ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Thursday, July 19, 2012

ಮೊಬೈಲ್ ಎಂಬ ಮಾಯಾವಿ.

ನಲ್ಮೆಯ ಗೆಳತಿ,
 ತುಂಬಾ ದಿನ ಆಯ್ತು ನಿನ್ನ ಓಲೆಗೆ ಉತ್ತರಿಸಬೇಕು ಅಂತ ಅಂದು ಕೊಂಡು. ಆದ್ರೆ ಈಗ ಸಮಯ ಸಿಕ್ಕಿತು. ಹೌದು ಚನ್ನಾಗಿದ್ದಿಯ? ಮುಂಗಾರಿನ ಅಬ್ಬರ ಕಡಿಮೆಯಂತೆ ಹೌದೇನು? ಕಳೆದ ಸಲ ನಾವಿಬ್ಬರು ಒಂದೇ ಕೊಡೆ ಹಿಡಿದು ಧುಮ್ಮಿಕ್ಕುತ್ತಿದ್ದ, ಜೋಗದ ವೈಯಾರವನ್ನ ಕಣ್ಣು ತುಂಬಿ ಕೊಂಡದ್ದು ನೆನಪಿದೆಯೇನು? ನನಗಂತೂ  ಆ ದಿನಗಳು ಇನ್ನೊಮ್ಮೆ ಬರಬಾರದೆ ಅನಿಸಿದೆ.

 ಈ ಪತ್ರ ಬರೆಯಲು ತಡವಾಗಲು ಕಾರಣ ನೀನೆ ಅಂದರೇ ನಿನಗೆ ಕೋಪ ಬರುತ್ತೆ ಅಲ್ಲವ.. ಆದರೂ ನಿಜ ಏನಪ್ಪಾ ಅಂದ್ರೇ  ಮೊದಲೆಲ್ಲ.. ನಾನು ನಿನ್ನ ಕ್ಷೇಮ ವಾರ್ತೆಗಾಗಿ ೩- ೪ ದಿನ ಚಾತಕ ಪಕ್ಷಿ ಅಂತೆ ಕಾಯುತ್ತಿದ್ದೆವಲ್ಲ ತಡ ನಂತರ ಪೋಸ್ಟ್ ಮ್ಯಾನ್ ಪತ್ರ ಕೈ ಗಿದುತ್ತಿದ್ದಂತೆ ಒಂದೇ ಉಸಿರಿನಲ್ಲಿ ಅದನ್ನ ಓದಿ ಮುಗಿಸಬೇಕೆನ್ನುವ ಆ ಧಾವಂತ ಈಗೇಕೋ ಕಡಿಮೆ ಆಗಿದೆ. ಕಾರಣ ನಮ್ಮಿಬ್ಬರ ನಡುವೆ ಮೊದಲಿನ ಪ್ರೀತಿ ಕಡಿಮೆ ಆಗಿದೆ ಎಂದಲ್ಲ,  ನಮ್ಮಿಬ್ಬರಿಗೂ. ನಮ್ಮಿಬ್ಬರ ಬಗೆಗಿನ . ಕ್ಷಣ ಕ್ಷಣದ  ಮಾಹಿತಿಗಳು ಅತಿ ಶೀಘ್ರದಲ್ಲಿ ಸಿಗುತ್ತಿರುವುದು. ಅದೆಲ್ಲ ಆಗಿದ್ದು.. ಮೊಬೈಲ್ ಫೋನ್ ಎಂಬ ಮಾಯಾವಿ ಇಂದ ಅಲ್ಲವೇ. 
 ಮೊದ ಮೊದಲು ನಿನ್ನೊಟ್ಟಿಗೆ ದಿನವು ಮಾತನಾಡಲು ಆಗುತ್ತಲ್ಲ ಅಂತ ಖುಷಿ ಪಟ್ಟಿದ್ದೆ. ಆದರೆ ಈಗ ಒಂದು ಕ್ಷಣ ನಿನ್ನಿಂದ ಉತ್ತರ ಬರುವುದು ತಡವಾದರೂ ನನಗೆ ಕಾಯಲಾಗದು. ಈ ಪತ್ರ ಬರೆಯುವಾಗ ಇದ್ದ ಸಹನೆ, ತಾಳ್ಮೆ, ಹಿತವಾದ ಪ್ರೀತಿಯ ಕನವರಿಕೆ.. ಆ ಕಾಯುವಿಕೆಯಲ್ಲಿ ಸೃಷ್ಟಿ ಆಗುತ್ತಿದ್ದ ಸುಂದರ ಜಗತ್ತು. ಎಲ್ಲಾ ಈ ಮೊಬೈಲ್ ಫೋನ್ ಎಂಬ ಮಾಯಾವಿ ನುಂಗಿ ಹಾಕಿ ಬಿಟ್ಟ ಅಲ್ಲವೇ.
ಅದಕ್ಕಾಗಿ ಅವನ ಜಾತಕ ತಿಳಿಯೋಣ ಎಂದು ಒಂದಿಷ್ಟು ಮಾಹಿತಿ ಸಂಗ್ರಹಿಸಿದೆ . ಅದನ್ನ ನಿನ್ನೊಂದಿಗೆ ಹಂಚಿ ಕೊಳ್ಳುತ್ತಿರುವೆ.
ಈ ಮಾಯಾವಿಯಾ ಬಗ್ಗೆ ತಿಳಿಯ ಬೇಕೆಂದರೆ ಸ್ವಲ್ಪ ಬಿಡುವು ಮಾಡಿ ಕೊಂಡೆ ಈ ಮುಂದಿನ ಪತ್ರ ಓದಬೇಕು ನನ್ನ ಮುದ್ದು ಗೆಳತಿ. ತಿಳಿತ? ಏನೇ ಸಂಶಯ ಇದ್ದರು ನನ್ನ ಖಾಸಗಿ ನಂಬರ್ ಗೆ ಒಂದು ಮಿಸ್ ಕಾಲ್ ತಪ್ಪದೆ ಮಾಡು.
ಅದು  ಎಪ್ರಿಲ್ , ೩ ೧೯೭೩, ರ ದಿನ, ನಮ್ಮೆಲ್ಲರಿಗೂ  ಚಿರಪರಿಚಿತ ಆಗಿರುವ ಸೆಲ್ ಫೋನ್ ನಾ ತಯಾರಕ ಕಂಪನಿ "ಮೋಟೊರೋಲ" (Motorola) ದ ಕೆಲಸಗಾರ ಮಾರ್ಟಿನ್ ಕೂಪೆರ್ (Martin Cooper), ಬೆಲ್ ಲ್ಯಾಬ್ ನಾ ವಿಜ್ಞಾನಿ ಡಾ. ಜೋಎಲ್ ಏಂಜೆಲ್  (Joel Engel) ಗೆ ಫೋನ್ ಮಾಡುವ ಮೂಲಕ ತಾನು ಕಂಡು ಹಿಡಿದ ಆಧುನಿಕ ಫೋನ್ ನಾ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದ. ಅದೇ ವರ್ಷದ ಅಕ್ಟೋಬರ್  ೧೭ ರಂದು ಅಧಿಕೃತವಾಗಿ ಮೊಬೈಲ್ ಜನಕ ಎಂದು ಕರೆಯಲ್ಪಟ್ಟ.(Patent). ಇಂದಿನ ನವ ನವೀನ ಸೆಲ್ ಫೋನ್ ಗಳ ಹುಟ್ಟಿಗೆ ನಾಂದಿ ಹಾಡಿದ.ಈ ಯುಗವನ್ನ ಸೆಲ್ ಫೋನ್ ಇತಿಹಾಸದಲ್ಲಿ  ಮೊದಲ ಕಾಲಗಟ್ಟ (1 generation) ಎಂದು ಕರೆಯಲ್ಪಟ್ಟಿದೆ.

