ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Saturday, November 28, 2015

ಹೀಗೊಂದು ಮನದ ತಲ್ಲಣ...

ಹೀಗೊಂದು ಮನದ ತಲ್ಲಣ...

 ಗೆಳತಿ ಇದು ನಿನಗೆ ಸರಿಯೇನೆ??
ಕಡೆಗಣಿಸಿದೆ ಏಕೆ??? ಎಂದು 
ಕೇಳಿ.. ಈ ನನ್ನ ಮನದಲ್ಲಿ
ಇಲ್ಲದ ಆಸೆಯ ತುಂಬಿ.. ಮರೆಯಾದೆ ಯಾಕೆ??

ತಿಳಿಯದೆ ಆಗಿರುವ ಅಪರಾಧವ 
ಕ್ಷಮಿಸು 
ಅಪ್ಪಿ ತಪ್ಪಿಯೂ ನಾನು ಕೈ ಬಿಡೆನು 
ಎಂದಿಗೂ.. ಎಂದೇ ಹೇಳ ಬೇಕೆಂದು
ಬರುವ ಮೊದಲೇ ಕಡೆಗಣಿಸಿ 
ಹೋದೆ ಯಾಕೆ??? 

ಎಂದು ಕಾಣದ ಕನಸುಗಳ 
ಹೂ ಎರಚಿ.. ಅದರ 
ಪರಿಮಳ ಕಂಪಿಸುವ 
ಮೊದಲೇ ದೂರಾದೆ ಯಾಕೆ???

ಆ ನಿನ್ನ ಮುನಿಸನ್ನು ನಾನು 
ಸಹಿಸಿಯೇನು ಆದರೆ
ಸಹಿಸಲಾರೆನು ಕಣೆ...
ಈ ನಿನ್ನ ನಿರ್ಲಕ್ಷ ತುಂಬಿದ ಮೊನವ

ಒಮ್ಮೆ ಹೇಳು ಸಾಕು 
ನೀ ತೊರೆದುದಕೆ ಕಾರಣವ...
ಹೇಳಿದರೆ ನನಗಷ್ಟೇ ಸಾಕು...
ನಿನ್ನ ಮಧುರ ನೆನಪಲ್ಲೇ 
ಕಳೆಯಬಲ್ಲೆ.. ಇನ್ನುಳಿದ ದಿನಗಳ..
 ಗೆಳತಿ ಹೇಳುವೆ ಏನು???

             - ಗಿರಿಜಾಸುತ (ಬೆನಕ)
ಎಂದೋ ಗೀಚಿದ ಸಾಲುಗಳು 

ಬೆಂಗಳೂರು ರಾಮ ಜನ್ಮ ಭೂಮಿ ತೀರ್ಪಿಗೊಸ್ಕರ ಬಂದ್ ಆದಗಿನ ಸಂದರ್ಭ

ಇಂದೇಕೋ ಸೊರಗಿದೆ 
ನನ್ನವಳ ಮುಖ..
ಗಂಡ ಸತ್ತ  ನಾರಿಯಂತೆ..

ಬೀಗ ಬಿದ್ದಿದೆ.. ಪಬ್ ಬಾರ್ 
ಶಾಲಾ ಕಾಲೇಜ್ ಗಳಿಗೆ
ಅದೇಕೋ ಮೋವ್ನಿಯಾಗಿಹಳು
ನನ್ನ ಬೆಡಗಿ

ಬೇಸರವಾಗಿರಬೇಕು ಅವಳಿಗೆ 
ಎಂದಿನ ಟ್ರಾಫಿಕ್ ಜಾಮ್ ಗಳಿಲ್ಲದೆ ..
ಗಿಜಿ ಗುಡುವ ವಾಹನ ಜನಸಂದಣಿ ಕಾಣದೆ 
ನಲ್ಲ ನಲ್ಲೆಯರ ಪಿಸುಮಾತ ಕೇಳದೆ...

ಅದಾರದೋ ಬರುವಿಕೆಗೆ ಕಾದು
ಕಾದು ಶಬರಿಯಂತಾಗಿದೆ.. ಅವಳ ಮುಖ 
ಒಮ್ಮೊಮ್ಮೆ ಹೆದರಿದ ಕಂದನ 
ಚರ್ಯೆ ಕಾಣಿಸಿದೆ ಇವಳ ಕಣ್ಣೊಳಗೆ..

