ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Monday, October 27, 2014

ಹೀಗೊಂದು ಅನಿಸಿಕೆ






ನನ್ನ ಪ್ರೀತಿಯಾ ಮನದನ್ನೆಗೆ,




ಹಲೋ ಈ ಪತ್ರ ನೋಡಿ ನಿನ್ನ ಮುಖದಲ್ಲಿ ಆದ ಬದಲಾವಣೆಗಳನ್ನ ನಾನು ಇಲ್ಲಿಂದಲೇ ಊಹಿಸಬಲ್ಲೆ.  ಹಮ್  ತುಂಬಾ ದಿನ ಆಗಿ ಹೋಯಿತು ನಿನಗೆ ಪತ್ರ ಬರಿದೆಯ ಅಲ್ದಾ ? ಅದಕ್ಕಾಗಿ ಕ್ಷಮಿಸು ಅಂತ ನಾನು ಕೇಳಲಾರೆ ಕಾರಣ ಇಷ್ಟೇ ದಿನ ಬೆಳಗ್ಗೆ ಇಂದ ಮಲಗುವರೆಗಿನ ನನ್ನ ದಿನಚರಿಯೆಲ್ಲ ನೀನು ಫೋನ್ ಅಲ್ಲೇ ತಿಳಿದು ಕೊಳ್ಳುತಿರುವಾಗ ಪತ್ರದ ಅವಶ್ಯಕತೆ ನಿನಗೆಲ್ಲಿ?  .  ಅದರಲ್ಲಿಯ ನಾನಾ ಅಪ್ಲಿಕೇಶನ್ ಗಳು ನಮ್ಮ ಸನಿಹತೆಯನ್ನ   ಹೆಚ್ಚು  ಮಾಡಿ ಪತ್ರ ಬರೆಯುವ ಪದ್ದತಿಯನ್ನೇ ತಪ್ಪಿಸಿ ಬಿಟ್ಟಿದೆ  ಅಲ್ಲವೇ ಗೆಳತಿ..  ಆದರು ಪತ್ರದ ಬರೆವಣಿಗೆಯಲ್ಲಿ ಸಿಗುವ ಈ ಖುಷಿ ನನಗೆ ಅವುಗಳಲ್ಲಿ ಸಿಗದೇ ಇರೋದ್ರಿಂದ ಈ ಪತ್ರ. 

ಗೆಳತಿ ದೀಪಾವಳಿ ಹಬ್ಬ ಮುಗಿತ?. ನಿಮ್ಮ  ಮನೆಯ ಗೌರಿ (ಹಸು) ನಂದಿನಿ (ಹಸುವಿನ ಕರು ) ಯಾವ ರೀತಿ ಸಿಂಗರಿಸಿದ್ದೆ ??? ಗೋ ಪೂಜೆ ವೇಳೆಯಲ್ಲಿ ತೆಗೆದ ಫೋಟೋ ಇದ್ದಾರೆ whatsapp ಅಲ್ಲಿ ಮರೆಯದೆ ಕಳಿಸು. ಹಮ್ ಚಿನ್ನು ನಿಮ್ಮೂರ ಕಡೆ  ಮತ್ತೇನು ಸಮಾಚಾರ? ಅದೇನೇ ಇದ್ದರು ಈ ಪತ್ರಕ್ಕೆ ನೀನು ಪ್ರತಿಕ್ರಿಯಿಸುವಾಗ ತಿಳಿಸು. 

