ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Wednesday, November 23, 2011

ಅಪಾರ್ಥರಿಗೆ ಸಲಹೆ ನೀಡುವುದು ನಮಗೆ ನಾವು ಮಾಡಿ ಕೊಳ್ಳುವ ಮೋಸ !!!!

ಹಾಯ್ ನನ್ನ ಉಸಿರೇ,
                          ಹೇಗಿದ್ದೀಯ? ಮನೆಯಲ್ಲಿ ಎಲ್ಲಾ ಕ್ಷೇಮವೇ? ಹೇಗೆ ನಡೆಯುತ್ತಿದೆ ನಿನ್ನ ಓದು? ನಾ ಬರೆದ ಪತ್ರಕ್ಕಾಗಿ ಕಳೆದ ಬಾರಿ ತುಂಬಾ ಕಾದು ಕಾದು ಬೇಜಾರಾಗಿದ್ದೆ ಎಂದು ಹೇಳಿದೆಯಲ್ಲ. ನನ್ನ ಚಿನ್ನು ಅದಕ್ಕಾಗಿ ಈ ಪತ್ರ ನಿನ್ನ ಪತ್ರ ಬಂದ ದಿನವೇ ಬರೆಯುತ್ತಿದ್ದೇನೆ. ಆದರು ಒಂದು ಮಾತು ಕೇಳಲೇನು? ನಿಜ ಹೇಳು ಅಂಥ ಕಾಯುವಿಕೆಯಲ್ಲಿ ಎಂತ ಸುಖವಿದೆಯಲ್ಲವ? ಕಾಯುವಿಕೆಯು ಸುಖಾಂತ್ಯವಾದಾಗ ಸಿಗುವ ಖುಷಿಯನ್ನ ವರ್ಣಿಸಲು ಸಾಧ್ಯವೇನೆ? ಅದೊಂಥರ ಮುಂಗಾರು ಮಳೆಗಾಗಿ ಹಂಬಲಿಸಿದ ಇಳೆಯು ಅದರ ಆಗಮನದ ಕುಷಿಯನ್ನ ಅಪರೂಪದ ಸುವಾಸನೆಯನ್ನ ಹೊರ ಬಿಡುವ ಮೂಲಕ ಹೊರ ಸುಸುತ್ತಲ್ಲ.. ಅಂತೆಯೇ ಅಲ್ಲವೇನು. ಆ ಅನುಭೂತಿ ನನ್ನಿಂದ ನಿನಗೆ ಸಿಕ್ಕಿದೆ ಎಂದೆ ನನ್ನ ಭಾವನೆ.
ಗುಬ್ಬಿ, ಮತ್ತೇನ್ ಸಮಾಚಾರ?? "ಹುಂ ಅಪರೂಪಕ್ಕೆ ಒಂದು ಪತ್ರ ಬರೆದು ಬಿಟ್ಟು ಏನೆಲ್ಲಾ ಗುಲಾಬಿ ಹೂ ಕಿವಿಗೆ ಇಡುತ್ತಿದ್ದಿಯಾ? ಕೈ ಗೆ ಸಿಗು ಮಾಡಿಸುತ್ತಿನಿ" ಅಂತ ಮನಸಲ್ಲೇ ಶಾಪ ಹಾಕ್ತಾಇದ್ದೀಯ? ಕ್ಷಮೆ ಇರಲಿ ಗೆಳತಿ. ನೀನೆ ಮುನಿದರೆ ನನ್ನ ಕೊರೆತ ಕೇಳುವವರಾರು?? 
