ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Wednesday, October 27, 2010

ಮನದ ತುಮುಲ

ಮನದ ತುಮುಲ :
 ಪ್ರೀತಿಯ ಮನದ ಒಡತಿಯೇ,
                       ನಿನಗೆ ಹೀಗೊಂದು ಪತ್ರ ನಾನು ಬರೆದದ್ದು ನೆನಪಿದೆಯೇನು???  ಈ ಪತ್ರ ಬರೆಯಲು ಕಾರಣವಾದ ನಿನ್ನ ಪತ್ರವನ್ನ ನಾ ಅದೆಷ್ಟೋ ಬಾರಿ ಓದಿ ನಕ್ಕಿರುವೆ.. ಅತ್ತಿರುವೆ.. ಅದು ಮೊದ ಮೊದಲು ನಾವು ಪತ್ರ ಮುಖೇನ ಕ್ಷೇಮ ಸಮಾಚಾರ ಆರಂಭಿಸಿದಾಗಿನದು.. 
                        ಆ ನೀ ಕಳುಹಿಸಿದ ಪತ್ರ ನೋಡಿ ದಂಗಾಗಿದ್ದೆ. ಅದಕ್ಕೆ ಆ ಪತ್ರವನ್ನ ಮತ್ತೊಮ್ಮೆ ಬರೆಯುವ ತವಕ. ಹಾಗೇ ತಮಗೆ ಮತ್ತೊಮ್ಮೆ ಕೊರೆತ 
                ಪ್ರಿಯೆ, ರಾಣಿ, ಸುಂದರಿ, ಗುಬ್ಬಚ್ಚಿ, ಸಹಜ ಸುಂದರಿ, cute ಗರ್ಲ್, ಚೆಲುವೆ, ರಾಜಕುಮಾರಿ, ಹಃ ರಾಜಕುಮಾರಿ ಎಂಬ ಶಬ್ದ ತುಂಬಾ ಒಪ್ಪುತ್ತದೆ ಕಣೆ ನಿನಗೆ ಸಹಜ ಸ್ಥಿತಿಯಲ್ಲಿ ನೀನು ರಾಜಕುಮಾರಿ.. ಅದೇ ಕೊಪಿಸಿಕೊಂಡಿದ್ದಾಗ ಬರೆ ಮಾರಿ.. ಎಂದೆಲ್ಲಾ ನನ್ನ ಪತ್ರದಲ್ಲಿಯಾ ಬ್ರಹ್ಮ ಲಿಪಿಯಲ್ಲಿ ಗಿಚಿಯಿರುವದನ್ನ ಅರ್ಥೈಸಿಕೊಂಡು   ನೀನು ಒಗಟಾಗಿ ನನ್ನ ಪ್ರಶ್ನೆ ಕೇಳಿದ್ದೆ.. ಏನು ಹಾಗೆಲ್ಲ ಕರೆಯುತ್ತಿಯೇ??? ಇದರ ಅರ್ಥವೇನು ಎಂದು??? 
              ಹುಂ ಆಗೋ ಏನೇನೋ ಸಬೂಬು ಹೇಳಿದರು ಕೇಳದೆ ನಂತರ ಉತ್ತರವನ್ನು ಚಾಪಿಸಿದ್ದೆ ಅಲ್ಲವೇ???  ಹಾಗೇ ಕರೆಯಬೇಕೆನ್ದೆನಿಸಿತು ಕರೆದೆ. ಹೇ ನಿಜ ಹೇಳಲೆನೇ.. ಇದುವರೆಗೂ ನನ್ನ ಬಾಳಿನಲ್ಲಿ ಹಾಗೇ ಕರೆಸಿಕೊಂಡಿರುವವ್ರು ಯಾರದ್ರು ಇದ್ದರೆ ಅದು ನೀನು ಮಾತ್ರ. ಅದು ನಿನ್ನ ದುರ್ವಿಧಿ ಅಂಥ ಬೇಕಾದರು  ಅಂದುಕೋ.. 
                ಹೇ ಈ ನನ್ನ ಸ್ಥಿತಿಯನ್ನ ಹೇಳ ಬಯಸುತ್ತೇನೆ ನನ್ನ ಅರಗಿಣಿ, ಮೇಲ್ವರ್ಗದ ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದ ನನಗೆ ಮಾತ್ರ ಹೀಗೆ ಅನ್ನಿಸುವುದೋ ಅಥವಾ ನನ್ನ ಅಂಥ ಎಲ್ಲಾ ಹುಡುಗರಿಗೂ ಹೀಗೆ ಅನ್ನಿಸುವುದೋ ಗೊತ್ತಿಲ್ಲ.. ಮೊದಲೇ ಹೇಳಿ ಬಿಡುತ್ತೇನೆ ಅದೇನೋ ಅಂತಾರಲ್ಲ ಬಿಸಿ ತುಪ್ಪ ಬಾಯಿಯಲ್ಲಿ ಹಾಗಿದೆ ನನ್ನ ಸ್ಥಿತಿ. ನಿನ್ನನ್ನ ಕಳೆದು ಕೊಳ್ಳಲು ಮನಸಿಲ್ಲ. ಹಾಗೇ ನೀನು ಅಥವಾ ನಿನ್ನ ಅಂಥಹ ವಿದ್ಯಾವಂತ ತರುಣಿಯರು ಬಯಸುವ ಆರ್ಥಿಕ ಶ್ರೀಮಂತಿಕೆಯನ್ನು ನಾನು ಕೇಳಿಕೊಂಡು ಬಂದಿಲ್ಲ ಕಣೆ. ನೀನು ಬೇಕೇ ಬೇಕು ಅಂಥ ಹೇಳಿ ನಾನು ಏನಾದರೂ ನಮ್ಮಿಬ್ಬರ ಈ ಸಂಬಂಧಕ್ಕೆ "ಲವ್" ಎಂಬ ಬಣ್ಣ ಹಚ್ಚಿ ನಿನ್ನ ಮುಂದೆ ನಿವೇದಿಸಿದರೆ ಮುಗಿದೇ ಹೋಯಿತು. 
                    ನೀನು ಆಗ ನೀಡುವ ಉತ್ತರವನ್ನ ನಾನು ಇಗಲೇ ಊಹಿಸಬಲ್ಲೆ ನನ್ನ ಗೆಳತಿಯೇ.. ನೀನು ಆಗ  ಏನೋ ನೀನು ಇಂಥ ಮನುಷ್ಯ ಅಂದು ಕೊಂಡಿರಲಿಲ್ಲ. ಚೀ..  ನೋಡೋ ಇವತ್ತೇ ಲಾಸ್ಟ್ ಇನ್ನುಮುಂದೆ ನನ್ನ ಹತ್ರ ಮಾತಾಡಲು ಬೇಡ ಯಾವದೇ ರೀತಿ ಕಾಂಟಾಕ್ಟ್ ಕೂಡ ನಮ್ಮಿಬ್ಬರ ನಡುವೆ ಬೇಡ ತಿಳಿತ?? ಅಂಥ ಮುಖದ ಮೇಲೆ ಹೊಡೆದಂತೆ ಮಾತನಾಡಿ ಒಂದೇ ಮಾತಿನಲ್ಲಿ ನಮ್ಮಿಬ್ಬರ ನಡುವಿನ ಗೆಳೆತನವನ್ನ ಕಡಿದು ಹಾಕಿ ಒಮ್ಮೆಯೂ ತಿರುಗಿ ನೋಡದೆ ಹೋಗಬಲ್ಲೆ ಎಂಬುದ ನಾ ಬಲ್ಲೆ.  ಹಾಗೇ  ಹೇಳಿಸ್ಕೊಂಡು ಜೀವನ ಪರ್ಯಂತ ನಿನ್ನಿಂದ ದೂರವಗಿರೋದ್ಕಿಂತ  ಈಗ ಹೇಗಿದ್ದಿವೋ ಹಾಗೇ ಇರೋದ್ರಲ್ಲೇ ತುಂಬಾ ಸುಖ ಅನ್ನಿಸ್ತಿದೆ ಕಣೆ. ಯಾಕಂದ್ರೆ ನಾನು ಒಂದು ವೇಳೆ ಹಾಗೇ ನಿನ್ನಲ್ಲಿ ನಿವೇದಿಸಿಕೊಂದಾಗ ನೀನು ನೀಡಬಹುದಾದ ಉತ್ತರ ತಪ್ಪು ಅಂಥ ನನಗೆ ಅನ್ನಿಸೋಲ್ಲ ಯಾಕಂದ್ರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಇಷ್ಟಗಲಿರುತ್ತಲ್ವ?? 
       ಹೇ ನಾನು ಹೀಗೆಲ್ಲ ಮಾತಾಡ್ತಾ ಇದ್ದೀನಿ ಅಂಥ ತಪ್ಪು ತಿಳಿಬೇಡ, ಈ ಹದಿ ಹರೆಯದ ವಯಸ್ಸಿನಲ್ಲಿ ಬಯಸುವ ದೈಹಿಕ ತೃಪ್ತಿ ಬೇಕಾದರೆ ಮುಂದೊಂದು ದಿನ ಸಿಗಬಹುದು. ಸಿಗದೇ ಹೋದರು ಪಡಿಬಹುದು. ಆದರೆ ಮನಸಿಗೆ ಮುದ ನೀಡ ಬಹುದಾದ ಮಧುರ ಮಾತುಗಳು, ಪರಸ್ಪರ ಕಾಳಜಿ, ಪ್ರೀತಿ, ಸುಂದರ  ಬದುಕಿಗೆ ಬೇಕಾದ ಪ್ರೋತ್ಸಾಹದಾಯಕ  ಸಾಹಚರ್ಯ ಸಿಗಬೇಕು ಅಂತಾದ್ರೆ ಅದರ ಅರ್ಥಗೊತ್ತಿರೋ ಹಾಗೂ ಅಂಥ ಹೃದಯ ಇರೋ ನಿನ್ನ ಅಂಥವರೇ ಬೇಕು. 
               ಅಂಥ ನಿನ್ನನ್ನ ಕಳಕೊಂಡು ಬದುಕೋದು ಹೇಗೆ ಸುಂದರಿ.. ಅದಕ್ಕೆ ಹೇಳಿದ್ದು. ನನಗೆ ಆ ಲವ್ ಅನ್ನೋ ಸಂಬಂಧ ಹಚ್ಚಿ ನಿನ್ನ ಸಂಬಂಧ ಕಳಕೊಲೋಕೆ  ನನಗೆ ಇಷ್ಟ ಇಲ್ಲಾ.. 
                    ಎಲ್ಲಾ ಗೊಂದಲ ಗೊಂದಲಮಯವಾಗಿದೆಯ?? ಏನು ಮಾಡೋದು ಹೇಳು ಹೇಳಿ ಕೇಳದೆ ಈ ಭೂಮಿ ಮೇಲೆ ಹುಟ್ಟಿ ಬಿಟ್ಟಿದಿನಿ.. ಅದು ನಿನ್ನ ಪರಿಚಿತನಾಗಿ. ಈಗ ನಿನ್ನ ಕಳಕೊಲೋಕೆ ನನಗೆ ಸುತರಾಂ ಇಷ್ಟ ಇಲ್ಲಾ.. ಕಣೆ..   
                   ಇಷ್ಟಕ್ಕೂ ಒಂದು ವಿನಂತಿ ನೀನು ನನ್ನ ಈ ಸ್ಥಿತಿಯನ್ನು ಒಪ್ಪಿ ಕೂಡ ನನ್ನೊಟ್ಟಿಗೆ ಸಾಥ್ ನೀಡುವೆ ಎಂದರೆ.. ನಾನು ನಿನಗೆ ಚಿರಋಣಿ.


                                               ಇಂತಿ ನಿನ್ನ ಪ್ರೀತಿಯ
                                                        ಬೆನಕ 


  
                       

