ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Wednesday, November 23, 2011

ಅಪಾರ್ಥರಿಗೆ ಸಲಹೆ ನೀಡುವುದು ನಮಗೆ ನಾವು ಮಾಡಿ ಕೊಳ್ಳುವ ಮೋಸ !!!!

ಹಾಯ್ ನನ್ನ ಉಸಿರೇ,
                          ಹೇಗಿದ್ದೀಯ? ಮನೆಯಲ್ಲಿ ಎಲ್ಲಾ ಕ್ಷೇಮವೇ? ಹೇಗೆ ನಡೆಯುತ್ತಿದೆ ನಿನ್ನ ಓದು? ನಾ ಬರೆದ ಪತ್ರಕ್ಕಾಗಿ ಕಳೆದ ಬಾರಿ ತುಂಬಾ ಕಾದು ಕಾದು ಬೇಜಾರಾಗಿದ್ದೆ ಎಂದು ಹೇಳಿದೆಯಲ್ಲ. ನನ್ನ ಚಿನ್ನು ಅದಕ್ಕಾಗಿ ಈ ಪತ್ರ ನಿನ್ನ ಪತ್ರ ಬಂದ ದಿನವೇ ಬರೆಯುತ್ತಿದ್ದೇನೆ. ಆದರು ಒಂದು ಮಾತು ಕೇಳಲೇನು? ನಿಜ ಹೇಳು ಅಂಥ ಕಾಯುವಿಕೆಯಲ್ಲಿ ಎಂತ ಸುಖವಿದೆಯಲ್ಲವ? ಕಾಯುವಿಕೆಯು ಸುಖಾಂತ್ಯವಾದಾಗ ಸಿಗುವ ಖುಷಿಯನ್ನ ವರ್ಣಿಸಲು ಸಾಧ್ಯವೇನೆ? ಅದೊಂಥರ ಮುಂಗಾರು ಮಳೆಗಾಗಿ ಹಂಬಲಿಸಿದ ಇಳೆಯು ಅದರ ಆಗಮನದ ಕುಷಿಯನ್ನ ಅಪರೂಪದ ಸುವಾಸನೆಯನ್ನ ಹೊರ ಬಿಡುವ ಮೂಲಕ ಹೊರ ಸುಸುತ್ತಲ್ಲ.. ಅಂತೆಯೇ ಅಲ್ಲವೇನು. ಆ ಅನುಭೂತಿ ನನ್ನಿಂದ ನಿನಗೆ ಸಿಕ್ಕಿದೆ ಎಂದೆ ನನ್ನ ಭಾವನೆ.
ಗುಬ್ಬಿ, ಮತ್ತೇನ್ ಸಮಾಚಾರ?? "ಹುಂ ಅಪರೂಪಕ್ಕೆ ಒಂದು ಪತ್ರ ಬರೆದು ಬಿಟ್ಟು ಏನೆಲ್ಲಾ ಗುಲಾಬಿ ಹೂ ಕಿವಿಗೆ ಇಡುತ್ತಿದ್ದಿಯಾ? ಕೈ ಗೆ ಸಿಗು ಮಾಡಿಸುತ್ತಿನಿ" ಅಂತ ಮನಸಲ್ಲೇ ಶಾಪ ಹಾಕ್ತಾಇದ್ದೀಯ? ಕ್ಷಮೆ ಇರಲಿ ಗೆಳತಿ. ನೀನೆ ಮುನಿದರೆ ನನ್ನ ಕೊರೆತ ಕೇಳುವವರಾರು?? 
ಹೇ ಮುದ್ದು, ನೀ "ಲೋಕಪಾಲ್ ಮಸೂದೆಯ ಬಗ್ಗೆ ಹೇಳಿದ್ದ ಮಾತು ಸುಳ್ಳಾಯಿತು" ಅಲ್ಲವ.. ಇಲ್ಲ ಸುಮ್ಮನೆ ಹೇಳಿದೆ. ಖಂಡಿತ ಲೋಕಪಾಲ್ ಮಸೂದೆ ಬಂದೆ ಬರುತ್ತದೆ, ಆದರೆ ಅಣ್ಣಾ ಹಜಾರೆ ಹೇಳಿದಂತ ಹಾಗೂ  ನಾವೆಲ್ಲಾ ಬಯಸಿದಂತ ಲೋಕಪಾಲ್ ಮಸೂದೆ ಖಂಡಿತ ಬರಲಾರದು. ನಮ್ಮ ಆಡಳಿತಗಾರರು, ಬ್ರಿಟಿಷರಿಂದ ಕಲಿತ ಒಡೆದು ಆಳುವ ನೀತಿಯನ್ನ ಅವರಿಗೆ ಹೇಳಿಕೊಡುವಷ್ಟು ಪರಿಣಿತರಾಗಿದ್ದಾರೆ, ಯಾವ ಯಾವ ಕ್ರಾಂತಿಯನ್ನ ಯಾವ ಯಾವ ಹಂತದಲ್ಲಿ ಮತ್ತ ಹಾಕಬೇಕು ಅನ್ನೋದು ಜ್ಯಾತ್ಯಾತೀತ ರಾಷ್ಟ್ರದಲ್ಲಿ ಜಾತಿಯ ಆಧಾರದ ಮೇಲೆ ಮತ ವಿಂಗಡಿಸಿ ರಾಜ್ಯಬಾರ ಮಾಡುವ ನಮ್ಮವರಿಗೆ ಅಣ್ಣನವರ ಕ್ರಾಂತಿ ಒಂದು ಲೆಕ್ಕವೇನು? ಆದರೂ ಅಣ್ಣ ನವರ ಆಲೋಚನೆ & ಸಲಹೆ ಎಲ್ಲವು ಸರಿಯಾದುದ್ದೆ ಆದರೂ ಅದನ್ನ ಕೇಳುವವರಾರು? ನಿನಗೆ ಅದನ್ನ ಹತ್ತಿಕ್ಕುವಲ್ಲಿಯ ಮೊದಲ ಹಂತ ಈಗಾಗಲೇ ಅರಿವಿಗೆ ಬಂದಿರಬಹುದು, ಅಣ್ಣಾ ಬನದಲ್ಲೇ ಭಿನ್ನಾಭಿಪ್ರಾಯದ ಬೀಜ ಬಿತ್ತಿ, ಮೊಳಕೆ ಒಡೆಸಿಯು ಆಗಿದೆ. ಇನ್ನೂ ಆ ಕ್ರಾಂತಿಯನ್ನ ಬಾಳು ಬೇಗ ಮರೆಸಿಬಿಡುತ್ತಾರೆ.  ಇನ್ನು ನಮ್ಮಂತ ಸಾಮಾನ್ಯ ಜನರಿಗೆ ಇನ್ನೂ ಒಂದು ಸ್ವಲ್ಪ್ ದಿನಕ್ಕೆ ಹೀಗೊಂದು ಕ್ರಾಂತಿ ನಡೆದಿತ್ತು ಅನ್ನೋದು ನೆನಪಿರುವುದು ಕಷ್ಟ. ಹಾಗೇನಾದ್ರೂ ಅದು ನೆನಪಿನಲ್ಲಿ ಉಳಿಯುವುದಾದರೆ  ಅದೊಂದು ಸರಕಾರೀ ರಜಾ ದಿನವಾಗಿ, ಗಣ್ಯ ವ್ಯಕ್ತಿಗಳ ಭಾಷಣದ ವಸ್ತುವಾಗಿ ಮಾರ್ಪಡಾದಾಗ ಮಾತ್ರ.  ಹೋಗಲಿ ಬಿಡು ಹಾಳು ರಾಜಕೀಯದ ವಿಷ್ಯ ನಮಗ್ಯಾಕೆ!! 
ಹುಂ ದೀಪಾವಳಿ ಚನ್ನಾಗಿ ಆಯ್ತಾ? ಈ ಸಲ ನಿಮ್ಮ ಮನೆಯ ಗೌರಿ ಗೆ ಹುಟ್ಟಿದ್ದ ಲಕ್ಷ್ಮಿ ಎಂಬ ಹೆಣ್ಣು ಕರುವಿಗೆ ತುಂಬಾನೇ ಚನ್ನಾಗಿ ಸಿಂಗಾರ ಮಾಡಿರಬೇಕಲ್ಲ? ಫೋಟೋ ಏನಾದ್ರೂ ತೆಗೆದಿದ್ದರೆ ನನಗೆ ಮೇಲ್ ಮಾಡು ಪ್ಲೀಸ್. ಹಬ್ಬದ ಹೋಳಿಗೆಯಲ್ಲ ಖರ್ಚಾಯಿತಾ?
ಹುಂ ನಿನಗೊಂದು ಮಾತು ಹೇಳಬೇಕು, ನಾನು ಈ ಕೆಲವು ದಿನದಲ್ಲಿ ಜೀವನದಲ್ಲಿ ಒಂದು ಬಹುಮೂಲ್ಯ ಪಾಠ ಕಲಿತೆ. ಇದೇನಪ್ಪ ಅಂತ ಯೋಚಿಸ್ತಿದಿಯ?  ಅಲ್ಲಾ ಚಿನ್ನು, ನಿನಗೆ ಹೇಳಿದ್ದೆ ಅಲ್ಲವ ನನಗೊಬ್ಬಳು ಗೆಳತಿ ಸಿಕ್ಕಿರುವಲೆಂದು, ಅವಳು ನಿನ್ನಂತೆ ಮುಗ್ಧೆ ಅಂದು ಕೊಂಡು ನಿನಗೆ ತಲೆ ತಿಂದಷ್ಟು ಅವಳ ತಲೆ ತಿನ್ನದಿದ್ದರು, ಅವಳು ಮಾಡುತ್ತಿರುವುದು ತಪ್ಪು ಅನ್ನಿಸಿದಾಗಲೆಲ್ಲ ತಿದ್ದುತಿದ್ದೆ. ಆದರೆ ಅದೇ ನಾ ಮಾಡಿದ ತಪ್ಪು!! ಅವಳು ನನಗೆ ಗೊತ್ತಾಗದಂತೆ ಇರಲು ಆರಂಭಿಸಿದಾಗ, ನಾನಾಗೆ ಕೇಳಿದರು ನಯವಾದ ಸುಳ್ಳು ಹೇಳಿ ತಾನು ತಪ್ಪು ಮಾಡಿಲ್ಲ ಎಂದು ನಂಬಿಸಿದಳು. ಮನುಷ್ಯನ ನಡುವಿನ ಸಂಭಂದಗಳು ನಂಬಿಕೆಯ ಸೌಧದ ಮೇಲೆ ನಿರ್ಮಿತವಾಗಿ ಗಟ್ಟಿಯಾಗುವುದು ಅಲ್ಲವೇನು? ಸುಳ್ಳಿನ ಮಹಲು ಅದೆಷ್ಟೇ ಸುಂದರ ಅನಿಸಿದರು, ಸತ್ಯದ ಸುಂದರ ಗಾಳಿಯ ಹೊಡೆತಕ್ಕೆ ಅದು ಬುಡ ಮೇಲಾಗದೆ ಇರುವುದೇನು? ಅಂತೆಯೇ ಅವಳು ಹೇಳಿದ್ದು ಎಂದು ಗೊತ್ತಾದಾಗ ತುಂಬಾ ಬೇಸರ ಆಯಿತು.. ನಿನ್ನಂತೆ ಅವಳೆಂದು ತಿಳಿದು ಹೃದಯಪೂರ್ವಕವಾಗಿ ಸಲಹೆಗಳನ್ನ ನೀಡಿದ್ದೆ.  ನಾವೆಂದಾದರೂ ಪರಸ್ಪರ ಸುಳ್ಳಿನ ಸೌದವನ್ನ ಕಟ್ಟಿಕೊಳ್ಳಲು ಬಯಸಿದ್ದೆವ? ಆ ರೀತಿಯ ಸೌಧ ನಮ್ಮ ನಡುವೆ ಇಲ್ಲದಿರುವದರಿಂದ ತಾನೇ ನಮ್ಮಿಬ್ಬರ ನಡುವಿನ ಈ ಸುಮಧುರ ಸಂಬಂಧ ಇಷ್ಟು ಧೀರ್ಘ ಕಾಲ ಉಳಿದಿರುವುದು, ಗೆಳತಿ ಇದುವರೆಗೂ ನಾವು ಮುಖತಃ ಮಾತುಗಳನ್ನಾಡಿ ಕೊಳ್ಳದಿದ್ದರು. ನಮ್ಮಿಬ್ಬರ ನಾಡಿ ಮೀಡಿತ ಪರಸ್ಪರರಿಗೂ ಗೊತ್ತು ಅಲ್ಲವೇ? ನೀನು ನನಗೆ ಬೈಯುವ ಮೊದಲೇ ನಾನೇ ಒಪ್ಪಿಕೊಳ್ಳುವೆ ಕೆಂಬುತವನ್ನ ನವಿಲೆಂದು ತಿಳಿದು ಅದು ನಾಟ್ಯ ಮಾಡಲೆಂದು ಬಯಸಿದ್ದು ನನ್ನದೇ ತಪ್ಪು. ಹಾಗೆ ಬಯಸುವುದು ಮೂರ್ಖತನದ ಪರಮಾವದಿ ಅಲ್ಲದೆ ಮತ್ತೇನು? ನಾ ಅಣ್ಣಾರವರ ಕ್ರಾಂತಿಯ ಚಳುವಳಿಯಿಂದ ಹಾಗೂ ಈ ನನ್ನ ಗೆಳತಿ ಮಾಡಿದ ಮೋಸದಿಂದ ಕಲಿತ ಪಾಠವೆಂದರೆ ಅಪಾರ್ಥರಿಗೆ ದಾನವೊಂದೆ ಅಲ್ಲಾ ಹೃದಯಪೂರ್ವಕವಾಗಿ ಸಲಹೆಯನ್ನು ನೀಡುವುದು ಕೂಡ ನಮಗೆ ನಾವೇ ಮಾಡಿಕೊಳ್ಳುವ ಮೋಸ. ಸರಿ ತಾನೇ? ಅದಕ್ಕಾಗಿ ತುಂಬಾ ಪಶ್ಚಾತಾಪ ಪಟ್ಟಿದ್ದೇನೆ. ನಾ ಮಾಡಿದ ತಪ್ಪಿಗಾಗಿ ನಾ ನನ್ನನ್ನೇ ಹಳಿದುಕೊಂಡು ಅತ್ತೆ. ನನ್ನ ತಪ್ಪನ್ನು ಮನ್ನಿಸು. ನನಗೆ ಅರ್ಥ ಆಗುತ್ತಿಲ್ಲ ಗೆಳತಿ ನಿನಗೆ ತೋರಿಸಿದಷ್ಟೇ ಕಾಳಜಿಯನ್ನ ನನ್ನ ಅತ್ಮಿಯರಿಗೆಲ್ಲರಿಗೂ ತೋರಿಸುತ್ತೇನೆ.ಆದರೆ ಅವರಲ್ಲಿ ಕೆಲವರು ಅದನ್ನ ಸಹಿಸಲಾರದೆ, ಜೀವನದಲ್ಲಿ ಮರೆಯಲಾಗದ ಸವಿ ನೆನಪಿನ ಬುಟ್ಟಿಯ ಗಂಟನ್ನು ಕೊಟ್ಟು ಅದನ್ನ ಕಹಿ ನೆನಪೆಂಬ ಗಂಟಿನಿಂದ ಕಟ್ಟಿ ಕೊಟ್ಟು ಮರೆಯಾಗಿ ಬಿಡುತ್ತಾರೆ. ಯಾಕೆ ಹೀಗೆ ಗೆಳತಿ? ಯಾಕೆ ಹೀಗೆ? ಹೌದು ನನ್ನ ಕೊರೆತ ಹಾಗೂ ನನ್ನ ಅತಿಯಾದ ಕಾಳಜಿಯ ಸಲಹೆಗಳು ಯಾವತ್ತು ನಿನಗೆ ಸಹಿಸಲಾಗದ್ದು ಅನ್ನಿಸಲಿಲ್ಲವೇ? ಹಾಗೇನಾದರು ಅನ್ನಿಸಿದರೆ ಖಂಡಿತ ಹೇಳು ನಾನು ನನ್ನನ್ನ ಸರಿ ಮಾಡಿಕೊಳ್ಳುವೆ ವಿನಹಃ ನಿನ್ನನ್ನು ಕಳೆದುಕೊಂಡು ಬದುಕುವ ಶಕ್ತಿ ನನಗಿಲ್ಲ ಗೆಳತಿ. 
ಹುಂ ಹೋಗಲಿ ಬಿಡು.. ಊರಿನಲ್ಲಿ ಚಳಿಗಾಲ ಜೋರ? ಬೆಟ್ಟದ ನೆಲ್ಲಿಕಾಯಿ ಎಷ್ಟು ತಿಂದೆ? ಪ್ಲೀಸ್ ಕಣೆ ನಿನ್ನ ಮುದ್ದಾದ ಪತ್ರದೊಂದಿಗೆ ನನಗು ಸ್ವಲ್ಪ ನೆಲ್ಲಿಕಾಯಿ ಕಳಿಸಿಕೊಡುವೆಯ? 
ನಿನ್ನ ಮುದ್ದಾದ ಪತ್ರ ಹಾಗೂ ಬೆಟ್ಟದ ನೆಲ್ಲಿಕಾಯಿಯ ನೀರಿಕ್ಷೆಯಲ್ಲಿ 