ನಾನು ಈ ಪತ್ರ ಬರೆಯಲು ಕಾರಣ ತುಂಬಾ ದಿನದಿಂದ ನನ್ನ ಮನಸಲ್ಲಿ ಕೊರೆಯುತ್ತಿದ್ದ ವಿಷಯವನ್ನ ನಿನ್ನ ಅಲ್ಲಿ ಹಂಚಿ ಕೊಳ್ಳಬೇಕು  ಅನ್ನೋ ಆಸೆ ಇಂದ. ತುಂಬಾ ಪೀಠಿಕೆ ಹಾಕದೆ ವಿಷಯಕ್ಕೆ ಬರುವೆ ಚಿನ್ನು. ನಮ್ಮ ದೇಶದಲ್ಲಿ ಆಗುತ್ತಿರುವ ಈಗಿನ ಬೆಳವಣಿಗೆ ಕಂಡು ತುಂಬಾ ಖುಷಿ ಮತ್ತು ತುಂಬಾ ದು:ಖ ಎರಡು ಆಗುತ್ತದೆ. ನಮ್ಮ ದೇಶಕ್ಕೆ ಮೋದಿ ಜೀ  ಪ್ರಧಾನಿ ಆಗಿ ಬಂದಂದಿನಿಂದ ನಮ್ಮ ಬದುಕಿನ ಬಗ್ಗೆ ಮತ್ತು  ನಮ್ಮ ದೇಶದ ಬಗ್ಗೆ ಹೊಸ ಭರವಸೆ ಮೂಡುವಂತಾಗಿದೆ ಅದು ಖುಷಿಯ ವಿಷಯ.
 ಆದರೆ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರ & ದೌರ್ಜನ್ಯದ ಸುದ್ದಿಗಳ ಸಂಖ್ಯೆ ದಿನೇದಿನೇ  ಹೆಚ್ಚಾಗುತ್ತಿರುವುದು ನಿಜಕ್ಕೂ ಖೇದಕರ. ಈ ವಿಷಯದ ಸಲುವಾಗೆ ನಿನ್ನೊಂದಿಗೆ  ಚರ್ಚಿಸಬೇಕೆಂದಿರುವೆ.  ನಿಜ ಹೇಳು ಈಗೀಗ ಮಾಧ್ಯಮದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯ ಇಲ್ಲದೆ ಇರೋ ದಿನ ಯಾವದದ್ರು  ಇದೆಯೇನು ನನ್ನ ಮನದ ಒಡತಿ???.  ಮಹಿಳೆಯರನ್ನ ಗೌರವಿಸಿ ಪೂಜಿಸುವ ನೆಲದಲ್ಲಿ ಇಂತ ದೌರ್ಜನ್ಯ ಹೆಚ್ಚಲು ಕಾರಣ ಏನಿರಬಹುದು ಗೆಳತಿ??? 

ಇದರಲ್ಲಿ ತಪ್ಪು ಯಾರದ್ದು? ಯುವ ಸಂಪತ್ತು ಒಂದು ದೇಶದ ಆಸ್ತಿ ನಿಜ ಅದು ಆರೋಗ್ಯಕರವಾಗಿ ಇದ್ದಾಗ ಮಾತ್ರ ಅಲ್ಲವೇ??? ರೋಗಗ್ರಸ್ಥ  ಯುವ ಸಮಾಜ ಸಂಪತ್ತಾ ಆಗಲು ಸಾಧ್ಯವೇನು ? ಯುವ ಸಂಪತ್ತಿನಲ್ಲಿ ಆರೋಗ್ಯಕರ ಬೆಳವಣಿಗೆ ಬದಲು ಈ ರೀತಿಯ ವಿಕೃತ ಬೆಳವಣಿಗೆ ಕಾಣಿಸಿಕೊಳ್ಳಲು ಕಾರಣ ಹುಡುಕುತ್ತ ಹೊರಟಿದ್ದೆ. ನನ್ನ ಅಭಿಪ್ರಾಯವನ್ನ ನಿನ್ನೊಡನೆ ಹಂಚಿಕೊಳ್ಳುವ  ಆಸೆ...  