ಹವ್ಯಕ ಭಾಷೆಯಂತೆ ಅದ್ರಲ್ಲಿ ವಾಗ್ಯುದ್ದ ನಡೆಯುತ್ತದೆ.. ಅದನ್ನೆಲ್ಲ ಮೊದ ಮೊದಲು ತಮಿಳಿಗೆ ಹೊಂದಿಸಿ ಹೇಳುತ್ತಿದ್ದವನು ಶರತ್. ಅವನು ಇವನಂತೆ ಬಲು ಬೇಗ ತಮಿಳು ಕಲಿತವನು.. ಅಶ್ವಿನ ತಮಿಳು ಲಿಪಿಯನ್ನು ಕಲಿತ ಜೊತೆಗೆ ನನಗು ಕನ್ನಡ ಹೇಳಿಕೊಟ್ಟ. ಅವನ ಹತ್ತಿರ ಎನಗಬೇಕೆನ್ದಿರುವೆ ಎಂದು ಕೇಳಿದಾಗ ಟೀಚರ್ ಆಗಬೇಕೆಂಬ ಆಸೆ ಇದೆ ಕಣೋ. ಎಂದಿದ್ದ.. ಖಂಡಿತ.. ಅವನೇನಾದರೂ ಶಿಕ್ಷಕನಾದರೆ ಖಂಡಿತ ಒಬ್ಬ ಆದರ್ಶ ಶಿಕ್ಷಕನಾಗುವುದರಲ್ಲಿ ನನಗಂತೂ ಅನುಮಾನವಿರಲಿಲ್ಲ...ಅಷ್ಟು ಚನ್ನಾಗಿ ನನಗೆ ಕನ್ನಡ ಕಲಿಸಿ ಕೊಟ್ಟಿದ್ದ.. ಅವನು ತಮಿಳು ಲಿಪಿಯನ್ನು ಕಲಿತದ್ದು , ನಂತರ ತಮಿಳು ಪತ್ರಿಕೆಯನ್ನ ಓದ ತೊಡಗಿದ್ದನ್ನು ಕಂಡ ನಮ್ಮ ಯಜಮಾನ ಅಭಿಮಾನದಿಂದ ಬೇಶ್ ಅಂದಿದ್ದರು.. ಅದನ್ನ ಕಂಡು.. ನಮಗೆಲ್ಲ ಆಶ್ಚರ್ಯವಾಗದೆ ಇರಲಿಲ್ಲ.. ಒಮ್ಮೊಮ್ಮೆ.. ನಮ್ಮ ಯಜಮಾನನು ಒಳ್ಳೆಯವನಂತೆ ಕಾಣಿಸುತ್ತನಲ್ಲ ಎಂದು.. ಅದಕ್ಕೆ ಆಗ ನನ್ನ ಮಿತ್ರ ಹೇಳಿದ್ದು ನೆನಪಿಗೆ ಬರುತ್ತಿದೆ.. ದೋಸ್ತ ಯಾರು ಕೆಟ್ಟವರಲ್ಲ ಪರಿಸ್ತಿತಿ ಕೆಟ್ಟವರ್ನ್ನಗಿಸುತ್ತದೆ.
ಮದುವೆ ಮುಗಿಸಿ ಬಂದು ಒಂದೆರಡು ದಿನ ಕಳೆದಿರಬಹುದು ಅಂದು ರಾತ್ರಿ ಮದಿರೆಯ ಸೇವನೆಗೆ ಕುಳಿತಿದ್ದರು ನಮ್ಮ ಸಾಹುಕಾರ. ಪಕ್ಕದಲ್ಲಿ ನಾನು ಮತ್ತೆ ಶರತ್ . ಲೋಟಕ್ಕೆ ಮದಿರೆಯನ್ನ ಎರಸಿ ಕುಡಿಸುತ್ತಿದ್ದೆವು. ಅಶ್ವಿನ್ ಮಾತ್ರ ಎದುರಿನಲ್ಲಿ ಇರಲಿಲ್ಲ.. ಅವನು ಸಂದ್ಯವಂದನೆಗೆಂದು ಅವನೇ ತಂದಿಟ್ಟುಕೊಂಡಿದ್ದ.. ದೇವರ ಫೋಟೋ ಮುಂದೆ ಕುಳಿತಿದ್ದ.