ಇಂತಿ ನಿನ್ನ ಹವಿ ಹುಡುಗ


Saturday, August 13, 2011

ಪ್ರೀತಿಯ ಹುಡುಗಿಗೊಂದು ಪತ್ರ.

ಪ್ರೀತಿಯ ಗೆಳತಿ,
                     ಹೇಗಿದ್ದೀಯ? ನೀ ಕಳಿಸಿದ ಎಲ್ಲಾ ಪತ್ರಗಳನ್ನ ಓದಿ ಮುಗಿಸಲು ಸಮಯವೇ ಇರಲಿಲ್ಲ, ಅದಕ್ಕಾಗಿ ಈ ಪತ್ರ ಬರೆಯಲು ತುಂಬಾ ದಿನಾ ಆಯ್ತು. ನೀನು ಕ್ಷೇಮವಾಗಿರುವೆ ಎಂದು, ನನ್ನ ನೆನಪು ಸದಾ ಕಾಡುತ್ತಿದೆ ಎಂದು ಬರೆದ ನಿನ್ನ ಮುದ್ದಾದ ಪತ್ರ ನೋಡಿ ತಕ್ಷಣ ನೀ ಇರುವಲ್ಲಿಗೆ ಓಡಿ ಬರಬೇಕು ಅನ್ನಿಸಿತು. ಹುಂ ಇದೆಲ್ಲ ಬರಿ ಬೊಗಳೆ ಎಂದು ನೀನು ಕೋಪಿಸಿ ಕೊಂಡಿರುವೆ ಎಂದು ಅನ್ನಿಸುತ್ತಿದೆ. ಆ ಕೋಪದ ಬೇಗೇ ನನ್ನ ಮನಸಿಗೂ ತಟ್ಟಿ ಮಳೆಗಾಲದ ಈ ಚಳಿಯಲ್ಲೂ ಬೆವರುವಂತಾಗಿದೆ. ಅದಕ್ಕಾಗೆ ಈ ಲೇಖನ. ಮೊದಲೇ ಕ್ಷಮೆ ಕೋರುವೆ ಚಿನ್ನು. I Miss You a Lot . ನಿನ್ನ ನೆನಪಾಗದ ದಿನಗಳಿಲ್ಲ ಚಿನ್ನು. ಅದರೇನು ಮಾಡೋಣ ಹೇಳು ನಾನು ಇಲ್ಲಿ. ನೀ ಅಲ್ಲಿ.
 ಹೇಯ್ ನಮಗಿಬ್ಬರಿಗೂ ಈ ತಿಂಗಳು ಎಷ್ಟು ಇಷ್ಟ ಅಲ್ಲವೇ. ಎಲ್ಲೇಲ್ಲೂ   ನಮ್ಮ ನೆಚ್ಚಿನ ಹಸಿರಿನ ಬಣ್ಣದಿಂದ ಕಂಗೊಳಿಸುವ ಈ ಅಗಸ್ಟ್ ತಿಂಗಳ ಅದೇನೋ ಎಲ್ಲಾ ಬಗೆಯ ಜನರಿಗೂ ಇಷ್ಟವಾಗುವ ತಿಂಗಳು ಅಲ್ಲವೇನು. ಭಾರತೀಯನಾದ ನನಗಂತೂ, ಈ ತಿಂಗಳು ಇಷ್ಟವಾಗಲು ತುಂಬಾನೇ ಕಾರಣವಿದೆ. ಅದರಲ್ಲಿ ಬಹು ಮುಖ್ಯ ಕಾರಣ ನೀನು.