ಗೆಳತಿ ನಮ್ಮ ಸಮಾಜ ಬದಲಾಗುತ್ತಿದೆ, ಬೆಳೆಯುತ್ತಿದ್ದೇವೆ ಎಲ್ಲ ನಿಜ. ಆದರೆ ಅದು ಎಷ್ಟು ಸರಿ ದಿಕ್ಕಿನ ಕಡೆಗೆ ಇದೆ?? ಎನ್ನುವುದೇ ನನ್ನ ಪ್ರಶ್ನೆ. ನಾವು ತಪ್ಪು ದಾರಿಯಲ್ಲಿ ಹೊರಟಿದ್ದೇವೆ ಅಂದರೆ ಹಾಗೆ ಆಗುತ್ತಿರಲು ಕಾರಣವೇನು? ನನ್ನ ಪ್ರಕಾರ ಅವುಗಳಿಗೆ ಕಾರಣಗಳು ಹೀಗೆ ಹೇಳಬಹುದು 
 ಮಾಧ್ಯಮ : ಗೆಳತಿ , ನಮ್ಮ ದೇಶದಲ್ಲಿ  ಮಾಹಿತಿ ತಂತ್ರಜ್ಞಾನದಲ್ಲಿ ಆಗಿರುವ ಬೆಳವಣಿಗೆ ತುಂಬಾ ಪ್ರಶಂಸನೀಯ ಅನ್ನಿಸುತ್ತಿದೆ ಅಲ್ಲವೇ.  ಅದನ್ನ ಸರಿಯಾದ ಮಾರ್ಗದಲ್ಲಿ ಬಳಸುತ್ತಾ ಮುನ್ನಡೆದರೆ  ನಾವು ಮುಂದೊಂದು ದಿನ ಸೂಪರ್ ಪವರ್ ರಾಷ್ಟ್ರಗಳ ಸಾಲಿನಲ್ಲಿ ಸೇರುವುದು ನಿಸ್ಸಂಶಯ   ಅದಕ್ಕೆ ಒಂದು ಉದಾಹರಣೆ ಎಂದರೆ ಮಂಗಳ ಗ್ರಹಕ್ಕೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಉಪಗ್ರಹವನ್ನ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ಹಾಗೂ  ಶ್ರೀಮಂತ ರಾಷ್ಟ್ರಗಳು ನಮ್ಮೆಡೆಗೆ ತಿರುಗಿ ನೋಡುವಂತೆ ಮಾಡಿಕೊಂಡಿದ್ದು ಇದಕ್ಕೆ ಸಾಕ್ಷಿ. ಇದು ನಿಜಕ್ಕೂ ಖುಷಿಯ ವಿಚಾರ . 
   ಆದರೆ ಇನ್ನೊಂದು ಮಗ್ಗುಲಿನಲ್ಲಿ ನೋಡಿದರೆ ಮಾಹಿತಿ ತಂತ್ರಜ್ಞಾನದ ದುರ್ಬಳಕೆ ಆಗುತ್ತಿದೆಯೇ ಎಂದು ನೋಡ ಹೊರಟರೆ ನನ್ನ ಪ್ರಕಾರ ನಿಜಕ್ಕೂ ಆಗುತ್ತಿದೆ. ದಿನ ಬೆಳಗ್ಗೆ ಇಂದ ರಾತ್ರಿ ವರೆಗೆ ನಮ್ಮ  ಮನೆಯ ಟಿವಿ ಗಳಲ್ಲಿ ಬರುವ ಕಾರ್ಯಕ್ರಮಗಳು ಬಹುತೇಕ ನಮ್ಮ ಮನಸನ್ನು ಅರಳಿಸುವ ಬದಲು ಕೆರಳಿಸುವಂತವು ಅಂದರೆ ತಪ್ಪಾಗಲಾರದು ಅಲ್ಲವೇ ಚಿನ್ನು??? ಎಲ್ಲವು ಇವಾಗ ವಾಣಿಜ್ಯಕರಣ - ಲಾಭದಾಯಕ ವ್ಯವಹಾರವಾಗಿ ಇರುವದರಿಂದ ಅವರಾದರೂ  ಏನು ಮಾಡುತ್ತಾರೆ ನೀನೇ  ಹೇಳು???. ಮನಸನ್ನು ಅರಳಿಸುವ ಕಾರ್ಯಕ್ರಮ ಪ್ರಸಾರ  ಮಾಡುವದರಿಂದ ಲಾಭ ಕಡಿಮೆ ಇರಬೇಕು ಅದಕ್ಕಾಗಿ ಅದರ ಬದಲು ಅವರು ಲಾಭದಾಯಕವಾದ ಮನ ಕೆರಳಿಸುವ ಕಾರ್ಯಕ್ರಮಗಳನ್ನೇ ಪುನಃ ಪುನಃ ತೋರಿಸಿ ನಮ್ಮ ಮನಸ್ಸಿನ ಭಾವನೆಗಳನ್ನ ವಿಕೃತ ಗೊಳಿಸುತ್ತಿವೆ  ಅನ್ನಿಸುತ್ತಿಲ್ಲವೇನು???  ಈಗಿನ ಸಂಸಾರಿಕ ಚಿತ್ರಗಳು ಎಂದು ಬರುವ ಚಿತ್ರಗಳಲ್ಲೂ ಎಷ್ಟು ಚಿತ್ರಗಳನ್ನ ನಮ್ಮ ಕುಟುಂಬ ಸಮೇತ ಹೋಗಿ ಎಲ್ಲಿಯೂ  ಮುಜಗರಕ್ಕೆ ಒಳಗಾಗದೆ ನೋಡಿ ಕೊಂಡು ಬರಬಹುದು ನೀನೆ  ಹೇಳು ನನ್ನ ಬಂಗಾರಿ. ಹೀಗೆ ನಾನು ಹೇಳಿದರೆ ಇವನು ಇನ್ನು ಹಳೆ ಕಾಲದವನು. ಹಳ್ಳಿಗ... ಅಧುನಿಕ ಜಗತ್ತಿನ ಪರಿವೆಯೇ  ಇಲ್ಲದವನು. ಇನ್ನು  ಏನೇನೋ ನೀನು ನನಗೆ ಹೇಳಬಹುದು. ಬೇಸರವಿಲ್ಲ . ಎಲ್ಲೋ ಓದಿದ ನೆನಪು ನಮ್ಮ ಮನಸ್ಸಿಗೆ ಬಹು ಬೇಗ ಪ್ರಭಾವ ಬೀರುವ  ಮಾಧ್ಯಮ  ಎಂದರೆ ಅದು ದೃಶ್ಯ ಮಾಧ್ಯಮ  
ಹಾಗೆ ಇಂಟರ್ನೆಟ್ ಎಂಬ ಮಾಯಜಾಲವು ಕೂಡ ಹಳ್ಳಿ ಹಳ್ಳಿ ತಲುಪಿದೆ ಇದೊಂದು ಒಳ್ಳೆಯ ಬೆಳವಣಿಗೆ ಏನೋ ಸರಿ . ಇಲ್ಲವಾಗಿದ್ದರೆ ಹಳ್ಳಿಯಲ್ಲಿರುವ ನೀನು ನನ್ನ ಬ್ಲಾಗ್ ಓದಲಾಗುತ್ತದೆ ಏನು? ನನ್ನೊಂದಿಗೆ ಅತ್ಯಂತ ನಿಕಟವಾಗಿ ಸಂಪರ್ಕ ದಲ್ಲಿ ಇರಲಾಗುತ್ತಿತ್ತೇನು ??? ಅದಕ್ಕಾಗಿ ನಾನು ನಿಜಕ್ಕೂ ಈ ಬೆಳವಣಿಗೆಯನ್ನ ಗೌರವಿಸುತ್ತೇನೆ. ಆದರೆ ಇದು ಕೂಡ ದುರ್ಬಳಕೆಯ ಸಾಧನವಾಗಿದೆ ಎಂದರೆ ತಪ್ಪಾಗಾಲಾರದು  ಅಲ್ಲವೇ ಗೆಳತಿ. ನನಗಿಂತ ಚನ್ನಾಗಿ ಇಂದಿನ ಚಿಕ್ಕ ಮಕ್ಕಳಿಗೆ ಗೊತ್ತು ಅದ್ರಲ್ಲಿ ಏನೇನು ವಿಷಯ ತಿಳಿದು ಕೊಳ್ಳಬಹುದು ಮತ್ತು ನೋಡಬಹುದು ಎಂದು. ಯಾವದನ್ನ ನಾವು ಚಿಕ್ಕವರಿದ್ದಾಗ ತಿಳಿಯ ಬಾರದು ಎಂದು ಹಿರಿಯರು ಅಂದುಕೊಂಡಿರುತ್ತರೋ ಅಂಥಹ ವಿಷಯಗಳು ಸುಲಭವಾಗಿ ಇದರಲ್ಲಿ ಲಭ್ಯ.  