ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Friday, February 25, 2011

ಕಾಮನಬಿಲ್ಲಿನಲ್ಲಿ ಒಂದೇ ಬಣ್ಣ ಇರಲು ಸಾಧ್ಯವೇನು??

ಹೇ ನನ್ನ ಮನದನ್ನೆ..


                      ದಯಮಾಡಿ ಕ್ಷಮೆ ಇರಲಿ.. ತುಂಬಾ ದಿನವಾಯಿತು.. ನಿನಗೊಂದು ಓಲೆಯನ್ನ  ಬರೆಯಲಾಗಲಿಲ್ಲ.. ಹುಂ ನನಗೆ ಗೊತ್ತು.. ನೀನು ಇದನ್ನ ನೋಡಿ.. ನಿನ್ನ ಬಾಯಿ ಇಂದ ಬರುವ ಉದ್ಗಾರ ಏನೆಂದು 
" ಅಯ್ಯೋ ಪಾಪಿ ಇನ್ನೂ ಬದುಕಿದ್ದಿಯಾ?? ಅದೇನೋ ಹೇಳ್ತಿದ್ದೆ ನಿನ್ನ ಒಂದು ಕ್ಷಣ ಬಿಟ್ಟು ಬದುಕಿರೋಲ್ಲ ಅಂತ ಏನೇನೋ.. ನಾನೆಲ್ಲೋ ಹೋಗೆ ಬಿಟ್ಟೆ ಅಂದ್ಕೊಂಡನಲ್ವೋ.. ಇನ್ನೂ ಸ್ವಲ್ಪ ತಡದಿದ್ದ್ರೆ.. ಅಷ್ಟೇ... ನಾನು ನಿನ್ನ ನೆನಪಲ್ಲಿ ಅತ್ತು ಅತ್ತು.. ಕಂಬನಿ ಎಲ್ಲಾ ಬತ್ತಿದ.. ಮೇಲೆ ನಾನು ಸಾಯಬೇಕು ಅಂತ ಇದ್ದೆ ಅಂತ ಹಳೆ ಕಾಲದ ಹೆಣ್ಣು ಮಕ್ಕಳಂತೆ ಹೇಳ್ತೀನಿ ಅಂದ್ಕೋ ಬೇಡ.. ಇನ್ನೂ ಒಳ್ಳೆ ಹುಡುಗನ್ನ ಹುಡುಕಲಿಕ್ಕೆ ಹೊರಟಿದ್ದೆ.. ನಿನ್ನ ಪುಣ್ಯ ನನಗೆ ನಿನ್ನ ಅಂತ ಕೋತಿ ಸಿಗಲೇ ಇಲ್ಲವೋ.. ಅದಕ್ಕೆ ಬಚಾವಾದೆ.. ಇನ್ನೊಮ್ಮೆ.. ಹೀಗೆ ಮಾಡದರೆ.. ಮತ್ತೆ  ಈ ಅವಕಾಶ ಸಿಗುತ್ತೆ ಅಂದ್ಕೋ ಬೇಡ.. "ಅಂತ ಗೊಣಗಾಟ ಶುರುವಾಗಿದೆ ಅಂತ ನನಗೆ ಗೊತ್ತು.. ನನ್ನ ಚಿನ್ನು..

  ನನಗೆ ಗೊತ್ತು.. ಚಿನ್ನು.. ನಿನಗೆ ನನ್ನ ಮೇಲೆ ಎಷ್ಟು ಕೋಪ ಬಂದಿದೆ ಅಂತ ಆದ್ರೆ ಏನ್ ಮಾಡಲಿ..ಚಿನ್ನು ನಾನು ನಮ್ಮ ಭವಿಷ್ಯವನ್ನು ಕಟ್ಟಕೋ ಬೇಕಲ್ವ.. ಬರೆ ನಾನು ನೀನು ಕನಸು ಕಾಣತ ಕುತುಬಿಟ್ಟರೆ ಆ ನಮ್ಮ ಕನಸು ನನಸು ಮಾಡ್ಕೊಳ್ಳೋದು ಯಾವಾಗ.. ನನ್ನ ಚಲುವೆ.. ನೀನು ತುಂಬಾ ಜಾಣೆ ಇದನ್ನೆಲ್ಲಾ ಅರ್ಥ ಮಾಡ್ಕೋತಿಯ ಅಂದ್ಕೋತೀನಿ.. ಕಣೆ.. ಹೌದು.. ನಾನು ನಿನ್ನ ಒಂದು ತಿಗಲಿನಲ್ಲಿ ಬಂದಿರಬಹುದಾದ.. ೧೫ ಪತ್ರಗಳಿಗೆ ಒಂದೇ ಪತ್ರದಲ್ಲಿ ಸಾಧ್ಯವಾದಷ್ಟು ಉತ್ತರ ಬರೆದು ಕಳಿಸುತ್ತೇನೆ..  