ಆಗ ಅಶ್ವಿನ್ ನ ಬಗ್ಗೆ ಮಾತನಾಡ ತೊಡಗಿದರು. ನಮ್ಮ ಬಾಸ್ ಏನೇನೋ ತಮ್ಮ ಕೀಳು ಶಬ್ದಗಳಿಂದ ಅವನನ್ನ ವರ್ಣಿಸುತ್ತಿದ್ದರು. ನನ್ನ ಸೇವೆ ಮಾಡೋಕೆ ಅಂಥ ಕರ್ಕೊಂಡು ಬಂದ್ರೆ ಇವನ ಸೇವೆನೆ ನಾನು ಮಾಡ ಬೇಕಾಗಿದೆ.. ಎಂದು ಮುಂತಾಗಿ ಮಾತನಾಡುತ್ತಿದ್ದರು.ಅದಕ್ಕೆ ಶರತ್ ಧ್ವನಿಗೂಡಿಸುತ್ತಿದ್ದ. ಅಷ್ಟರಲ್ಲಿ ಅಶ್ವಿನ್ ಅಲ್ಲಿಗೆ ಬಂದ.. ಅದನ್ನ ಕಂಡ ನಮ್ಮ ಬಾಸ್ ನ ನಾಲಿಗೆ ತಕ್ಷಣ ಹೊರಳಿ ಅವನ ಬಗ್ಗೆ ಪ್ರೀತಿ ಹೆಚ್ಚಿ ಬಿಟ್ಟಿತು. ಹಾಗೇ ಪ್ರೀತಿಯಿಂದ ಅವನನ್ನು ತಮ್ಮ ಪಕ್ಕ ಕರೆದು ಕೂಡ್ರಿಸಿಕೊಂಡರು ಬೆಣ್ಣೆಯಲ್ಲಿ ನೂಲು ತೆಗೆದಂತೆ ಅವನೊಟ್ಟಿಗೆ ಹರಟ ತೊಡಗಿದರು. ಅವನ ಕನಸುಗಳ ಬಗ್ಗೆ ಕೇಳಿದರು ಅವನು ಟೀಚರ್ ಆಗಬೇಕೆಂಬ ಆಸೆ ಇದೆ ಎಂದ. ಅದಕ್ಕೆ ಅವರು ಕುಡಿದ ಅಮಲಿನಲ್ಲಿ ಟೀಚರ್ ವೃತ್ತಿಯ ಬಗ್ಗೆ ಕೇವಲವಾಗಿ ಮಾತನಾಡಿ ಬಿಟ್ಟರು. ಅದನ್ನ ಕಂಡು ಅಶ್ವಿನ ಮುಖ ಕೆಂಪಗುತ್ತಿರುವುದು ಕಂಡಿತು. ನಂತರ ಕಲಾಮಜೀ ಅವರ ಯಾವುದೊ ಒಂದು ನುಡಿಮುತ್ತು ಊದುರಿಸಿ ಯಾವತ್ತು ನಮ್ಮ ಕನಸು ದೊಡ್ಡದಾಗಿರಬೇಕು ಆತಿ ಚಿಕ್ಕ ಗುರಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದೆಲ್ಲಾ ಅವನ ತಲೆ ಸವರ ತೊಡಗಿದರು.