ಇನ್ನುಳಿದ ಕಾರಣ ಹೇಳಬೇಕೆಂದರೆ ಸಾಮಾಜಿಕವಾಗಿ ಎಲ್ಲೇಲ್ಲೂ ಸುಂದರ ಹಸಿರಿನ ತೋರಣ ಭೂ ಮಾತೆಯನ್ನ ಸಿಂಗರಿಸುವ ಕಾಲವಿದು. ನಮ್ಮೂರಿನ ತೋಟ ಹೊಲ ಗದ್ದೆಗಳೆಲ್ಲ ಹಸಿರಿನ ಸೀರೆಯನ್ನುಟ್ಟು ವೈಯಾರದಿಂದ ನಾಚುತ್ತಿರುತ್ತವೆ. ಇನ್ನೂ ನಮ್ಮೂರಿನ ಜನರೆಲ್ಲಾ ಮೈ ಕೆಸಾರಗಿಸಿ ಕೊಂಡು ಧೋ ಎಂದು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಕೈ ತುತ್ತಿಗಾಗಿ ಸೂರ್ಯ ತನ್ನ ಕೆಲಸ ಮುಗಿಸಿ ಪಡುವಣದಿ ಮರೆಯಾಗುವವರೆಗೂ ದುಡಿದು, ದಣಿದು. ಮನೆ ಸೇರುವ ಆ ಸೊಬಗನ್ನ ನೆನೆದರೆ ಮೈ ಪುಳಕಿಸುತ್ತದೆ.
ಧಾರ್ಮಿಕವಾಗಿ ಅಂತು ತುಂಬಾ ಸಡಗರದ ತಿಂಗಳು ಈ ಅಗಸ್ಟ್. ಅಷ್ಟೇ ಆಷಾಡದ  ತಿಂಗಳ
ಮೈಲಿಗೆಯನ್ನ ತೊಳೆದು ಕೊಂಡು ಶ್ರಾವಣದ ಸಡಗರ ಆರಂಭ ಆಗಿರುತ್ತದೆ. ಅಂದರೇ ಎಲ್ಲಾ ದೇವಾಲಯಗಳು ಶ್ರಾವಣದ ದಿನ ನಿತ್ಯ ನೂತನವಾಗಿ ಭಕ್ತಾದಿಗಳ ಆಗರವಾಗಿ ಕಾಣಿಸಲು ಆರಂಭಿಸುತ್ತವೆ. ಆದರಲ್ಲೂ ಹಿಂದೂಗಳ ಹಬ್ಬಗಳ ಸಾಲು ಸಾಲು ಈ ತಿಂಗಳಿನಲ್ಲೇ ಆರಂಭ ಆಗುವುದು ಅಳಿಯನ ಅಮಾವಾಸ್ಯೆ , ರಕ್ಷಾ ಬಂಧನ , ವರ ಮಹಾಲಕ್ಷ್ಮಿ ಹಬ್ಬ. ಶ್ರಾವಣ ಮಾಸದ ಪ್ರತಿ ದಿನವು ಒಂದೊಂದು ದೇವರಿಗೆ ವಿಶೇಷ ದಿನ ಅಂದ ಮೇಲೆ ನಿಮಗೆ ಇನ್ನೇನು ಹೇಳುವುದು ಧಾರ್ಮಿಕವಾಗಿ ತುಂಬಾ ಸಡಗರದ ಮಾಸ ಈ ತಿಂಗಳು. ಹೌದು ಈ ಸಲ friendship day ಗೆ ನೀನು ಕಳಿಸಿದ ಉಡುಗೊರೆ ಬಂದಿದೆ. ನಾನು ಕಳಿಸಿದ್ದು ಬಂದಿದೆಯೇನು ಗೆಳತಿ? ಮತ್ತೊಂದು ವಿಷಯ ಹೇಳಲೇ ಬೇಕು ಎಲ್ಲಾ ಸಹೋದರ ಸಹೋದರಿಯರಿಗೂ ಸಂಭ್ರಮದ ಆಚರಣೆಯಾದ ರಕ್ಷಾ ಬಂಧನದ ಹಬ್ಬ ಇದೆ ತಿಂಗಳಲ್ಲವೇ? ಹೇ ಕೋತಿ, ನಿನ್ನ ಅಂತ ಹುಡುಗಿಯರಿಗಂತೂ ಬಿಡು ಇದು ಸಕಾಲ. ಕೆಲವು ತಿಂಗಳಿಂದ ಹಿಂದೆ ಬಿದ್ದಿರಬಹುದಾದ ನಿಮ್ಮ ಪ್ರೇಮಿಗಳಿಗೆ  ಕ್ಷಣಾರ್ಧದಲ್ಲಿ ಸಹೋದರ ಪಟ್ಟ ದಯಾ ಪಾಲಿಸಿ ಬಿಡುವಿರಿ. ನನಗೆ ಒಂದು ಅರ್ಥವಾಗಿಲ್ಲ ನಿನ್ನೆ ಮೊನ್ನೆವರೆಗೂ ಪ್ರೀತಿಸುವೆ ಎಂದವನಿಗೆ ಸಹೋದರ ಸ್ಥಾನವನ್ನ ನೀವೇನೋ ಕೊಡುವಿರಿ ಯಾಕೆಂದರೆ ನೀವು ಆ ಭಾವನೆಯನ್ನ ಹೊಂದಿರದೆ ಇರುವದರಿಂದ. ಆದರೆ ಪಾಪದ ಹುಡುಗನ ಭಾವನೆಗೆ ಬೆಲೆ ಎಲ್ಲಿ? ರಕ್ಷಾ ಬಂಧನ ಕಟ್ಟಿದ ಮಾತ್ರಕ್ಕೆ ಅವನ ಭಾವನೆ ಬದಲಾಯಿಸಿಕೊಳ್ಳುವುದು ಎಷ್ಟು ಕಷ್ಟ ಅಲ್ಲವೇ? ಸದ್ಯ ನಿನಗೊಂದು ತುಂಬು ಹೃದಯದ ಧನ್ಯವಾದ, ನೀನು ಇತರರಿಗೆ ರಕ್ಷಾ ಬಂಧನದಲ್ಲಿ ಬಿಳಿಸಿದಂತೆ ನನ್ನನ್ನು ಬಿಳಿಸದೆ ಇರುವುದಕ್ಕೆ. ಹೌದು ಈ ಸಲ ರಕ್ಷಾ ಬಂಧನದಲ್ಲಿ ಎಷ್ಟು ಉಡುಗೊರೆ ಸ್ವೀಕರಿಸಿದೆ? ಹಾಗೂ ಇನ್ನೆಷ್ಟು ಹುಡುಗರಿಗೆ ಸಹೋದರ ಸ್ಥಾನ ದಯಾ ಪಾಲಿಸಿದೆ?

ಇನ್ನೂ ರಾಜಕೀಯವಾಗಿ ಹೇಳುವುದಾದರೆ ಈ ತಿಂಗಳು ಪ್ರತಿಯೊಬ್ಬ ಭಾರತೀಯನು ಒಂದಿಲ್ಲೊಂದು ರೀತಿಯಲ್ಲಿ ದೇಶಾಭಿಮಾನ ತೋರುವ ದಿನಗಳು. ನಮ್ಮ ಪವಿತ್ರ ಭಾರತ ಭೂಮಿ ಬ್ರಿಟಿಷರ ದಾಸ್ಯತ್ವದಿಂದ ಮುಕ್ತಿ ಪಡೆದ ದಿನ ಬರುವುದು ಇದೆ ತಿಂಗಳಲ್ಲವೇ  ( ಅಗಸ್ಟ್ ೧೫. ) ನಮ್ಮ ದೇಶದ ಬಂಧ ಮುಕ್ತಿಗಾಗಿ ತಮ್ಮ ಬದುಕನ್ನ ಬಲಿದಾನ ಮಾಡಿದ ಅದೆಷ್ಟೋ ಅಸಂಖ್ಯಾತ ಪುಣ್ಯಾತ್ಮರನ್ನ ಭಾಷಣಗಳ ಮೂಲಕ ನಮ್ಮ ನಾಡಿನ ಗಣ್ಯ ವ್ಯಕ್ತಿಗಳು ನೆನೆಸಿಕೊಳ್ಳುವುದು ಹಾಗೂ ನಮ್ಮ ಅಂತ ಶ್ರೀಸಾಮಾನ್ಯರು ಮನಸಲ್ಲೇ ವಂದನೆ ಅರ್ಪಿಸುವುದಕ್ಕೆ ಇರುವ ಪುಣ್ಯ ದಿನ ಇದೆ ತಿಂಗಳ ೧೫. ಹಲವು ಬಾರಿ ಈ ತಿಂ
ಗಳು ಬಂದಾಗಲೆಲ್ಲ ನನಗೆ ಅನಿಸಿದೆ. ಅಲ್ಲಾ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಆ ಮಹನಿಯರ ಮಹತ್ತಾದ ಉದ್ದೇಶ ಇಂದು ಇಡೆರಿದೆಯೇ ಎಂದು? ಅವರೇನಾದರೂ ಇಂತ ರಾಜಕೀಯ ಆಡಳಿತವನ್ನ ಬಯಸಿದ್ದರೇನು? ಅಂತ ಮಹನೀಯರು ಏನಾದರು ಬ್ರಷ್ಟಾಚಾರ ತುಂಬಿದ ಆಡಳಿತ ವ್ಯವಸ್ಥೆಯನ್ನ ಕಂಡಿದ್ದರೆ ಏನು ಅಂದು ಕೊಲ್ಲುತಿದ್ದಿರ ಬಹುದು? ಬಹುಷಃ ಅವರೆಲ್ಲ ತಾವೇಕೆ ಇಷ್ಟೆಲ್ಲಾ ಹೊರಾಡಿದೆವು? ನೇಣಿಗೆ ಕೊರಳನ್ನ ಒಡ್ಡಿದೆವು? ಇದು ಈ ರೀತಿ ಆಗುತ್ತೆ ಅಂತ ಗೊತ್ತಿದ್ದರೆ ನಾವು ನಮ್ಮ ಸ್ವಾರ್ಥವನ್ನ ಬಯಸಿಕೊಂಡು ಬಾಳನ್ನ ಬದುಕುತ್ತಿದ್ದೆವಲ್ಲ ಎಂದು ಶೋಕಿತರಾದರೆ ಆಶ್ಚರ್ಯವಿಲ್ಲ ಅಲ್ಲವೇ? ಅದೇನೇ ಇರಲಿ ಈ ಸಲವೂ ಮತ್ತೆ ಬಂದಿದೆ ಅಗಸ್ಟ್ ೧೫ ಬನ್ನಿ ನಮಿಸೋಣ ಭಾರತ ಮಾತೆಯ ಹೆಮ್ಮೆಯ ಕುವರರಿಗೆ. ಹುತಾತ್ಮರಿಗೆ. ಹುಂ ಅಲ್ಲೆಲ್ಲೋ ಭಾರತ ಮಾತಾಕಿ ಜೈ ಎಂಬ ಘೋಷ ಕೇಳಿಸಲು ಶುರು ಆಗಿದೆ ಅಂದರೇ ಅರ್ಥವಾಯಿತಲ್ಲ ಗೆಳತಿ.
ಇದಕ್ಕೆಲ್ಲ ನಿನ್ನ ಬಳಿ ಸಮಂಜಸ ಉತ್ತರ ಇಹುದೆಂದು ಅಂದುಕೊಂಡಿರುವೆ ಒಹ್ ಸುವಿಚರಿಣಿ, ಈ ನನ್ನ ಗೊಂದಲವನ್ನ ಮುಂದಿನ ಪತ್ರದಲ್ಲಿ ನಿವಾರಿಸು. ಹುಂ ಭಾರತ ಮಾತೆಯ ಹೆಮ್ಮೆಯ ಪುತ್ರಿಯೇ ನಿನಗಿದೆ ಹುಟ್ಟು ಹಬ್ಬದ ಶುಭಾಶಯಗಳು. ನೀನು ನೂರುಕಾಲ ನನಗಾಗಿ ನಗು ನಗುತ ಸುಂದರ ಬಾಳನ್ನು ಬದುಕು. ಎಂದು ಈ ಪುಟ್ಟ ಹೃದಯ ಮಿಡಿಯುತ್ತಿದೆ. ಇದರೊಟ್ಟಿಗೆ ಒಂದು ಪುಟ್ಟ ಉಡುಗೊರೆ ಕಳಿಸಿರುವೆ. ಮರೆಯದೆ ಸ್ವೀಕರಿಸು.  ನಿನ್ನ ಕಾಣ ಬೇಕೆಂಬ ಹಂಬಲ ನನಗಾಗುತ್ತಿದೆ. ಖಂಡಿತ ಈ ಭಾದ್ರಪದ ಶುಕ್ಲದ ಚೌತಿಯ ದಿನದಂದು ನಾನು ಊರಿಗೆ ಬರುವೆ. ನಿನ್ನ ಕೈ ಹಿಡಿದು ನಮ್ಮ ಡೊಳ್ಳು ಹೊಟ್ಟೆಯ  ಗಣಪತಿ ಯನ್ನ ನೋಡಲು ಹೋಗೋಣ. ಏನು? ಸರಿನಾ? ತುಂಬಾ ಕನಸು ಕಾಣದಿರು ಅನ್ನುತ್ತಿರುವೆಯ? ನನಸಾಗಿಸಿಕೊಳ್ಳುವೆ. ನಿನಿರುವಾಗ ನನಗೇಕೆ ಚಿಂತೆ. ನಿನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸು. ಹುಂ ನಮ್ಮ ಮನೆ ಕಡೆಗೂ ಹೊಗುತ್ತಿರು. ಈ ಸಲ ಚಕ್ಕಲಿ ನನಗಾಗಿ ಸ್ವಲ್ಪ್ ಜಾಸ್ತಿ ಮಾಡಲು ನಿಮ್ಮ ಅಮ್ಮನಿಗೆ ತಿಳಿಸು.

ಇಂತಿ ನಿನ್ನ ಹವಿ ಹುಡುಗ.
ಕಮಲು.