           ಇವಾಗ ನಿನಗೊಂದು.. ವಿಶಿಷ್ಟ ಕೊರೆತವನ್ನ ಕೊರೆಯಬೇಕೆಂದು.. ಸಿದ್ಧ ಆಗಿದ್ದೇನೆ.. ದಯಮಾಡಿ ಸಹಕರಿಸಿ ಓದು.. ಹೀಗೊಂದು ವಿಚಾರ.. ಕಾಮನ ಬಿಲ್ಲಿನಲ್ಲಿ ಒಂದು ವೇಳೆ ಒಂದೇ ಬಣ್ಣ ಇದ್ದಿದ್ದರೆ ಏನಾಗ್ತಿತ್ತು?? ಅದನ್ನ ಯಾರದ್ರು ಕಾಮನಬಿಲ್ಲು ಅನ್ನುತ್ತಿದ್ದರೆ??? ಹಾಗೇ ಬಾಳಲ್ಲೂ , ಸಮಾಜದಲ್ಲೂ.. ಎಲ್ಲೇಲ್ಲೂ ವೈವಿದ್ಯತೆಯೇ ಇಲ್ಲದಿದ್ದರೆ.. ಎಲ್ಲವು.. ಒಂದೇ ರೀತಿ ಇದ್ದರೆ.. ನಾಳೆಯ ಬದುಕಿನ ಬಗೆಗೆ ಯಾರಾದರು ಕನಸು ಕಾಣುತ್ತಿದ್ದರೆ??? ಜೀವನದಲ್ಲಿ, ಸಮಾಜದಲ್ಲಿ ಆಸಕ್ತಿ ಇರುತ್ತಿತ್ತೆನು?? ಅದು ಅಲ್ಲದೆ.. ನೀನು ನನಗೆ ಯಾಕೆ ಈ ರೀತಿ ಕಾಡುತ್ತಿದ್ದೆ.. ನಾನೇಕೆ ನಿನಗೆ ಕೊರೆಯುತ್ತಿದ್ದೆ.. ಅಲ್ಲವ.. ಹೇ ಏನಾಯ್ತು... ಇವಗಲೇ.. ನಿದ್ದೆ ಹೋದೆಯ.. ಹೇ ನನ್ನ ಬರಹದ ಸ್ಪೂರ್ತಿಯೇ.. ನೀನು ಈ ರೀತಿ ಮೌನಿ ಆದರೆ ಸಹಿಸೇನು.. ಪೀಠಿಕೆಯೇ ಜಾಸ್ತಿ ಆಯಿತು ಅಂತ ಬೈತಿದಿಯ.. ನೆರವಾಗಿ ವಿಷಯಕ್ಕೆ ಬರುತ್ತೇನೆ ಮಾರಾಯ್ತಿ.
.
            ನನ್ನ ಪ್ರಕಾರ ವೈವಿದ್ಯತೆ ಇರುವುದರಿಂದಲೇ ಸಮಾಜ ಸುಂದರವಾಗಿದೆ.. ಸೋಲು ಗೆಲುವು.. ಎಲ್ಲಾ ಇದ್ದರೇನೆ ಬಾಳು ಸೊಗಸಾಗಿರುತ್ತೆ.. ಹಾಗೇ ನಮ್ಮ ಭವ್ಯ ಜಾತ್ಯತೀತ ಭಾರತದಲ್ಲಿ ಜಾತಿ ಅನ್ನೋ ವ್ಯವಸ್ತೆ ಅದರ ಪಾಡಿಗೆ ಅದು  ಒಂದು ಪ್ರಮಾಣದಲ್ಲಿ ಇದ್ದರೇನೆ  ಭಾರತದ ಸಂಸ್ಕೃತಿಗೆ ಒಂದು ಸೊಬಗು.. ಹುಂ ಎಲ್ಲಾ ನಮ್ಮ ಇಂದಿನ ಮೇಧಾವಿಗಳು ನನ್ನ ಈ ಮಾತು ಕೇಳದ್ರೆ ಖಂಡಿತ ಛೀ ಮಾರಿ ಹಾಕ್ತಾರೆ ಅಂತ ಗೊತ್ತು ನನಗೆ .. ಯಾಕೆಂದರೆ.. ಅವರೆಲ್ಲ .. ಜಾತಿ ರಹಿತ ಸಮಾಜದ ನಿರ್ಮತ್ರರಾಗುವ ಕನಸು ಹೊತ್ತವ್ರಲ್ಲ್ವ.. ಅದಕ್ಕೆ ನಾನು ಇಂತ ಅಸಂಬದ್ದ  ವಿಚಾರಗಳನ್ನ ನಿನ್ನಲ್ಲಿ ಹೇಳಿಕೊಳ್ಳುವುದು.. ಹೌದು... ಅವರು ಜಾತಿರಹಿತ ಸಮಾಜ ನಿರ್ಮಾಣ ಮಾಡಿ.. ಮತ್ತೇನು ಮಾಡಿಯಾರು.. ??ಮನುಷ್ಯನ  ಹುಟ್ಟು ಸ್ವಭಾವವನ್ನ ಹೋಗಲಾಡಿಸಲು ಆಗುವುದೇನು?? ಜಾತಿ ಪದ್ಧತಿ  ಹೋಗಿ.. ಪಾಶ್ಚಾತ್ಯರಲ್ಲಿ ಇರುವಂತೆ.. ವರ್ಗ ಮದರಿಯ ಬೇರ್ಪಡುವಿಕೆ ಶುರುವಾಗುವುದು.. ಅಷ್ಟೇ. ಅದೇನು ಇದಕ್ಕಿಂತ ಒಳ್ಳೆಯದೆನು?? ಅದು ಅಲ್ಲದೆ.. ಈ ನಮ್ಮ ಭವ್ಯ ಜಾತ್ಯತೀತ ಭಾರತ ದೇಶದಲ್ಲಿ.. ಜಾತಿ ಆಧಾರದ ಮೇಲೆ ತಮ್ಮ ಬೆಳೆ ಬೇಯಿಸಿಕೊಂಡು.. ಬದುಕುತ್ತಿರುವ.. ರಾಜಕಾರಣಿಗಳ ಪಾಡೇನು?? ಅವರು.. ತಮ್ಮ.. ತಲೆಯನ್ನ.. ದುಡ್ಡು ಮಾಡುವದರ ಜೊತೆಗೆ ಮತ್ತೆ ಹೊಸ ರಣತಂತ್ರಕ್ಕಾಗಿ ಉಪಯೋಗಿಸಬೇಕಲ್ಲ.. ಸುಂದರಿ.. ಅದು ಎಷ್ಟೊಂದು.. ಕಷ್ಟದಾಯಕವಲ್ಲವೇ?? ಪಾಪ..!!!

 "ಹುಂ ನಿನಗ್ಯಾಕೆ ಇವೆಲ್ಲ ನಿನಾಯಿತು ನಿನ್ನ ಬದುಕಾಯಿತು.. ಅಂತ ಇರೋಕಗಲ್ವ ಅಂಥ ಬೈತಿದಿಯ.. "ಹುಂ.. ಜಾತ್ಯತಿತತೆಯ ಬಗ್ಗೆ ಮಾತನಾಡುವ.. ಹುಂಬ.. ಹಾಗೂ ಮೇಧಾವಿ.. ಬೊಗಳೆ ಭಟ್ಟರನ್ನ ಕಂಡಾಗ ಮೈ ಎಲ್ಲಾ ಉರಿಊತ್ತದೆ  ಗೆಳತಿ.. 
ಅಲ್ಲಾ ಅಂತವರಿಗೆಲ್ಲ ಒಂದು ಖಾಸಗಿ ಪ್ರಶ್ನೆ.. ಕೇಳಬೇಕು.. ಅನ್ನಿಸುತ್ತಿದೆ.. ಅಂಥವರ  ಮಕ್ಕಳು  ಬೇರೆ ಉನ್ನತ ಜಾತಿಯ ಕನ್ಯೆಯನ್ನ/ಹುಡುಗನನ್ನ ಮದುವೆ ಆದರೆ.. ಅವರು ಖಂಡಿತ..ಸಂತೋಷದಿಂದ  ಒಪ್ಪುವರು ಅಂಥ ನನಗೆ ಗೊತ್ತು.. ಅದೇ.. ಅವರ ಜಾತಿಗಿಂತ ನಿಮ್ನ ವರ್ಗದ ಹುಡುಗ/ಹುಡುಗಿ ಯನ್ನ ಮದುವೆಯಾಗಿ ಬಂದರೆ ಅವರು ಅದನ್ನ ಅಷ್ಟೇ ಸಂತೋಷವಾಗಿ ಸ್ವೀಕರಿಸುವರೆನು?? ಹುಂ ಮೇಲಿಂದ.. ಒಪ್ಪಿದರು..ಅವರ ಒಳ ಮನಸ್ಸು ಕೊರಗುತ್ತಲೇ ಇರುವುದು..ಇದು ಮಾತ್ರ ದಿಟ..ಕಣೆ.. ಹಾಗಾದಾಗಲೇ.. ಅವರ ನೈಜ ಬಣ್ಣ ಬಯಲಾಗುವುದು..
ಅದಕ್ಕೆ ನಾನು ಹೇಳಿದ್ದು.. ಪಾಶ್ಚಿಮಾತ್ಯರಿಗೆ  ವರ್ಗ ಪದ್ಧತಿ ಹೇಗೋ ಹಾಗೇ ನಮಗೆ ಜಾತಿ ಪದ್ಧತಿ.. ಹುಂ ನನಗೆ ಗೊತ್ತು.. ನೀನು ಮನಸಿನಲ್ಲೇ.. ಇವನು ಪಕ್ಕ.. ಸಂಪ್ರದಾಯವಾದಿ ಅಂತ ಗೊಣಗುತ್ತಿರುವೆ ಅಂತ ಗೊತ್ತು.. 
ಇಲ್ಲಾ ಕಣೆ ನಾನು ವಾಸ್ತವವಾದಿ.. ನನಗೆ ನಿಸರ್ಗ, ಸಮಾಜ.. ಮನುಷ್ಯರು ಅವರ ನೈಜ ಆಗಿ ಕಂಡರೆನೆ ತುಂಬಾ ಇಷ್ಟ.. ಹೌದು.. 
ನೀನು ಲಂಗದಾವನಿಯಲ್ಲಿ ಕಂಡಷ್ಟು ಚಂದ ಪ್ಯಾಂಟು ಶರ್ಟು ಹಾಕಿದರೆ ಕಾಣಲಾರೆ.. ಎಂದು ನಾನು ಅದೆಷ್ಟು ಬಾರಿ ನಿನಗೆ ಹೇಳಿಲ್ಲ.. ಹಾಗೇ..  ನೀನು ಚಂದ ಕಾಣುತ್ತಿಯ ಅಂದ ಮಾತ್ರಕ್ಕೆ ನೀನು ಅಧುನಿಕ ಉಡುಗೆ ತೊಡಲೇ ಬಾರದು ಎಂದು ನಾನು ಎಂದಾದರು ಹೇಳಿರುವೆನೇನು???? 
ಅದೇ ರೀತಿ.. ಜಾತಿ ವ್ಯವಸ್ಥೆಯಲ್ಲಿಯ  ಎಲ್ಲಾ ಲೋಪ ದೋಷಗಳನ್ನು ನಾನು ಸಮರ್ಥಿಸುತ್ತಿಲ್ಲ ಕೂಸೇ.. ಅದನ್ನ ಮಾಡಿದವರು..ನಮ್ಮ ಹಿಂದಿನವರು.. ಅದು ಅಂದಿನದು..ನಾವು ಕಾಲಕ್ಕೆ ತಕ್ಕಂತೆ ಅದನ್ನ ಬದಲಾಯಿಸಿಕೊಳ್ಳಬೇಕು.. ಹಾಗಂತ.. ಅದನ್ನ ನಿರ್ನಾಮವೇ ಮಾಡಬೇಕು ಅನ್ನುವುದು ತಪ್ಪು.. ಏನಂತೀಯ .. ನನ್ನ ಮನದ ಒಡತಿಯೇ..?? 
 ಬರೆ ಇದೆ ಆಯಿತು.. ನಮ್ಮಿಬ್ಬರ ಬಗೆಗಿನ ಕುಶಲೋಪರಿ ನಡೆದೇ ಇಲ್ಲವಲ್ಲೋ ಅಂಥ ಹೇಳ್ತಿದಿಯ?? ಹೇ ಗುಬ್ಬಿ.. ನಿನ್ನ ನೋಡ್ಬೇಕು ಅನ್ನಿಸ್ತಿದೆ ಕಣೆ.. ಆದಷ್ಟು ಬೇಗ.. ಇಲ್ಲಿಂದ.. ಓಡಿ ಬಂದು ಬಿಡುತ್ತೇನೆ.. ಯಾಕೋ ನಿನ್ನ ಮಡಿಲಲ್ಲಿ.. ಮಲಗಿ.. ನಾವು.. ಕಂಡ ಕನಸುಗಳ ಮತ್ತೊಮ್ಮೆ ಮೆಲುಕು ಹಾಕಬೇಕು ಅನ್ನಿಸಿದೆ..
              ಹೌದು.. ಆಲೆಮನೆ ಶುರು ಆಯ್ತಾ??? ನನ್ನ ಕರೆದೆ ಇಲ್ಲ??? ಕ್ಷಮೆ ಇರಲಿ.. ನೀನು ಮೊನ್ನೆ ಕಳಿಸಿದ ಪತ್ರದಲ್ಲಿ ಕರೆದಿರಬೇಕು.. ಅದನ್ನು ಇನ್ನು ಒಡೆದು ಓದಿಲ್ಲ..  
ಇಂತಿ ಎಂದೆದಿಗೂ ನಿನ್ನ ಉಸಿರಾಗಿರುವವ
~ ಕಮಲು ~
-- 