Friday, October 22, 2010

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು...3

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು..
೩  
                                         
             ನಮ್ಮ  ಯಜಮಾನನ ಮನೆಯಲ್ಲಿ  ಎಂದಿನಂತೆ... ಹೋದೆ.. ಇಂದು ನಾನು ಇನ್ನೂ ಮುಂದೆ ನಿಮ್ಮಲ್ಲಿ ಕೆಲಸ ಮಾಡಲಾರೆ ಎಂದು ಹೇಳೇ ಬಿಡಬೇಕು ಅನ್ನಿಸಿದರು.. ಬಾಯಿ ಯಾಕೋ ಸಹಕರಿಸಲಿಲ್ಲ.. ಮಾಮೂಲಿನಂತೆ ಕೆಲಸ ಮಾಡಿದೆ.. ನಮ್ಮ ಯಜಮಾನರಿಗೆ ಯಾಕೋ ಅಶ್ವಿನ ಮೇಲೆ ಸಿಟ್ಟು ಆರಿದಂತಿತ್ತು.. ಬಹುಶಃ ಅವನಿರದಿರುವ ದಿನಗಳಲ್ಲಿ ಯಾವದೋ ಸೂಳೆಯರೊಂದಿಗೆ ಮಜಾ ಮಾಡಿರಬೇಕು.. ಅಥವಾ ಅಶ್ವಿನನ ಊರಿನಿಂದಲೇ  ಬಂದಿರುವ ಇಲ್ಲಿನ ಎಲ್ಲಾ ಸ್ಥಿತಿಗೂ  ಹೊಂದಿಕೊಂಡಿರುವ ಕೆಲವೊಮ್ಮೆ ನನಗೆ ಹೇಸಿಗೆ ಹುಟ್ಟಿಸುವನ್ತೆಲ್ಲ ನಮ್ಮ ಯಜಮನನೊಂದಿಗೆ ನಡೆದು ಕೊಳ್ಳುವ  ಶರತ್ ಎಂಬ ಹುಡುಗ ಚನ್ನಾಗಿ ಯಜಮಾನನ ಸೇವೆ ಮಾಡಿರಬೇಕು.. ಹಲವು ಬಾರಿ ಯೋಚಿಸಿದ್ದಿದೆ..  ಇಬ್ಬರು ಒಂದೇ ಕಡೆಯಿಂದ ಬಂದರು.. ಇವರಿಬ್ಬರ ನಡುವೆ ಅದೆಂತಾ ಭಿನ್ನತೆ.. ಹಲವು ಬಾರಿ ಅವರಿಬ್ಬರ ನಡುವೆಯೇ ಅದೇ ಯಾವುದೊ ಹವ್ಯಕ ಭಾಷೆಯಂತೆ ಅದ್ರಲ್ಲಿ ವಾಗ್ಯುದ್ದ ನಡೆಯುತ್ತದೆ.. ಅದನ್ನೆಲ್ಲ ಮೊದ ಮೊದಲು ತಮಿಳಿಗೆ ಹೊಂದಿಸಿ ಹೇಳುತ್ತಿದ್ದವನು ಶರತ್. ಅವನು ಇವನಂತೆ ಬಲು ಬೇಗ ತಮಿಳು ಕಲಿತವನು.. ಅಶ್ವಿನ ತಮಿಳು ಲಿಪಿಯನ್ನು ಕಲಿತ ಜೊತೆಗೆ ನನಗು ಕನ್ನಡ ಹೇಳಿಕೊಟ್ಟ. ಅವನ ಹತ್ತಿರ ಎನಗಬೇಕೆನ್ದಿರುವೆ ಎಂದು ಕೇಳಿದಾಗ ಟೀಚರ್ ಆಗಬೇಕೆಂಬ ಆಸೆ ಇದೆ ಕಣೋ. ಎಂದಿದ್ದ.. ಖಂಡಿತ.. ಅವನೇನಾದರೂ ಶಿಕ್ಷಕನಾದರೆ ಖಂಡಿತ ಒಬ್ಬ ಆದರ್ಶ ಶಿಕ್ಷಕನಾಗುವುದರಲ್ಲಿ ನನಗಂತೂ ಅನುಮಾನವಿರಲಿಲ್ಲ...ಅಷ್ಟು ಚನ್ನಾಗಿ ನನಗೆ ಕನ್ನಡ ಕಲಿಸಿ ಕೊಟ್ಟಿದ್ದ..  ಅವನು ತಮಿಳು ಲಿಪಿಯನ್ನು ಕಲಿತದ್ದು , ನಂತರ ತಮಿಳು ಪತ್ರಿಕೆಯನ್ನ ಓದ ತೊಡಗಿದ್ದನ್ನು    ಕಂಡ ನಮ್ಮ ಯಜಮಾನ ಅಭಿಮಾನದಿಂದ ಬೇಶ್ ಅಂದಿದ್ದರು.. ಅದನ್ನ ಕಂಡು.. ನಮಗೆಲ್ಲ ಆಶ್ಚರ್ಯವಾಗದೆ ಇರಲಿಲ್ಲ.. ಒಮ್ಮೊಮ್ಮೆ.. ನಮ್ಮ ಯಜಮಾನನು ಒಳ್ಳೆಯವನಂತೆ ಕಾಣಿಸುತ್ತನಲ್ಲ ಎಂದು.. ಅದಕ್ಕೆ ಆಗ  ನನ್ನ ಮಿತ್ರ ಹೇಳಿದ್ದು ನೆನಪಿಗೆ ಬರುತ್ತಿದೆ.. ದೋಸ್ತ  ಯಾರು ಕೆಟ್ಟವರಲ್ಲ ಪರಿಸ್ತಿತಿ ಕೆಟ್ಟವರ್ನ್ನಗಿಸುತ್ತದೆ. 
                            ಮದುವೆ ಮುಗಿಸಿ ಬಂದು ಒಂದೆರಡು ದಿನ ಕಳೆದಿರಬಹುದು ಅಂದು ರಾತ್ರಿ ಮದಿರೆಯ ಸೇವನೆಗೆ ಕುಳಿತಿದ್ದರು ನಮ್ಮ ಸಾಹುಕಾರ. ಪಕ್ಕದಲ್ಲಿ ನಾನು ಮತ್ತೆ ಶರತ್ . ಲೋಟಕ್ಕೆ ಮದಿರೆಯನ್ನ ಎರಸಿ ಕುಡಿಸುತ್ತಿದ್ದೆವು. ಅಶ್ವಿನ್ ಮಾತ್ರ ಎದುರಿನಲ್ಲಿ ಇರಲಿಲ್ಲ.. ಅವನು ಸಂದ್ಯವಂದನೆಗೆಂದು ಅವನೇ ತಂದಿಟ್ಟುಕೊಂಡಿದ್ದ.. ದೇವರ ಫೋಟೋ ಮುಂದೆ ಕುಳಿತಿದ್ದ. 
                            ಆಗ ಅಶ್ವಿನ್ ನ ಬಗ್ಗೆ ಮಾತನಾಡ ತೊಡಗಿದರು. ನಮ್ಮ ಬಾಸ್ ಏನೇನೋ ತಮ್ಮ ಕೀಳು ಶಬ್ದಗಳಿಂದ ಅವನನ್ನ ವರ್ಣಿಸುತ್ತಿದ್ದರು. ನನ್ನ ಸೇವೆ ಮಾಡೋಕೆ ಅಂಥ ಕರ್ಕೊಂಡು ಬಂದ್ರೆ ಇವನ ಸೇವೆನೆ ನಾನು ಮಾಡ ಬೇಕಾಗಿದೆ.. ಎಂದು ಮುಂತಾಗಿ ಮಾತನಾಡುತ್ತಿದ್ದರು.ಅದಕ್ಕೆ ಶರತ್ ಧ್ವನಿಗೂಡಿಸುತ್ತಿದ್ದ. ಅಷ್ಟರಲ್ಲಿ ಅಶ್ವಿನ್ ಅಲ್ಲಿಗೆ ಬಂದ.. ಅದನ್ನ ಕಂಡ ನಮ್ಮ ಬಾಸ್ ನ ನಾಲಿಗೆ ತಕ್ಷಣ ಹೊರಳಿ ಅವನ ಬಗ್ಗೆ ಪ್ರೀತಿ ಹೆಚ್ಚಿ ಬಿಟ್ಟಿತು. ಹಾಗೇ ಪ್ರೀತಿಯಿಂದ ಅವನನ್ನು ತಮ್ಮ ಪಕ್ಕ ಕರೆದು ಕೂಡ್ರಿಸಿಕೊಂಡರು ಬೆಣ್ಣೆಯಲ್ಲಿ ನೂಲು ತೆಗೆದಂತೆ ಅವನೊಟ್ಟಿಗೆ ಹರಟ ತೊಡಗಿದರು. ಅವನ ಕನಸುಗಳ ಬಗ್ಗೆ ಕೇಳಿದರು ಅವನು ಟೀಚರ್ ಆಗಬೇಕೆಂಬ ಆಸೆ ಇದೆ ಎಂದ. ಅದಕ್ಕೆ ಅವರು ಕುಡಿದ ಅಮಲಿನಲ್ಲಿ ಟೀಚರ್ ವೃತ್ತಿಯ ಬಗ್ಗೆ ಕೇವಲವಾಗಿ ಮಾತನಾಡಿ ಬಿಟ್ಟರು. ಅದನ್ನ ಕಂಡು ಅಶ್ವಿನ ಮುಖ ಕೆಂಪಗುತ್ತಿರುವುದು ಕಂಡಿತು. ನಂತರ ಕಲಾಮಜೀ ಅವರ ಯಾವುದೊ  ಒಂದು ನುಡಿಮುತ್ತು ಊದುರಿಸಿ ಯಾವತ್ತು ನಮ್ಮ ಕನಸು ದೊಡ್ಡದಾಗಿರಬೇಕು ಆತಿ ಚಿಕ್ಕ ಗುರಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದೆಲ್ಲಾ ಅವನ ತಲೆ ಸವರ ತೊಡಗಿದರು.ನಂತರ ತಾವು ಕುಡಿಯುತ್ತಿದ್ದ ಮದಿರೆಯ ಲೋಟವನ್ನ ಅವನ ಬಾಯಿಯ ಹತ್ತಿರ ತಂದರು. ಆಗ ಪರಿಸ್ಥಿತಿ ವಿಕೋಪ ತಲುಪಿತು. ನಾನು ಈಗ ಅಶ್ವಿನ್ ಅನ್ನು ತಡೆಯುವಷ್ಟು ಆತನಿಗೆ ಆತ್ಮಿಯನಗಿದ್ದೆ ಆದರೆ ನಮ್ಮ ಬಾಸ್ ಗೆ ಏನು ಎದುರೇಟು ನೀಡುತ್ತಾನೆ ಎಂದು ನೋಡಲೇ ಬೇಕಾಗಿತ್ತು. ಅದು ಅಲ್ಲದೆ ಅವನು ನನ್ನ ಮಾತನಾಡುವ ಬಾಯಿ ಆಗಿದ್ದ.  ಅಶ್ವಿನ ಆ ಲೋಟವನ್ನು ಕಸಿದು ಕೊಂಡು ದೂರದಲ್ಲಿ ಇಡಲು ಹೋದಾಗ ಅದರಲ್ಲಿರುವ ಮದಿರೆ ತುಳುಕಿ ನಮ್ಮ ಬಾಸ್ ಮೇಲೆ ಚೆಲ್ಲಿ ಅವರ ಮುಖ ಕಪ್ಪಿಟ್ಟಿತು.. ಸಿಟ್ಟಿನಲ್ಲಿ ಅವನ ಮೇಲೆ ಕೈ ಮಾಡ ಹೋದರು. ಅವರ ಕೈ ಹಿಡಿದು ಕೊಂಡ.. ಅಶ್ವಿನ್  ತನ್ನ ವಾಗ್ಜರಿಯನ್ನ ಆರಂಭಿಸಿದ. " ಏನೋ ಅಂದೇ  ಟೀಚರ್ ಅಂದರೇ ಏನು ಅಂಥ ತಿಳಿದಿದಿಯ ನೀನು. ಒಂದು ಮಾತು ನೆನಪಿಟ್ಟಕೋ ಇವತ್ತು ನೀನು ದೊಡ್ಡ ಹೆಸರು ಮಾಡಿರಬಹುದು. ಸುಪ್ರಿಂ ಕೋರ್ಟ್ ಲಾಯೆರ್ ಆಗಿರಬಹುದು. ಅದಕ್ಕೆಲ್ಲ ತಳಹದಿ ಆಗಿ ನಿಂತಿರೋರಲ್ಲಿ ಟೀಚರ್ ಪ್ರಮುಖ. ನಿನ್ನ ಹೆತ್ತ ತಂದೆ ತಾಯಿಗಾದ್ರೂ ನಿನ್ನ ಬೆಳೆಸೋದ್ರಲ್ಲಿ ಮಗ ಮುಂದೆ ತಮ್ಮನ್ನ ಚನ್ನಾಗಿ ನೋಡ್ಕೋಬೇಕು ಅಂಥ ಅನ್ನೋ ಸ್ವಾರ್ಥ ಇರುತ್ತೆ.. ಆದರೆ ಅದೇ ಟೀಚರ್ ಗೆ ಯಾವ ಆಸೆ ಇರುತ್ತೆ.. ತಿಂಗಳ ಸಂಬಳ ಕಲಿಸದೆ ಹೋದರು ಅವರ ಕೈ ಸೇರುತ್ತೆ. ಆದರು ಅವರು ತಮ್ಮ ಮಕ್ಕಳಂತೆ ನಮ್ಮನ್ನ ತಿದ್ದುತಾರೆ. ಒಂದು ವೇಳೆ ನಿನಗೆ ಒಳ್ಳೆ ಟೀಚರ್ ಸಿಗದೇನೇ  ಅವರು ನಿನಗೆ ಮದಿರೆ ಕುಡಿ ಸ್ಟೇಟಸ್ ಬರುತ್ತೆ ಅನ್ನೋ ಹಿತವಚನ ಹೇಳಿ ಮದಿರೆ ಬಾಟಲ್ ನಿನ್ನ ಕೈ ಹಿಡಿಸಿದಿದ್ರೆ ನೀನು ಇಷ್ಟೊತ್ತಿಗೆ ಯಾವ ಮೊರಿನಲ್ಲಿ ಕುಡಿದು ಬಿದ್ದಿರ್ತಿದ್ಯೋ ಏನೋ.. ದೇಶಕ್ಕೆ ಸುಸಂಸ್ಕ್ರತ ಪ್ರಜೆಗಳನ್ನ ಕೊಡಬೇಕು ಅಂತ ಅಂದ್ರೇ ಅದಕ್ಕೆ ಟೀಚರ್ ಪಾತ್ರ ಬಹು ದೊಡ್ಡದು.. ಹೌದು ನೀನು ಹೇಳೋದು ಕೆಲವಷ್ಟು ನಿಜ.  