Thursday, July 28, 2011

ಎಲ್ಲಾ ವಿದ್ಯೆಗಿಂತ ಬದಕುವ ಕಲೆ ಮೇಲು..
"ತರುಣ್.. ಇಲ್ಲಿ ನೋಡೋ.. ಇಲ್ಲಿ ಯಾರೋ.. ಹುಡುಗ.. ತಾನು ರಾಂಕ್ ಬಂದಿಲ್ಲ ಅಂತ ಆತ್ಮಹತ್ಯೆ ಮಾಡ್ಕೊಂದಿದಾನಂತೆ ಕಣೋ ಪಾಪ ಅಲ್ವ???" ಅಂತ ತರುಣನ ಅಮ್ಮ ಟಿ ವಿ ನೋಡ್ತಾನೆ  ಕೂಗಿದಾಗ, facebook ನಲ್ಲಿ ಮೊರೆ ಹುದುಗಿಸಿಕೊಂಡಿದ್ದ ತರುಣ್ ಆ ಲೋಕದಿಂದ ಹೊರ ಬಂದು ಅಮ್ಮನ ಮಾತನ್ನ ಕೇಳಿದ.
ಅದನ್ನ ಕೇಳಿದ ತಕ್ಷಣ  " ಅಮ್ಮ ,ಯಾರಮ್ಮ ಪಾಪ ಬದುಕಲಿಕ್ಕೆ ಹೆದರಿ.. ಸಾವಿಗೆ ಶರಣಾದವನೋ ಅಥವಾ ಅವನಿಗೆ ರಾಂಕ್ ನೀನು ಬರಲೇ ಬೇಕು ಅಂದ್ರೇ ಮಾತ್ರ ನಿನ್ನ ಬದುಕು  ಉಜ್ವಲ ಆಗಿರುತ್ತೆ ಅನ್ನೋದನ್ನ ಚಿಕ್ಕವನಿದ್ದಗಿಂದ ತಲೇಲಿ ತುಂಬಿ.. ಬೆಳೆಸಿದರಲ್ಲ.. ಅಂತ ತಂದೆ ತಾಯಿನೋ ???" ಅಂತ ತಕ್ಷಣ ಕೇಳಿದ.. 
"ಅಂದ್ರೇ?? ನೀನು ಹೇಳೋದು ಏನೋ ಅವನ ಸಾವಿಗೆ.. ಅವರ ಅಪ್ಪ ಅಮ್ಮನೇ ಕಾರಣ ಅಂತನ?? ಯಾವ ತಂದೆ ತಾಯಿಗೆ ತಮ್ಮ ಮಗ.. ಓದಿ ಬುದ್ದಿವಂತ ಆಗಬೇಕು ಅಂತಿರಲ್ಲ ಹೇಳು?? ಹಾಗೇ ಇರೋದು ತಪ್ಪಾ??" 
"ಅಮ್ಮ ತಪ್ಪಲ್ಲ.. ಆದರೆ ತಮ್ಮ ಕನಸನ್ನ ಇದೆರ್ಸ್ಕೊಬೇಕು ಅಂತ   ಅತಿ ಆದ ಒತ್ತಡವನ್ನ ತಮ್ಮ ಮಕ್ಕಳ ಮೇಲೆ  ಹೇರೋದು ತಪ್ಪು ಅಂದೇ. " ಅಂತ ಹೇಳಿ ಅಮ್ಮನನ್ನ ಸಮಾಧಾನ ಮಾಡಿದ. ಆದರೆ ಅವನ ಯೋಚನೆ ಮಾತ್ರ ನಿಲ್ಲಲಿಲ್ಲ.
  ಅಲ್ಲಾ ಯಾಕೆ ತಾನು ರಾಂಕ್ ಬಂದಿಲ್ಲ ಅಂತ  ಪಾಸ್ ಆಗಲಿಲ್ಲ ಅಂತೆಲ್ಲ   ಸಾವಿಗೆ ಶರಣಾಗ್ತಾರೆ ?? ಅವರ ಮನಸ್ಸು ಅಷ್ಟೆಲ್ಲ ಬಾಲಿಶ ಯಾಕೆ??? ಅಲ್ಲಾ.. ಅವರಿಗೆ ಆ ರೀತಿ ಅನ್ನಿಸೋದಾದ್ರು  ಯಾಕೆ ? ಸೋಲನ್ನ ಅರಗಿಸಿ  ಗೆಲ್ಲೋ ಛಲವನ್ನ ಅವರು ಓದಿರೋ ವಿದ್ಯಾಭ್ಯಾಸದಲ್ಲಿ ಇಲ್ಲಾ ಅಂದ್ರೇ ಅಂಥ ಶಿಕ್ಷಣ  ಕಲಿಯೋದದ್ರು ಏನಕ್ಕೆ ?? ಅವರ ಬುದ್ದಿವಂತಿಕೆ ಒಂದೇ ಸೋಲಿಗೆ ನೆಲಕಚ್ಚಿತೇನು??
ನನ್ನ  ಕಣ್ಣಿಗೆ ಕಾಣೋ  ಹಾಗೇ ಹೇಳಬೇಕೆಂದರೆ  ನನ್ನ ವಯಸಿನವನೆ ಆದ ನನ್ನ ಗೆಳೆಯ ಕಿರಣ್   ಚಿಕ್ಕವನಿದ್ದಗಿಂದ  ಓದೋದ್ರಲ್ಲಿ ತುಂಬಾ ಹಿಂದೆ  ಅದೇ ವೇಳೆ ಎಲ್ಲಾ ನಮ್ಮ ಹಿರಿಯರು  ನಾನು ಬುದ್ಧಿವಂತ ಅಂತ ಅವನ ಮುಂದೇನೆ ಹೊಗೊಲೋರು. ಆಗ  ಅವನಿಗೆ ಆಗುತ್ತಿದ್ದ  ಮಾನಸಿಕ ತಳಮಳ ಇವಾಗ ನನಗೆ ಅರ್ಥ ಆಗುತ್ತಿದೆ. ಇವಾಗ ನೋಡಿ ನಾನು ಇನ್ನೂ ಜೀವನದಲ್ಲಿ  ಓದಿ  ಬದುಕಲಿಕ್ಕಾಗಿ ದೊಡ್ಡ ದೊಡ್ಡ ಕಂಪೆನಿಗಳ ಗುಲಾಮನಾದೆ.( ಕೆಲಸಗಾರನದೆ.) ಅದಕ್ಕೂ ಮೊದಲೇ ನಾನು  ಓದುತ್ತಿರುವಾಗಲೇ ಅವನು  ಅರ್ಧದಲ್ಲೇ ಶಾಲಾ ಶಿಕ್ಷಣಕ್ಕೆ  ತಿಲಾಂಜಲಿ ಹೇಳಿದ. ಆದರೆ ಹೇಡಿ ಅಂತೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ.  ಅದರ ಬದಲು ಬದಕುವ ಕಲೆ ಕಲಿತ  ನಾನು ನನ್ನ ಶಾಲಾ ವಿದ್ಯಾಭ್ಯಾಸ ಮುಗಿಸುವುದರೋಳಗೆನೆ, ಅವನು ಜೀವನದಲ್ಲಿ  ನೆಲೆ ಕಂಡು ಕೊಂಡಿದ್ದ.  ತಾನು ಯಾರಿಗೂ ಕಡಿಮೆ ಏನು ಅಲ್ಲಾ ಎಂದು ತೋರಿಸಿ ಕೊಟ್ಟ. ಆವನ ಎದುರಿಗೆ ಚಿಕ್ಕವನಾಗಿದ್ದಾಗ ಎಲ್ಲರಿಂದ ಬುದ್ಧಿವಂತ ಎಂದು ಕರೆಸಿಕೊಳ್ಳುತ್ತ.. ಸದಾ ಶಾಲಾ ವಿದ್ಯಾಭ್ಯಾಸದಲ್ಲಿ ಮುಂದಿದ್ದು  ಬದಕುವ ಕಲೆ ಕಲಿಯಲು, ಪರದಾಡುತ್ತಿದ್ದ ನನ್ನ ಅಂತವನು ತುಂಬಾ ಕುಬ್ಜ ಆಗಿ ಬಿಟ್ಟೆ. ಆದರೆ ನಾನು ಸದಾ ಅವನಿಂದ ಸ್ಪೂರ್ತಿ ಪಡೆದೆ. ನಾನು ಸೋತಾಗಳು ಅವನೇ ನನಗೆ ಸ್ಪೂರ್ತಿ ಆದ. 
ಅಂತಹ ಸ್ಪೂರ್ತಿಯ ಚಿಲುಮೆಗಳು ಇತಿಹಾಸದ ಪುಟ ಹುಡುಕಿದರೆ ಅನೇಕರು ಸಿಗುವರು,  ನಿಜ ಹೇಳ ಬೇಕೆಂದರೆ ಸೋಲನ್ನು  ಗೆಲುವನ್ನಾಗಿಸುವ 
  ಛಲವನ್ತಿಕೆಯ ಬದುಕಿನ ಕಲೆಯನ್ನ ಕಲಿತು, ಬೆಳೆಸಿಕೊಂಡು ಸೋಲಿಗೂ ಸಡ್ಡು ಹೊಡೆದು ಗೆಲುವಿನ ನಗೆ ನಕ್ಕವರೇ ನಮ್ಮ ಇತಿಹಾಸದಲ್ಲಿ ಸಾಧಕರಾಗಿ ಸದಾ ಮಿನುಗುತ್ತಿರುವರಲ್ಲವೇ? 
ಈಗ ನೀವೇ ಹೇಳಿ ರಾಂಕ್ ಬರಲಿಲ್ಲ ಎಂದೋ ತಾನು ಬಯಸಿದವರು ಸಿಗಲಿಲ್ಲ ಎಂದೋ ಆತ್ಮಹತ್ಯೆ ಮಾಡಿಕೊಳ್ಳುವವರು ನಿಜಕ್ಕೂ ಬುದ್ಧಿವಂತರೋ ?? ಅಲ್ಲಾ  ಹೇಡಿಗಳೋ  ನೀವೇ ಹೇಳಿ?? ಇಂತವರು ಸಾಯುವ ಮೊದಲು ತಮ್ಮನ್ನು ನಂಬಿರುವವರ ಬಗ್ಗೆ ಒಮ್ಮೆ ಯೋಚಿಸಬಾರದೇಕೆ? ಸೋಲನ್ನ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧನೆಯ ಸವಿಯನ್ನ ಸವಿಯಬಾರದೇಕೆ ??  ನಿಜ ಹೇಳಿ ಅಂತವರು ಸತ್ತಾಗ ಪಾಪ ಅನ್ನಬೇಕೆ ಅಥವಾ  ಹೇಡಿಗಳು ಅನ್ನಬೇಕೆ?? ಎಂದೇನೇನೋ.. ಮನಸಿನಲ್ಲೇ ಲೆಕ್ಕಾಚಾರ ಹಾಕಿ.. ಕೊನೆಗೂ.. ಅರ್ಥವಾಗದೇ ತನ್ನ ಮನದ ತುಮುಲವನ್ನ ತನ್ನ ಡೈರಿ ಅಲ್ಲಿ ಬರಹ ಆಗಿಸಲು.. ನಡೆದ..

Friday, May 27, 2011

ಬಾರ್ ಬಾರ್ ಆತಿ ಹೈ ಮುಜಕೋ.. ಮಧುರ ಯಾದ ಬಚಪನ್...............         "ಶೀಲ ಶೀಲಾ ಕಿ ಜವಾನಿ.. ಹಂ  ತೋ ಸೆಕ್ಸಿ ಫಾರ್ ಯು...." ಈ ಹಾಡಿಗೆ ಸ್ಟೆಪ್ ಹಾಕ್ತಿದ್ದ.. ಸಣ್ಣ ಮಗುವನ್ನ ನೋಡಿದ  ತರುಣ್ ನ ಮನಸು.. ಯಾಕೋ.ಕಸಿವಿಸಿ ಆಯಿತು.. ಅದರ ಬೆನ್ನ ಹಿಂದೆಯೇ.. " ತರುಣ್ ನಮ್ಮ ಮುಗುವಿನ ಡಾನ್ಸ್  ಹೇಗಿದೆ.. ??? ಅಂತ ಸ್ವತಃ ಅವರ ಅಮ್ಮನೇ ಕೇಳಿದಾಗ.. ಮನಸಿಲ್ಲದ ಮನಸಿನಿಂದ.  ಹುಂ ಚನ್ನಾಗಿದೆ ಎಂದನು. ಆದರೆ ಮನಸು ಹೌಹಾರಿತ್ತು..
ಇನ್ನೂ ನೆಟ್ಟಗೆ ಬಾಲ್ಯದ ಸವಿಯನ್ನೇ ಸವಿಯಾದ ಪುಟ್ಟ ಹುಡುಗಿಗೆ ಎಂತ ಹಾಡುಗಳನ್ನೆಲ್ಲ ತೋರಿಸಿ ಅವರ ಪಾಲಕರು ಅವಳ ನಿಜವಾದ ಬಾಲ್ಯವನ್ನ ಕಸಿದು ಕೊಲ್ಲುತಿಲ್ಲವೇ ಎನಿಸಿತು.