-- 

Thursday, February 24, 2011

ಸುಳ್ಳಿನ ಸುಳಿಯಲ್ಲಿ - (ಅನುಭವ ಕಲಿಸಿದ ಪಾಠ )


  ತರುಣ್ ಅದೇಕೋ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಮಲಗಲು ರೆಡಿ ಆಗಿದ್ದಾಗ ನಡೆದ ಘಟನೆ ಇಂದ ಸ್ವಲ್ಪ ವಿಚಲಿತನಾದ..ಹಾಸಿಗೆಯ ಮೇಲೆ ಅಂಗತಾನೆ ಮಲಗಿ ಹಾಗೇ ಅದಾವುದೋ ನೆನಪಿನ ಲೋಕಕ್ಕೆ. ತೇಲಿ ಹೋದ..  
             "ನನಗೆ ಯಾಕೋ ಗೊತ್ತಿಲ್ಲ.. ಆಗಾಗ ಬಾಲ್ಯದ ದಿನದ ನೆನಪುಗಳು ಕಾಡುತ್ತವೆ.. ಅಂದು ಹಾಗೇ ಆಯಿತು.. ನಮ್ಮ ಚಿಕ್ಕಪ್ಪನಾ ಮಗ ಶಾಲೆ ಮುಗಿದ ಮೇಲೆ ಮನೆಗೆ ಬರಬೇಕಾದವನು.. ರಾತ್ರಿ ನಮ್ಮ ಊಟ ಮುಗಿದ ಮೇಲೆ.. ಮನೆ ಸೇರಿದ.. ಆದಗೂ ಯಾರು ಅವನನ್ನ ಏನು ಹೇಳಲಿಲ್ಲ.. ಕೇಳಲು ಹೋದ ಕೆಲವರಿಗೆ ೨ ನೇ ತರಗತಿಯ ಪುಟ್ಟ ಹುಡುಗ ದಿಟ್ಟ ಸುಳ್ಳುಗಳನ್ನ ಹೇಳಿ ಪುಸುಲಾಯಿಸಿದ. ಅಷ್ಟೊತ್ತಿಗಾದರೂ ಮನೆ ಸೇರಿದನಲ್ಲ ತನ್ನ ಮಗ ಅನ್ನೋ ಧನ್ಯತಾ ಭಾವ ಅವನ ತಾಯಿಯಲ್ಲಿ.. ಅದಕ್ಕಾಗಿ ಆ ವಿಷಯವಾಗಿ.. ಅವನ್ನನ್ನ ಯಾರಾದರು ಕೇಳಿದರೆ.. ತಾಯಿಗೆ ಕೋಪ.. ಇದು ಸಹಜ ಅಲ್ಲವೇ..
ಈ ಘಟನೆಯೇ.. ನನ್ನ ನೆನಪಿನ ಗೂಡಲ್ಲಿ ಹಾಸಿ ಹೊದ್ದು ಮಲಗಿದ್ದ.. ನನ್ನ ಬಾಲ್ಯದ ಘಟನೆಗಳು ಎದ್ದು ಕಾಡ ತೊಡಗಿದವು.. ಆ ಸುಳ್ಳು ಹೇಳುವ ಚಟ ಬಿಡಿಸಿದ ಘಟನೆ ನಿಮಗೆ ಹೇಳಲೇ ಬೇಕು..
ನಾನು ಕೂಡ ಕುಟುಂಬದ ಜಂಜಾಟದಲ್ಲಿ ಎಲ್ಲರು ನನ್ನವರು ಅನ್ನೋ ಭಾವನೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದೆ.. ಅಷ್ಟೊತ್ತಿಗಾಗಲೇ.. ನನ್ನ ಹುಡುಗಾಟಿಕೆಯ ಗುಣದಿಂದಾಗಿ ಎಲ್ಲರಿಗಿಂತ ಖದೀಮ ನಾನಗಿದ್ದೆ.. ಅದಕ್ಕಾಗೆ.. ನಾವೆಲ್ಲ ಆಟ ಆಡುವಾಗ ಯಾರೇ ತಪ್ಪು ಮಾಡಿ ಗಲಾಟೆ ನಡೆದರೂ.. ಅಪ್ಪನಿಗೆ ಆ ಗಲಾಟೆ ಸುದ್ದಿ ಮುಟ್ಟದೆ ಇರುತ್ತಿರಲಿಲ್ಲ ಅದರ ಪರಿಣಾಮ .. ನನಗೆ ಚಂ ಚಂ ಛಡಿಯ ರುಚಿ ಸಿಗದೇ ಇರುತ್ತಿರಲಿಲ್ಲ.. ಇದನ್ನೆಲ್ಲಾ ನೋಡಿದ ನನ್ನ ಅಜ್ಜಿ.. ಬೇಸೆತ್ತು.. ನನ್ನ ಬೇರೆ ಕಡೆ ಹೈಸ್ಚೂಲ್  ಓದಲು.. ಬಿಟ್ಟರು..
ಜಾತ್ರೆಯಲ್ಲಿ ಬೆಳೆದವನಿಗೆ ಏಕಾಂತದ ಜೀವನ ಹೇಗೆ ಹಿಡಿಸಿತು.. ಆ ಮನೆ ನಿಜಕ್ಕೂ.. ನನ್ನ ಪಾಲಿಗೆ ದೇವರ ಮನೆ ಅಂತೆ ಅವರು.. ತಮ್ಮ ಮನೆಯ ಮಗನಂತೆ ನನ್ನ ನೋಡಿಕೊಲ್ಲುತಿದ್ದರು.. ನನಗೆ ಯಾಕೋ.. ಆ ಗಲಾಟೆ ಇಲ್ಲದ ಜೀವನ ಹಿಡಿಸಲಾರಾದೆ ಹೋಗಿದ್ದೆ.. ಅವರ ಮನೆಯವರಿಗೂ ನಾನು ಸಾಕಸ್ಟು ನೋವನ್ನ ನೀಡಿರಬೇಕು.. ಆದರೇನು.. ಕ್ರಮೇಣ ಏಕಾಂತದ ಜೀವನ ಒಗ್ಗಿ ಹೋಯಿತು.. ಹೊಸ ಗೆಳೆಯರ ಪರಿಚಯ ಆಯಿತು.. ಮಳೆಗಾಲ ಮುಗಿದು.. ಚಳಿಗಾಲ ಬಂತು.. 
ಮಳೆಗಾಲದಲ್ಲಿ.. ಎಲ್ಲಾ ಕಡೆ ಹಸಿರಾಗುವ ಕಳವಾದರೆ.. ಮಕ್ಕಳ ಮನಸಿಗೆ ಅದು ಬೇಸರದ ಕಾಲವಲ್ಲವೇ.. ಚಳಿಗಾಲ ಬಂತು.. ಅಲ್ಲಿನ ಎಲ್ಲಾ ಮಿತ್ರರ ಸಂಗಡ.. ಸೇರಿ.. ನನ್ನ ಬಾಲವು ಚಿಗುರ ತೊಡಗಿತು.. ಹಾಗೇ ಪರಿಚಿತ ಆದವರಲ್ಲಿ.. ವರುಣ್ ಕೂಡ ಒಬ್ಬ ತುಂಬಾ ಶ್ರೀಮಂತರ ಮನೆಯವನು... ದಿನವು.. ಹೈಸ್ಚೂಲ್ಗೆ ಸೈಕಲ್ ತರುತ್ತಿದ.. ನಾನು ಪಾದಚಾರಿ ಒಂದೇ ದಾರಿಯಲ್ಲಿ ಹೋಗುವವರು ಅಂದ ಮೇಲೆ ಕೇಳಬೇಕೆ.. ಇನ್ನೂ ಆತ್ಮೀಯತೆ ಬೆಳೆಯಿತು..
 ಒಂದು ಶನಿವಾರ.. ಮದ್ಯಾನ್ಹ ಹೈಸ್ಚೂಲ್ ಮುಗಿಸಿ ಮನೆಯಕಡೆ ಹೋಗುವಾಗ.. ಅವನು.. ಹೇಯ್ ದೋಸ್ತ್.. ಸೈಕಲ್ ಹತ್ತು.. ಬೇಗ ಹೋಗೋಣ ಅಂತ.. ಹೇಳಿದ.. ನಾನು.. ಅವನ ಮಾತನ್ನು ಕೇಳಿ.. ಸೈಕಲ್ ಹತ್ತಿ.. ಒಂದು ಸ್ವಲ್ಪ್ ದೂರ ಬಂದಿರಬಹುದು.. ಅವನ ನಾಗಲೋಟದ ಸೈಕಲ್ ಸವಾರಿಯ ಆನಂದ ಸವಿಯುತ್ತಿರುವಗಲೇ.. ಒಂದು ಕ್ಷಣ ಏನಾಯಿತು ಎಂದು ತಿಳಿಯುವಷ್ಟರಲ್ಲಿ  ಇಬ್ಬರು.. ಕೆಳ ಬಿದ್ದಿದ್ದೆವು..