ನಂತರ ತಾವು ಕುಡಿಯುತ್ತಿದ್ದ ಮದಿರೆಯ ಲೋಟವನ್ನ ಅವನ ಬಾಯಿಯ ಹತ್ತಿರ ತಂದರು. ಆಗ ಪರಿಸ್ಥಿತಿ ವಿಕೋಪ ತಲುಪಿತು. ನಾನು ಈಗ ಅಶ್ವಿನ್ ಅನ್ನು ತಡೆಯುವಷ್ಟು ಆತನಿಗೆ ಆತ್ಮಿಯನಗಿದ್ದೆ ಆದರೆ ನಮ್ಮ ಬಾಸ್ ಗೆ ಏನು ಎದುರೇಟು ನೀಡುತ್ತಾನೆ ಎಂದು ನೋಡಲೇ ಬೇಕಾಗಿತ್ತು. ಅದು ಅಲ್ಲದೆ ಅವನು ನನ್ನ ಮಾತನಾಡುವ ಬಾಯಿ ಆಗಿದ್ದ. ಅಶ್ವಿನ ಆ ಲೋಟವನ್ನು ಕಸಿದು ಕೊಂಡು ದೂರದಲ್ಲಿ ಇಡಲು ಹೋದಾಗ ಅದರಲ್ಲಿರುವ ಮದಿರೆ ತುಳುಕಿ ನಮ್ಮ ಬಾಸ್ ಮೇಲೆ ಚೆಲ್ಲಿ ಅವರ ಮುಖ ಕಪ್ಪಿಟ್ಟಿತು.. ಸಿಟ್ಟಿನಲ್ಲಿ ಅವನ ಮೇಲೆ ಕೈ ಮಾಡ ಹೋದರು. ಅವರ ಕೈ ಹಿಡಿದು ಕೊಂಡ.. ಅಶ್ವಿನ್ ತನ್ನ ವಾಗ್ಜರಿಯನ್ನ ಆರಂಭಿಸಿದ. " ಏನೋ ಅಂದೇ ಟೀಚರ್ ಅಂದರೇ ಏನು ಅಂಥ ತಿಳಿದಿದಿಯ ನೀನು. ಒಂದು ಮಾತು ನೆನಪಿಟ್ಟಕೋ ಇವತ್ತು ನೀನು ದೊಡ್ಡ ಹೆಸರು ಮಾಡಿರಬಹುದು. ಸುಪ್ರಿಂ ಕೋರ್ಟ್ ಲಾಯೆರ್ ಆಗಿರಬಹುದು. ಅದಕ್ಕೆಲ್ಲ ತಳಹದಿ ಆಗಿ ನಿಂತಿರೋರಲ್ಲಿ ಟೀಚರ್ ಪ್ರಮುಖ. ನಿನ್ನ ಹೆತ್ತ ತಂದೆ ತಾಯಿಗಾದ್ರೂ ನಿನ್ನ ಬೆಳೆಸೋದ್ರಲ್ಲಿ ಮಗ ಮುಂದೆ ತಮ್ಮನ್ನ ಚನ್ನಾಗಿ ನೋಡ್ಕೋಬೇಕು ಅಂಥ ಅನ್ನೋ ಸ್ವಾರ್ಥ ಇರುತ್ತೆ.. ಆದರೆ ಅದೇ ಟೀಚರ್ ಗೆ ಯಾವ ಆಸೆ ಇರುತ್ತೆ.. ತಿಂಗಳ ಸಂಬಳ ಕಲಿಸದೆ ಹೋದರು ಅವರ ಕೈ ಸೇರುತ್ತೆ. ಆದರು ಅವರು ತಮ್ಮ ಮಕ್ಕಳಂತೆ ನಮ್ಮನ್ನ ತಿದ್ದುತಾರೆ. ಒಂದು ವೇಳೆ ನಿನಗೆ ಒಳ್ಳೆ ಟೀಚರ್ ಸಿಗದೇನೇ ಅವರು ನಿನಗೆ ಮದಿರೆ ಕುಡಿ ಸ್ಟೇಟಸ್ ಬರುತ್ತೆ ಅನ್ನೋ ಹಿತವಚನ ಹೇಳಿ ಮದಿರೆ ಬಾಟಲ್ ನಿನ್ನ ಕೈ ಹಿಡಿಸಿದಿದ್ರೆ ನೀನು ಇಷ್ಟೊತ್ತಿಗೆ ಯಾವ ಮೊರಿನಲ್ಲಿ ಕುಡಿದು ಬಿದ್ದಿರ್ತಿದ್ಯೋ ಏನೋ.. ದೇಶಕ್ಕೆ ಸುಸಂಸ್ಕ್ರತ ಪ್ರಜೆಗಳನ್ನ ಕೊಡಬೇಕು ಅಂತ ಅಂದ್ರೇ ಅದಕ್ಕೆ ಟೀಚರ್ ಪಾತ್ರ ಬಹು ದೊಡ್ಡದು.. ಹೌದು ನೀನು ಹೇಳೋದು ಕೆಲವಷ್ಟು ನಿಜ. ಅದರಲ್ಲಿ ನೀನು ಗಳಿಸಿದಷ್ಟು ಹಣ ಹೆಸರು ಗಳಿಸಲಿಕ್ಕೆ ಆಗದೆ ಇರಬಹುದು.. ಆದರೆ ನೆಮ್ಮದಿ ಇದೆ. ಸಾಯೋ ಕಾಲದಲ್ಲಿ ನಮ್ಮ ಕೈ ಹಿಡಿದವಳು ನಾವು ಹೆತ್ತ ಮಕ್ಕಳು ಎಲ್ಲರಿಂದ ದೂರಾಗಿ ಬದುಕೋ ನಿನ್ನ ಅಂಥ ಬೀದಿ ನಾಯಿ ಪಾಡು ಖಂಡಿತ ಬರಲ್ಲ ಅನ್ನೋ ನಂಬಿಕೆ ಇದೆ. ಹಾಗೇ ನಾನು ಇಲ್ಲೇ ನಿನ್ನ ಕೈ ಕೆಳಗೆ ಜೀತ ಮಾಡ್ಕೊಂಡಿದ್ರೆ ಆ ಸುಖಾನು ಸಿಗೋಲ್ಲ ನಿನ್ನ ಸ್ಟೇಟಸ್ ಕೂಡ ಕನ್ನಡಿಯ ಗಂಟಾಗಿ ಬಿಡುತ್ತೆ.. ಸಿಕ್ಕದ್ರು ಅದು ನೀ ಕೊಟ್ಟ ಭಿಕ್ಷೆ ಆಗಿರುತ್ತೆ.. ಅದೆಲ್ಲ ನನಗೆ ಬೇಡ. ನಾನು ಊರಿಗೆ ಹೋಗ್ತೀನಿ. ನನ್ನ ಹತ್ರ ಇವಾಗ ಊರಿಗೆ ಹೋಗೋಷ್ಟು ದುಡ್ಡಿಲ್ಲ ಕೊಡಿ ನಂತರ ನಿಮ್ಮ ಅಕೌಂಟ್ ಗೆ ಜಮ ಮಾಡ್ತೀನಿ. ಇಲ್ಲಿ ನಾನು ಕೆಲಸ ಕೂಡ ಮಾಡಿರೋದ್ರಿಂದ ಊಟ ಮಾಡಿರೋದಕ್ಕೆ ಅಂತ ನಾನೇನು ನಿಮಗೆ ಕೊಡೋದು ಇಲ್ಲಾ ಅಂದ್ಕೋತೀನಿ. ಹಃ ಹಾಗೇ ನಮ್ಮ ಬಾಲಾಜಿಗೂ ಈ ಬದುಕು ಸಾಕಾಗಿದೆ. ಅವನನ್ನ ಅವರ ಮನೆಗೆ ಕಳಿಸಿಕೊಡಿ. ಅವನು