ತರುಣನಿಗೆ ಇನ್ನೂ ನೆನಪಿದೆ, ಆ ಬಾಲ್ಯದ ದಿನಗಳು, ಹಿಂದೆಲ್ಲ ಪಕ್ಕದ ಮನೆಯ ಸುನಿಲ್ ಎಂಬ ತಮ್ಮನ ಸಂಗಡ.. ಕತ್ತಲಾಗುವ ತನಕ ಕ್ರಿಕೆಟ್, ಬುಗರಿ ಗೋಲಿ.ಆಟ ಆಡಿದ್ದು. ಆ ಆಟದಲ್ಲಿ ಎಲ್ಲಾ ತನ್ನದೇ ಗೆಲುವಾಗಬೇಕು ಎಂಬ ಎಲ್ಲಿಯದೋ ಹಠ. ಸೋಲನ್ನು ಜಗಳವಾಗಿ ಪರಿವರ್ತಿಸುವ.. ಛಲ.. ಹಾಗೂ ಗೆಲವು.. ಸಿಗದಿದ್ದರೆ.. ದುಃಖದಲ್ಲೇ.. ಸೋಲನ್ನ ಒಪ್ಪಿಕೊಳ್ಳುವ ಆ ತುಂಟ ಬಾಲ್ಯಇಂದಿನ ಮಕ್ಕಳಿಗೆ ಇಲ್ಲವೇ.

ಇನ್ನೂ ಶಾಲೆ ಮುಗಿದ ಮೇಲೆ  ದಾರಿಯಲ್ಲಿ  ಆ ಆ  ಕಾಲಕ್ಕೆ ಸರಿಯಾಗಿ ಸಿಗುವ ಪುನ್ನೆರಲು, ಜಂಬೆ, ಪೇರಲ, ನೆಲ್ಲಿ, ಚಳ್ಳೆ, ಬಿಕ್ಕೆ, ಹಲಗೆ, ಕೌಳಿ, ಬಿಳೆ ಮುಳ್ಳು ಹಣ್ಣು, ಇತ್ಯಾದಿ  ಇವೆಲ್ಲವನ್ನು ಮೆಲ್ಲುತ್ತ.. ಅದರಲ್ಲೂ.. ಎಲ್ಲರಿಗಿಂತ ಜಾಸ್ತಿ ತಿನ್ನಬೇಕು ಎನ್ನುವ ಹಠದಿಂದ  ಎಲ್ಲರಿಗಿಂತ ಮೊದಲು, ಆ ಸ್ಥಳಗಳಲ್ಲಿ ಹಾಜರಾಗಿ, ಆ ಫಲಗಳನ್ನ ಹೊತ್ತು ನಿಂತ ಆ ಗಿಡಗಳಿಗೆ,  ಯಾಕಾದರೂ ತಾವು ಈ ಜನ್ಮ ತಾಳಿದೆವೋ ಅನಿಸುವಷ್ಟು ಗೋಳು ಕೊಡುವ ಆ ದಿನಗಳನ್ನ ನೆನೆಸಿಕೊಂಡರೆ ಅದೇನೋ ಖುಷಿ. ಆ ಬಾಲ್ಯದ ಗೆಳೆಯರು ಒಂದಾದಾಗ ಸಿಗುವ ಆ ಹಳೆಯ ನೆನಪುಗಳು ಇಂದಿನ ಮಕ್ಕಳಿಗೆ ಸಿಗುವುದೇನು???
ಇಗಲೇ ಟಿ.ವಿ.ಯಾ ಕಂಪ್ಯೂಟರ್ ನಾ ಹುಳುಗಳಾಗುತ್ತಿರುವ  ಅವರು ತನ್ಮೂಲಕ ಅದರ ನಡುವೆಯೇ ತಮ್ಮ ಮಧುರ ಬಾಲ್ಯವನ್ನ ಕಳೆಯುತ್ತಿರುವ ಇಂದಿನ ಬಾಲಕರನ್ನ ಕಂಡಾಗ ಈ ಪ್ರಶ್ನೆ ಉದ್ಭವಿಸದಿರದು ಅಲ್ಲವೇ.??

ಮುಂದೊಂದು ದಿನ. ಜೀವನದ ಅಂತಿಮದ ದಿನದವರೆಗೂ ಅದೇ ಟಿ.ವಿ., ಕಂಪ್ಯೂಟರ್ ಎಂಬ ದೈತ್ಯ ರಾಕ್ಷಸರ ನಡುವೆಯೇ ಕಳೆಯ ಬೇಕೆಂಬ ಭಾವನೆ ಆ ಬೆಳೆದ ಮಗುವಿನಲ್ಲಿ. ಬಂದಾಗ, ಅದಕ್ಕೆ ಹಳೆಯದನ್ನ ನೆನಪಿಸಿಕೊಂಡು ಖುಷಿ ಪಡಲು ಅಂತಹ ಬಾಲ್ಯ ಅವುಗಳಿಗೆ ಲಭ್ಯವಿದೆಯೇ??? 

ಇಗಲೇ ನಾವು ಕಾಲೇಜ್ನಲ್ಲಿ ಇದ್ದಾಗಲೂ ಗೊತ್ತಿಲ್ಲದಂತ ಅದೆಷ್ಟೋ  ವಿಷಯಗಳು (ಒಳ್ಳೆಯದ್ದು ಹಾಗೂ ಕೆಟ್ಟದ್ದು) ಇ ನಮ್ಮ ಮಕ್ಕಳಿಗೆ ಗೊತ್ತು. ಅದು ಒಳ್ಳೆಯದೇ  ಆಗಿದ್ದರೆ ನಾವು.. ಹೆಮ್ಮೆ ಪಡ ಬಹುದಿತ್ತೇನೋ ಆದರೆ. ಒಳ್ಳೆಯದಕಿಂತ.. ಕೆಟ್ಟದ್ದೇ ಜಾಸ್ತಿ ಆಗಿರುವಾಗ.. ಹೆಮ್ಮೆ ಪಡುವ ಅರ್ಹತೆ.. ಪಾಲಕ, ಪೋಷಕರಾಗಿರುವ  ನಮಗಿದೆಯೇ???

ಈ ಮಕ್ಕಳು.. ಎಲ್ಲಾ ವಿಧದಲ್ಲಿಯೂ.. ನಮಗಿಂತ ಉತ್ತಮ ಹಾಗೂ ಬುದ್ದಿವಂತರು.. ಎಂದು..ಒಪ್ಪಿಕೊಳ್ಳೋಣ.. ಆದರೆ.. ಹಾಗೇ ತಮ್ಮ ಮಕ್ಕಳು.. ಎಲ್ಲರಿಂದಲೂ.. ಹೇಳಿಸಿಕೊಳ್ಳ ಬೇಕು.. ಎಂಬುದು..ಪ್ರತಿಯೊಬ್ಬ ತಂದೆ ತಾಯಿ.. ಪೋಷಕರ..ಆಸೆ ಕೂಡ.. ಆದರೆ..ನಿನ್ನೆ ಮೊನ್ನೆಯವರೆಗೂ ಎತ್ತಿ ಆಡಿಸಿದ ಮಗು.. ನೋಡು ನೋಡುತ್ತಿದ್ದಂತೆ.. ಸಮೂಹ ರಕ್ಕಸರ.. ಕೈ ಗೊಂಬೆ ಆಗಿ.. ಇಡಿ ದಿನ.. ಟಿ.ವಿ. ಹಾಗೂ ಕಂಪ್ಯೂಟರ್ ಮುಂದೆ ಕುಳಿತು..ಕಂಪ್ಯೂಟರ್ ಗೇಮ್ಸ್.. ಮತ್ತು.. ಟಿ.ವಿ.ಯಲ್ಲಿ ಬರುವ.. ಅಶ್ಲೀಲ..ಹಾಡುಗಳ ನಡುವೆ ಕಳೆದು ಹೋಗುತ್ತಿದೆ.. ಎಂದಾಗ.. ಆ ಮಗುವನ್ನ ಕಂಡರೆ.. ನಿಜಕ್ಕೂ..ಮರುಕ ಹುಟ್ಟದೆ ಇರದು..
ಹಿಂದೆಲ್ಲ.. ಮಗ್ಗಿ..ಮತ್ತು.. ಲೆಕ್ಕಗಳಲ್ಲಿ.. ತಪ್ಪದೆ.. ಪಟ್ ಅಂತ ಹೇಳುವ.. ಹಾಗೂ.. ಸಂಜೆ ಆದಂತೆ.. ಬಾಯಿ ಪಾಠವನ್ನ ತಪ್ಪದೆ ಹೇಳುವ..ಮಕ್ಕಳನ್ನು..ಬುದ್ಧಿವಂತ ಎಂದು.. ಹೊಗಳುತ್ತಿದ್ದರು.. ಅದು ಅಲ್ಲದೆ... ವಿಶೇಷ ಕಾರ್ಯಕ್ರಮದಲ್ಲಿ.. ಊಟದ ವೇಳೆ ಗ್ರಂಥಗಳನ್ನ.. ಹೇಳಿ ಹೊಗಳಿಸಿಕೊಳ್ಳಬೇಕು.. ಎನ್ನುವ..ತುಡಿತ ನಮ್ಮಲ್ಲಿ ಇರುತಿತ್ತು.. ಆದರೆ.. ಇಂದಿನ.. ಬಹುತೇಕ..ಮಕ್ಕಳಲ್ಲಿ ಇವೆಲ್ಲ ಮಾಯವಾಗಿದೆ.. ಅವರು.. ಬೇಗ ದೊಡ್ದವರಗುತ್ತಿದ್ದಾರೆ.. ಅವರು ದೊಡ್ಡವರ ವಿಷಯ ಎನ್ನುವ ಕೆಲವು.. ವಿಷಯಗಳನ್ನ.. ಮುಲಾಜಿಲ್ಲದೆ.. ಕೆಲವೊಮ್ಮೆ ದೊಡ್ಡವರು..ನಾಚುವಂತೆ ಆಡ ಬಲ್ಲರು..
ಇಂದಿನ ಮಕ್ಕಳು ನಮಗಿಂತ ಬುದ್ದಿವಂತರು.. ನಿಜ.. ಆದರೆ.. ಅವರು.. ಸರಿಯಾದ ದಾರಿಯಲ್ಲಿ ಬೆಳೆಯುತ್ತಿದ್ದಾರೆಯೇ..?? ಆಥವ.. ನಮ್ಮ ಮಕ್ಕಳು.. ಬುದ್ದಿವಂತರು.. ಎನ್ನಿಸಿಕೊಲ್ಲಬೇಕು ಎಂದು.. ಅವರ ಬಾಲ್ಯವನ್ನ.. ನಮ್ಮ ಕೈ ಆರೇ.. ಕಸಿದು ಕೊಳ್ಳುತ್ತಿದ್ದೆವೆಯೇ..???

ಇದೆಲ್ಲ.. ಆಲೋಚನೆಗಳು. ತರುಣ ನಾ ಮನಸಿನಲ್ಲಿ.. ಹರಿದಾಡಿ.. ಕೊನೆಗೆ ತಮ್ಮ ಆ ಬಾಲ್ಯವೇ ಸೊಗಸು.. ಅದಕ್ಕಾಗಿ.. ತನ್ನ ತಂದೆ ತಾಯಿ.. ಹಾಗೂ.. ಪೋಷಕರಿಗೆ.. ಮನಸಾರೆ.. ಕೃತಜ್ಞತೆ ಸಲ್ಲಿಸಿದ..

Wednesday, March 23, 2011

ಎಲ್ಲಾ.. ಪ್ರೀತಿಯಲ್ಲಿ ವಿಫಲರಾದ.. ಗೆಳಯರಿಗೆ..ಪ್ರೀತಿಯ ಕಿವಿಮಾತು..


"ಹೇಯ್ ವರುಣ್ ಯಾಕೋ ಮಂಕಾಗಿದೀಯಾ ??? ನೀನೆ ಮಂಕಾಗಿದ್ರೆ ಹ್ಯಾಂಗೋ..ನನಗಂತೂ..ಸಮಯನೆ ಹೋಗಲ್ಲ... ಗೊತ್ತ.." 
" ಅಯ್ಯೋ.. ಹೋಗೋ.. ತರುಣ್.. ನಾನೇನು.. ನಿನ್ನ ಟೈಮ್ ಪಾಸು ಮಾಡೋ..ಕಾರ್ಟೂನ್ ನೆಟ್ವರ್ಕ್ ಚಾನೆಲ್ ನೋಡು.. ಯಾವಾಗಲೂ ನಿನ್ನ ಮುಂದೆ.. ನಗಿಸ್ತ ಇರೋಕೆ.."
ಅಂತ.. ಹಾಗೇ ಬೆಡ್ ಮೇಲೆ ಒರಗಿ ಮಲಗಿದ.. 
ಪ್ರೀತಿ - ಸ್ನೇಹ..