 ಅವನು ನನ್ನಂತೆ ಬೇರೆಯವರ ಮನೆಯಿಂದ ಸ್ಚೂಲ್ಗೆ ಬರುತ್ತಿದ್ದವನು.. ಇಬ್ಬರಿಗೂ ಏನು ಮಾಡಬೇಕೆಂದೇ ತೋಚಲಿಲ್ಲ.. ಇಬ್ಬರು.. ಸೈಕಲ್.. ಅಪಘಾತ ಆಗಿ ಹೀಗೆ ಪೆಟ್ಟಾಯಿತು ಅನ್ನಲು ಭಯ.. ಆದುದರಿಂದ.. ಇಬ್ಬರು.. ನೋವಿನ ಮದುವಿನಲ್ಲೇ.. ಆಸ್ಪತ್ರೆ ಗೆ ಸೇರುವ ದಾರಿಯಲ್ಲಿ ಮಾತನಾಡಿಕೊಂಡೆವು.. ನಾನು ಎಂದಿನಂತೆ ನಡೆದೇ ಹೋಗುತ್ತಿದ್ದೆ.. ಅವನು.. ಸೈಕಲ್ ಹೊಡೆದು ಕೊಂಡು.. ನನ್ನ ದಾಟುವ ವೇಳೆಗೆ ಸರಿಯಾಗಿ.. ಒಂದು ಲಾರಿಯವನು ಬಂದ.. ಇದರಿಂದ.. ಬ್ಯಾಲೆನ್ಸ್ ತಪ್ಪಿ.. ಅವನು ನನಗೆ ಗುದ್ದಿದ.. ಅದು ಅಲ್ಲದೆ.. ಅವನು ಬಿದ್ದ.. ಇದು..ನಾವು.. ನಮ್ಮ ಪಳಕರಲ್ಲಿ ಹೇಳ್ಬೇಕು ಅಂದು.. ನಿರ್ಧರಿಸಿದ್ದು.. 
        ನಂತರ.. ಆಸ್ಪತ್ರೆಯಲ್ಲಿ ಡಾಕ್ಟರ ಕೂಡ.. ಇ ಘಟನೆ ಹೇಗಾಯಿತು ಅಂತ ಕೇಳಲಾಗಿ.. ಇಬ್ಬರು.. ಇದನ್ನೇ ಹೇಳಿದೆವು.. ಅಂತೂ.. ಆ ದಿನ ಮನೆ ತಲುಪುವುದು ಸಂಜೆ ಆಯಿತು.. ನಾನು ಉಳಿದ ಮನೆಯಲ್ಲಿ ದೊಡ್ಡಪ್ಪ.. ಗಾಭರಿಯಿಂದ.. ಅಣ್ಣನನ್ನ ಕಳುಹಿಸಿ ಊರೆಲ್ಲ ಹುದುಕಿಸಿದ್ದ.. ನಾನು ಮನೆಗೆ ಹೋದಾಗ.. ಅವರು.. ಇದು ಹೇಗಾಯಿತು.. ಅಂತ ಕೇಳ್ದಾಗ.. ಮತ್ತೆ ಅದೇ ಸುಳ್ಳು.. ಅದನ್ನ ಕೆದಕಲು ಇನ್ನೇನೋ ಕೇಳಿದಾಗ ಅದನ್ನ ಸಮರ್ಥನೆಗೆ ಇನ್ನೊಂದು.. ಸುಳ್ಳು.. ಹೀಗೆ ನನ್ನ ಸುಳ್ಳುಗಳ ಕಂತೆ ಬೆಳೆಯುತ್ತಲೇ ಹೋಯಿತು.. ಅತ್ತ ನನ್ನ ಮಿತ್ರ ವರುಣ ಏನು ಮಾಡಿಕೊಂದಿರುವನೋ ಎಂಬ ಚಿಂತೆ.. ಅವನು ನನ್ನ ಅಂತೆ.. ಹೇಳಿದ್ದರೆ ಒಳ್ಳೆಯದು.. ಆದರೆ.. ವಿಚಿತ್ರ ಅಂದರೇ.. ಆ ಸತ್ಯಕ್ಕೆ.. ಆದರೆ ಇರುವುದು ಒಂದೇ ರೂಪ.. ಆದರೆ ಸುಳ್ಳಿಗೆ.. ಎಲ್ಲರು ಒಂದೇ ರೀತಿ ಹೇಳಲಾದಿತೆ?? ಅವನೊಂದು.. ನಾನೊಂದು.. ಸುಳ್ಳುಗಳ ಕತೆಯನ್ನೇ ಸೃಷ್ಟಿಸಿ ಬಿಟ್ಟೆವು.. 
 ನಂತರ ಅದು ಹೇಗೋ ಏನೋ.. ನಮ್ಮ ಪಾಲಕರ ಮನೆಯವರು ಅವರ ಮನೆಗೆ ಫೋನ್ ಮಾಡಿ ವಿಚಾರಿಸಲಾಗಿ.. ಎಲ್ಲಾ ಬಟಾ ಬಯಲು.. ನಮ್ಮ ಮಿಥ್ಯದ ಅರಮನೆ ಗಾಳಿ ಗೋಪುರವಾಗಿತ್ತು..  ಹುಂ ಇನ್ನೇನು ಮಾಡುವುದು.. ನಿಜ ಒಪ್ಪಿಕೊಳ್ಳದೆ ವಿಧಿ ಇಲ್ಲಾ ಎಂದು ತೋಚಿದಾಗ ಇಬ್ಬರು. ನಮ್ಮ ನಮ್ಮ ಮನೆಗಳಲ್ಲಿ.. ನಿಜ ಒಪ್ಪಿಕೊಂಡೆವು.. ಆದರೆ.. ನಾವು ಆಡಿದ ನಾಟಕದಿಂದಾಗಿ ಎಲೆಲ್ಲೂ ನಾವು.. ಸೈಕಲ್ ಮಿತ್ರರು ಎಂದೆ ಕರೆಸಿಕೊಳ್ಳುವ ಹಾಗಾಯಿತು 
 ನಮ್ಮನ್ನು ಛೇಡಿಸಲು ಒಂದು ಸಾಧನ ಆಯಿತು.. ನನಗೆ ನನ್ನ ಮೇಲೇನೆ ಯಾಕೋ.. ಮುಜುಗುರ ಆಗ ತೊಡಗಿತು.. ಅಂದೆ ನಿರ್ಧರಿಸಿದೆ.. ಸುಳ್ಳು ಎಂದಿಗೂ ಮತ್ತಷ್ಟು  ನೋವನ್ನ ನಮಗೆ ತರುತ್ತದೆಯೇ ಹೊರತು.. ಸುಖವನ್ನಲ್ಲ.. ಅದೇ ನಿಜ ಹಾಗಲ್ಲ.. ಇಂದಲ್ಲ ನಾಳೆ.. ಹೊರ ಬಂದೆ ಬರುತ್ತದೆ.. ತುಂಬಾ ತಡವಾಗಿ ತಿಳಿದಷ್ಟು ನಮ್ಮ ಆತ್ಮೀಯರಿಗೆ ನಮ್ಮ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ.. ಅಂದಿನಿಂದ ಇಲ್ಲಿವರೆಗೂ ನಡೆದದ್ದನ್ನ ಇದ್ದ ಹಾಗೇ  ಒಪ್ಪಿ ಕೊಳ್ಳುವ ಗುಣ ನನ್ನಲ್ಲಿ ಬೆಳೆದು ಬಂದಿತು..
       ಅದೇ ನಾನು ಹುಟ್ಟಿದ ಮನೆಯಲ್ಲೇ ಇದ್ದರೆ ಈ ಅನುಭವ ಬೇರೆಯದೇ ಆಗಿರುತಿತ್ತು.. ಅನ್ನಿಸುತ್ತದೆ.. ಯಾಕೆಂದರೆ.. ಅಪ್ಪನ ಹೊಡೆತಕ್ಕಿಂತ.. ಸುಳ್ಳೇ ಹಿತ ಎನಿಸುತಿತ್ತೋ ಏನೋ.. ಜೊತೆಗೆ ಅಮ್ಮನ ಮಮತೆ...ಜೊತೆ ಇರುತ್ತಿತ್ತಲ್ಲ..
ಅದನ್ನ ನೆನೆಯುತ್ತ ನೆನೆಯುತ್ತ.. ನನ್ನ ಮನಸು.. ವಂದನೆ ಹೇಳಿತು.. ಆ ನನ್ನ ಪಾಲಕರಿಗೆ.. ಎಂತ ಪುನ್ಯತ್ಮರಪ್ಪ ಅವರು.. ಅಂಥವರ ಮನೆಯಲ್ಲಿ ನಾನು ಬದುಕಿದ್ದೆ ಎನ್ನಲು.. ನನಗೆಷ್ಟು ಖುಷಿ..ಅಂತವರ ನೆರಳಲ್ಲಿ ಬೆಳೆದ ನಾನೇ ಧನ್ಯ.. ಎನ್ನುತ್ತಾ.. ಮಗ್ಗುಲು.. ಬದಲಾಯಿಸಿದ.." ತರುಣ.. ಆ ಸವಿ ನೆನಪನ್ನ ಮನಸಾರೆ ನೆನೆಯುತ್ತ.. ನಿದ್ರಾ ದೇವಿಯಲ್ಲಿ ಲೀನನಾದ..