ಅದರಲ್ಲಿ ನೀನು ಗಳಿಸಿದಷ್ಟು ಹಣ ಹೆಸರು ಗಳಿಸಲಿಕ್ಕೆ ಆಗದೆ ಇರಬಹುದು.. ಆದರೆ ನೆಮ್ಮದಿ ಇದೆ. ಸಾಯೋ ಕಾಲದಲ್ಲಿ ನಮ್ಮ ಕೈ ಹಿಡಿದವಳು ನಾವು ಹೆತ್ತ ಮಕ್ಕಳು ಎಲ್ಲರಿಂದ ದೂರಾಗಿ ಬದುಕೋ ನಿನ್ನ ಅಂಥ ಬೀದಿ ನಾಯಿ ಪಾಡು ಖಂಡಿತ ಬರಲ್ಲ ಅನ್ನೋ ನಂಬಿಕೆ ಇದೆ. ಹಾಗೇ ನಾನು ಇಲ್ಲೇ ನಿನ್ನ ಕೈ ಕೆಳಗೆ ಜೀತ ಮಾಡ್ಕೊಂಡಿದ್ರೆ ಆ ಸುಖಾನು ಸಿಗೋಲ್ಲ ನಿನ್ನ ಸ್ಟೇಟಸ್ ಕೂಡ ಕನ್ನಡಿಯ ಗಂಟಾಗಿ ಬಿಡುತ್ತೆ.. ಸಿಕ್ಕದ್ರು ಅದು ನೀ ಕೊಟ್ಟ ಭಿಕ್ಷೆ ಆಗಿರುತ್ತೆ.. ಅದೆಲ್ಲ ನನಗೆ ಬೇಡ. ನಾನು ಊರಿಗೆ ಹೋಗ್ತೀನಿ. ನನ್ನ ಹತ್ರ ಇವಾಗ ಊರಿಗೆ ಹೋಗೋಷ್ಟು ದುಡ್ಡಿಲ್ಲ ಕೊಡಿ ನಂತರ ನಿಮ್ಮ ಅಕೌಂಟ್ ಗೆ  ಜಮ ಮಾಡ್ತೀನಿ. ಇಲ್ಲಿ ನಾನು ಕೆಲಸ ಕೂಡ ಮಾಡಿರೋದ್ರಿಂದ ಊಟ ಮಾಡಿರೋದಕ್ಕೆ ಅಂತ ನಾನೇನು ನಿಮಗೆ ಕೊಡೋದು ಇಲ್ಲಾ ಅಂದ್ಕೋತೀನಿ. ಹಃ ಹಾಗೇ ನಮ್ಮ ಬಾಲಾಜಿಗೂ ಈ ಬದುಕು ಸಾಕಾಗಿದೆ. ಅವನನ್ನ ಅವರ ಮನೆಗೆ ಕಳಿಸಿಕೊಡಿ. ಅವನು ನಿಮಗೆ ಕೊಡ್ಬೇಕಿರೋ ಹಣಾನ ಕಂಡಿತ ಅವನೇ ಸ್ವತಂತ್ರವಾಗಿ ದುಡುದು ತೀರಿಸ್ತಾನೆ. ಅದರಲ್ಲಿ ನಂಬಿಕೆ ಇರಲಿ. ಯಾಕಂದ್ರೆ ಅವನು ನನ್ನ ಹಾಗೇ  ಸಾಕಸ್ಟು ಕನಸ ಕಂಡಿದಾನೆ. ದಯಮಾಡಿ ಅದನ್ನ ಚಿವುಟಿ ಹಾಕದೆ ಚಿಗುರಲು ಬಿಡಿ. ಖಂಡಿತ ನೀವು ನಮ್ಮ ಅಂಥ ಅಮಾಯಕರನ್ನ ಓದುಸ್ತಿವಿ ಅಂಥ ಕರೆಸ್ಕೊಂದು ಅವರ ಓದಿಗೆ ತಿಲಾಂಜಲಿ ಇಡೋ ಹಾಗೇ ಮಾಡಬೇಡಿ.  ಬೇಕಾದರೆ ದಿನ ರಾತ್ರಿ ಬರ್ತಾರಲ್ವ ಅಂಥವರನ್ನ ಯಾರನ್ನಾದರು ಖಾಯಮ ಆಗಿ ಇರಿಸಿಕೊಳಿ. ಆದರೆ ಅವರಿಗೂ ಒಂದು ಕನ್ಸಿರುತ್ತೆ ಅನ್ನೋದನ್ನ ಮರಿಬೇಡಿ.. ಅದಕ್ಕಿಂತ ನಿಮ್ಮ ಹೆಂಡತಿ ಮಕ್ಕಳ ಸಂಗಡ ಬದುಕೋದು ಎಸ್ಟೋ ಉತ್ತಮ. ಪ್ರೀತಿ ಮತ್ತೆ ನೆಮ್ಮದಿನ ಹಣದಿಂದ ಮತ್ತೆ ಬಲವಂತವಾಗಿ ಯಾರಿಂದಲೂ ಕಿತ್ತ್ಕೊಲೋಕೆ ಆಗಲ್ಲ ಅನ್ನೋದು ದೊಡ್ಡವರಾದ ನಿಮಗೆ ಗೊತ್ತು. ಇಲ್ಲಿ ನಿಮಗೆ ಗುಲಾಮರಾಗಿ ದುಡಿತ ಇರೋ ಯಾರೊಬ್ಬರಿಗೂ ನಿಮ್ಮ ಮೇಲೆ ನಿಜವಾದ ಪ್ರೀತಿ ಇಲ್ಲಾ.. ಇದ್ದಿದ್ದರೆ ಇಷ್ಟು ನಿಮ್ಮ ಬಗ್ಗೆ ಮಾತಾಡ್ತಾ ಇರೋ ನನ್ನನ್ನ ಹೊಡೆದು ಹಾಕ್ತಿದ್ರು.. ಇಲ್ಲಾ ಕೊಲೇನೆ ಮಾಡ್ತಿದ್ರು.. ಅಲ್ಲವ ಸರ್??"
ಇಷ್ಟು ಹೇಳಿ ಬಾಟಲ್ ನಲ್ಲಿದ್ದ ನೀರನ್ನ ಕುಡಿದು ನಾಳೆ ಹೊರಡ್ತೀನಿ..ಸರ್. ನನ್ನ ಜೊತೆ ಬಾಲಾಜಿನ ಬಸ್ ಸ್ಟಾಪ್ ವರೆಗೂ ಕಳುಹಿಸಿ ಕೊಡಿ.
ಎಂದು ಎದ್ದು ಮಲಗುವ ಕೋಣೆಗೆ ನಡೆದ. 
                   ನಂತರ ನನ್ನ ಕರೆದು ಅವನ ಬ್ಯಾಗಿನಲ್ಲಿ  ೩೦೦ ರೂಪಾಯಿ ಇದೆ.. ಮೈಸೂರ್ ವರೆಗೆ ಹೋಗಲು ಇನ್ನೂ ೧೫೦ ರೂಪಾಯಿ ಬೇಕು ಅದನ್ನ ಅವನಿಗೆ ಕೊಡು. ಮೈಸೂರಿಗೆ ಹೋಗುವ ನಾಳೆ ರಾತ್ರಿಯ ಬಸ್ ಗೆ ಹತ್ತಿಸಿ ಬಾ. ಊಟ ತಿನ್ದಿಗೆನು ಕೊಡೋದು ಬೇಡ.. ಹ್ಯಾಗೂ ಆ ಭಟ್ರು ಮನೆಯಿಂದ ತಾನೆ ಕರ್ಕೊಂಡು ಬಂದಿರೋದು ಅಲ್ಲಿವರೆಗೆ ಕಳಸದ್ರೆ ಆಯ್ತು. ಇಂಥ ನಾಲಯಕಗಳ ಮಾತನ್ನೆಲ್ಲ ಕೇಳಿ ತಲೆ ಹಾಳು ಮಾಡ್ಕೋ ಬೇಡ.. ತಿಳಿತ. ಎಂದರು. ಅಲ್ಲಾ ಅಶ್ವಿನ್  ಹತ್ತಿರ ಇರೋ ಬಿಡಿಗಾಸನ್ನು ಸಹ ಕದ್ದು ನೋಡಿದ್ದಾರಲ್ಲ ಎಂಥ ಮನುಷ್ಯ ಇರಬಹುದು. ಇವನು. ಅನ್ನಿಸಿ ಸರಿ ಎಂದು ಹೋಗಿ ಮಲಗಿದೆ.
                             ಅಲ್ಲಿಂದ ಮಾರನೇ ದಿನ ರಾತ್ರಿ ಅಂದರೇ ನವೆಂಬರ್ ೧೪ ರ ರಾತ್ರಿ  ಲಗೇಜ್ ಹಿಡಿದು ಅಶ್ವಿನ್ ಜೊತೆ ಹೊರಟೆ. ಮನೆಯಿಂದ  ಹೊರಡುವಾಗ ಅಶ್ವಿನ್ ನಮ್ಮ ಬಾಸ್ ಹತ್ತಿರ ಬಂದು ನಿಂತು " ಸರ್ ನಾನೇನಾದರೂ ತಪ್ಪಾಗಿ ಮಾತಾಡಿದ್ರೆ ಕ್ಷಮಿಸಿ. ನಿಮ್ಮ ಮನಸಿಗೆ ನೋವು ಆಗುವಂತೆ ಮಾತಾಡದೆ. ನನಗೆ ಓದುಬೇಕು ಅಷ್ಟೇ ಅದಕ್ಕೆ ನಮ್ಮ ಮನೆ ಪರಿಸ್ತಿತಿ ಓದ್ಸೋ ಅಷ್ಟು ಚನ್ನಾಗಿ ಇರಲಿಲ್ಲ ಅದು ಅಲ್ಲದೆ ನಮಗೆ ಹತ್ತಿರದ ಸಂಬಂದಿ ಆಗಿದ್ದ ನಮ್ಮ ಭಟ್ರು ಹೇಳಿದ್ರು ಒಳ್ಳೆ ಜನ ಅವರೇ ಓದ್ಸ್ತಾರೆ ಅಂತೆಲ್ಲ ಏನೇನೋ ಹೇಳ್ದಾಗ.. ನನ್ನ ಕಿವಿ ಮೇಲೆ ಬಿದ್ದಿದ್ದು ಓದು ಹೇಳೋ ಶಬ್ದ ಮಾತ್ರ. ಅದಕ್ಕೆ ಜಾಸ್ತಿ ಯೋಚನೆ ಮಾಡದೇ ಒಪ್ಪ್ಕೊಂದು ಇಲ್ಲಿಗೆ ಬಂದೆ..ನಿಮಗೆ ಅಂದೇನು ಪ್ರಯೋಜನ.. ಎಲ್ಲಾ ನನ್ನ ಮಂಕು ಬುದ್ದಿ.. ನಿಮಗೆ ಗೊತ್ತ ಸರ್ ನಾನು ಪಿ.ಯು.ಸಿ.ನಲ್ಲಿ ತಾಲೂಕಿಗೆ ೩ ನೇ ರಾಂಕ್ . ಪರೀಕ್ಷೇಲಿ ಪಾಸಾದೆ ಎಂಬ ಮತ್ತಲ್ಲಿ  ಜೀವನ ಎಂಬ ಪರೀಕ್ಷೇಲಿ ಫೈಲ್ ಆಗಿಬಿಟ್ಟೆ. ಆದರು ಬೇಜಾರಿಲ್ಲ ಸರ್ ಇದೊಂದು ಮರೆಯಲಾಗದ ನೆನಪು.. ಧನ್ಯವಾದಗಳು " ಹೇಳಿ ಹೊರಟ. ಅದಕ್ಕೆ ನಮ್ಮ ಬಾಸ್ ಮಾಡಿದ್ದೇನು ಗೊತ್ತೇ ಕರೆದು ಅಪ್ಪಿಕೊಂಡು. ಆದಷ್ಟು ಬೇಗ ಈ ಮನೆಗೆ ವಾಪಸ್ಸ್ ಬಾ ಅಶ್ವಿನ್ ಖಂಡಿತ ನಿನ್ನ ಓದಿಸ್ತಿನಿ." ಸರ್ ಇಲ್ಲಾ ಸರ್ ನನಗೆ ಇಂಥ ಜೀವನ ಇಷ್ಟ ಆಗೋಲ್ಲ.. ನನಗೆ ನನ್ನ ಪುಟ್ಟ ಹಳ್ಳಿಯ ಜೀವನಾನೆ ಚಂದ ಅಲ್ಲಿಂದಲೇ ಮತ್ತೊಮ್ಮೆ ಹುಟ್ಟಿ ಬರ್ತೀನಿ. ಜಗತ್ತನ್ನ ಆ ಕಣ್ಣುಗಳಿಂದಲೇ ನೋಡ್ಲಿಕ್ಕೆ ಇಷ್ಟ ಪಡ್ತೀನಿ. "
            ಅಲ್ಲಿಂದ  ಚನ್ನೈ ಬಸ್ ಸ್ಟಾಪ್ ನಲ್ಲಿ ಮೈಸೂರ್ಗೆ ಹೋಗೋ ಬಸ್ ಹತ್ತಿಸಿದೆ.. ನಂತರ. ದೋಸ್ತ ಯಾವಾಗಲು ಕಾಂಟಾಕ್ಟ್ ಅಲ್ಲಿ ಇರು ಎಂದೆ.. ಆಯಿತು.. ಆದಷ್ಟು ಬೇಗ ನೀನು ಕೂಡ ಹೊಸ ಬಾಲಾಜಿ ಆಗು ಎಂದ.. ಅಷ್ಟೇ ಅಲ್ಲಾ ನೀನು ಒಂದು ದೊಡ್ಡ ಬಿಸಿನೆಸ್ ಮ್ಯಾನ್ ಆಗೇ ಆಗ್ತಿಯ ಆ ನಿಮ್ಮ ಯಜಮಾನನ ಮನೆಯಲ್ಲಿ ಹಾಕಿದ ಅರ್ಧದಷ್ಟು ಪರಿಶ್ರಮ ನಿನ್ನ ಬಿಸಿನೆಸ್ ಗೆ ಪ್ರೀತಿಯಿಂದ ಹಾಕು.. ನೀನು ದೊಡ್ಡ ಮನುಷ್ಯನಾದೆ ಅಂದ್ರೇ ಎಲ್ಲರಿಗಿಂತ ಜಾಸ್ತಿ ಖುಷಿ ಪಡುವವನು ನಾನು..ಎಂದು ಹೊರಟೆ ಹೋದ.   ಅಲ್ಲಿಂದ ಹೊರಟು ಹೋದವನ ಮುಖ ನಂತರ ನೋಡಲೇ ಇಲ್ಲಾ. ಆದರೆ.. ಆ ಅರೆ ಮಲೆನಾಡ ಹುಡುಗ.. ನಂತರ ಒಂದೆರಡು ಪತ್ರಗಳ ಮೂಲಕ ತನ್ನ ಅರೆಬೆಂದ ಕನಸುಗಳ ಸ್ಥಿತಿ ಹೇಳಿಕೊಂಡ.. ಅದೆಲ್ಲ ನನಗೆ ಸ್ಪೂರ್ತಿ ಕೊಟ್ಟಿತು. ಅದೇ ಈಗ  ಜೀವನದಲ್ಲಿ ಮೊಬೈಲ್ ಶೋ ರೂಂ ಇಟ್ಟು ಕೊಂಡು. ಕೈ ಅಲ್ಲಿ ನಾನಾ ತರಹದ ಬಿಸಿನೆಸ್ ಮಾಡಿಕೊಂಡು ಪಲ್ಸುರ್ ಬೈಕ್ನಲ್ಲಿ ಅಮ್ಮನನ್ನ ಕೂರಿಸಿಕೊಂಡು ಸಿಟಿ ಸುತ್ತಲು ಕಾರಣ ಆಯಿತು.. ಅಷ್ಟೇ ಅಲ್ಲಾ ನಾನು ಇವಾಗ ೧೦-೧೫ ಮಂದಿ ಜನರಿಗೆ ಕೆಲಸ ಕೊಟ್ಟಿದೀನಿ.. ಬರುವ ವರ್ಷ  ಮತ್ತಷ್ಟು ವಿಸ್ತರಿಸಬೇಕೆಂದಿದೆ. ಆದರೆ ನನ್ನ ಯಜಮನಂತೆ ದರ್ಪದಿಂದಗಲಿ ಹಣದಿಂದಗಲಿ ನನ್ನ ಕೆಲಸಗರರನ್ನ್ ಗೆದ್ದಿಲ್ಲ ಬದಲಿಗೆ  ಪ್ರೀತಿಯಿಂದ ಗೆದ್ದಿದ್ದೇನೆ.. ಇದಕ್ಕೆ ಅವನು ಸ್ಪೂರ್ತಿಯುತ ಪತ್ರಗಳು ಕಾರಣ. ಅವನು  ಬರೆದ ಕೆಲವು ಪತ್ರಗಳನ್ನ ಮುಂದಿನ ಸಂಚಿಕೆ ಅಲ್ಲಿ ತೆರೆದಿದುತ್ತೇನೆ. ನಾನು ಕೂಡ ಅವನಿಗೆ ಒಂದೆರಡು ಪತ್ರ ಬರೆದಿದ್ದೆ. ಬೇಗ ಬಾ ಎಂದು..  
         