ಇಂದರಿಂದ ಆಗುತ್ತಿರುವ ದುಷ್ಪರಿಣಾಮ ಎಂದರೆ ಯುವಕರು   ನೈತಿಕತೆಯನ್ನು ಮರೆತು ತಪ್ಪಾದ ದಾರಿಯನ್ನ ಹಿಡಿಯಬಹುದಾದ ಸಂಭವ ಹೆಚ್ಚು. ನಮ್ಮ ಪ್ರಧಾನಿಯವರು ಒಮ್ಮೆ ಹೇಳುತ್ತಾರೆ ಪ್ರತಿಯೊಬ್ಬರೂ ನಮ್ಮ ನಮ್ಮ ಮನೆಯ ಮಕ್ಕಳನ್ನ ಸಂಸ್ಕಾರವಂತರನ್ನಾಗಿ ಮಾಡಿದರೆ ಇಂತ ಸನ್ನಿವೇಶಗಳು ಬರುವುದೇ ಇಲ್ಲ ಎಂದು ಅವರು ಹೇಳಿದ್ದು ಎಷ್ಟು ಸರಿ ಅಲ್ಲವೇ ? ಆದರೆ ಅವರ ವಿಚಾರ ಕಾರ್ಯಗತಗೊಳಿಸುವುದು ಕೂಡ ಕೇಳಿದಷ್ಟು ಸುಲಭವಲ್ಲ. ಯಾಕೆಂದರೆ ಮನುಷ್ಯನಿಗೆ ಸಂಸ್ಕಾರ ಎಂಬುದು ಬಾಲ್ಯದಲ್ಲಿ ಮನೆಯ ಹಿರಿಯರಿಂದ ಸಿಗುವುದೇನೋ ನಿಜ ಅದೇ ವೇಳೆ ಅವನ ಸುತ್ತಲಿನ ವಾತಾವರಣವು ಅವನನ್ನ ರೂಪಿಸುತ್ತದೆ ಎನ್ನುವುದು ಸುಳ್ಳಲ್ಲ. ಅದ್ದರಿಂದ ನನ್ನ ಪ್ರಕಾರ ಮೇಲೆ ಹೇಳಿದ ಮಾಹಿತಿ ತಂತ್ರಜ್ಞಾನದ ಬಳಕೆ ಹಿತ ಮಿತವಗಿದ್ದು ಸರಿಯಾದ ಮಾರ್ಗದಲ್ಲಿ ನಡೆದರೆ ಮಾತ್ರ ನಮ್ಮ ಸಮಾಜ ರೋಗಗ್ರಸ್ಥ ಯುವ ಜನಾಂಗ ಆಗದೆ ಇರುವುದನ್ನ ತಪ್ಪಿಸಿ ಉತ್ತಮ ಹಾಗು ಆರೋಗ್ಯಕರ ಬಲಿಷ್ಠ ಯುವ ಸಮುದಯವನ್ನ ರೂಪಿಸ ಬಹುದಲ್ಲವೇ??? ನೀನೆ  ಹೇಳು ನನ್ನೊಡತಿ. 
ಒಟ್ಟಿನಲ್ಲಿ ನನ್ನ ಪ್ರಕಾರ ಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನದ ದುರುಬಳಕೆಯು , ಮಹಿಳೆಯ ಮೇಲಿನ ದೌರ್ಜನ್ಯದಂತಹ  ಇನ್ನೂ  ಅನೇಕ ಸಮಸ್ಯೆಗಳಿಗೆ ಕಾರನಿಭೂತವಾಗಿದೆ. 
ಇದು ನನ್ನ ಅನಿಸಿಕೆ ಗೆಳತಿ, ದಯವಿಟ್ಟು ಕ್ಷಮಿಸು  ಒಂದೇ ಸಮನೆ ನನ್ನ ಅನಿಸಿಕೆಯನ್ನೆಲ್ಲ ನಿನ್ನ ಮುಂದೆ ಅರುಹಿದ್ದೆನೆ. ಹಾಗೂ ನಿನ್ನ ಅಭಿಪ್ರಾಯ ತಿಳಿಯಲು ತುದಿಗಾಲಿನಲ್ಲಿ ನಿಂತಿರುವೆ.  ಬೇಗ ಈ ಪತ್ರಕ್ಕೆ ಉತ್ತರಿಸು. 


 

ಇಂತಿ ನಿನ್ನವ 
ಬೆನಕ