ಹೇ ಮುದ್ದು, ನೀ "ಲೋಕಪಾಲ್ ಮಸೂದೆಯ ಬಗ್ಗೆ ಹೇಳಿದ್ದ ಮಾತು ಸುಳ್ಳಾಯಿತು" ಅಲ್ಲವ.. ಇಲ್ಲ ಸುಮ್ಮನೆ ಹೇಳಿದೆ. ಖಂಡಿತ ಲೋಕಪಾಲ್ ಮಸೂದೆ ಬಂದೆ ಬರುತ್ತದೆ, ಆದರೆ ಅಣ್ಣಾ ಹಜಾರೆ ಹೇಳಿದಂತ ಹಾಗೂ  ನಾವೆಲ್ಲಾ ಬಯಸಿದಂತ ಲೋಕಪಾಲ್ ಮಸೂದೆ ಖಂಡಿತ ಬರಲಾರದು. ನಮ್ಮ ಆಡಳಿತಗಾರರು, ಬ್ರಿಟಿಷರಿಂದ ಕಲಿತ ಒಡೆದು ಆಳುವ ನೀತಿಯನ್ನ ಅವರಿಗೆ ಹೇಳಿಕೊಡುವಷ್ಟು ಪರಿಣಿತರಾಗಿದ್ದಾರೆ, ಯಾವ ಯಾವ ಕ್ರಾಂತಿಯನ್ನ ಯಾವ ಯಾವ ಹಂತದಲ್ಲಿ ಮತ್ತ ಹಾಕಬೇಕು ಅನ್ನೋದು ಜ್ಯಾತ್ಯಾತೀತ ರಾಷ್ಟ್ರದಲ್ಲಿ ಜಾತಿಯ ಆಧಾರದ ಮೇಲೆ ಮತ ವಿಂಗಡಿಸಿ ರಾಜ್ಯಬಾರ ಮಾಡುವ ನಮ್ಮವರಿಗೆ ಅಣ್ಣನವರ ಕ್ರಾಂತಿ ಒಂದು ಲೆಕ್ಕವೇನು? ಆದರೂ ಅಣ್ಣ ನವರ ಆಲೋಚನೆ & ಸಲಹೆ ಎಲ್ಲವು ಸರಿಯಾದುದ್ದೆ ಆದರೂ ಅದನ್ನ ಕೇಳುವವರಾರು? ನಿನಗೆ ಅದನ್ನ ಹತ್ತಿಕ್ಕುವಲ್ಲಿಯ ಮೊದಲ ಹಂತ ಈಗಾಗಲೇ ಅರಿವಿಗೆ ಬಂದಿರಬಹುದು, ಅಣ್ಣಾ ಬನದಲ್ಲೇ ಭಿನ್ನಾಭಿಪ್ರಾಯದ ಬೀಜ ಬಿತ್ತಿ, ಮೊಳಕೆ ಒಡೆಸಿಯು ಆಗಿದೆ. ಇನ್ನೂ ಆ ಕ್ರಾಂತಿಯನ್ನ ಬಾಳು ಬೇಗ ಮರೆಸಿಬಿಡುತ್ತಾರೆ.  ಇನ್ನು ನಮ್ಮಂತ ಸಾಮಾನ್ಯ ಜನರಿಗೆ ಇನ್ನೂ ಒಂದು ಸ್ವಲ್ಪ್ ದಿನಕ್ಕೆ ಹೀಗೊಂದು ಕ್ರಾಂತಿ ನಡೆದಿತ್ತು ಅನ್ನೋದು ನೆನಪಿರುವುದು ಕಷ್ಟ. ಹಾಗೇನಾದ್ರೂ ಅದು ನೆನಪಿನಲ್ಲಿ ಉಳಿಯುವುದಾದರೆ  ಅದೊಂದು ಸರಕಾರೀ ರಜಾ ದಿನವಾಗಿ, ಗಣ್ಯ ವ್ಯಕ್ತಿಗಳ ಭಾಷಣದ ವಸ್ತುವಾಗಿ ಮಾರ್ಪಡಾದಾಗ ಮಾತ್ರ.  ಹೋಗಲಿ ಬಿಡು ಹಾಳು ರಾಜಕೀಯದ ವಿಷ್ಯ ನಮಗ್ಯಾಕೆ!! 
ಹುಂ ದೀಪಾವಳಿ ಚನ್ನಾಗಿ ಆಯ್ತಾ? ಈ ಸಲ ನಿಮ್ಮ ಮನೆಯ ಗೌರಿ ಗೆ ಹುಟ್ಟಿದ್ದ ಲಕ್ಷ್ಮಿ ಎಂಬ ಹೆಣ್ಣು ಕರುವಿಗೆ ತುಂಬಾನೇ ಚನ್ನಾಗಿ ಸಿಂಗಾರ ಮಾಡಿರಬೇಕಲ್ಲ? ಫೋಟೋ ಏನಾದ್ರೂ ತೆಗೆದಿದ್ದರೆ ನನಗೆ ಮೇಲ್ ಮಾಡು ಪ್ಲೀಸ್. ಹಬ್ಬದ ಹೋಳಿಗೆಯಲ್ಲ ಖರ್ಚಾಯಿತಾ?