              ಮುಂದುವರೆಯುವುದು ..

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು... 2

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು....


೨ 
   ಅಂದಿನಿಂದ ಯಾವ ಕೆಲಸವನ್ನು ಮಾಡದೇ ಸುಮ್ಮನೆ ಪುಸ್ತಕ ಹಿಡಿದು ಕುಳಿತಿರುತ್ತಿದ್ದ.. ಊಟಕ್ಕೆ ಹತ್ತಿರದಲ್ಲೇ ಇದ್ದ ಶಂಕರ ಮಠವನ್ನ ಅವಲಂಬಿಸಿದ.. ಅಲ್ಲಿಯ ಊಟ ಮಾಡ  ತೊಡಗಿದ ಮೇಲೆ ಗೆಲುವಾದ.. ನನ್ನೊಟ್ಟಿಗೆ ಒಮ್ಮೆ ಹೇ ಬಾಲಾಜಿ ನಾನು ಇವಾಗ ಮೊದಲಿನತಗುತ್ತಿದ್ದೇನೆ ಆರೋಗ್ಯದಲ್ಲಿ.. ನಾನು ಆರೋಗ್ಯವನ್ತಂದೆ ಎಂದಾದರೆ ಈ ನಿನ್ನ ಬಾಸ್ ಗೆ ಒಂದು ಗತಿ ಕಾಣಿಸದೆ ಬಿಡಲಾರೆ..ಈ ನಿಮ್ಮ ಆಹಾರ ನಮಗೆ ಒಗ್ಗುವುದಿಲ್ಲ.. ಮಠದಲ್ಲಿ ಕೊಡೊ ಊಟ ನಿಜಕ್ಕೂ ನಮ್ಮ ಬದಿಯ ಊಟದಂತಿದೆ.  ಹೌದು ನಿನಗೇನೂ ದಾಡಿ ಇವನಲ್ಲಿ  ಯಾಕೆ ಜೀತಕ್ಕೆ ಸೇರಿರುವೆ.. ಸೂಳೆಯಾಗಿ, ಮನೆ ಕೆಲಸದವನಾಗಿ ಬದುಕಲು ನಾಚಿಕೆ ಆಗೋದಿಲ್ಲೇನು...ನಿನ್ನಿಷ್ಟ. ಎಂದವನು ನಂತರ   ಯಾಕೋ ನನಗೆ ನಿನ್ನ ಕಂಡಾಗ ನೀನು ನನ್ನ ಅಂತೆ ಅಳುವುದನ್ನ ಕಂಡಿರುವದರಿಂದ ಹೇಳಿದೆ..ಅಷ್ಟೇ " ಎಂದ.