"ನನಗೆ ಗೊತ್ತು.. ಪುಟ್ಟ.. ನಮ್ಮ ಹುಡಗನಿಗೆ ಏನೋ ಎಡವಟ್ ಆಗಿದೆ ಅಂತ.. ಅಲ್ವೋ.. ಈ ಹಾಳೂ ದೊಡ್ಡ ಸಿಟಿ ನಲ್ಲಿ ನಮ್ಮವರು ಅಂತ  ಯಾರೋ ಇದ್ದಾರೆ.. ನನಗೆ ನೀನು ನಿನಗೆ ನಾನು..ಅಷ್ಟೇ. ಏನಾಯ್ತೂ ಅಂತ ಹೇಳೋ.. ಬೆವ್ಕೂಪ್.. ಡ್ರಾಮ ಸಾಕು.. ಏನು ನಿನ್ನ ಹುಡುಗಿ ಏನ್ ಮಾಡ್ತಿದಾಳೆ.."

"ಹೇ ಹೋಗೋ...ನೀನು ಅವತ್ತು ಹೇಳಿದ್ದು.. ನಿಜ ಕಣೋ.. ಅವಳು... ನನ್ನ ಬದುಕಿನಲ್ಲಿ ಆಟ ಆಡೋಕೆ ಅಂತಾನೆ.. ಬಂದವಳು.. ಅಲ್ಲವೋ.. ನಾನು ಏನೋ ತಪ್ಪು ಮಾಡಿದಿನಿ..ಬಡ ಮದ್ಯಮ ವರ್ಗದಲ್ಲಿ ಹುಟ್ಟಿದ್ದು.. ನನ್ನ ತಪ್ಪ??? ನಾನು ಸಾಯ್ತೀನಿ.. ಕಣೋ.. "

"ನಾನು ಹೇಳೋದೆಲ್ಲ.. ನಿಜ ಇರಲ್ಲಪ್ಪ.. ನಿನ್ನ ರೆಗ್ಸೋಕೆ ಏನೋ ಹೇಳಿರ್ತೀನಿ.. ಅಷ್ಟೇ..ಅಂತದ್ದು ಏನೋ ಆಯ್ತು.. ಇವಾಗ.. ಅವಳು ಒಳ್ಳೆಯವಳೇ ಕಣೋ.. ನೀನೆ. ಏನೋ ಕಿಚಾಯಿಸಿರ್ತಿಯ.. ಅದಕ್ಕೆ ಅವಳು ಇನ್ನೇನೋ.. ಅಂದಿರ್ತಲೇ ಅಷ್ಟೇ.. ಬಾ.. ಇವಾಗ ಮಲಗೋ ಹೊತ್ತಲ್ಲ.. ಟೀ ಕುಡುದು.. ಹೀಗೆ ಒಂದು.. ಸುತ್ತ ಹಾಕಿ ಬರೋಣ.. ದೋಸ್ತ್.. ಮನಸ್ಸು... ಕಣ್ಣು.. ಎಲ್ಲಾ ತಂಪಗುತ್ತೆ.." ಅಂತ ಟೀ ಮಾಡೋದಕ್ಕೆ.. ಅಂತ ಅಡುಗೆ ಮನೆಗೆ ಹೋದೆ...ಅವನ ಬಗ್ಗೆ ಕನಿಕರ ಮೂಡಿತು.. ಅವಳನ್ನ ಎಷ್ಟು ಇವನು ಹಚ್ಚ್ಕೊಂದಿದನೆ ಅಂತ ನನಗೆ ಗೊತ್ತು..

"ಹೇ ನೀನು ಹೋಗು.. ನನಗೆ ಮೂಡ ಇಲ್ಲಾ ಅವಳ ಬಗ್ಗೆ ಏನೋ ಅಂದ್ಕಂಡಿದ್ದೆ.. ಆದ್ರೆ.. ಅವಳಗೆ ನನ್ನಗಿಂತ ಚನ್ನಗಿದ್ದವನು ಸಿಕ್ಕದ ಅಂತ ಅವನ ಹಿಂದೆ ಹೊಗೋದ..ನೀನೆ ಹೇಳು ತರುಣ್ ಯಾವಾಗಲೂ ಅವಳ ಪರನೇ ಮಾತಾಡ್ತಿದ್ದೆ.. ಅವಳು ಇವಾಗ.. ಅವಳ ಸಂಗಡ ವರ್ಕ್ ಮಾಡವನೇ ನನಗಿಂತ ಚನ್ನಗಿದಾನೆ ಅಂತ.. ಅದು ಅಲ್ಲದೆ ಅವನು ಇವಳನ್ನ  ಇಷ್ಟ ಪಟ್ನಂತೆ, ಇವಳು ಹು ಅಂದಳಂತೆ.. ಜೊತೆಗೆ ಸಾರೀ ಕಣೋ.. ನಿನಗೆ ನನಗಿಂತ ಚನ್ನಾಗಿರೋ.. ಹುಡುಗಿ ಖಂಡಿತ ಸಿಕ್ಕತಾಳೆ.. ಬೇಜಾರ ಮಾಡ್ಕೋ ಬೇಡವೋ.. ಅಂತ..  ಬೇರೆ ಹಾರೈಕೆ.. ಯಾರಿಗೆ ಬೇಕೋ ಅವಳ ಹಾರೈಕೆ. ನಾನು ಯಾವದ್ರಲ್ಲಿ ಅವನ್ಕಿಂತ ಕಡಿಮೆ ಆಗಿದಿನಿ ಅಂತ ಹೇಳು ಅಂದ್ರೇ.. ಅದಕ್ಕೂ.. ಅವಳ ಬಳಿ ಉತ್ತರ ಇಲ್ಲವೋ.. ಕೇಳದ್ರೆ.. ಅವಳೇ.. ನನಗೆ ಸರಿಯಾದ ಜೋಡಿ ಅಲ್ಲಾ ಅಂತ ಅನ್ನಿಸ್ತಂತೆ.. ನೀನೆ ಹೇಳೋ.. ಇದು ಅವಳು ಮಾಡಿರೋದು ಸರಿ ನಾ??.. ಇಷ್ಟಕ್ಕೂ.. ನನಗೆ ಇವಾಗ ಒಳ್ಳೆ ಕೆಲಸ ಇಲ್ಲಾ.. ಆದ್ರೆ ಮುಂದೆ ಸಿಗಲ್ಲ ಅಂತೇನು ಇಲ್ಲವಲ್ಲ..ಬರೆ ಮೋಸ.. ಎಲ್ಲಾ ಅವರವರಿಗೆ ಬೇಕಾದಾಗ ನನ್ನ ಬಳಸ್ಕೊಂಡು.. ನಂತರ.. ಏಂಜಲ್ ಎಲೆ ತರ ನನ್ನ ಬೀಸಕ್ತಾರೆ.. ಈ ಲೈಫ್ ಬೇಕೇನೋ ನನಗೆ.. ಯಾರಿಗಗೋ.. ನಾನು ಬದಕಬೇಕು.. ನಾನು ಸತ್ತು ಹೋಗ್ತಿನೋ.. ದೋಸ್ತ್.. ಕಾಲೇಜ್ ಇನ್ದಾನು.. ಅವಳು ನಾನು.. ಒಟ್ಟಿಗೆ ಏನೇನೋ.. ಕನಸು... ಕಟ್ಟತ ಬಂದ್ವಿ.. ಇವಾಗ.. ಆ ಕನಸನ್ನೆಲ್ಲ.. ಏನೋ.. ಮಾಡಲಿ.. ಮಾತಾಡೋ.. ಯಾಕೋ.. ನಿನಗೂ ನಾನು ಬೇಡದವನಾದನ??  "
"ಅಂತು.. ನಮ್ಮ ವರುಣ ದೇವದಾಸ ಆಗೋಕೆ ತಯಾರಿ ನಡೆಸಿದಿಯ.. ಅನ್ನು.. ಸರಿ .. ಯಾವಾಗ.. ಸಾಯ್ತಿಯ..??? ಅದನ್ನಾದರೂ ಹೇಳು..ಹಾಗೇ ಸಾಯೋವಾಗ ನಿನ್ನ ನಂಬಿದವರಿಗೂ ಒಂದು ದಾರಿ ತೋರಿಸಿ ಹೋಗು..  ಅಲ್ಲವೋ.. ನಿನ್ನ ಜೀವನದಲ್ಲಿ.. ಅವಳ ಬಿಟ್ಟರೆ.. ನಾವ್ಯಾರು ಕಾಣ್ತಾನೆ.. ಇಲ್ಲವ??? ಹೋಗಲಿ.. ನಿನ್ನ ನಂಬಿರೋ ನಿನ್ನ ಅಪ್ಪ ಅಮ್ಮ ತಂಗಿ ಗತಿ ಏನೋ..ಅವರನ್ನ್ತ ಅವರ ಕಷ್ಟ ಕಾಲದಲ್ಲಿ ನೋಡ್ಕೊಲೋರು ಯಾರು???.. ಹೌದು.. ಅವಳು ನಿನ್ನಂತ ಒಳ್ಳೆ ಹುಡುಗನಿಗೆ ಮೋಸ ಮಾಡಬಾರದಿತ್ತು. ಆದರೂ..ಒಂದು ಮಾತು. ಮತ್ತೆ ಅವಳ ಪರವಾಗಿ ಮಾತಾಡ್ತಾ ಇದೀನಿ ಅಂದ್ಕೋ ಬೇಡ.. ಅವಳು ನಿನ್ನ ಹಾಗೇ ಕಲ್ಪನಾ ಜೀವಿ ಆಗದೆ.. ವಾಸ್ತವವಾದಿ ಆಗಿರೋದಕ್ಕೆ. ಅವಳು.. ಈ ನಿರ್ಧಾರ.. ಸಾಕ್ಷಿ.. ಅದಕ್ಕೆ ಅವಳನ್ನ ಅಭಿನಂದಿಸಲೇ ಬೇಕು.. ನೋಡು.. ನಮ್ಮ ಸಮಾಜದಲ್ಲಿ.. ಹೆಣ್ಣು ಮಕ್ಕಳನ್ನ ಬೇಗ ಮದ್ವೆ ಮಾಡ್ತಾರಲ್ವ.. ಅಂತೆ.. ಅವಳನು ಇಷ್ತೊತ್ತಿಗಾಗಲೇ. ಅವರ ಮನೆಯಲ್ಲಿ.. ಮದ್ವೆ ಮಾಡೋ ತಯಾರಿ ನಡೆಸಿರಬಹುದು.. ಪಾಪ.. ಅವಳ ಸ್ಥಿತಿ ನೋಡೋ.. ಅವಳು ನಿಮ್ಮ ಪ್ರೀತಿ ವಿಷಯನ.. ಅವರ ಮನೆಯಲ್ಲಿ ಹೇಳೋಕು ಆಗದೆ.. ಒಂದು ವೇಳೆ ಹೇಳದ್ರೆ.. ಮನೆಯಲ್ಲಿ.. ಏನು ಮಾಡ್ತಾರೋ ಅನ್ನೋ ಭಯ.. ಎಲ್ಲಾ ತಾಕಲಾಟದಿಂದ.. ಮುಕ್ತಿ ಹೊಂದಬೇಕು ಅಂದ್ರೇ.. ನೀನು ಆರ್ಥಿಕವಾಗಿ.. ಗಟ್ಟಿಯಗಿರಬೇಕಿತ್ತು. ಅದು ಇಲ್ಲಾ ಅಂದ ಮೇಲೆ.. ಅವಳ ತಾನೆ ಏನು ಮಾಡ್ತಾಳೆ??? ಅವಳು.. ಇವಾಗ.. ಇಷ್ಟ ಪಡ್ತಿರೋ.. ಹುಡುಗನಾ ಬಗ್ಗೆ ಖಂಡಿತ ಮನೆಯವರು.. ಒಪ್ಪತಾರೆ.. ಯಾಕೆ ಅಂದ್ರೇ.. ಅವನು ಎಷ್ಟಂದ್ರು.. ನೀನು ಹೇಳ್ದಾಗೆ ಒಳ್ಳೆ ಜಾಬ್ ಅಲ್ಲಿ ಬೇರೆ ಇದ್ದಾನೆ.. ಅಂತಿಯ.. ಅವಳು ನಿನಗೆ ಮೋಸ ಮಾಡಿದ್ರು ಕೂಡ.. ಅವಳ ಲೈಫ್ ಅನ್ನ ಸರಿ ಮಾಡ್ಕೊಂಡ್ಲು.. ಒಂದು.. ತಿಳಕೋ.. ಅವಳು ನಿನಗೆ ಮೋಸ ಮಾಡದಲೂ ಅಂತ ಯಾಕೋ ಅಂದ್ಕೊತಿಯ..  ಅವಳು ನಿನ್ನ ಅತಿಯಾಗಿ ಪ್ರೀತಿಸ್ತ ಇರೋದಕ್ಕೆನೆ.. ಬಹುಷ.. ನಿನಗೊಂದು ಜೀವನದಲ್ಲಿ ಹೊಸ ಪಾಠ ಕಲಿಸಿ.. ಜೀವನವನ್ನ ಚಾಲೆಂಜ್ ಆಗಿ ಸ್ವೀಕರಿಸು ಅಂತ ಸೂಚ್ಯವಾಗಿ.. ಹೇಳಿ ಹೋದಳು.. ನೀನು ನೋಡದ್ರೆ.. ಅವಳ ನೆನಪಲ್ಲೇ.. ದೇವದಾಸ್ ಆಗೋ ತರ ಇದ್ದೀಯ.. come  on  da .. ಅದನ್ನೆಲ್ಲ.. ಗೋಲಿ.. ಮಾರೋ.. ಲೈಫ್ ಅಂದ.. ಮೇಲೆ ಇಂತ ನಾಲಾಯಕ್ ಜನರು.. ನಮಗೆ ಪಾಠ ಕಲ್ಸೊಕೆ ಅಂತಾನೆ ಬಾಳಲ್ಲಿ ಬರ್ತಾರೆ.. ಮರೆಯೋಕಗಲ್ಲ.. ನಿಜ... ಆದರೆ.. ಅವರ ನೆನಪಲ್ಲಿ ಅವರು ಇಷ್ಟ ಪಟ್ಟಿದಕಿಂತ ಚನ್ನಾಗಿ ಬದುಕ ಬಹುದಲ್ವೇನೋ.."
"ಹುಂ ಏನೋ ತರುಣ್.. ನಿನ್ನ ಅಷ್ಟು.. ಕಲ್ಲು ಹೃದಯ ನನ್ನದಲ ಕಣೋ.. ನೀನು ಹೇಳೋದು ನಿಜ.. ಆದರೆ.. ಈ ನೋವು ನಿನ್ನ ಅಂತವರಿಗೆ ಅರ್ಥ ಆಗಲ್ಲ ಬಿಡು.. ನೀನು ಏನೇ ಮಾತಾದದ್ರೂ ಲಾಜಿಕ್ ಅಲ್ಲಿ ಏನೋ ಎಲ್ಲಾ ಹೌದು ಅನ್ನೋ ಹಾಗೇ ಮಾಡ್ತಿಯ.. ಆದರೆ.. ಕಷ್ಟ ಕಣೋ.."
ಈಗ ಒಂದು ಸುತ್ತು ಹೊರಗಡೆ ಹಾಕಿ ಬಂದ್ರೆ.. ಲೈಫ್ ಮತ್ತೆ ಬಿಂದಾಸ ಆಗುತ್ತೆ ಹೊರಡು.. ಹೋಗೋಣ.. ಒಂದು ತಿಳಕೋ.. ನಮ್ಮ ಜೀವನದಲ್ಲಿ ಕಷ್ಟ ಬಂದಾಗಲೂ ನಗೋದಕ್ಕ.. ಕಲಿ.. ಆಗ ಕಷ್ತನು.. ಹೆದರಿ.. ಓಡುತ್ತೆ.. ಅದನ್ನೇ ಬದಕೋ ಕಲೆ.. ಅನ್ನೋದು.. ಅದು ಬಿಟ್ಟು.. ಹೀಗೆ ಜೋಲು ಮೊರೆ ಹಾಕೊಂಡಿದ್ರೆ.. ನಿನ್ನ ಪ್ರೀತಿಯ ಹುಡುಗಿ ಬಗ್ಗೆನೇ ಜನ ಏನೇನೋ.. ಮಾತಾಡ್ತಾರೆ.. ಅದು.. ನಿನ್ನ ಹತ್ರ ಸಹಿಸ್ಕೋಲ್ಲೋಕೆ ಆಗುತ್ತಾ..??? ನನ್ನ ಹತ್ರನೇ.. ಆಗಲ್ಲ.. ನಿನ್ನ ಹತ್ರ ಹೇಗೋ.. ಆಗುತ್ತೆ.. ನಾಳೆ ನೇ ನಮ್ಮ ದೇವ್ರು.. ಬೆನಕನ ಹತ್ರ.. ಒಂದು.. ಒಳ್ಳೆ ಹುಡುಗಿನ ನಮ್ಮ ಹುಡುಗನಿಗೆ ಸಿಗೋ ಹಾಗೇ ಮಾಡಪ್ಪ ಅಂತ ಕೆಳ್ಕೊತಿನಿ....ಸರಿನಾ...

Tuesday, March 8, 2011

ಬೆಳ್ಳಗೆ ಇರೋದೆಲ್ಲ ಹಾಲಲ್ಲ.. ನಾವು ನೋಡಿರೋದೆಲ್ಲ ಸತ್ಯ ಅಲ್ಲ..


" ತರುಣ್  ನನ್ನ ಮದುವೆಗೆ ಬರಲೇ.. ಬೇಕು.. ಇದೆ ಮೇ ೫ ಕ್ಕೆ.. ಅಣ್ಣ,, ನನ್ನ ನಿಶ್ಚಿತಾರ್ಥಕ್ಕೂ ನೀನು ಚಕ್ಕರ ಕೊಟ್ಟೆ.. ಆದರೆ.. ನನ್ನ ಮದುವೆಗೆ ಬರಲೇ ಬೇಕು.. ಯಾವದೇ ಸಬೂಬು.. ಹೇಳದ್ರು. ನಾನಂತು.. ಕೇಳಲ್ಲ.." ಅಂತ.. ಅವಳು.. ಹೇಳ್ತಾ ಇದ್ದರೇ.. 
ಅವಳಿಗೆ.. "ಖಂಡಿತ.. ನನಗೆ ಸ್ವಂತ ತಂಗಿ ಅಂತ ಯಾರು ಇಲ್ಲ. ದೇವರು ಕೊಟ್ಟ.. ತಂಗಿ ನೀನು.. ನಿನ್ನ ಮದ್ವೆಗೆ  ಯಾವದೇ ಕಾರಣಕ್ಕೂ.. ಮಿಸ್ ಮಾಡದೇ.. ಬರ್ತಿನಮ್ಮ.." ಅಂತ ಹೇಳಿ.. ಕಳಿಸಿದೆ..

ಅವಳನ್ನ ಅತ್ತ.. ಕಳಿಸಿದ.. ಮೇಲೆ ಅವಳು ಕೊಟ್ಟ.. ಲಗ್ನ ಪತ್ರಿಕೆ ನ ನೋಡ್ತಾ.. ನೋಡ್ತಾ.. ಅವಳು ನನ್ನ ಬಾಳಿನಲ್ಲಿ.. ಬಂದ.. ಕ್ಷಣವನ್ನ ಹಾಗೆ ಅವಳೊಂದಿಗೆ. ಕಳೆದ.. ಸುಮಧುರ.. ಕ್ಷಣವನ್ನ.. ನೆನಪಾಯಿತು...

 ಕಾಲೇಜ್ ದಿನಗಳು ಅವು.. ಆ ದಿನಗಳಲ್ಲಿ.. ಎಲ್ಲ ಹುಡುಗರಂತೆ.. ಮಜಾ ಉಡಾಯಿಸುತ್ತ ಕಾಲೇಜ್ ದಿನಗಳನ್ನ.. ಕಳೆಯುವ ಅದೃಷ್ಟ ನನಗೆ ಇರಲಿಲ್ಲ.. ಕಾಲೇಜ್ ಮುಗಿದ ತಕ್ಷಣ.. ಮನೆ.. ಮನೆಯಿಂದ.. ಮತ್ತೆ.. ಕೆಲಸಕ್ಕೆ..  ಹೀಗೆ.. ನನ್ನ ಕಾಲೇಜ್ ಜೀವನ.. 
ಆದರೂ ಅದೇನೋ ಗೊತ್ತಿಲ್ಲ.. ಕಾಲೇಜ್ ಅಲ್ಲಿದ್ದ.. ಏನ್ ಎಸ ಎಸ ಗೆ ಸೇರಿ ಬಿಟ್ಟೆ.. 

ಅದರ.. ಕ್ಯಾಂಪ್ಗೆ ಕೂಡ ಹಾಗೋ ಹೀಗೋ ಹೋಗುತ್ತಿದ್ದೆ.. ಆ ವೇಳೆಯಲ್ಲಿ.. ಪರಿಚಯವಾದ ಹುಡುಗಿ.. ಇವಳು.. ನಿಜ ಹೇಳುತ್ತೀನಿ.. ನಾನು ಜಾತಿವಾದಿ ಅಂದರು.. ಬೇಸರವಿಲ್ಲ.. ಅವಳು.. ಬೇರೆಯ ಜಾತಿಯ.. ಹುಡುಗನೊಂದಿಗೆ. ತೀರ ಅತಿ ಎನಿಸುವಷ್ಟು.. ಸಲಿಗೆ ತೋರಿಸುತ್ತಿದ್ದಳು.. ಆ ವೇಳೆಗಾಗಲೇ.. ನಮ್ಮ ಜಾತಿಯ ಹೆಣ್ಣು ಮಕ್ಕಳು.. ತುಂಬಾ ಜಾತ್ಯತೀತರು.. ಎಂದು.. ಸಮಾಜದಲ್ಲಿ ಹೆಸರು.. ಮಾಡಲು ಆರಂಭವಾಗಿತ್ತು.. (ಅಂದರೆ.. ಅಪ್ಪ ಅಮ್ಮ ಮದುವೆ ಮಾಡಿ ಮುಗಿಸುವ ಮೊದಲೇ.. ಬೇರೆ ಜಾತಿಯ ಹುಡುಗನೊಟ್ಟಿಗೆ.. ಓಡಿ ಹೋಗಿ.. ತಮ್ಮ ಹೆತ್ತವರಿಗೆ.. ಉಡುಗೊರೆ ನೀಡುವುದು.. ಆರಂಭವಾಗಿತ್ತು )