ಇದಕ್ಕೂ ಮೊದಲು ಇದರ ಪೂರ್ವ ಇತಿಹಾಸ ನೋಡುವುದಾದರೆ ೧೯೦೮ ರಲ್ಲೇ ನಾಥನ್ (Nathan Stabblefield) ನನ್ನೇ ಎಲ್ಲರು ಸೆಲ್ ಫೋನ್ ಕಂಡು ಹಿಡಿದವನು ಎಂದು ತಪ್ಪಾಗಿ ತಿಳಿದಿದ್ದರು. ಅವನು ಕಂಡು ಹಿಡಿದದ್ದು ಕೇವೆ ರೇಡಿಯೋ ಫೋನ್. ಅದನ್ನ ಆಧರಿಸಿಯೇ, ಹಾಗೂ George Sweigert ಕಂಡು ಹಿಡಿದಿದ್ದ ರೇಡಿಯೋ ಗೆಜೆಟ್ (Redio Gadget ) ಎಂಬ ಉಪಕರಣ ಬಳಸಿ ಅಂದಿನ ಮಿಲಟರಿ ಗಳಲ್ಲಿ, ದೂರವಾಣಿ ಬಳಸುತ್ತಿದ್ದರು.ಅದು ತುಂಬಾ ನಿಯಮಿತ ಕರೆಗಳನ್ನು ಮಾತ್ರ ಮಾಡಲು ಸಾಧ್ಯವಿತ್ತು. ಮಾರ್ಟಿನ್ ರ ಅನ್ವೇಷಣೆ ಇಂದಾಗಿ ಹೊಸ ತಲೆಮಾರಿನ ಸೆಲ್ ಫೋನ್ ಯುಗ ಆರಂಭವಾಯಿತು. ಈ ಅವಧಿಯಲ್ಲಿ ಕಂಪನಿಗಳು ಸೆಲ್ಲುಲಾರ್ ನೆಟ್ ವೊರ್ಕ್ಸ್ (Cellular Network)   ತಯಾರಿಕೆ ಆರಂಭಿಸಿದವು. ಆದರೂ ಈ ಕಾಲದ ಸೆಲ್ ಫೋನ್ ಗಳು ಭಾರಿ ಗಾತ್ರದ ಹಾಗೂ ತೂಕದ್ದಾಗಿದ್ದವು.