ಹುಂ ನಿನಗೊಂದು ಮಾತು ಹೇಳಬೇಕು, ನಾನು ಈ ಕೆಲವು ದಿನದಲ್ಲಿ ಜೀವನದಲ್ಲಿ ಒಂದು ಬಹುಮೂಲ್ಯ ಪಾಠ ಕಲಿತೆ. ಇದೇನಪ್ಪ ಅಂತ ಯೋಚಿಸ್ತಿದಿಯ?  ಅಲ್ಲಾ ಚಿನ್ನು, ನಿನಗೆ ಹೇಳಿದ್ದೆ ಅಲ್ಲವ ನನಗೊಬ್ಬಳು ಗೆಳತಿ ಸಿಕ್ಕಿರುವಲೆಂದು, ಅವಳು ನಿನ್ನಂತೆ ಮುಗ್ಧೆ ಅಂದು ಕೊಂಡು ನಿನಗೆ ತಲೆ ತಿಂದಷ್ಟು ಅವಳ ತಲೆ ತಿನ್ನದಿದ್ದರು, ಅವಳು ಮಾಡುತ್ತಿರುವುದು ತಪ್ಪು ಅನ್ನಿಸಿದಾಗಲೆಲ್ಲ ತಿದ್ದುತಿದ್ದೆ. ಆದರೆ ಅದೇ ನಾ ಮಾಡಿದ ತಪ್ಪು!! ಅವಳು ನನಗೆ ಗೊತ್ತಾಗದಂತೆ ಇರಲು ಆರಂಭಿಸಿದಾಗ, ನಾನಾಗೆ ಕೇಳಿದರು ನಯವಾದ ಸುಳ್ಳು ಹೇಳಿ ತಾನು ತಪ್ಪು ಮಾಡಿಲ್ಲ ಎಂದು ನಂಬಿಸಿದಳು. ಮನುಷ್ಯನ ನಡುವಿನ ಸಂಭಂದಗಳು ನಂಬಿಕೆಯ ಸೌಧದ ಮೇಲೆ ನಿರ್ಮಿತವಾಗಿ ಗಟ್ಟಿಯಾಗುವುದು ಅಲ್ಲವೇನು? ಸುಳ್ಳಿನ ಮಹಲು ಅದೆಷ್ಟೇ ಸುಂದರ ಅನಿಸಿದರು, ಸತ್ಯದ ಸುಂದರ ಗಾಳಿಯ ಹೊಡೆತಕ್ಕೆ ಅದು ಬುಡ ಮೇಲಾಗದೆ ಇರುವುದೇನು? ಅಂತೆಯೇ ಅವಳು ಹೇಳಿದ್ದು ಎಂದು ಗೊತ್ತಾದಾಗ ತುಂಬಾ ಬೇಸರ ಆಯಿತು.. ನಿನ್ನಂತೆ ಅವಳೆಂದು ತಿಳಿದು ಹೃದಯಪೂರ್ವಕವಾಗಿ ಸಲಹೆಗಳನ್ನ ನೀಡಿದ್ದೆ.  ನಾವೆಂದಾದರೂ ಪರಸ್ಪರ ಸುಳ್ಳಿನ ಸೌದವನ್ನ ಕಟ್ಟಿಕೊಳ್ಳಲು ಬಯಸಿದ್ದೆವ? ಆ ರೀತಿಯ ಸೌಧ ನಮ್ಮ ನಡುವೆ ಇಲ್ಲದಿರುವದರಿಂದ ತಾನೇ ನಮ್ಮಿಬ್ಬರ ನಡುವಿನ ಈ ಸುಮಧುರ ಸಂಬಂಧ ಇಷ್ಟು ಧೀರ್ಘ ಕಾಲ ಉಳಿದಿರುವುದು, ಗೆಳತಿ ಇದುವರೆಗೂ ನಾವು ಮುಖತಃ ಮಾತುಗಳನ್ನಾಡಿ ಕೊಳ್ಳದಿದ್ದರು. ನಮ್ಮಿಬ್ಬರ ನಾಡಿ ಮೀಡಿತ ಪರಸ್ಪರರಿಗೂ ಗೊತ್ತು ಅಲ್ಲವೇ? ನೀನು ನನಗೆ ಬೈಯುವ ಮೊದಲೇ ನಾನೇ ಒಪ್ಪಿಕೊಳ್ಳುವೆ ಕೆಂಬುತವನ್ನ ನವಿಲೆಂದು ತಿಳಿದು ಅದು ನಾಟ್ಯ ಮಾಡಲೆಂದು ಬಯಸಿದ್ದು ನನ್ನದೇ ತಪ್ಪು. ಹಾಗೆ ಬಯಸುವುದು ಮೂರ್ಖತನದ ಪರಮಾವದಿ ಅಲ್ಲದೆ ಮತ್ತೇನು? ನಾ ಅಣ್ಣಾರವರ ಕ್ರಾಂತಿಯ ಚಳುವಳಿಯಿಂದ ಹಾಗೂ ಈ ನನ್ನ ಗೆಳತಿ ಮಾಡಿದ ಮೋಸದಿಂದ ಕಲಿತ ಪಾಠವೆಂದರೆ ಅಪಾರ್ಥರಿಗೆ ದಾನವೊಂದೆ ಅಲ್ಲಾ ಹೃದಯಪೂರ್ವಕವಾಗಿ ಸಲಹೆಯನ್ನು ನೀಡುವುದು ಕೂಡ ನಮಗೆ ನಾವೇ ಮಾಡಿಕೊಳ್ಳುವ ಮೋಸ. ಸರಿ ತಾನೇ? ಅದಕ್ಕಾಗಿ ತುಂಬಾ ಪಶ್ಚಾತಾಪ ಪಟ್ಟಿದ್ದೇನೆ. ನಾ ಮಾಡಿದ ತಪ್ಪಿಗಾಗಿ ನಾ ನನ್ನನ್ನೇ ಹಳಿದುಕೊಂಡು ಅತ್ತೆ. ನನ್ನ ತಪ್ಪನ್ನು ಮನ್ನಿಸು. ನನಗೆ ಅರ್ಥ ಆಗುತ್ತಿಲ್ಲ ಗೆಳತಿ ನಿನಗೆ ತೋರಿಸಿದಷ್ಟೇ ಕಾಳಜಿಯನ್ನ ನನ್ನ ಅತ್ಮಿಯರಿಗೆಲ್ಲರಿಗೂ ತೋರಿಸುತ್ತೇನೆ.ಆದರೆ ಅವರಲ್ಲಿ ಕೆಲವರು ಅದನ್ನ ಸಹಿಸಲಾರದೆ, ಜೀವನದಲ್ಲಿ ಮರೆಯಲಾಗದ ಸವಿ ನೆನಪಿನ ಬುಟ್ಟಿಯ ಗಂಟನ್ನು ಕೊಟ್ಟು ಅದನ್ನ ಕಹಿ ನೆನಪೆಂಬ ಗಂಟಿನಿಂದ ಕಟ್ಟಿ ಕೊಟ್ಟು ಮರೆಯಾಗಿ ಬಿಡುತ್ತಾರೆ. ಯಾಕೆ ಹೀಗೆ ಗೆಳತಿ? ಯಾಕೆ ಹೀಗೆ? ಹೌದು ನನ್ನ ಕೊರೆತ ಹಾಗೂ ನನ್ನ ಅತಿಯಾದ ಕಾಳಜಿಯ ಸಲಹೆಗಳು ಯಾವತ್ತು ನಿನಗೆ ಸಹಿಸಲಾಗದ್ದು ಅನ್ನಿಸಲಿಲ್ಲವೇ? ಹಾಗೇನಾದರು ಅನ್ನಿಸಿದರೆ ಖಂಡಿತ ಹೇಳು ನಾನು ನನ್ನನ್ನ ಸರಿ ಮಾಡಿಕೊಳ್ಳುವೆ ವಿನಹಃ ನಿನ್ನನ್ನು ಕಳೆದುಕೊಂಡು ಬದುಕುವ ಶಕ್ತಿ ನನಗಿಲ್ಲ ಗೆಳತಿ. 
ಹುಂ ಹೋಗಲಿ ಬಿಡು.. ಊರಿನಲ್ಲಿ ಚಳಿಗಾಲ ಜೋರ? ಬೆಟ್ಟದ ನೆಲ್ಲಿಕಾಯಿ ಎಷ್ಟು ತಿಂದೆ? ಪ್ಲೀಸ್ ಕಣೆ ನಿನ್ನ ಮುದ್ದಾದ ಪತ್ರದೊಂದಿಗೆ ನನಗು ಸ್ವಲ್ಪ ನೆಲ್ಲಿಕಾಯಿ ಕಳಿಸಿಕೊಡುವೆಯ? 
ನಿನ್ನ ಮುದ್ದಾದ ಪತ್ರ ಹಾಗೂ ಬೆಟ್ಟದ ನೆಲ್ಲಿಕಾಯಿಯ ನೀರಿಕ್ಷೆಯಲ್ಲಿ 

ಇಂತಿ ನಿನ್ನ ಹವಿ ಹುಡುಗ