ಗೆಳತಿ, ಈ ಬೆಂಗಳುರೆಂಬ ಮಾಯಕನ್ಯೆಯ
ಬರಿದಾದ  ದಾರಿಗಳು...
ನಿನ್ನ ನೆನಪ...ಬಿಡದೆ ತರಿಸಿದೆ...

                                     - ಗಿರಿಜಾಸುತ (ಬೆನಕ)
ಎಂದೋ ಗೀಚಿದ ಸಾಲುಗಳು 

ಎಳಸು ಕವನಗಳು..

ಎಳಸು ಕವನಗಳು..
ಇದು ನನ್ನ ಕವನ..
ಅಲ್ಲಾ ಇದೆ ನನ್ನ ಜೀವನ
ಬೇಕೆಂದದ್ದು ಸಿಗಲಿಲ್ಲ..
ಬಂದದ್ದ ಬಿಡಲಿಲ್ಲ..

ಬತ್ತದ ಕೆರೆಯಲ್ಲಿಯ
ಕಮಲವಾಗಿ ಜನಿಸಿದೆ..
ಕೆರೆಯ ನೀರೆ ಸರಿ ಒಗ್ಗಲಿಲ್ಲ
ಮಂದಹಾಸದ ಬಾಲ್ಯವ ಕಳೆದೆ
ಸಿಹಿ ಕಹಿಯ ಮೆಲ್ಲುತ್ತ
ಬಾಳೆಲ್ಲ ಬರಿ ಬರಡು ಎಂದು
ಯವ್ವನದಲಿ ತಿಳಿದೇ..

ನನ್ನ ಗೆಲುವೆಲ್ಲ ಅವನಿಂದ
ಸೋಲುಗಳ ಸರಣಿ ಮಾತ್ರ
ನನ್ನಿಂದ..
ಆದರು ಗೆಲ್ಲಬೇಕೆಂಬ ಛಲ
ಮಾಸಿಲ್ಲ.. ಇಗಲೂ ನನಗೆ ಹಿಡಿಸದ
ಪದವೊಂದೇ ಅದು ಸೋಲು.....

- ಗಿರಿಜಾಸುತ (ಬೆನಕ)  
ಎಂದೋ ಗೀಚಿದ್ದು 

Friday, October 30, 2015

ಎಲ್ಲಾ ಗೆಲ್ಲುವೆನೆಂಬ ಮನವೇ

ಎಲ್ಲಾ  ಗೆಲ್ಲುವೆನೆಂಬ ಮನವೇ
ನಿನ್ನ ನೀ ಗೆದ್ದೆಯೇನು?
ಜಯದ ಸಂಭ್ರಮದಲ್ಲಿ ನೀನ್ನೇ ನೀ
ಸೋತಿಲ್ಲವೇನು???

ಮರೆಯಬೇಕೆಂಬ ಘಟನೆ ಪುನ್ಹ್ ಪುನಹ
ನಿನ್ನ ಕಾಡಿಲ್ಲವೇನು??
ಬೇಡವೆಂಬ ಕೆಲಸವದು ಮಾಡದೇ ಬಿಟ್ಟಿರುವೆಯೇನು ?

ನಿನ್ನ ಧಿಕ್ಕರಿಸಿದವರ ನೆನಪು ದಿನವು ಕಾಡಿಲ್ಲವೇನು??

ಮನವೆಂಬ ಮರ್ಕಟವೇ ನಿನ್ನ ನೀ ಗೆಲ್ಲದೇ
ವಿಜಯೋತ್ಸವ  ನಿನಗೆ ತರವೇನು?
ಎಲ್ಲಾ  ಗೆಲ್ಲುವೆನೆಂಬ ಮನವೇ
ನಿನ್ನ ನೀ ಗೆದ್ದೆಯೇನು?

- ಕಮಲಾಕರ  ಹೆಗಡೆ
(ಮೊದಲ ಪ್ರಯತ್ನ )