           ನಂತರ ಅವನಿಗೂ ನಮ್ಮ ಬಾಸ್ ಗು ಮಾತು ಕತೆ ಇಲ್ಲದಾಯಿತು..   ಅಷ್ಟೊತ್ತಿಗಾಗಲೇ ನನ್ನ ಅಕ್ಕನನ್ನ ನಮ್ಮ ಯಜಮಾನನ ಸಿನಿಯರ್ ಅಸಿಸ್ಟಂಟ್  ಪಾರ್ಥ ಸಾರಥಿ ಪ್ರೇಮಿಸಿದ್ದ.. ಅದನ್ನ ತಿಳಿದಾಗ ನನ್ನ ಕಣ್ಣು ಒದ್ದೆಯಾಗಿತ್ತು... ಅಂದಿನಿಂದ ಮತ್ತೊಂದು  ಫುಲ್ ಬಾಟಲ್ ಮದಿರೆ ಖಾಲಿ ಆಗ ತೊಡಗಿತ್ತು .. ಆದರೇನು ನಮ್ಮ ಯಜಮಾನನ ಒತ್ತಾಯಕ್ಕೆ ಮನೆಯಲೆಲ್ಲ ಒಪ್ಪಿದ್ದರು. ಎಲ್ಲಕಿಂತ ಹೆಚ್ಚಾಗಿ ಅಕ್ಕನು ಇಷ್ಟ ಒಪ್ಪಿದ್ದಳು. ಆ ಮದುವೆಗೆ ಇನ್ನೆರಡು ದಿನ ಬಾಕಿ ಇತ್ತು. ಅದಕ್ಕಾಗಿ ಮನೆಗೆ ಹೊರಟವನ ಸಂಗಡ ನಮ್ಮ ಯಜಮಾನನ ದಿನಚರಿಗೆ ಆಡ್ಡಿ ಆಗಿದ್ದ  ಅಶ್ವಿನ್ ಅನ್ನು ನನ್ನ ಒಟ್ಟಿಗೆ  ಕಳುಹಿಸಿ ಕೊಟ್ಟರು.
                                                  ಅವನಿಗೆ  ಟಿ ನಗರದ ಹೊರವಲಯದಲ್ಲಿದ್ದ  ಸಣ್ಣದೊಂದು ಅಪಾರ್ಟ್ಮೆಂಟ್ ನಾ ನನ್ನ ಗೂಡಿಗೆ ಕರೆದೊಯ್ಯುವಾಗಲೇ ಹೇಳಿದೆ. " ಅಶ್ವಿನ್ ನೀನು ಅಂದು ಕೇಳಿದ ಪ್ರಶ್ನೆಗಳಿಗೆ ಇಂದು ನಿನಗೆ ಉತ್ತರ ಸಿಗ ಬಹುದು... ಮೊದಲು ನಮ್ಮ ಮನೆ ನೋಡುವಿಯಂತೆ ನಡೆ" ಎಂದು ಕರೆದು ಕೊಂದು ಹೋದೆ..   
                 ಮನೆಯನ್ನ ನೋಡಿ ಒಮ್ಮೆ ಅವಕ್ಕದವಂತೆ ಕಂಡ ಅಶ್ವಿನಗೆ  ನಾನು ಇನ್ನೂ ನಾಲ್ಕೈದು ದಿನ ನನ್ನೊಟ್ಟಿಗೆ ಇದೆ ಮನೆಯಲ್ಲಿ ಇರಬೇಕು.. ನನ್ನ ಅಕ್ಕನ ಮದುವೆ ಇದೆ ನಾನು ಕೆಲಸದ ಮೇರೆಗೆ ಹೊರಗೆ ಹೋಗುತ್ತಿರುತ್ತೇನೆ ಆದರು ನನ್ನ ಅಜ್ಜಿ ಮನೆಯಲ್ಲೇ ಇರುತ್ತಲೇ.. ಅವಳೊಂದಿಗೆ ಇರು. ಹ ಮನೆಯವರನ್ನ ಪರಿಚಯ ಮಾಡಿಸಿಲ್ಲ ಅಲ್ಲವೇ .. ನೋಡು ಎರಡು ಕಾಲು ಕಳೆದು ಕೊಂಡು ಇದೀಗ ಕೃತಕ ಕಾಲಿನಲ್ಲಿ ಓಡಾಡುತ್ತಿರುವ  ಇವರೇ  ನನ್ನ ತಂದೆ, ಇದೀಗ ಕಾಲಿನೋಟ್ಟಿಗೆ  ಕಳೆದು ಹೋದ ತಮ್ಮ ಸಣ್ಣ ಜಾಬ್ ಅನ್ನು  ಮರೆತು ಎಲ್ ಆಯ ಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.. ಇವರು ನಮ್ ತಾಯಿ. ಮೊದಲು ಗೃಹಿಣಿ ಆಗಿದ್ದವಳು ನಮ್ಮ ಮನೆಯ ಕಷ್ಟ್ ಕಾಲದಲ್ಲಿ ಅಪ್ಪನಿಗೆ ನೆರವಾಗಲು ಟೈಪಿಸ್ಟ್  ಕೆಲಸ ಮಾಡುತ್ತಿದ್ದಾಳೆ.. ಇನ್ನೂ ಇವಳೇ ನನ್ನ ಅಕ್ಕ , ಮದುಮಗಳು.. ಓದಿರೋದು ಎಂ.ಬಿ.ಎ. ಮದುವೆ ಆಗಲು ಹೊರಟಿರುವುದು.. ಪಿ.ಯು.ಸಿ. ಪಾಸು ಆಗಿರಬಹುದಾದ ಕುಡುಕ ಪಾರ್ಥ ಸಾರಥಿಯ ಜೊತೆ.. ಎಂದೆಲ್ಲಾ ವಿವರಿಸಿದೆ. ನಂತರ  ನಾನು ಮನೆಯಿಂದ ಯಾವುದೊ ಕೆಲಸದ ಮೇಲೆ ಹೋಗಿ ಸಂಜೆ ಮರಳುವ ವೇಳೆಗೆಲ್ಲ ನಮ್ಮ ಮನೆಯವರಿಗೆಲ್ಲ ಅಚ್ಚುಮೆಚ್ಚಿನ ಅಶು ಆಗಿ ಬಿಟ್ಟಿದ್ದ...
        ಅಜ್ಜಿ ಅಂತು ನಾನು ಬಂದ ತಕ್ಷಣ ನನ್ನೊಟ್ಟಿಗೆ ಕೇಳಿದ್ದು ಇಸ್ಟೇ.." ಇಂಥ ಒಳ್ಳೆ ಮಕ್ಕಳನ್ನೆಲ್ಲ ಯಾಕಪ್ಪ ಆ ನಿನ್ನ ಯಜಮಾನ ತನ್ನ ಅಡಿ ಆಳಾಗಿ ಮಾಡ್ಕೋತಾನೆ.. ಆ ದೇವರು ಖಂಡಿತ ಮೆಚ್ಚೋಲ್ಲ.. ಅವನು ಅನಾಥ ಹೆಣವಾಗಿ ಹೋಗ್ತಾನೆ." ಎಂದೆಲ್ಲಾ ಹೇಳದಳು.. ನಂತರ ಅಶ್ವಿನ್ ಬಗ್ಗೆ ಮತ್ತೆ ಯಜಮನನಿಗೂ ಇವನ ನಡುವೆಯೂ ನಡೆದ ಘಟನೆಗಳ ಬಗ್ಗೆ ಹೇಳಿದೆ.. ಅಜ್ಜಿ ಮೆಚ್ಚುಗೆ ಸೂಚಿಸಿದಳು..
           ಹಾಗೇ ಇವತ್ತು ಎಂದಿನಂತೆ ಕುಡಿದು ಬರದಿದ್ದ ನನ್ನನ್ನು ಆಶ್ಚರ್ಯದಿಂದ ನೋಡಿದ ಅಮ್ಮ ಏನೋ ಮೊದಲಿನ ಬಾಲಾಜಿ ಆಗಿ ಬಿಟ್ಟಿದಿಯ ಅಂದ್ಲು.. ಹೌದು  ಅಮ್ಮ.. ಈ ಅಶ್ವಿನ್ ನನ್ನ ಮೊದಲಿನ ಜೀವನದ ಸಿಹಿ ಕನಸನ್ನ ಮತ್ತೆ ನೆನಪಿಸಿದ.. ನಾನು ನಿಮ್ಮ ಮುಂದೆಲ್ಲ ಕೂಗಾಡುವಂತೆ ನಮ್ಮ ಯಜಮಾನನ ಮುಂದೆ ಕೂಗಾಡಿದ.. ಅದು ಅಲ್ಲದೆ.. ನನ್ನ ಹತ್ತಿರ ನಮ್ಮ ಮನೆಗೆ ಬರುವಾಗ ದಾರಿಯಲ್ಲಿ  ಕುಡಿಯೋದು ಒಳ್ಳೇದಲ್ಲ ಕಣಲೇ.. ಅದು.. ನೋವನ್ನ ಮರೆಸಲ್ಲ.. ನಮ್ಮ ಸಮಾಧಿ ಮಾಡುತ್ತೆ.. ಅಷ್ಟೇ.. ನೀನು ಅವನಂತೆ ಒಂದು ಸ್ಟೇಟಸ್ ಮಾಡ್ಕೋ ಬೇಕು ಅಂದ್ರೇ ಕುಡುದ್ರೆ ಸಾಧ್ಯ ಇಲ್ಲಾ.. ಓದು ಇಲ್ಲಾ ಏನಾದ್ರು ಬಿಸಿನೆಸ್ ಮಾಡು.. ಒಟ್ಟಿನಲ್ಲಿ ಈ ಹಾಳು ಮೃಗದ ಸಹವಾಸ ಬಿಡು ಎಂದ... ನಿನಗೆ ಎಷ್ಟೇ ಕಷ್ಟ ಇದ್ರೂ ಇಂತವರ ಸಂಗಡ ಇದ್ರೆ ನೀನು ಜೀತದಾಳು ಆಗೊಗ್ತಿಯ.. ಅಷ್ಟೇ.. ನಿನ್ನ ಕನಸನ್ನ ಯಾವುದು ನನಸು ಮಡ್ಕೊಲೋದಿಕ್ಕೆ  ಆಗೋಲ್ಲ.. ಅದೇ ನಾವೇ ಏನಾದ್ರು ಮಾಡಿ ದುಡುದು ತಿಂದರೆ ಮಾತ್ರ ನಮ್ಮ ಕನಸನ್ನ  ನಮ್ಮ ನಮ್ಬಿರೋರನ್ನ ಚನ್ನಾಗಿ ಅಲ್ಲದೆ ಹೋದರು ನಮಗೆ ತೃಪ್ತಿ ಆಗೋ ಹಾಗೇ ನೋಡ್ಕೋ ಬಹುದು.. ಎಂದ.. ನನಗು ಇದು ಸರಿ ಅನ್ನಿಸಿದೆ . ಅದಕ್ಕೆ ಆದಷ್ಟು ಬೇಗ ನಾನು ಏನಾದ್ರು ಬಿಸಿನೆಸ್ಸ್ ಆರಂಭಿಸಬೇಕು ಅಂತಿದಿನಿ..ಕಣಮ್ಮ.. ಇನ್ನೆಷ್ಟು ದಿನ ಅಂತ ಅವನ ಕೈ ಕೆಳಗೆ ಕೆಲಸ ಮಾಡ್ಲಿ.. ಇನ್ನೂ ಓದೋಕಂತು ನನ್ನ ಕೈ ಅಲ್ಲಿ ಸಾಧ್ಯ ಇಲ್ಲಾ.. ಒಂದು ಚಿಕ್ಕ ಬಿಸಿನೆಸ್ಸ್ಗೆ ಬೇಕಾಗೊಸ್ತು ಸಾಲ ಎಲ್ಲಾದರು ಮಾಡಿಸಿ ಕೊಡ್ತಿಯ.. ಹೇಗೂ ಅಪ್ಪನ ಕಾಲು ಆಪರೇಷನ್,  ಅಕ್ಕನ ಮದುವೆ, ಅಂತೆಲ್ಲ ಸಾಲ ಮಾಡಿ  ಕುತ್ತಿಗೆ ವರೆಗೆ ಮುಳುಗಿದಿವಿ  .. ಇನ್ನೂ ಒಂಚೂರು ಮುಳುಗ್ಲಿಕ್ಕೆ ಏನು ಭಯ ಅಲ್ಲವ ಅಮ್ಮ.. ಗೆದ್ದರೆ ನಿನ್ನ ಮತ್ತೆ ಅಪ್ಪನ್ನ ನಾನು ಬದುಕಿರೋ ತನಕ ಚನ್ನಾಗಿ ನೋಡ್ಕೊಂಡು ಆರಾಮಾಗಿ ಇರಬಹುದು ಅಲ್ಲವ??? ಇದೆಲ್ಲ.. ಅವನು ನನಗೆ ಹೇಳದೆ ಹೋದರು ಅವನು ಹಚ್ಚಿದ ಚಿಂತನೆ ಇಂದ ಹುಟ್ಟಿರೋದು.. ನನಗೇನು ಇನ್ನೂ  ೨೨ ಇನ್ನೂ ದುಡಿಯೋ ವಯಸ್ಸು..ಅಮ್ಮ ಒಪ್ಪಿಗೆ ಕೊಡಮ್ಮ.. ಆ ನನ್ನ ಯಜಮಾನನ ಹತ್ತಿರ ಮಾಡಿದ ಸಾಲ ಆದಷ್ಟು ಬೇಗ ತೀರಿಸ್ಲಿಕ್ಕೆ ಪ್ರಯತ್ನ ಪಡ್ತೀನಿ.. ಎಂದೆ..
 ನನ್ನ ಅಮ್ಮನಿಗೂ ಹರ್ಷವದಂತೆ ಕಂಡು ಬಂತು..ಆಕೆಯು ಕಣ್ಣಿನಲ್ಲೇ ಒಪ್ಪಿಗೆ ಸೂಚಿಸಿದಳು. ಆ ನನ್ನ ಅಮ್ಮನಾ ನಗು ಮೊಗ ಕಂಡು ಎಷ್ಟೋ ಕಾಲವಾಗಿತ್ತು.. ಅದನ್ನ ನನ್ನ ಗೆಳೆಯ ಅಶ್ವಿನ ಹತ್ತಿರ ಹೇಳಿದಾಗ ನಿಜಕ್ಕೂ.. ಖುಷಿ ಪಟ್ಟನಲ್ಲದೆ.. ಯಾ ಇವಾಗ ನೀನು ಬಾಲಾಜಿ ಎಂಬ ಹೆಸರಿಗೆ ತಕ್ಕವನಾದೆ ಎಂದು ಪ್ರೀತಿಯಿಂದ ಅಪ್ಪಿಕೊಂಡ.. 
           ಹಾಗೇ ಬಿಸಿನೆಸ್ ಸ್ಟಾರ್ಟ್ ಮಾಡಿದರೆ ನಿಜಕ್ಕೂ ಈ ನನ್ನ ಗೆಳೆಯನನ್ನ ಜೊತೆಯಲ್ಲೇ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿ ಕೇಳಿದರೆ.. ನೋಡೋಣ ಗೆಳೆಯ ಎಂದಷ್ಟೇ.. ಹೇಳಿದ.. ಅಂತು ಅಕ್ಕನ ಮದುವೆ ನಾನು ಬಯಸಿದಂತೆ ನಡೆಯದಿದ್ದರೂ.. ನಡೆದು ಹೋಯಿತು.. ಅಕ್ಕ ಸಂತಸದಿಂದ ಇದ್ದರಷ್ಟೇ ಸಾಕು ಎಂದು ಬಯಸಿದೆ.. ನನ್ನ ಭಾವ ಈಗ ಆರ್ಥಿಕವಾಗಿ ಬಲಿಷ್ಟನಗಿದ್ದ.. ಎಷ್ಟಾದರೂ.. ಅವನು ನಮ್ಮ ಯಜಮಾನನ ಗುಲಾಮ ತಾನೆ.. ಎಂದು ದುಃಖವಾಯಿತು.. ಎಲ್ಲಾ ದೇವರ ಆಟ.
                        ನಮ್ಮ ಮನೆಯಲ್ಲಿ ಉಳಿದ ಕಡೆಯ ದಿನ ಊಟ ಮಾಡುತ್ತ ಅಶ್ವಿನ್ ಹೇಳಿದ್ದು ಇನ್ನೂ ನೆನಪಿದೆ.." ಬಾಲಾಜಿ ನಿಜಕ್ಕೂ ಆ ನಿನ್ನ ಸಾಹುಕಾರನ ಹಂಗಿನ ಅರಮನೆಗಿಂತ ಈ ನಿಮ್ಮ ಪ್ರೀತಿ ತುಂಬಿದ ಕುಟೀರ ನನಗೆ ತುಂಬಾ ಇಷ್ಟ ಆಯಿತು. ಅಂತು ನಮ್ಮ ಅಕ್ಕನ ಮದುವೆ ಆಯಿತು..ಈ ಮನೆಯಲ್ಲಿ  ಏನೋ ಕಳೆದುಕೊಂಡಂತೆ ಬರೆ ೨ ದಿನ ಉಳಿದ ನನಗೆ ಆಗುತ್ತಿರ ಬೇಕಾದರೆ..ಇನ್ನೂ ನಿನಗೆ ಒಡಹುಟ್ಟಿದವಳು.. ದುಃಖವಾಗುವುದು ಸಹಜ.. ನಿನ್ನ ಅಮ್ಮ , ಅಪ್ಪ, ಅಜ್ಜಿಯರ ಮನಸನ್ನ ನಾನು ಸಾಂತ್ವನ ಪಡಿಸಲಾರೆ.. ನಿಮ್ಮ ಭಾವ ನಮ್ಮ ಅಕ್ಕನನ್ನ ಚನ್ನಾಗಿ ನೋಡಿಕೊಳ್ಳಲಿ. ಖಂಡಿತ ನೋಡಿ ಕೊಲ್ಲುತ್ತಾನೆ.. ಯಾಕೆಂದರೆ.. ಹಾಗೇ ಬದಲಾಯಿಸುವ ಶಕ್ತಿ ನಿನ್ನ ಅಕ್ಕನಲ್ಲಿದೆ.. " ಎಂದು.. ಹೊರಗೆ ಬಂದು.. ಅಜ್ಜಿಯ ಕಾಲಿಗೆ ನಮಸ್ಕರಿಸಿ.. ಅಲ್ಲಿಂದ ಹೊರಟೆವು.. ನಿಜಕ್ಕೂ ಈ ನನ್ನ ಮಿತ್ರ ತನ್ನ ಅಕ್ಕನ ಮದುವೆ ಎಂಬಂತೆ ಸಡಗರದಿಂದ ನನ್ನ ಒಟ್ಟಿಗೆ ಕೆಲಸದಲ್ಲಿ ಸಹಾಯ ಮಾಡಿದ್ದ..  ಅವನು ಮತ್ತೆ ಯಜಮಾನನ ಮನೆಗೆ ಹೋಗೋಣ ಎಂದು ಹೊರಟು ನಿಂತಾಗ ನಮ್ಮ ಮನೆಯವರ ಮುಖವೆಲ್ಲ ಬಾಡಿತ್ತು .. ಅಕ್ಕನಷ್ಟೇ ಇವನು ತಮ್ಮ ಮನೆಯ ಮಗ ಈಗ ಹೊರಟು ನಿಂತಿರುವನಲ್ಲ ಎಂದು ಅವರ ಮನ ತಳ ಮಳಿಸಿತ್ತು.. ಅದಕ್ಕೆ ಸಾಕ್ಷಿ ಎಂಬಂತೆ ಅಮ್ಮ ಕೇಳಿಯೇ ಬಿಟ್ಟಳು " ಅಶ್ವಿನ್ ಅವರ ಮನೆಗೆ ಇವತ್ತೇ ಹೋಗಲೇ ಬೇಕೇನು??? ಇಲ್ಲೇ ಇದ್ದರೆ ನಮಗೂ ಏನೋ ಸ್ವಲ್ಪ ಸಮಾಧಾನ ಬೇಕಾದರೆ ಬಾಲಾಜಿ ಹೋಗಿ ಬರಲಿ ನೀನು ನಾಳೆ  ಹೋಗುವಿಯಂತೆ ಎಂದಳು "  ಅದಕ್ಕೆ " ಅಮ್ಮ ಇನ್ನೊಮ್ಮೆ ಖಂಡಿತ ಬರುತ್ತೇನೆ... ಆದರೆ ಇಂದು ನಾನು ಹೋಗಲೇ ಬೇಕು.. ಅನ್ಯಾತ ಭಾವಿಸದೆ ಆಶೀರ್ವದಿಸಿ ಕಳುಹಿಸಿ ಕೊಡಿ" ಎಂದು.. ಕೇಳಿಕೊಂಡ, ಇದು ಸಾಕಲ್ಲವೇ.. ನಮ್ಮ ಮನೆಯವರು ಅವನನ್ನ ನನ್ನ ಅಂತೆ ಎಷ್ಟು ಹಚ್ಚಿಕೊಂಡಿದ್ದರು ಎಂದು ತಿಳಿಯಲು... ನಿಜಕ್ಕೂ ಅವನು ನಾನು ನಮ್ಮ ಯಜಮಾನನ ಮನೆಗೆ ಹೊರಟಾಗ ದಾರಿಯ ನಡುವೆ ಫೋನ್ ರಿಂಗಿನಿಸಿತ್ತು.. ಅಮ್ಮ ಹೇಳುತ್ತಿದ್ದಳು.. ಮನೆ ಯಾಕೋ ಬಿಕೋ ಅನ್ನುತ್ತಿದೆ ಕಣೋ.. ಬೇಗ  ಹೋಗಿ ನಿಮ್ಮ ಯಜಮಾನನ ಮನೆಯಿಂದ ರಜಾ ಪಡೆದು ಬೇಗ ಬಾ....




ಮುಂದುವರೆಯುವುದು...