~ಕಮಲು~

Wednesday, February 23, 2011

ಅಮ್ಮ ಕೊಡಿಸಿದ ಸೈಕಲ್


           ಅಮ್ಮ ಕೊಡಿಸಿದ ಸೈಕಲ್ 


                    " ನಿನಗೆ  ಯಾಕೋ ಮಾರಾಯ ಈ ಸೈಕಲ್ ಇನ್ನೂ.. ಯಾವದಾದ್ರು ಗುಜರಿಗೆ ಕೊಡು . ಅಲ್ಲಾ ನೀನು ಅಂತು.. ಇನ್ನೂ ಅದನ್ನ ಹೊಡೆಯೋದು  ಅಷ್ಟರಲ್ಲೇ ಇದೆ ..  ನೀನು ಪಟ್ಟಣದಿಂದ ಬರೋದು ಯಾವಾಗ?? ಇದನ್ನ ಹೊಡೆಯೋದು ಯಾವಾಗ..??? ಇನ್ನೂ ಬಂದ್ರು.. ಬೈಕ್ , ಕಾರು, ಅಂತವುಗಳಲ್ಲಿ ತಿರುಗೋ ಜಮಾನ ಬಂದಿದೆ.." ಎಂದು  ಸೈಕಲ್ ಅಂಗಡಿಯ ರಾಯರು  ಸೈಕಲ್ ಅನ್ನ  ಆಯ್ಲಿಂಗ್ ಮಾಡ್ತಾ ಇದ್ರೆ.. 