ನಿಮಗೆ ಕೊಡ್ಬೇಕಿರೋ ಹಣಾನ ಕಂಡಿತ ಅವನೇ ಸ್ವತಂತ್ರವಾಗಿ ದುಡುದು ತೀರಿಸ್ತಾನೆ. ಅದರಲ್ಲಿ ನಂಬಿಕೆ ಇರಲಿ. ಯಾಕಂದ್ರೆ ಅವನು ನನ್ನ ಹಾಗೇ ಸಾಕಸ್ಟು ಕನಸ ಕಂಡಿದಾನೆ. ದಯಮಾಡಿ ಅದನ್ನ ಚಿವುಟಿ ಹಾಕದೆ ಚಿಗುರಲು ಬಿಡಿ. ಖಂಡಿತ ನೀವು ನಮ್ಮ ಅಂಥ ಅಮಾಯಕರನ್ನ ಓದುಸ್ತಿವಿ ಅಂಥ ಕರೆಸ್ಕೊಂದು ಅವರ ಓದಿಗೆ ತಿಲಾಂಜಲಿ ಇಡೋ ಹಾಗೇ ಮಾಡಬೇಡಿ. ಬೇಕಾದರೆ ದಿನ ರಾತ್ರಿ ಬರ್ತಾರಲ್ವ ಅಂಥವರನ್ನ ಯಾರನ್ನಾದರು ಖಾಯಮ ಆಗಿ ಇರಿಸಿಕೊಳಿ. ಆದರೆ ಅವರಿಗೂ ಒಂದು ಕನ್ಸಿರುತ್ತೆ ಅನ್ನೋದನ್ನ ಮರಿಬೇಡಿ.. ಅದಕ್ಕಿಂತ ನಿಮ್ಮ ಹೆಂಡತಿ ಮಕ್ಕಳ ಸಂಗಡ ಬದುಕೋದು ಎಸ್ಟೋ ಉತ್ತಮ. ಪ್ರೀತಿ ಮತ್ತೆ ನೆಮ್ಮದಿನ ಹಣದಿಂದ ಮತ್ತೆ ಬಲವಂತವಾಗಿ ಯಾರಿಂದಲೂ ಕಿತ್ತ್ಕೊಲೋಕೆ ಆಗಲ್ಲ ಅನ್ನೋದು ದೊಡ್ಡವರಾದ ನಿಮಗೆ ಗೊತ್ತು. ಇಲ್ಲಿ ನಿಮಗೆ ಗುಲಾಮರಾಗಿ ದುಡಿತ ಇರೋ ಯಾರೊಬ್ಬರಿಗೂ ನಿಮ್ಮ ಮೇಲೆ ನಿಜವಾದ ಪ್ರೀತಿ ಇಲ್ಲಾ.. ಇದ್ದಿದ್ದರೆ ಇಷ್ಟು ನಿಮ್ಮ ಬಗ್ಗೆ ಮಾತಾಡ್ತಾ ಇರೋ ನನ್ನನ್ನ ಹೊಡೆದು ಹಾಕ್ತಿದ್ರು.. ಇಲ್ಲಾ ಕೊಲೇನೆ ಮಾಡ್ತಿದ್ರು.. ಅಲ್ಲವ ಸರ್??"
ಇಷ್ಟು ಹೇಳಿ ಬಾಟಲ್ ನಲ್ಲಿದ್ದ ನೀರನ್ನ ಕುಡಿದು ನಾಳೆ ಹೊರಡ್ತೀನಿ..ಸರ್. ನನ್ನ ಜೊತೆ ಬಾಲಾಜಿನ ಬಸ್ ಸ್ಟಾಪ್ ವರೆಗೂ ಕಳುಹಿಸಿ ಕೊಡಿ.ಎಂದು ಎದ್ದು ಮಲಗುವ ಕೋಣೆಗೆ ನಡೆದ.