ಅರೆಮಲೆನಾಡ ಹುಡುಗನ ಅರೆಬೆಂದ ಕನಸು

ಅರೆಮಲೆನಾಡ ಹುಡುಗನ ಅರೆಬೆಂದ ಕನಸು
ಓದುವ ಮುನ್ನ ಒಂದು ಮಾತು : ಇದು ಸತ್ಯ ಘಟನೆ ಆಧಾರಿತ ಕಥೆ. ಹಃ ಅದು ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. ಆದರೆ    ಈ ಕಥೆಯಲ್ಲಿ ಬರುವ ವಕೀಲರಂತ ಗೋ ಮುಖ ವ್ಯಾಘ್ರಗಳು, ಭಟ್ಟರಂತ ಪ್ರಜ್ಞಾವಂತ ಬ್ರೋಕೆರ್ ಗಳಿಂದ ವಿದ್ಯೆಗಾಗಿ ಹಪಹಪಿಸಿ ಎಡವುವ ಬಾಲಾಜಿ, ಅಶ್ವಿನ್, ಶರತರಂತೆ ಯಾರು ಬಲಿ ಆಗದೆ ಎಚ್ಚರವಹಿಸುವಂತಗಲಿ ಎಂಬುದೇ ಈ ಕಥೆ ಬರೆದವನ ಆಶಯ. ಇಂಥ ಆಧುನಿಕ ಕಾಲಗಟ್ಟದಲ್ಲೂ ಇಂತವು ನಡೆಯುವುದೇ ಎಂದು ಕೇಳಬಹುದು. ಹಲವು ಪ್ರಶ್ನೆಗಳು ಎದುರಾಗಬಹುದು.. ಅದರ ಜಿಜ್ಞಾಸೆ ನಿಮಗೆ ಬಿಟ್ಟದ್ದು..


೧ 
ನವೆಂಬರ್ ೧೪

                        ಈ ದಿನ ಬಂದಗೆಲೆಲ್ಲ ಭಾರತೀಯರಿಗೆ ನೆನಪಾಗುವುದು ಮಕ್ಕಳ ದಿನಾಚರಣೆ ಎಂಬ ಸುದಿನ ನೆಹರು ಎಂಬ ಅನಭಿಷಿಕ್ತ ದೊರೆಯ ಹುಟ್ಟಿದ ದಿನ. ಆದರೆ ಭಾರತಿಯನದರೂ ನನಗೆ ನೆನಪಾಗುವುದು ನನ್ನ ಬಾಳಿನಲ್ಲಿ ವಿಮೋಚನೆಯ ದಾರಿ ಕಾಣಿಸಿದ ಸ್ವಾತಂತ್ರ್ಯದ ಬಗ್ಗೆ ತಿಳಿಸಿದ ಅಶ್ವಿನ ಎಂಬ ಮಲೆನಾಡ ಕನಸಿನ ಹುಡುಗ ಮಾತ್ರ.. 
                  ಎಲ್ಲರಂತೆ ನಾನು ಕೂಡ ಚನ್ನಾಗಿ ಓದ ಬೇಕು ನಂತರ ಒಳ್ಳೆ ಕೆಲಸ ಹಿಡಿಯಬೇಕು ಇಷ್ಟು ದಿನ ನನ್ನ ಹೆತ್ತು ಹೊತ್ತು ಸಲಹಿದ ನನ್ನ ಅಪ್ಪ ಅಮ್ಮ ನ್ದಿರನ್ನ "ನ ಭುತೊಹ್  ನ ಭವಿಷ್ಯತಿ" ಎನ್ನುವಂತೆ ಚನ್ನಾಗಿ ನೋಡಿಕೊಳ್ಳಬೇಕು.. ಜೊತೆಗೆ ನನ್ನ ಒಡಹುಟ್ಟಿದ ಅಕ್ಕನ ಮದುವೆಯನ್ನ ಚನ್ನಾಗಿ ಮಾಡಬೇಕು.. ಅವರ ಮೊಗದಲ್ಲಿಯಾ ನಗುವನ್ನ ಕಂಡು ನಾನು ಮಗುವಾಗಬೇಕು.. ಇದೆಲ್ಲವು ನಾನು ಪಿ ಯು. ಸಿ ಓದುತ್ತಿದ್ದಾಗ ಕಂಡ ಕನಸುಗಳು.
             ಅದು  ಸುಪ್ರಿಂ ಕೋರ್ಟ್ ಲಾಯೆರ್ ಎಂಬ ಗೋಮುಖ ವ್ಯಾಘ್ರನ ಕೈ ಕೆಳಗೆ ಕೆಲಸಕ್ಕೆ ಸೇರುವ ಮೊದಲಿನದು.. ಅಲ್ಲಿ ಅವನು ನಮಗೆ ಮುಂದೆ ಓದಿಸುತ್ತೇನೆ ಎಂದು ತಮ್ಮಲ್ಲಿ ಸೇರಿಸಿಕೊಂದಾಗಳು ಆ ಕನಸಿಗೆ ರೆಕ್ಕೆ ಪುಕ್ಕ ಬಲಿತಿತ್ತು. ಆದರೆ ಅಲ್ಲಿನ ದಿನಗಳು ನನ್ನ ಕನಸಿನ ಪಕ್ಷಿಯ ರೆಕ್ಕೆಯನ್ನ ಕಡಿದು ಹಾಕಿದವು. ಅಲ್ಲಿನ ದಿನಚರಿ ಹೇಗಿತ್ತು ಎಂದರೆ ಬೆಳಗ್ಗೆ ಮುಂಜಾನೆ ಎದ್ದು ಅರಮನೆಯಸ್ಟು ದೊಡ್ಡದಾಗಿದ್ದ ಮನೆಯನ್ನ ಎರಡೆರಡು ಬಾರಿ ಗುಡಿಸಿ ಒರೆಸಬೇಕು. ಏಕೆಂದರೆ ಒಂದು ಬಾರಿ ಮಾತ್ರ ಒರೆಸುವುದು ಸತ್ತವರ ಮನೆಯಲ್ಲಿ ಮಾತ್ರವಂತೆ.. ನಮ್ಮಲ್ಲಿ ಇನ್ನೊಬ್ಬ ನಮ್ಮ ವಕೀಲರಿಗೆ ಬೆಳಗಿನ ಬಿಸಿ ಬಿಸಿ ತಿಂಡಿ ಕಾಫಿ ಮಾಡಿ ಕೊಡಬೇಕು.. ಅಷ್ಟೆಲ್ಲ ಮಾಡುವದರ ಜೊತೆಗೆ ಅವನಿಗೆ ತಿನ್ನಿಸಬೇಕು. ಅದೆಲ್ಲ ಮುಗಿಯುವ ವೇಳೆಗೆ ೧೦ ಗಂಟೆ ಆಗಿರುತ್ತದೆ, ನಂತರ ರೇಶನ್ ಅಕ್ಕಿಯಿಂದ ಮಾಡಿದ ಅನ್ನದಲ್ಲಿ ಬೆಳಗಿನ ಊಟ. ಅದರ ನಂತರ ಅವನ ಬಟ್ಟೆಗಳನ್ನೆಲ್ಲ ತೊಳೆದು ಹಾಕಬೇಕು. ಹೀಗೆ ಹತ್ತು ಹಲವು ಕೆಲಸಗಳು ಕೆಲವಷ್ಟನ್ನು ಹೇಳದಿದ್ದರೆ ಚೆನ್ನ.. ಮಧ್ಯನ್ನ ಕೂಡ ನಮಗೆಲ್ಲ ತಂಗಳು ರೇಶನ್ ಊಟ. ರಾತ್ರಿ ನಮ್ಮ ಯಜಮಾನ ಕುಡಿದು ಅಮಲೇರಿ ಮಲಗಿದ ಮೇಲೆ ಅಂದರೇ ಭೂತ ಪ್ರೇತಗಳು ಎಚ್ಚರವಾಗುವ ಸಮಯದಲ್ಲಿ ಊಟ. ನಂತರ ಯಾವುದೇ ಹುಡುಗಿ ಅಂದು ಬಾರದಿದ್ದರೆ ಹುಡುಗಿಯ ಜಾಗದಲ್ಲಿ ನಾವು ವಕೀಲನ ಜೊತೆ ಮಲಗಬೇಕು   ಅದೆಲ್ಲದರ ನಡುವೆ ಬೆಳಗ್ಗೆ ಬೇಗ ಏಳಬೇಕು. ಇಸ್ಟೆಲ್ಲಾ ಮಾಡಿ ನಾವು ಓದುವುದು ಯಾವಾಗ??? ಆದರು ನಿಮಗೆ ಆಶ್ಚರ್ಯವಾಗಬಹುದು ದಿನವಿಡೀ ಕಾಲೇಜ್ ಗೆ ಹೋಗಿ ಎಕ್ಷಮ ಬರೆದರೂ ನಾನು ಪಿ. ಯು. ಸಿನಲ್ಲಿ ೬೦% ಮಾಡುವಾಗ ಹರಸಾಹಸ ಪಟ್ಟಿದ್ದೆ. ಆದರೆ ಪುಸ್ತಕ ಎಂಬುದನ್ನೇ ಓದದೆ ಕಾಲೇಜ್ ಮೆಟ್ಟಿಲು ಎಕ್ಷಮ ಗೆ ಮಾತ್ರವೇ ಹತ್ತಿ ಪ್ರತಿಷ್ಟಿತ ವಿಶ್ವ ವಿದ್ಯನಿಲಯದಿಂದ ಕಲಾ ಪದವಿ ಪಡೆದಿದ್ದೆ ಎಲ್ಲಾ ನಮ್ಮ ವಕೀಲರ ಪ್ರಭಾವದಿಂದ.. ಆಗಲೇ ತಿಳಿದದ್ದು ಹಣವೊಂದಿದ್ದರೆ ಏನನ್ನು ಸಾಧಿಸಬಹುದು.. ಕ್ರಮೇಣ ನನ್ನ ದುಃಖ ಮರೆಯಲು ಮದಿರೆಯಾ ಸಹವಾಸ ಅನಿವಾರ್ಯವಾಯಿತು.. ಈ ರೀತಿ ಬೇರೆ ಕಡೆ ಎಲ್ಲಾದರೂ ದುಡಿದಿದ್ದಾರೆ ನಮಗೆ ನೆಮ್ಮದಿ ಆದರು ಇರುತಿತ್ತು.. ಆದರೆ ಇವನು ನಮಗೆ ೩ ಹೊತ್ತು ಊಟ ಕೊಡುತ್ತಿದ್ದ ಅಷ್ಟೇ.. ಆರೋಗ್ಯ ಹದಗೆಟ್ಟರು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ನಾನು ಇಲ್ಲಿ ಉಳಿದಿರಲು ಕಾರಣ ಒಂದೇ ಯಾವುದೇ ಸೆಕ್ಯೂರಿಟಿ ಕೆಲದೇನೆ ನನ್ನ ಅಪ್ಪನ ಆಪರೇಷನ್ ದುಡ್ಡು ಅವನೇ ಕೊಟ್ಟಿದ್ದ..
    ಇಂತಹ  ಜೀತದ ಬದುಕಿನಲ್ಲಿ ನನ್ನ ಕನಸೆಲ್ಲ  ಮರೆತೇ ಹೋಗಿದ್ದವು ಎಲ್ಲೋ ಒಮ್ಮೊಮ್ಮೆ ನೆನಪಾದರು ಅದನ್ನ ಮರೆಯಲು ನಮ್ಮ ಸಾಹುಕಾರ ತನಗಾಗಿ ನಮ್ಮಿಂದ ಹೊರಿಸಿ ತಂದಿರುತ್ತಿದ್ದ ವಿವಿಧ ಬಣ್ಣದ ಮದಿರೆಯ ಕದ್ದು ಕುಡಿದರೆ ಮರೆತೇ ಹೋಗುತ್ತಿತ್ತು.. ಆಗ ಸಿಕ್ಕವನೆ ಈ ಅಶ್ವಿನ್ ಎಂಬ ಗಾರುಡಿಗ..
           ಆವತ್ತು ಮೈಸೂರ್ ಗೆ ಅವನನ್ನು ಕರೆ ತರಲು ನಮ್ಮ ಬಾಸ್ ಸಂಗಡ ಹೋದಾಗ " ಒಳ್ಳೆ ಹಳ್ಳಿ ಗಮ್ಮಾರ ಸಿಕ್ಕಿದ ಇನ್ನೂ ನಾನು ಮಾಡುವ ಕೆಲಸವೆಲ್ಲ ಇವನ ಹತ್ತಿರವೇ ಮಾಡಿಸಿದರಾಯಿತು ಒಳ್ಳೆ ಬಕರ. ಎಂದೆಲ್ಲಾ ಮನಸಿನಲ್ಲೇ ಮಂಡಿಗೆ ಮೆಂದಿದ್ದೆ."  ನಂತರ  ನೆದೆದಿದ್ದೆಲ್ಲವನ್ನ ಸಾಧ್ಯಂತ ವಿವರಿಸುವೆ.. ಅವನನ್ನು ಬಿಡಲು ಬಂದಿದ್ದ ಬಹುಶಃ ಅವನ್ ತಂದೆ ಇರಬೇಕು ನಮ್ಮ ಯಜಮಾನನ ಹತ್ತಿರ " ಸ್ವಾಮಿ ನಮಗೆ ನಿಮ್ಮ ಭಾಷೆ ಬರಲಾರದು ಆದರು ಹೇಳುತ್ತೇನೆ.. ಇವನಿಗೆ ತುಂಬಾ ಕಲಿಯಬೇಕೆಂಬ ಚಪಲ ಆದ್ರೆ ನನ್ನ ಕೈಯಲ್ಲಿ ಅಷ್ಟೆಲ್ಲ ಓದಿಸಲಾಗದು. ನೀವು ಓದಿಸುತ್ತಿರೆಂದು ಎಂದು ನಮ್ಮ ಭಟ್ರು ಹೇಳಿದುದರಿಂದ ನಿಮ್ಮೊಂದಿಗೆ ಈ ನನ್ನ ಮಗನನ್ನ ಕಳುಹಿಸಿ ಕೊಡುತ್ತೇನೆ." ಎಂದೆಲ್ಲಾ ವಿನಿತವಾಗಿ ಕೇಳಿಕೊಂಡಾಗ ಖಂಡಿತ ಎನ್ನುವಂತೆ ಭರವಸೆ ಕೊಟ್ಟ ಈ ನಮ್ಮ ಬಾಸ್. ನನಗೆ ಮನದಲ್ಲೇ ನಗು ಈ ಪುಣ್ಯಾತ್ಮ ಈ ನಮ್ಮ ಬಾಸ್ ಒಳ್ಳೆಯದನ್ನ ಮಾಡುವ ಎಂದು ನಂಬಿರುವನಲ್ಲ ಎಂದು.
           ನಂತರ ನಡೆದಿದ್ದೆ ಬೇರೆ ಅವನು ನಮ್ಮ ಬಾಸ್ ಮನೆಗೆ ಹೆದರುತ್ತಲೇ ಬಂದ.. ನಾ ತಿಳ್ದಷ್ಟು  ದಡ್ದನೆನಗಿರಲಿಲ್ಲ.. ಆಂಗ್ಲ ದಿನಪತ್ರಿಕೆಗಳನ್ನೆಲ್ಲ ಸಲೀಸಾಗಿ ಓದುತ್ತಿದ್ದ ಒಮ್ಮೆ ನನಗೆ ಅನುಮಾನ ಬಂದು ಇದು ನಾಟಕವ ಎಂದು ಪರೀಕ್ಷಿಸ ಹೋಗಿ ಕೈ ಸುಟ್ಟು ಕೊಂಡಿದ್ದಿದೆ.. ಕೆಲವೇ ದಿನಗಳಲ್ಲಿ ನಾವು ಮಾತಾಡುವ ತಮಿಳನ್ನ ಅರ್ಥ ಮಾಡಿಕೊಂಡು ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯಿಸ ತೊಡಗಿದ. ನನ್ನ ಕೆಲಸವನ್ನು ಅವನೇ ಮೊದ ಮೊದಲು ಮಾಡುತ್ತಿದ್ದವನು. ಒಂದು ಕ್ಷಣವೂ ಸುಮ್ಮನೆ ಕೂರದೆ ನಮ್ಮ ಬಾಸ್ ನಿಂದ ಏನೇನೋ ಇಂಗ್ಲಿಷ್ ಬುಕ್ ಕೇಳಿಕೊಂಡು ಓದ ತೊಡಗಿದ.. ನಂತರ ಕಂಪ್ಯೂಟರ್ ಅನ್ನು ನಮಗೆಲ್ಲ ಕಲಿಸಿದಂತೆ ಒಂದು ದಿನ ಹೀಗೆ ಉಪಯೋಗಿಸುವುದು ಎಂದು ತೋರಿಸಿಕೊಟ್ಟರು. ದಿನವು ಅದನ್ನ ಉಪಯೋಗಿಸಿ ಏನೇನೋ ಕಲಿಯ ತೊಡಗಿದ.. ನಮಗೂ ಆಸೆ ಇದ್ದರು ನಮ್ಮ ಕೆಲಸ ಕಾರ್ಯ ಮುಗಿಸುವುದರೊಳಗಾಗಿ ಮೈ ಮನವೆಲ್ಲ ದಣಿದು ಹಿಪ್ಪೆ ಆಗಿರುತಿತ್ತು ಮಲಗಿದರೆ ಸಾಕಾಗುತ್ತಿತ್ತು ಅದು ಅಲ್ಲದೆ ನಮ್ಮ ಬಾಸ್ ಈ ಮೊದ್ಲು ನಾನು ಹೀಗೆ ಬಳಸಲು ಹೋದಾಗ ಬೈದಿದ್ದ  ನೆನಪುಗಳು.. ಆಗೆಲ್ಲ ಆ ಬೇಸರ ಮರೆಯಲು ಆಸರೆ ಎಂದರೆ ಮದಿರೆ ಮತ್ತು ಸಿಗರೆಟ್ .