 ನನಗೆ ಯಾಕೋ ಅವರ ಮಾತು ಅಷ್ಟು ಸರಿ ಬರಲಿಲ್ಲ.. 
                    ಆದರೂ ಅವ್ರು ಹಿರಿಯರು ನಾನು ಚಿಕ್ಕವನಿದ್ದಗಿಂದ ನೋಡಿದ ಮನುಷ್ಯ. ಅವರು ನನ್ನ ತಿಳುವಳಿಕೆ ಬಂದಾಗಲಿಂದ ನೋಡ್ತಿದೀನಿ.. ಎಂತ ಶ್ರಮ ಜೀವಿ. ಅವರು ಸ್ವಲ್ಪ ಕೂಡ ಬದಲಾಗಿಲ್ಲ.. ಅವರ ಅಂಗಡಿಯಂತೆ  ಅವರು ಕೂಡ.. ಅದು ಅಲ್ಲದೆ.. ಅವರು ಯಾವತ್ತು ತಪ್ಪು ಮಾತನಾಡುವವ್ರಲ್ಲ. ಅದೇ ಈ ಸೈಕಲ್ ತಗೋಳುವಾಗ ಅವರು ನೀಡಿದ ಸಲಹೆನ ನಾನು ಹೇಗೆ ತಾನೆ ಮರಿಲಿ. ಆ ಮಾತುಗಳು ಇನ್ನೂ ನನ್ನ ಮನದಲ್ಲಿ ಹಸಿಯಾಗಿದೆ " ಏನೋ ತರುಣ ನಿಮ್ಮ ಅಪ್ಪ ಅದೇನೋ ಕಷ್ಟ ಪಟ್ಟು ಹಣ ಹೊಂದಸಿ ನಿನಗೆ ಸೈಕಲ್ ಕೊಡಿಸ್ತಿದಾರೆ. ಅದು ನೀನು ಚನ್ನಾಗಿ ಓದಲಿ ಅಂತ. ಇದನ್ನ ನೀನು ನಿನ್ನ ಕೊನೆ ಕಾಲದ ವರೆಗೂ  ಇಟ್ಟುಕೊಂಡು ಇರಬೇಕು. ಅಂತ ಒಳ್ಳೆ ಮಾಲು ನಾನು ನಿನಗೆ ಕೊಡ್ತಿದೀನಿ.. ಯಾಕಂದ್ರೆ ನಿಮ್ಮ ಮನೆಯಲ್ಲಿ ಎಷ್ಟೋ ದಿನ ಊಟ ಮಾಡಿದಿನಿ ಅದನ್ನ ಮರೆಯೋಕಗುತ್ತ??  ಹಾಗಾಗೆ ದುಡ್ಡಿನ ಮುಖ ನೋಡದೇನೆ.. ಎಲ್ಲಕಿಂತ ಒಳ್ಳೆ ಸೈಕಲ್ ನಿನಗೆ ಕೊಡ್ತಿದೀನಿ.. ಹುಂ ಅದ್ರು ಸಣ್ಣ ಆಸೆ ಏನು ಅಂದ್ರೇ ನೀನು ನಿಮ್ಮ ಅಪ್ಪನ ಹಾಗೇ ಏನು ಓದದೆ ಇರಬಾರದು. ಅವ್ರ ಆಸೇನ ಇದೆರಿಸ್ಬೇಕು ತಿಳಿತ.. ಹಾಗೇ ನನ್ನ ಆಸೆ ಏನಪ್ಪಾ ಅಂದ್ರೇ.. ಪ್ರತಿ ಬಾರಿ ಈ ಸೈಕಲ್ ರಿಪೇರಿ ಬಂದಾಗ ನನ್ನ ಅಂಗಡಿಗೆ ಬರಬೇಕು ತಿಳಿತಲ್ಲ.." ಎಂತ ಮಾತುಗಳು..
ಹೌದು ಆ ಸೈಕಲ್ ನಾನು ಮಾರಬೇಕೆನು??? ಅಂತ ದಾರಿದ್ರ್ಯ ನನಗೆ ಇನ್ನೂ ಬಂದಿಲ್ಲ.. ಅದು ಅಮ್ಮ ಅಂದು ನನಗೆ ಕೊಡಿಸದಿದ್ದರೆ.. ಬಹುಶಃ ನಾನು ಕಾಲೇಜ್ ಜೀವನವನ್ನ ಇಷ್ಟು ಯಶಸ್ವಿಯಾಗಿ.. ಮುಗಿಸುತ್ತಿರಲಿಲ್ಲವೇನೋ.. ಒಟ್ಟು ಕುಟುಂಬದಲ್ಲಿಯಾ  ಯಜಮಾನನಗಿದ್ದ ಚಿಕ್ಕಪ್ಪ ನನ್ನನ್ನು ಕಾಲೇಜ್ ಗೆ ಕಲಿಸಲಾಗುವುದಿಲ್ಲ ಎಂದು ಹೇಳಿದಾಗ... ಛಲದಿಂದ ..ನಾನು ಹೋಗೆ ತೀರುತ್ತೇನೆ ಎಂದು.. ನಿರ್ಧರಿಸಿ  ಎಲ್ಲರು.. ಖಾಸಗಿ ಕಾಲೇಜ್ ಗೆ ಹೋದರೆ.. ನಾನು ಕಲಾ ವಿದ್ಯಾರ್ಥಿ ಆಗಿ ಸರಕಾರಿ ಕಾಲೇಜ್ ಸೇರಿದೆ.. ಅದನ್ನ  ಕಂಡು ಅದಕ್ಕೆ ಬೆಂಬಲವಾಗಿ ನಿಂತು.. ತಾನು ಕಷ್ಟ ಕಾಲಕ್ಕೆ ಬೇಕೆಂದು.. ಅಡಿಕೆ ಸುಲಿದೋ, ಗೇರು ಬೀಜ ಮಾರಿಯೋ ಕೂಡಿಟ್ಟ ಹಣವನ್ನ ಕೊಟ್ಟು.. ಈ ದುಡ್ಡಿನಿಂದ.. ಒಂದು ಸೈಕಲ್ ತಗೋ ಎಂದು.. ಕೊಟ್ಟಾಗ.. ನನಗೆ ಆಗ ಹೊಸ ಆಸೆ ಮೈಗೆದರಿತ್ತು.. ಅದು.. ಅಲ್ಲದೆ.. ಆ ಸೈಕಲ್ನಾ  ಸಹಾಯದಿಂದ ಎಷ್ಟೋ ದುಡಿಮೆಗಳನ್ನ ಮಾಡಿ.. ನನ್ನ ಓದಿಗೆ ಸಾಕಾಗುವಷ್ಟನ್ನ ಸಂಪಾದಿಸಿಕೊಳ್ಳಲು ಸಹಾಯಕವಾಯಿತು.. ಅದನ್ನ ಮಾರುವುದೇ...  