ಎರಡನೇ ತಲೆಮಾರು ( Second Generation - 2G )
ಈ ತಲೆಮಾರಿನಲ್ಲಿ  GSM, IDEN & IS-95, ನೆಟ್ ವರ್ಕ್ ಗಳು ಆರಂಭಗೊಂಡವು. ಮೊದಲಿನ ತಲೆಮಾರಿಗಿಂತ ಉತ್ತಮ ಗುಣಮಟ್ಟದ ಹಾಗೂ ಗಾತ್ರದಲ್ಲಿ ಚಿಕ್ಕದಾದ, ಸುಂದರ ಸೆಲ್ ಫೋನ್ ಗಳ ಉಗಮ ಆಯಿತು. ಈ ಅವಧಿಯಲ್ಲೇ, ಉತ್ತಮ ಸಮಯ ಹರಣದ ಸಾಧಕವಾದ ಟೆಕ್ಸ್ಟ್ ಮೆಸೇಜ್ (Text Massage) ಆಗಿದ್ದು. 2G ತಲೆಮಾರಿನಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಫಿನ್ಲ್ಯಾಂಡ್ (Finland) ನಲ್ಲಿ ೧೯೯೩ ಯಲ್ಲಿ ಮೊದಲ ಟೆಕ್ಸ್ಟ್ ಮೆಸೇಜ್ ರವಾನೆ ಮಾಡಲ್ಪಟ್ಟಿತು. ಈ ಕಾಲದಲ್ಲೇ, Ringing Tone ಗಳು ಕಂಡು ಹಿಡಿಯಲ್ಪಟ್ಟು. ಮೊಬೈಲ್ ಫೋನ್ ಎಂಬುದು ಜಗತ್ತಿನಾದ್ಯಂತ ಮನೆಮಾತಗಳು ಕಾರಣ ಆಯಿತು.

ಮೂರನೇ ತಲೆಮಾರು ( Third Generation - 3 G)

೨೦೧೧ ರಲ್ಲಿ  ಜಪಾನ್ ಮೊಟ್ಟ ಮೊದಲ ಬಾರಿಗೆ ೩ಜಿ ನೆಟ್ ವರ್ಕ್ ನಾ ಮೊಬೈಲ್ ಫೋನ್ ಗಳನ್ನ ಬಳಸಿತು. ಸೆಲ್ ಫೋನ್ ನಲ್ಲೆ ಅಂತರಜಾಲ  ಸೌಲಭ್ಯ ಲಭ್ಯವಾಯಿತು. 

ನಾಲ್ಕನೆ ತಲೆಮಾರು ( Fourth Generation- 4 G)  
೨೦೦೯ ರಿಂದ ೩ಜಿ ತಲೆಮಾರಿನ್ನು ಇನ್ನಷ್ಟು ಉತ್ತಮ ಪಡಿಸುವ ಪ್ರಯತ್ನ ಶುರುವಾಗಿದೆ ಗೆಳತಿ. ಇನ್ನೂ ಸ್ವಲ್ಪ ಕಾಲಾವಧಿಯಲ್ಲಿ ನಾವು ಈ ೪ ಜಿ ಮೊಬೈಲ್ ಗಳನ್ನೂ ನೋಡಬಹುದಾಗಿದೆ.

ಮೊಬೈಲ್ ನಾ ಸಾಧಕ ಬಾಧಕ ಏನೇ ಇರಲಿ.. ಇದೊಂದು ನಮ್ಮ ಅಧುನಿಕ ತಂತ್ರ ಜ್ಞಾನದ ಒಂದು ಅಧ್ಭುತ ಅನ್ವೇಷಣೆ ಏನ್ ಅಂತಿಯ..?

ಈ ಗಣೇಶ ಚತುರ್ಥಿಗೆ ಮನೆಗೆ ಬರುತ್ತಿರುವೆ. ನಿನ್ನ ನೋಡಬೇಕು ಎಂದು ಮನ ಹಂಬಲಿಸಿದೆ. ಯಾವದಕ್ಕೂ.. ಪತ್ರ ಮುಟ್ಟಿದ ತಕ್ಷಣ ಒಂದು ಫೋನ್ ಮಾಡು..!!!

ಇಂತಿ  ನಿನ್ನ ಹುಡುಗ.