                   ನಂತರ ಇದ್ದಕಿದ್ದಂತೆ ಯಾಕೋ ಏನೋ ಅವನಿಗೆ ಚನ್ನೈ ವಾತಾವರಣ ಹಿಡಿದಸದೆ ಕಳೆಗುಂದಿದ. ಆರೋಗ್ಯ ಹದಗೆಟ್ಟಿತು.. ಇದೆ ವೇಳೆ ನಮ್ಮ ಬಾಸ್ ಅವನ ಮೇಲೆ ನಮಗೆ ಹೇಳಿದಂತೆ ಎಲ್ಲಾ ರೀತಿಯ ಕೆಲಸ ಹೇಳ ತೊಡಗಿದ  ಆದರೆ ಅವನು ಅದನ್ನ ಸಾಧ್ಯವಾದಷ್ಟು  ಮಾಡುತ್ತಿದ್ದ. ಒಂದು ದಿನ ಕುಡಿತದ ಮತ್ತಿನಲ್ಲಿದ್ದ ನಮ್ಮ ಬಾಸ್ ಅಶ್ವಿನ್ ನನ್ನು ತನ್ನ ಬಳಿ ಬರಲು ಕರೆದು ತಾವು ಊಟ ಮಾಡುತ್ತಿದ್ದ ತಟ್ಟೆಯಲ್ಲಿದ್ದ ತಮ್ಮ ಎಂಜಲನ್ನು ಅವನಿಗೆ ತಿನ್ನಿಸ ಹೋದರು.. ಎಲ್ಲಿತ್ತೋ ಅವನಿಗೆ ಸಿಟ್ಟು ಅವರ ತಟ್ಟೆಯನ್ನು ಕಸಿದು ದೂರ ಬಿಸಿ ಒಗೆದ " ಏನೋ ನಿನ್ನ ಎಂಜಲು ನಾನು ತಿನ್ನ ಬೇಕಾ? ನೋಡು ನಾನು ತಿಳುವರಿಕೆ ಬಂದಾಗಲಿಂದ ನನ್ನ ಅಪ್ಪ ಅಮ್ಮನ ಎನ್ಜಳನ್ನೇ ನಾನು ತಿನ್ದವನಲ್ಲ ಅಂತದ್ರಲ್ಲಿ ನಿನ್ನ ಅಂಥ ನಂಬಿಕೆ ದ್ರೋಹಿಗಳ ಎಂಜಲು ತಿನ್ನಿತಿನ??? ನನಗೆ ಶಿಕ್ಷಣ ಕೊಡ್ಸ್ತಿನಿ ಅಂಥ ಕರಕೊಂಡು ಬಂದು ಇಲ್ಲಿ ನಿನ್ನ ಜೀತದ ಕೆಲಸ ಮಾಡಸ್ತಿಯ??? ನಿನ್ನೆ ರಾತ್ರಿ ಯಾವುದೊ ನಿನ್ನ ಸೂಳೆ ಬಂದಿಲ್ಲ ಅಂತ ನನ್ನ ಕರೆದಿದ್ದೆ ಅಲ್ವ??? ಆಗ ಕೊಟ್ಟ ಏಟು ಮರೆತು ಹೊಯ್ತ ನನ್ನ ಮಗನೆ??? ಹೌದು.... ನಿಮ್ಮ ಕಾಲದಲ್ಲಿ ಅದೇನೋ ನಿನ್ನ ಎಂಜಲನ್ನ ನಿನ್ನ ಹೆಂಡತಿನದ್ರು ತಿನ್ನೋ ಸಂಪ್ರದಾಯ ಇತ್ತಲ್ಲವ??? ಅವಳೆಲ್ಲಿ  ಹೋದಳು??? ನಿನ್ನ ಕಾಟ ತದೆಲಿಕ್ಕ ಆಗದೆ ಬೇರೆ ಮನೆ ಮಾಡಿದಳ??? ಇನ್ನೂ ವೃದ್ದಾಪ್ಯದಲ್ಲಿ ನಮ್ಮನ್ನ ನೋಡ್ಕೋ ಬೇಕಾಗಿರೋದು ನಮ್ಮ ಭಾರತೀಯ ಸಂಸ್ಕ್ರುತಿನಲ್ಲಿ ಹೆತ್ತ ಮಕ್ಕಳು ಅವರು ಕೂಡ ನಿನ್ನ ಕಾಟ ಸಹಿಸಲಿಕ್ಕಗದೆ ದೂರ ಇಟ್ಟರ??? ಇಷ್ಟಾದರೂ ಇನ್ನೂ ನಿನ್ನ ದರಿದ್ರ ಬುದ್ದಿ ಬಿಟ್ಟಿಲ್ವ??? ಏನೋ ಅಂದೇ ಕುಡದ್ರೆ ಸ್ಟೇಟಸ್ ಬರುತ್ತಾ??? ಹಾಗೇ ಕುಡಿಯೋದ್ರಿನ್ದೆಲ್ಲ ಸ್ಟೇಟಸ್ ಬರೋ ಹಂಗಿದ್ರೆ ನಮ್ಮ ದೇಶದಲ್ಲಿ ದಟ್ಟ ದರಿದ್ರತೆನ, ಬಡತನನ ಮರೆಯ್ಕೊಸ್ಕರ ಕಂಠ ಪೂರ್ತಿ ಕುಡಿದು ಹಾದಿಯಲ್ಲಿ ಬಿಳತರಲ್ವ ಅಂತ ಬೇಜವಾಬ್ದಾರಿ ನಾಲಾಯಕ ಜನರೆಲ್ಲಾ ಒಳ್ಳೆ ಹೆಸರು ಮಾಡಿ ಬಿಡತಿದ್ರು.    ಇನ್ನೊಂದು ಸಲ ಏನಾದ್ರು ನನ್ನ ತಂಟೆಗೆ ಬಂದ್ರೆ ಅಷ್ಟೇ." ಎಂದೆಲ್ಲಾ ಆರ್ಭಟಿಸಿದ.  ಅವನ ಧೈರ್ಯ ಕಂಡು ನಿಜಕ್ಕೂ ಬೆರಗಾದೆ.. ಯಾವದೋ ತಮಿಳು ಫಿಲ್ಮನಲ್ಲಿ ನೋಡಿದ ಡೈಲಾಗ್ ನಂತಿತ್ತು..ಆದರೆ ಅದನ್ನ ನಿನ್ನೆ ಮೊನ್ನೆ ಕಂಡ ಈ ಹುಡುಗನ ಬಾಯಿಯಲ್ಲಿ ಕೇಳಿದ್ದೆ .
                                 ಆ ಸನ್ನಿವೇಶದ ನಂತರ ನಮ್ಮ ಬಾಸ್ ಎಂಬ ವಕೀಲ ಕೂಡ ಒಂದು ಕ್ಷಣ ನಡುಗಿದ್ದ.. ಅದನ್ನ ಮರೆಯಲು ಮತ್ತೊಂದು ಪೆಗ್ ಹಾಕಿದ್ದ!!! ನನಗೋ ಅವನಿಗೆ ಕೆಲಸ ಹೇಳಲು ಹೆದರಿಕೆ ಆಗ ತೊಡಗಿತು.. ಅವನ ಹೇಳಿದ್ದೆಲ್ಲ ಹಲವು ಬಾರಿ  ಮೆಲಕು ಹಾಕಿದಾಗ ನಿಜಕ್ಕೂ ಅವನ ಬಗ್ಗೆ ಭಯ ಮಿಶ್ರಿತ ಅಭಿಮಾನ ಮೂಡಿತ್ತು..
                                                                                                                                                            ಮುಂದುವರೆಯುವುದು....

Friday, October 15, 2010

ಬತ್ತಗೆರೆ ಸಾವಿತ್ರಜ್ಜಿ

ಬತ್ತಗೆರೆ ಸಾವಿತ್ರಜ್ಜಿ ಎಂಬ  ಆಧುನಿಕ ಹರಿಕಾರ್ತಿ


ನನ್ನ ಜೀವಾಮೃತವೆ...
                       ನೀನು 'ಇಂಥ ೨೧ ನೇ ಶತಮಾನದಲ್ಲಿಯೂ ಕೂಡ ಪತ್ರ ಬರವಣಿಗೆ ಯಾಕೆ??'  ಅಂಥ ಕೇಳಿದ್ದೆ ನೆನಪಿದೆಯ??? ನಿಜ.. ಆದರೆ ಮನದ ಎಲ್ಲಾ ತುಮುಲ ಹಾಗೂ ಭಾವನೆಗಳ ಮಿಡಿತವನ್ನ ಹೊರ ಹಾಕಲು ಇಂದಿನ ಆಧುನಿಕ ಸಂಪರ್ಕ ಮದ್ಯಮಗಳಿಂದ ಎಷ್ಟೇ ಸಾದ್ಯ ಕಣೋ ಅಂತ ನೀನು ಹೇಳಿದರು.. ಪತ್ರ ಬರೆಯುವಿಕೆ ಹಾಗೂ ಅದರ ಪರತುತ್ತರಕ್ಕಾಗಿ ಕಾಯುವಿಕೆ ನಿಜಕ್ಕೂ ಆ ಸಮಯದಲ್ಲಿ ಸಿಗುವ ಖುಷಿಯನ್ನ ಪದಗಳಲ್ಲಿ ಹಿದಿದಿರಲಾಗದಂತಹುದು.. ಅಂದಾಗ. ನೀನು  ಅದೇನೋ ನೋಡೇ ಬಿಡ್ತೀನಿ ಅಂತ ಸವಾಲು ಸ್ವಿಕರಿಸುವವಳಂತೆ ನೋಡಿ ಒಪ್ಪಿಕೊಂಡೆ.. ಈಗ ನಂಗೆ ಪುರುಸೊತ್ತು ಸಿಗುವುದಿಲ್ಲ ನನ್ನ ಬಂಗಾರ ಅಂತ ಹೇಳುತ್ತಾನೆ ಎಷ್ಟೋ ಪತ್ರ ನಮ್ಮಿಬ್ಬರ ನಡುವೆ ಬಟವಾಡೆ ಆಗಿ ಹೋಯಿತು ಅಲ್ಲವ???  ನಿಜ ನಾನು ಪತ್ರ ಬರೆಯಲು ಕಲಿತದ್ದು ನನ್ನ ಅಮ್ಮನಿಂದ ನಾನು ಶಾಲೆಗೆ ಸೇರಿ ಅಲ್ಲಿ ಪತ್ರ ಬರೆಯುವುದನ್ನ ಹೇಳಿ ಕೊಡುವ ಮೊದಲೇ.. ನನ್ನ ಹೆತ್ತಮ್ಮ ತನ್ನ ತವರೊರಿಗೆ ಹಾಗೂ ದೂರದ ಕೇರಳ ದಲ್ಲಿದ್ದ ನನ್ನ ಚಿಕ್ಕಪ್ಪನಿಗೆಲ್ಲ ಪತ್ರ ಬರೆದು ಕ್ಷೇಮ ಸಮಾಚಾರ ಕೇಳುವಾಗ ನನ್ನ ಹತ್ತಿರದಲ್ಲೇ ಬರೆದು ಕೊಡು.. ಹೀಗೆ ಬರೆಯಬೇಕು ಎಂದೆಲ್ಲಾ ನಿರ್ದೇಶಿಸಿ ಕೊನೆಯದಾಗಿ ತಪ್ಪುಗಳಿದ್ದಲ್ಲಿ ತಿದ್ದಿ ಓದಿ ಎಂದು ಮುಗಿಸುತ್ತಿದಳು.. ಅದು ನನಗೆ ಈಗ ನನ್ನ ಭಾವನೆಯನ್ನ ಹಂಚಿಕೊಳ್ಳಲು ಸಹಾಯ ಮಾಡುತ್ತಿದೆ..
                    ಹಃ  ಮೊನ್ನೆ ಅಮ್ಮ ಫೋನ್ ಮಾಡಿದ್ದಾಗ ನಮ್ಮೂರಿನ ಸಾವಿತ್ರಜ್ಜಿ ತೀರಿಹೋದಳು ಎಂದಳು.. ಫೋನ್ ಇಟ್ಟ ಮೇಲೆ ಸಾವಿತ್ರಜ್ಜಿ ಎಂಬ ಆಧುನಿಕ ಹರಿಕಾರ್ತಿಯ ನೆನಪು ಕಣ್ಣು ಮುಂದೆ ಬಿಡದೆ ಕಾಡಿತು.. ಬೊಚ್ಚು ಬಾಯಿಯ ಕಾಟನ್ ಸೀರೆಯ ಆ ಆಜ್ಜಿ ನನಗೆ ತಿಳಿದಂತೆ ನನ್ನ ಅಜ್ಜಿಯ ಆಪ್ತ ಗೆಳತಿ.. ದಿನ ಮಧ್ಯಾಹ್ನ  ಊಟ ಚಹ ಆದ ಮೇಲೆ ಒಂದು ಕುಡುಗೋಲು ಹಿಡಿದು ಅದನ್ನು ಮಸೆಯುವ ನೆಪ ಮಾಡಿ ನಮ್ಮ ಮನೆಗೆ ದಾವಿಸಿದಳೆಂದರೆ   ಅಲ್ಲಿ ಆರಂಭ ಆಯಿತು ಮುದುಕಿಯರ ಕಟ್ಟೆ ಮಾತುಕತೆ... ಇನ್ನೂ ಆ ಅಜ್ಜಿ ಹೊರಡಲು ಸೂರ್ಯ ತನ್ನ ದಿನಚರಿ ಮುಗಿಸಿ ಇನ್ನೂ ತಾನು ನಾಳೆ ಬರುವೆ ಎಂದು ಹಿಂದಿನ ಧರೆಯ ಕಡೆ ಹೊರಟಿರ ಬೇಕು ಅಷ್ಟೊತ್ತಿಗೆಲ್ಲ ಕವಳದ ಬಟ್ಟಲಿನಲ್ಲಿಯ ಸಾಮಗ್ರಿಗಳೆಲ್ಲ ( ಅಡಕೆ, ಸುಣ್ಣ, ತಂಬಾಕು) ಮುದುಕಿಯರ ಸ್ಪರ್ದೆಯಲ್ಲಿ ತಾನು ಸೋತೆ ಎನ್ನುತ್ತಾ ಬರಿದಾಗಿ ಅವರ ಬಾಯಿಗಳಿಗೆ ಆಹಾರ ವಾಗಿರುತ್ತದೆ.. ಇನ್ನುಲಿದದ್ದರಲ್ಲಿ ಒಂದು ಕವಳ ಬಡ ಸಾವಿತ್ರಜ್ಜಿಯ ಮುಡಿ ಕಂಕುಳನ್ನ ಸೇರಿರುತ್ತೆ.. ಅಜ್ಜಿ ಹೊರಾಡುವ ವೇಳೆಗೆಲ್ಲ ನಾವು ಶಾಲೆ ಮುಗಿಸಿ ಮನೆಗೆ ಬಂದಿರುತ್ತೆವೆಲ್ಲ ನಮ್ಮ ಹುಡುಗಾಟಿಕೆಗೆ ಎಷ್ಟೋ ಬಾರಿ ಆ ಅಜ್ಜಿಯ  ಬಾಯಿಂದ ಅಷ್ಟೋತ್ತರವನ್ನ ಕೇಳಿಸಿಕೊಂಡದ್ದು ಉಂಟು.. ಹಾಗೇ ಕೆಲವೊಮ್ಮೆ ಅಜ್ಜಿಗೆ ಕೊಡುತ್ತಿದ್ದ ತ್ರಾಸುಗಳು ಅಷ್ಟಿಷ್ಟಲ್ಲ.. ಅಲ್ಲವ??? 
               ಒಮ್ಮೆ ನಿನಗೆ ನೆನಪಿದೆಯ ಸಾವಿತ್ರಜ್ಜಿಯ ಬಂದಳೆಂದು ಕವಳದ ಬಟ್ಟಲು ಅಡಗಿಸಿಟ್ಟದ್ದು.. ನಂತರ ಅದು ಯಾಕೆ ಹಂಗೆ ಮಾಡಿದೆ ಎಂದು ಆ ಅಜ್ಜಿ ಕೇಳಲಾಗಿ ನಾನು ನಿಮ್ಮ ಮನೆಯ ಅಡಿಕೆ ಖರ್ಚಾಗುತ್ತದೆ ಎಂದು ಇಲ್ಲಿಗೆ ಬಂದು ಕವಳ ಹಾಕುತ್ತಿಯ  ಎಂದದ್ದು.. ಅವಳು ಅದನ್ನೇ ದೊಡ್ದದನ್ನಗಿಸಿ ಸತ್ಯವನ್ನ ಅರಗಿಸಿ ಕೊಳ್ಳಲಾಗದೆ ನನಗೆ ಹೊಡೆದದ್ದು. ನಾನು ಇನ್ನೇನು ಎಲ್ಲಾ ಮುಗಿಯಿತು ಇನ್ನೂ ಅತ್ತು ಸಂತೈಸಿ ಕೊಳ್ಳೋಣ ಎಂದಿರುವಾಗಲೇ ಆದರ್ಶವನೆಲ್ಲ ತನ್ನ ಮಗ ಮೈಗೂಡಿಸಿಕೊಂಡು ಬೆಳೆಯೇಬೇಕೆಂದು ನನ್ನ ಸಣ್ಣ ಸಣ್ಣ ತಪ್ಪಿಗೂ ಕೈ ಗೆ ಸಿಕ್ಕಿದುದ್ರಲ್ಲಿ ತನಗೆ ಸಮಾಧಾನ ಆಗುವ ತನಕ ಬಡಿದು  ನನ್ನ ಹದ ಮಾಡುತ್ತಿದ್ದ ನನ್ನ ತೀರ್ಥರೂಪನಿಗೆ ಸುದ್ದಿ ಮುಟ್ಟಿಸಿ ಅವನಿಂದ ಆ ಅಜ್ಜಿ ಹೊಡೆದ ನೋವಿನ ಮೇಲೆ ಮತ್ತೊಂದಿಷ್ಟು ತನ್ನ ದೇಣಿಗೆಯನ್ನ ಆಪ್ಪ ಕೊಟ್ಟಿದ್ದು.. ಅದನ್ನ ಕಂಡು ಕಾಣದವಳಂತೆ ಸುಮ್ಮನಿದ್ದ ನನ್ನ ಅಮ್ಮನ ಹತ್ತಿರ ನಾನು ತೋರಿಸಿದಾಗ ಆಕೆ  'ಕೊಟ್ಟು ಹಂಗಿಸಬೇಡ' ಎಂಬ ಪಾಠ ಹೇಳಿ ನನ್ನ ಸಮಾಧಾನ ಮಾಡಿದ್ದೂ ..   ನಂತರ ಆದ  ಬಸುಂದೆಗಳಿಗೆ ಅಮ್ಮ ಎಣ್ಣೆ ಹಚ್ಚುತ್ತ ಏನೇನೋ ಪುರಾಣದ ಕಥೆ ಹೇಳಿದ್ದು.. ಸೆರಗಿನಲ್ಲೆ ಕಣ್ಣು ಒರೆಸಿಕೊಂಡದ್ದು..
 ಈ ಪ್ರಸಂಗ ಆದ ನಂತರ ನಾವಿಬ್ಬರು  ಆ ಅಜ್ಜಿಯನ್ನು ಇನ್ನಷ್ಟು ದ್ವೇಷಿಸಲು ಶುರು ಮಾಡಿದ್ದೂ... ನಂತರ ನಮ್ಮದೇ ತಪ್ಪು ಎಂದು ಗೊತ್ತಾದ ಮೇಲು ಅವರು ನನಗೆ ಹೊಡೆದೇಕೆ ಹೇಳ ಬೇಕಿತ್ತು ಹಾಗೇ ಹೇಳಿದ್ದರೆ ತಿಳಿದು ಕೊಳ್ಳುತ್ತಿದ್ದೆ ಎಂದು ನಮ್ಮನ್ನೇ ಸಮರ್ಥಿಸಿಕೊಂಡದ್ದು..
ಎಲ್ಲಾ ನೆನಪಾಯಿತು...
 ಹ ಆ ಅಜ್ಜಿಯ ಬಗ್ಗೆ ನಾನು ಅಭಿಮಾನ ಹೊಂದಿರಲು ಕಾರಣ ಹಾಗೂ ಅವಳನ್ನ ನಮ್ಮೂರಿನ ಆಧುನಿಕ ಹರಿಕಾರ್ತಿ ಎನ್ನಲು ಆಕೆಯ ವೈಚಾರಿಕ ನಿಲುವನ್ನು ಆವಳ ಧ್ರುಧತೆಯನ್ನು ಕಂಡಾಗ ನಿಜಕ್ಕೂ ನನಗೆ ಆಕೆಯಲ್ಲಿ ಅಭಿಮಾನ ಮೂಡುತ್ತದೆ..  ಹಾಗೇ ಹೇಳಲು ಕಾರಣವಿದೆ.. ಅವಳು ನನಗೆ ತಿಳಿದಂತೆ.. ನಮ್ಮ ಸಮಾಜದಲ್ಲಿ ಸ್ತ್ರೀಯರಿಗೆ ಸ್ಥಾನ ಮಾನವೇ ಇಲ್ಲಾ ಎನ್ನೋ ಕಾಲದಲ್ಲಿ  ತನ್ನ ೩ ಗಂಡು ಮಕ್ಕಳನ್ನ ದೂರ ಇಟ್ಟು ತನ್ನ ಕಿರಿಯ ಮಗಳಿಗೆ ತನ್ನ ಮನೆಯ ಯಜಮಾನಿಕೆಯನ್ನ  ನೀಡಿ ಅವಳ ಜೊತೆಗೆ ಜೀವನ ನೆಡೆಸಿದವಳು.. ಅಷ್ಟೇ ಅಲ್ಲಾ ತನ್ನ ಆ ಮಗಳು ಮದುವೆಯಾಗಿ ವರ್ಷವಾಗುವ ಮುನ್ನವೇ  ಗಂಡನನ್ನು ಬಿಟ್ಟು ಬೇರೆ ಜಾತಿಯ ಕುಬೇರನನ್ನ ವಿವಾಹ ಆದಾಗ.. ಧೃತಿಗೆಡದೆ ಅದನ್ನು ಸಮಾಜ್ ಏನೇ ಅಂದರು ತಲೆಕೆಡಿಸಿಕೊಳ್ಳದೆ.. ತನ್ನ ಆ ಮಗಳಿಗೆ ಒತ್ತಾಸೆ ಆಗಿ ನಿಂತ ಮಹಾತಾಯಿ ಅವಳು.. ಆ ಮೂಲಕ ಸಂಪ್ರದಾಯವನ್ನೆಲ್ಲ ಬದಿಗೊತ್ತಿ ಜಾತ್ಯತಿತತೆಯನ್ನ ಮೆರೆದ ಆಧುನಿಕ ಹರಿಕಾರ್ತಿ ಎಂದರೆ ತಪ್ಪದಿತೇನು?? ನೀನೆ ಹೇಳು ನನ್ನ ಅಭಿಪ್ರಾಯ ಸರಿ ಇಲ್ಲವೇನು ನನ್ನ ಚಿನ್ನು????