ಅವರನ್ನ ನೋಯಿಸೋ ಮನಸಾಗದೆ.. ಸಮಾದನದಲ್ಲೇ ಹೇಳದೆ.. " ಇಲ್ಲಾ ರಾಯರೆ ನಾನು ಅದನ್ನ ಕೊಡಲ್ಲ."
          ಯಾಕೋ ಹಾಗೇ ಹೇಳ್ತಿದಿಯ ಇವಾಗ ಇಂತ ಹಳೆ ಸೈಕಲ್ ಆಯ್ಲಿಂಗ್ ಮಾಡ್ಸಿ ಕೊಟ್ಟರೆ ಎಂತ ಒಳ್ಳೆ ಬೆಲೆ ಇದೆ ಅಂತ ನಿನಗೆ ಗೊತ್ತಿಲ್ವ.. ನೀನು ಕೊಂಡ ಬೆಲೆಗೆ ಇದನ್ನ ಇವಾಗ ಮಾರಬಹುದೋ ಹುಚ್ಚಪ್ಪ ಅದು ಅಲ್ಲದೆ ನನಗೆ  ತುಂಬಾ ಜನ ಕೇಳ್ತಿದ್ದಾರೆ ಎಲ್ಲಾದರು ಇದ್ರೆ ಕೊಡ್ಸಿ ಅಂತ." ಅಂತ ಹೇಳ್ತುತ್ತ ತಮ್ಮ ಬೆಲೆಯ ಪೈಜಾಮವನ್ನ ಒಮ್ಮೆ ಮೇಲೇರಿಸಿಕೊಂಡು.. ಚೈನ್ ಬಾಕ್ಸ್ ಅನ್ನ ಸಾರಿಸಿ.. ಬೆಂಡ್ ತೆಗೆದು ರೆಡಿ ಆಗಿದ್ದ ಗಾಲಿಯನ್ನ ಸೇರಿಸ ತೊಡಗಿದರು..
 " ದುಡ್ಡಿನ ಆಸೆಗೆ ಇದನ್ನ ಕೊಡೋವಷ್ಟು ವ್ಯಾಪಾರೀ ಮನೋಭಾವ ನನ್ನದಲ್ಲ ರಾಯರೇ.. ನಿಮಗೆ ಬೇರೆ ಎಲ್ಲಾದರು ಸಿಕ್ಕದರೆ ಕೊಡಿ.. ಇದು ನನ್ನ ಬಾಳಿನಲ್ಲಿ ಬೆಲೆ ಕಟ್ಟಲಾಗದ್ದು.. ಇದು ಪಡೆದ ದಿನದಿಂದ ಹಿಡಿದು ಇಲ್ಲಿವರೆಗೂ ನಾನು ನಿಮ್ಮಲ್ಲೇ ರಿಪೇರಿ ಮಾಡಿಸಿರುವೆ.. ನಾನು ಏನಾದ್ರು ಬಾಕಿ  ದುಡ್ಡು ಕೊಡೋದು ಇದ್ರೆ ಹೇಳಿ ಕೊಟ್ಟು ಬಿಡುತ್ತೇನೆ.." ಅಂತ ಹೇಳಿ ಅವರ ಅಂಗಡಿಯ  ಕುರ್ಚಿಯಲ್ಲಿ ಆಸೀನನಾದೆ. 
   