ನಂತರ ನನ್ನ ಕರೆದು ಅವನ ಬ್ಯಾಗಿನಲ್ಲಿ ೩೦೦ ರೂಪಾಯಿ ಇದೆ.. ಮೈಸೂರ್ ವರೆಗೆ ಹೋಗಲು ಇನ್ನೂ ೧೫೦ ರೂಪಾಯಿ ಬೇಕು ಅದನ್ನ ಅವನಿಗೆ ಕೊಡು. ಮೈಸೂರಿಗೆ ಹೋಗುವ ನಾಳೆ ರಾತ್ರಿಯ ಬಸ್ ಗೆ ಹತ್ತಿಸಿ ಬಾ. ಊಟ ತಿನ್ದಿಗೆನು ಕೊಡೋದು ಬೇಡ.. ಹ್ಯಾಗೂ ಆ ಭಟ್ರು ಮನೆಯಿಂದ ತಾನೆ ಕರ್ಕೊಂಡು ಬಂದಿರೋದು ಅಲ್ಲಿವರೆಗೆ ಕಳಸದ್ರೆ ಆಯ್ತು. ಇಂಥ ನಾಲಯಕಗಳ ಮಾತನ್ನೆಲ್ಲ ಕೇಳಿ ತಲೆ ಹಾಳು ಮಾಡ್ಕೋ ಬೇಡ.. ತಿಳಿತ. ಎಂದರು. ಅಲ್ಲಾ ಅಶ್ವಿನ್ ಹತ್ತಿರ ಇರೋ ಬಿಡಿಗಾಸನ್ನು ಸಹ ಕದ್ದು ನೋಡಿದ್ದಾರಲ್ಲ ಎಂಥ ಮನುಷ್ಯ ಇರಬಹುದು. ಇವನು. ಅನ್ನಿಸಿ ಸರಿ ಎಂದು ಹೋಗಿ ಮಲಗಿದೆ.
ಅಲ್ಲಿಂದ ಮಾರನೇ ದಿನ ರಾತ್ರಿ ಅಂದರೇ ನವೆಂಬರ್ ೧೪ ರ ರಾತ್ರಿ ಲಗೇಜ್ ಹಿಡಿದು ಅಶ್ವಿನ್ ಜೊತೆ ಹೊರಟೆ. ಮನೆಯಿಂದ ಹೊರಡುವಾಗ ಅಶ್ವಿನ್ ನಮ್ಮ ಬಾಸ್ ಹತ್ತಿರ ಬಂದು ನಿಂತು " ಸರ್ ನಾನೇನಾದರೂ ತಪ್ಪಾಗಿ ಮಾತಾಡಿದ್ರೆ ಕ್ಷಮಿಸಿ. ನಿಮ್ಮ ಮನಸಿಗೆ ನೋವು ಆಗುವಂತೆ ಮಾತಾಡದೆ. ನನಗೆ ಓದುಬೇಕು ಅಷ್ಟೇ ಅದಕ್ಕೆ ನಮ್ಮ ಮನೆ ಪರಿಸ್ತಿತಿ ಓದ್ಸೋ ಅಷ್ಟು ಚನ್ನಾಗಿ ಇರಲಿಲ್ಲ ಅದು ಅಲ್ಲದೆ ನಮಗೆ ಹತ್ತಿರದ ಸಂಬಂದಿ ಆಗಿದ್ದ ನಮ್ಮ ಭಟ್ರು ಹೇಳಿದ್ರು ಒಳ್ಳೆ ಜನ ಅವರೇ ಓದ್ಸ್ತಾರೆ ಅಂತೆಲ್ಲ ಏನೇನೋ ಹೇಳ್ದಾಗ.. ನನ್ನ ಕಿವಿ ಮೇಲೆ ಬಿದ್ದಿದ್ದು ಓದು ಹೇಳೋ ಶಬ್ದ ಮಾತ್ರ. ಅದಕ್ಕೆ ಜಾಸ್ತಿ ಯೋಚನೆ ಮಾಡದೇ ಒಪ್ಪ್ಕೊಂದು ಇಲ್ಲಿಗೆ ಬಂದೆ..ನಿಮಗೆ ಅಂದೇನು ಪ್ರಯೋಜನ.. ಎಲ್ಲಾ ನನ್ನ ಮಂಕು ಬುದ್ದಿ.. ನಿಮಗೆ ಗೊತ್ತ ಸರ್ ನಾನು ಪಿ.ಯು.ಸಿ.