        ಹಾಗೇನು ಇಲ್ಲವೋ ಮಾರಾಯ.. ಸುಮ್ಮನೆ ಮುದ್ಕಿಗೆ ಸಿಂಗಾರ ಮಾಡದ ಹಾಗೇ ಇದಕ್ಕೆ ಪ್ರತಿ ವರ್ಷ ಊರಿಗೆ ಬಂದಾಗಲು ನನ್ನ ಅಂಗಡಿಗೆ ತಂದು  ರಿಪೇರಿ ಮಾಡಿಸ್ತಿ. ಯಾಕೆ ಸುಮ್ಮನೆ ಅದಕ್ಕೆ ಖರ್ಚು ಅಂತ ಹೇಳ್ದೆ. ಅಷ್ಟೇ.
ಅಂತ ಸೈಕಲ್ ನಾ ಪೆಡಲ್ ಸರಿ ಮಾಡ ತೊಡಗಿದರು.
                    ನಿಮಗೆ ಬೇಜಾರಾಗಲ್ಲ ಅಂದ್ರೇ ಒಂದು ಮಾತು ರಾಯರೆ.. ನಾನು ನಿಮ್ಮ ಹತ್ರ ಈ ಸೈಕಲ್ ತಗೋಳುವಾಗ ನಾನು ಇದ್ದ ಸ್ಥಿತಿಯಲ್ಲಿ ಇರೋ ಅಂತ ಯಾರದ್ರು.. ಬಡ ಪ್ರತಿಭಾವಂತ ಹುಡುಗ ಇದ್ರೆ ಹೇಳಿ.. ಅವನಿಗೆ ಕಲಿಲಿಕ್ಕೆ ಸಹಾಯ ಆಗುತ್ತೆ ಅನ್ನೋದಾದ್ರೆ.. ಇದನ್ನ ಅವನು ಬಳಸ್ಕೊಳ್ಳಲಿ.. ಆದರೆ ಅವನಿಗೆ ಇದನ್ನ ಮಾರಲ್ಲ. ಅವನಿಗೆ ಇದರ ರಿಪೇರಿ ಖರ್ಚು ಕೂಡ ನಾನೇ ಬರ್ಸ್ತಿನಿ..ಅವನು ಓದು ಮುಗಿದ ತಕ್ಷಣ ಅದನ್ನ ನನಗೆ ಕೊಡಬೇಕು.. ಅಂತವ್ರಿದ್ರೆ ಹೇಳಿ.. ಯಾಕಂದ್ರೆ ಇದು.. ನನ್ನ ಅಮ್ಮ ಕೊಡಿಸಿದ ಸೈಕಲ್. ನಿಮಗೆ ಇದು ಬರಿ ಸೈಕಲ್ ತರ ಮಾತ್ರ ಕಾಣ್ಸುತ್ತೆ . ಆದರೆ ಇದ್ರಲ್ಲಿ ನನಗೆ ಅಮ್ಮನ ಕಷ್ಟದ ದಿನಗಳ  ನೆನಪು.. ಕಾಣುತ್ತೆ.. ನನಗೆ ನನ್ನ ಕಾಲೇಜ್ ದಿನದಿಂದನು ಇಲ್ಲಿವರೆಗೂ ಇವನು ನನಗೆ ಒಳ್ಳೆ ಸಂಗಾತಿ.. ಯಾವತ್ತು ನನಗೆ ಮೋಸ ಮಾಡಿಲ್ಲ.. ಮನುಷ್ಯರಂತೆ.. ನಾನು ಬಿದ್ದಾಗ ನಕ್ಕಿಲ್ಲ.. ನನ್ನ ಅಳುವಿನಲ್ಲೂ ಮೌನಿ ಆಗಿ ನಾನು ಇರುವೆ ಗೆಳೆಯ ಎಂದಿದೆ.. ನಾನು ನಗುವಾಗಲು.. ನಿನ್ನ ಜೊತೆಯಲ್ಲೇ ಇರ್ತೇನೆ.. ಮರಿಬೇಡ ಅಂತ ಅದು ಮೌನಿಯಾಗೆ ನನ್ನ ಹತ್ರ ಹೇಳಿದೆ..  ಇವನು ನನಗೆ ನಿಜ ಹೇಳ್ಬೇಕು ಅಂದ್ರೇ ಯಾವತ್ತು ನನಗೆ ಒಂದು ಹೊರೆ ಅಂತ ಅನ್ಸೆ ಇಲ್ಲಾ.. ಯಾಕೋ ಗೊತ್ತಿಲ್ಲ.. ಇವಾಗ ಅವನನ್ನ ಕಳಕೊಲ್ಲದು ಅಂದ್ರೇ.. ಮುತ್ತು ಕೊದವ್ಳು  ಬಂದಾಗ ತುತ್ತು ಕೊಟ್ಟ ಹೆತ್ತ ತಾಯೀ ನಾ ಮರೆತಂತೆ ಆನ್ಸುತ್ತೆ.. ನನಗೆ ನನ್ನ ಅಮ್ಮ ಅಪ್ಪ ಹಾಗೂ ನನ್ನ ಬೆಳೆಸಿದವರು ಇದ್ದಂತೆ ಈ ಸೈಕಲ್ ಕೂಡ.. ಇದಕ್ಕೂ ಜೀವ ಇದೆ.. ಅದು ನನ್ನ ಮನಸಿನಲ್ಲಿ . ರಾಯರೆ.. ನೀವೇ ಹೇಳಿದ್ರಿ.. ನೆನಪಿದೆಯ.. ನಿಮ್ಮಷ್ಟು ವಯಸ್ಸು ಆಗೋವರೆಗೂ ಇದನ್ನ ನಿನ್ನ ಹತ್ರ ಇಟ್ಟು ಕೊಂಡಿರಬೇಕು  ಅಂತ ಆಗ ಉದಾಪೆಯಗೆ ನಿಮ್ಮ ಮಾತು ತಗೊಂಡಿದ್ದೆ.. ಇವಾಗ ನಿಮ್ಮ ಮಾತು ನಿಜ ಅನ್ಸ್ತಿದೆ.. ರಾಯರೆ.. ನನಗೆ ನಿಮ್ಮಷ್ಟು ಕಾಲ ಬದುಕೋ ಅದೃಷ್ಟ ಇದೆಯೋ ಇಲ್ಲವೋ.. ಆದ್ರೆ ನನ್ನ ಕಡೆ ಘಳಿಗೆವರೆಗೂ ಇದು ನನ್ನ ಜೊತೇನೆ ಇರುತ್ತೆ.. ಅಂಥ ಮಾತ್ರ ಹೇಳಬಲ್ಲೆ..
ನನ್ನ ಆ ಹಳೆ ನೆನಪಿಂದ ಹೊರ ಬಂದು  ಸೈಕಲ್ ರೆಡಿ ಆಗಿರಬಹುದು ಅಂತ ತಿರುಗಿ ನೋಡ್ತೀನಿ.. ರಾಯರು ನನ್ನ ಪಕ್ಕದಲ್ಲಿ ಸೈಕಲ್ ತಂದು ನಿಲ್ಲಸ್ತ.. ನನ್ನ ಹೆಗಲ ಮೇಲೆ ಕೈ ಹಾಕಿ ಹೇಳದ್ರು.. 
" ಮಗ ನೀನು ನಿಮ್ಮ ಅಪ್ಪನ ತರಾನೆ.. ಗುಣ ಅಂದ್ರೇ ಹೀಗಿರಬೇಕು... ಈಗಿನ ಕಾಲದಲ್ಲಿ ವಯಸ್ಸಾದ ನನ್ನ ಅಂತ ಮನುಷ್ಯರನ್ನೇ ನೀನು ಏನು ಕಡದಿರೋದು? ಅಂತ ಹೇಳಿ ವ್ರುದ್ದಶ್ರಮಕ್ಕೆ ಸೇರಿಸೋ ಈ ಕಾಲದಲ್ಲಿ.. ಜೀವ ಇರದ ಈ ಸೈಕಲ್ ಕೂಡ ನನ್ನ ಸಂಗಾತಿ.. ಅದನ್ನ ನಿನ್ನ ಹಿರಿಯರನ್ನ ನೋಡಿಕೊಂದಂತೆ ನೋಡ್ಕೋತೀನಿ ಅಂದ್ಯಲ್ಲ.. ನಿಜಕ್ಕೂ ಖುಷಿ ಆಯ್ತು.." ಅಂತ ಅವರ ಕಣ್ಣಲ್ಲಿನ ನೀರು ಒರೆಸಿ ಕೊಂಡರು. 
ರಾಯರೇ ಏನಾಯ್ತು ನಿಮಗೆ ನಿಮ್ಮನ್ನ ನಿಮ್ಮ ಮಕ್ಕಳು...
ಅವರ ಕತೆ ಏನ್ ಕೇಳ್ತಿಯ ಮಗ.. ನನ್ನ ಮತ್ತೆ ನನ್ನವಳನ್ನ ವ್ರುದ್ದಶ್ರಮಕ್ಕೆ ಸೇರಸ್ಲಿಕ್ಕೆ ಹೊರ್ತಿದ್ರು.. ನಾನು ಶಕ್ತಿ ಇರೋ ತನಕ.. ದುಡದೆ ಬದಕ್ತಿನಿ ಅಂತ ಮತ್ತೆ ಅಂಗಡಿ ಅಲ್ಲೇ ಕೆಲಸ ಮಾಡ್ತಿದೀನಿ.. ಹಾಗೇ ಇಷ್ಟ ದಿನ ನನ್ನ ಜೊತೆ ಇರೋವಳನ್ನು..ಕೂಡ ನಾನೇ ನೋಡ್ಕೊತಿದಿನಿ..ಯಾವದಕ್ಕೂ ಇರಲಿ ಅಂತ ಸ್ವಲ್ಪ್ ದುಡ್ಡು ಅವಳ ಹೆಸ್ರನಲ್ಲೇ ಇಟ್ಟಿದ್ದೆ ಅದು ಈಗ ಅನುಕೂಲಕ್ಕೆ ಬಂತು..

ನೀನು ಮಾತ್ರ ನಿಮ್ಮ ಅಪ್ಪ ಅಮ್ಮಂಗೆ ಎಂದು ಹಾಗೇ ಮಾಡಬೇಡ ಮಗ.. ನೀನು ಈಗ ಆಡಿದ ಮಾತಿನಂತೆ ನಡ್ಕೋ..ನೀನು ನಡ್ಕೊತಿಯ ಅಂತ ನನ್ನ ಹೃದಯ ಹೇಳ್ತಾ ಇದೆ ಕಣೋ..
 ತಗೋ ನಿನ್ನ ಸೈಕಲ್ ರೆಡಿ ಇದೆ.. ಹುಂ ಇದನ್ನ ಇಟ್ಟ ಕೊಳ್ಳಿ ರಿಪೇರಿ ಚಾರ್ಜು.. ಚೇಂಜ್ ಏನು ಕೊಡೋದು ಬೇಡ.. ಅಂತ ಹೇಳ್ದೆ.. ನಿಮ್ಮ ಕೈ ಅಲ್ಲಿ ರೆಡಿ ಆದ ಸೈಕಲ್ ಅಂದ್ರೇ.. ಅದು ಮುದ್ಕಿನು.. ಹದಿ ವಯಸ್ಸಿಗೆ ಬಂದ ಹಾಗಿದೆ ರಾಯರೆ.. ಇಂತ ಸೈಕಲ್ ಮಾರೋದ.. ಛೇ ಯಾವತ್ತು ಆಗಲ್ಲ.. ಅಂತ ಹೇಳಿ ಅವ್ರಿಗೆ ಧನ್ಯವಾದ ಹೇಳಿ.. ಸೈಕಲ್ ಏರಿದೆ.. ಮತ್ತೆ ನನ್ನ ಗತಕಾಲದ ಸಂಗಾತಿ ಯೊಂದಿಗೆ ಹಳೆಯ ನೆನಪುಗಳ ಮೆಲುಕು ಹಾಕುತ್ತ..
ಆದರು ಬಿಡದೆ ಕಾಡುತ್ತಿದೆ.. ನಮ್ಮ ರಾಯರ ಕೊನೆಯ ಮಾತು. 
~ಕಮಲು~ .  
--
BΣПΛKΛ KЯ