ನಲ್ಲಿ ತಾಲೂಕಿಗೆ ೩ ನೇ ರಾಂಕ್ . ಪರೀಕ್ಷೇಲಿ ಪಾಸಾದೆ ಎಂಬ ಮತ್ತಲ್ಲಿ ಜೀವನ ಎಂಬ ಪರೀಕ್ಷೇಲಿ ಫೈಲ್ ಆಗಿಬಿಟ್ಟೆ. ಆದರು ಬೇಜಾರಿಲ್ಲ ಸರ್ ಇದೊಂದು ಮರೆಯಲಾಗದ ನೆನಪು.. ಧನ್ಯವಾದಗಳು " ಹೇಳಿ ಹೊರಟ. ಅದಕ್ಕೆ ನಮ್ಮ ಬಾಸ್ ಮಾಡಿದ್ದೇನು ಗೊತ್ತೇ ಕರೆದು ಅಪ್ಪಿಕೊಂಡು. ಆದಷ್ಟು ಬೇಗ ಈ ಮನೆಗೆ ವಾಪಸ್ಸ್ ಬಾ ಅಶ್ವಿನ್ ಖಂಡಿತ ನಿನ್ನ ಓದಿಸ್ತಿನಿ." ಸರ್ ಇಲ್ಲಾ ಸರ್ ನನಗೆ ಇಂಥ ಜೀವನ ಇಷ್ಟ ಆಗೋಲ್ಲ.. ನನಗೆ ನನ್ನ ಪುಟ್ಟ ಹಳ್ಳಿಯ ಜೀವನಾನೆ ಚಂದ ಅಲ್ಲಿಂದಲೇ ಮತ್ತೊಮ್ಮೆ ಹುಟ್ಟಿ ಬರ್ತೀನಿ. ಜಗತ್ತನ್ನ ಆ ಕಣ್ಣುಗಳಿಂದಲೇ ನೋಡ್ಲಿಕ್ಕೆ ಇಷ್ಟ ಪಡ್ತೀನಿ. "
ಅಲ್ಲಿಂದ ಚನ್ನೈ ಬಸ್ ಸ್ಟಾಪ್ ನಲ್ಲಿ ಮೈಸೂರ್ಗೆ ಹೋಗೋ ಬಸ್ ಹತ್ತಿಸಿದೆ.. ನಂತರ. ದೋಸ್ತ ಯಾವಾಗಲು ಕಾಂಟಾಕ್ಟ್ ಅಲ್ಲಿ ಇರು ಎಂದೆ.. ಆಯಿತು.. ಆದಷ್ಟು ಬೇಗ ನೀನು ಕೂಡ ಹೊಸ ಬಾಲಾಜಿ ಆಗು ಎಂದ.. ಅಷ್ಟೇ ಅಲ್ಲಾ ನೀನು ಒಂದು ದೊಡ್ಡ ಬಿಸಿನೆಸ್ ಮ್ಯಾನ್ ಆಗೇ ಆಗ್ತಿಯ ಆ ನಿಮ್ಮ ಯಜಮಾನನ ಮನೆಯಲ್ಲಿ ಹಾಕಿದ ಅರ್ಧದಷ್ಟು ಪರಿಶ್ರಮ ನಿನ್ನ ಬಿಸಿನೆಸ್ ಗೆ ಪ್ರೀತಿಯಿಂದ ಹಾಕು.. ನೀನು ದೊಡ್ಡ ಮನುಷ್ಯನಾದೆ ಅಂದ್ರೇ ಎಲ್ಲರಿಗಿಂತ ಜಾಸ್ತಿ ಖುಷಿ ಪಡುವವನು ನಾನು..ಎಂದು ಹೊರಟೆ ಹೋದ. ಅಲ್ಲಿಂದ ಹೊರಟು ಹೋದವನ ಮುಖ ನಂತರ ನೋಡಲೇ ಇಲ್ಲಾ. ಆದರೆ.. ಆ ಅರೆ ಮಲೆನಾಡ ಹುಡುಗ.. ನಂತರ ಒಂದೆರಡು ಪತ್ರಗಳ ಮೂಲಕ ತನ್ನ ಅರೆಬೆಂದ ಕನಸುಗಳ ಸ್ಥಿತಿ ಹೇಳಿಕೊಂಡ.. ಅದೆಲ್ಲ ನನಗೆ ಸ್ಪೂರ್ತಿ ಕೊಟ್ಟಿತು. ಅದೇ ಈಗ ಜೀವನದಲ್ಲಿ ಮೊಬೈಲ್ ಶೋ ರೂಂ ಇಟ್ಟು ಕೊಂಡು. ಕೈ ಅಲ್ಲಿ ನಾನಾ ತರಹದ ಬಿಸಿನೆಸ್ ಮಾಡಿಕೊಂಡು ಪಲ್ಸುರ್ ಬೈಕ್ನಲ್ಲಿ ಅಮ್ಮನನ್ನ ಕೂರಿಸಿಕೊಂಡು ಸಿಟಿ ಸುತ್ತಲು ಕಾರಣ ಆಯಿತು.. ಅಷ್ಟೇ ಅಲ್ಲಾ ನಾನು ಇವಾಗ ೧೦-೧೫ ಮಂದಿ ಜನರಿಗೆ ಕೆಲಸ ಕೊಟ್ಟಿದೀನಿ.. ಬರುವ ವರ್ಷ ಮತ್ತಷ್ಟು ವಿಸ್ತರಿಸಬೇಕೆಂದಿದೆ. ಆದರೆ ನನ್ನ ಯಜಮನಂತೆ ದರ್ಪದಿಂದಗಲಿ ಹಣದಿಂದಗಲಿ ನನ್ನ ಕೆಲಸಗರರನ್ನ್ ಗೆದ್ದಿಲ್ಲ ಬದಲಿಗೆ ಪ್ರೀತಿಯಿಂದ ಗೆದ್ದಿದ್ದೇನೆ.. ಇದಕ್ಕೆ ಅವನು ಸ್ಪೂರ್ತಿಯುತ ಪತ್ರಗಳು ಕಾರಣ. ಅವನು ಬರೆದ ಕೆಲವು ಪತ್ರಗಳನ್ನ ಮುಂದಿನ ಸಂಚಿಕೆ ಅಲ್ಲಿ ತೆರೆದಿದುತ್ತೇನೆ. ನಾನು ಕೂಡ ಅವನಿಗೆ ಒಂದೆರಡು ಪತ್ರ ಬರೆದಿದ್ದೆ. ಬೇಗ ಬಾ ಎಂದು..
ಮುಂದುವರೆಯುವುದು ..
ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು... e shiirashike tumbaa istavaayitu..
ReplyDeletehowdu illi naanu stands for?
ReplyDeletenanu means a narrator madam..
ReplyDeletehum... tumbaa hrudayakke naatuva haage kathe oduttee!... odisikondu hoguva shaili... nijvaagluu ide... khare helavuu andre idondu "olleya paath"da haage iddu... jeevanadalli echchirikeya mahatva... sandarbhaa.... horabaruva tantraa.... ellavannu helutte... illondu paatrada muulaka ... naavella tilidukolluva niiti endre" haavu bhuss andre elru hedrataare... sumne bidkondre... kyaare irtille"... ketta janarindaa paaragaluu kale beku... dvesha kattikkollade...! ALL THE BEST
ReplyDeleteThank You Akka..............
ReplyDelete