ಅದೇನೋ ಗೊತ್ತಿಲ್ಲ.. ಅವಳು ಮಾಡುತ್ತಿದ್ದ ಕೆಲಸ ಸರಿ ಇಲ್ಲ ಎನ್ನಿಸಿತು.. ಕರೆದು.. ಅವಳಲ್ಲಿ ನೇರವಾಗಿ ಹೇಳಿ ಬಿಟ್ಟೆ.. 
ನಂತರ.. ಅವಳು.. ನನಗೆ ತೀರ ಆತ್ಮಿಯಳಾಗಿ ಬಿಟ್ಟಳು.. ಅವಳು ನಮ್ಮ ಗ್ರೂಪ್ ಆಗಿದ್ದರಿಂದ.. ಯಾವಾಗಲು.. ನನ್ನೊಂದಿಗೆ ಇರ ತೊಡಗಿದಳು.. ಏನೇನೋ ಮಾತುಕತೆ.. ನೋಡಿದವರಿಗೆ.. ನಾವು. ಪ್ರೆಮಿಗಲೇನೋ  ಅನ್ನುವಷ್ಟು.. ಸಲಿಗೆ.. ನಮ್ಮಲ್ಲಿ ಬೆಳೆಯಿತು.. ಅವಳು.. ನಮ್ಮ ಮಧ್ಯೆ ಬಿರುಕು ಬಾರದಿರಲೆಂದು.. ನನ್ನನ್ನು ಅಣ್ಣ ಎಂದೇ ಕರೆಯ ತೊಡಗಿದಳು..ನನಗೋ ಒಬ್ಬ ತಂಗಿ ಸಿಕ್ಕ ಸಂತಸ.. ಅದಕ್ಕಾಗೆ.. ಅವಳನ್ನ ರೇಗಿಸುವುದು ತುಂಬಾ ಇಷ್ಟದ ಕೆಲಸವಾಗಿತ್ತು. ನಾನು ಅವಳನ್ನ.. ಹೇ ನಾನು ನಿನ್ನ ತಂಗಿ ಅಂತ ಕರಿ ಬಹುದು.. ಆದ್ರೆ.. ನೋಡಿದ.. ಜನ.. ತಂಗಿ ಅಣ್ಣನ್ನನ್ನೇ ಹೊತ್ತುಕೊಂಡು ಹೋಗೋ ಅಷ್ಟು.. ದೈತ್ಯ ಆಗಿದ್ದಾಳೆ.. ಅಂತ ಮತದ್ಕೊಂದ್ರೆ.. ಕಷ್ಟ ಕಣೆ.. ಅಂತ ಕೀಚಾಯಿಸುತ್ತಿದ್ದೆ.. ಅಲ್ಲ ನೋಡೇ.. ಒಂದು.. ವೇಳೆ.. ಸಿನಿಮಾದಲ್ಲಿ ಆಗೋ ಹಾಗೆ.. ಯಾರದ್ರೂ ನಿನಗೆ ತೊಂದ್ರೆ ಕೊಡೋಕೆ ಬಂದ್ರೆ ನನ್ನ ಮಾತ್ರ ಕರಿಬೇಡ ಮಾರಾಯ್ತಿ.. ನಾನು ಏನಿದ್ರೂ ಬಾಯಲ್ಲಿ ಆವಾಜು ಹಾಕ್ತೀನಿ.. ಬರೋರೆನದ್ರು.. ನನ್ನ ಪ್ರಾಣ.. ತೆಗೆದರೆ ಕಷ್ಟ.. ಅಂತೆಲ್ಲ.. ರೇಗಿಸ್ತಿದ್ದೆ

ಹೀಗೆ ಆ ಕ್ಯಾಂಪ್  ನಲ್ಲಿ ಇರುವಾಗಲೇ.. ನಮ್ಮ ಕಾಲೇಜ್ ನ ಹುಡುಗರು.. ಅವಳ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನ ಗಮನಿಸಿದ್ದೆ.. 
ಅದನ್ನು ಅವಳಲೇ.. ಕೇಳಿದೆ.. ಅವಳು ಅದಕ್ಕೆ.. ಅದೇನೋ.. ಮಹಾ ಸುದ್ದಿಯೇ ಅಲ್ಲವೆಂಬಂತೆ ನಕ್ಕು..
"ತರುಣ್ ನಿನಗೆ ನಾನೆ ಆ ವಿಷಯ ಹೇಳ ಬೇಕೆಂದಿದ್ದೆ.. ಅಷ್ಟರೊಳಗೆ ನೀನೆ ಕೇಳಿದೆ.. ಹುಂ ಅವರು ಹೇಳುವಂತದ್ದು ಏನು ಇಲ್ಲ.. 
ಅದು ಅಲ್ಲದೆ ಚಿಂತೆ ಮಾಡಬೇಡ. ನಮ್ಮ ಜಾತಿಯವನ ಸಂಗಡನೆ ನನಗೆ ಲವ್ ಆಗಿದೆ.. ಅದರಲ್ಲೂ.. ಮನೆಯವರು ಸಹ ಒಪ್ಪಿದಾರೆ ಕಣೋ.
ನಾನು ತರುಣಿ ಆದಗಳಿಂದ.. ಇದೆ.. ಗೋಳು.."...
"ಹುಂ ಎನಂದೇ ??? ನೀನು.. ತರುಣಿನ??? okay . ಹೌದು.. ಯಾರಿಗೂ ಇಲ್ಲದೆ ಇರೋ. ರುಮೌರ್  ನಿನಗೆ ಯಾಕೆ?? " ಅಂತ ಕೇಳ್ದೆ..
"ಹುಂ ನನ್ನ ನೋಡಿದ್ರೆ.. ಗೊತ್ತಗಲ್ವೇನೋ ಗೂಬೆ.."
"ಹುಂ ಗೊತ್ತಯ್ತಮ್ಮ.. ಹೇಳು ಯಾಕೆ.. ಅಂತ??"
"ಏನಿಲ್ಲ.. ನಮ್ಮ ಅಪ್ಪನಿಗೆ.. ೩ ಜನ ಹೆಣ್ಣ ಮಕ್ಕಳು.. ಅದರಲ್ಲೂ ನಾನು ಹಿರೆ ಮಗಳು.. ಅದು ಅಲ್ಲದೆ.. ನಮ್ಮ ಅಪ್ಪ ಶ್ರೀಮಂತ ಬೇರೆ.. ನನ್ನ ಹೆಸರು.. ಕೆಡಿಸದ್ರೆ ಸುಲಭವಾಗಿ.. ಯಾರೋ ಅವರಿಗೆ ಬೇಕಾದವರಿಗೆ.. ನನ್ನ ಮದ್ವೆ ಮಾಡಬಹುದು.. ಅನ್ನೋ.. ಕಾರಣ ಇರಬಹುದು.. ಅದು ಅಲ್ಲದೆ. ನಮ್ಮ ಅಪ್ಪನು ನನ್ನ ಒಬ್ಬ ಮಗನ ಹಾಗೇನೆ ನನ್ನ ಬೆಳೆಸಿದರೆ.. ಅವರ ಹತ್ರ ಮಾತಾಡಬಾರದು.. ಇವರ ಹತ್ರ ಮಾತಾಡಬಾರದು ಅಂತ ಯಾವತ್ತು.. ಹೇಳಿಲ್ಲ... ಅದು ಅಲ್ಲದೆ.. ನೋಡೋ ಜನ ಏನ ಅಂದ್ಕೊಂಡ್ರೆ.. ನನಗೇನು???"
"ವೆರಿ ಗುಡ್.. "
ಹೀಗೆ ಪರಿಚಯ ಆದವಳು.. ತುಂಬಾ.. open  minded  girl  ಅಂತ ಬಹು ಬೇಗ ಆರ್ಥ ಆಗೋಯ್ತು.. ತುಂಬಾ.. ಸ್ನೇಹ ಬೆಳಿತು.. ಅವಳು.. ನಾನು.. ತಿರ್ಗೋದು.. ನೋಡಿ.. ಜನ..ನಮ್ಮ ಬಗ್ಗೆನೇ.. ಏನೋ. ಸಂಬಂಧ ಕಲ್ಪಿಸಿ ಮಾತಾಡೋಕೆ.. ಶುರು ಮಾಡಿದ್ರು.. ನನಗೆ ನನ್ನಿಂದಾಗಿ ಒಂದು ಹುಡುಗಿಗೆ ಕೆಟ್ಟ ಹೆಸರು ಬರೋದು.. ನನಗೆ ಯಾಕೋ ಇಷ್ಟ ಆಗಲಿಲ್ಲ.. ನನಗೆ.. ಅವಳ ಹತ್ರ ಮಾತಾಡೋದನ್ನ ಕಡಿಮೆ ಮಾಡ್ಕೋ ಬೇಕು ಅಂತ ಅಂದೊಕೊಂಡು... ಎರಡು ದಿನ avoid  ಮಾಡದೇ.. ಮಾರನೇ ದಿನ.. ಕೇಳಿ ಬಿಟ್ಟಳು.. "ಏನು  ನನ್ನ ಸಂಗಡ ನೀನು ಮಾತಾಡ್ತಿಯ ಅಂತ ಜನ ಏನೇನೋ ಮಾತಾಡ್ಕೋತ ಇರೋದನ್ನ ಕೇಳಿ ನಿನಗೆ.. ನಿನ್ನ ಹೆಸರು ಎಲ್ಲಿ ಹಾಳಾಗಿ ಹೋಗುತ್ತೋ ಅನ್ನೋ ಭಯ ಬಂದ ಹಾಗಿದೆ.." ಅಂತ ಅಂದ್ಲು.. ನಾನು ಹಾಗೇನಿಲ್ಲ.. ನನ್ನ ಮನಸಿನಲ್ಲಿ ಉಂಟಾದ ಕಳವಳನ ಅವಳಲ್ಲಿ ಹೇಳ್ದೆ.. ಅದಕ್ಕೆ ಅವಳು. ಹೋ ಹೋ.. ಹಾಗೋ.. ಹೇ.. ತರುಣ್ ನನ್ನ ಹೆಸರು.. ಯಾವಾಗಲೋ.. ಒಂದು.. ಲೆವೆಲ್ ಗೆ ಹಾಳಾಗಿದೆ.. ನನಗೇನೆ.. ಅದ್ರ ಬಗ್ಗೆ.. ಕಾಳಜಿ.. ಇಲ್ಲ.. ಅದು ಅಲ್ಲದೆ.. ನನ್ನ ಬಗ್ಗೆ.. ನಮ್ಮ ಮನೆಯಲ್ಲಿ.. ಮತ್ತೆ.. ನನ್ನ ಬಾವಿ ಪತಿ ದೇವರಿಗೆ ನಂಬಿಕೆ ಇದೆ ಅಂದ ಮೇಲೆ.. ಇದಕ್ಕೆಲ್ಲ. . ಏನಕ್ಕೋ.. ನಾನು.. ತಲೆ ಕೆಡಿಸ್ಕೋ ಬೇಕು.. ನಿನಗೆ ಇಷ್ಟ ಇದ್ದರೆ.. ನಿನ್ನ ಈ ತಂಗಿ ಜೊತೆ ಮೊದಲಿನ ಹಾಗೆ ಇರು.. ಕಷ್ಟ ಅನ್ನಿಸ್ದ್ರೆ.. ಹೋಗ್ತಾ ಇರು.. ಸ್ವಲ್ಪ ಬೇಜಾರ್ ಆಗುತ್ತೆ.. ಅದು.. ನಿನ್ನ ಅಂತ ಒಳ್ಳೆ ಅಣ್ಣನ್ನ ಕಳಕೊಂಡಿದ್ದಕ್ಕೆ. ಇದೆಲ್ಲ ಮಾಮೂಲಿ.. ತಾನೆ.." ಅವಳ ಮಾತು.. ಕೇಳಿ.. ನಾನು ದಂಗಾಗಿ ಬಿಟ್ಟೆ.. ಯಾ ಅವಳು.. ಆಡ್ತಾ ಇರೋ ಮಾತಲ್ಲಿ.. ಸತ್ಯಾಂಶ ಇದೆ ಅನ್ನಿಸ್ತು.. ಅದು ಅಲ್ಲದೆ.. ಅವಳು.. ಉಳದವರ ಲೆಕ್ಕದಲ್ಲಿ.. ಏನೋ.. ನನಗಂತೂ.. ತುಂಬಾ ಒಳ್ಳೆ ಗೆಳತಿ.. ಕಂ ತಂಗಿ ಆಗಿದಾಳೆ.. ನಾನು ಯಾಕೆ ಅಂತವಳನ್ನ ಕಳಕೊಳ್ಳಲಿ..

ಆದರು.. ಅವಳ ಹೇಳೋ ಕತೆನೆಲ್ಲ.. ಕೇಳ್ತಿದ್ದೆ.. ಆವಳ ಗಂಡ ಆಗ್ತೀನಿ ಅಂತ ಹೇಳದವ್ನು.. ಅವಳಗೆ ಮೋಸ ಮಾಡದೇ.. ಇರಲಿ.. ದೇವರೇ.. ಅಂತ ಅನ್ನಿಸ್ತಿತ್ತು.. ಉಳದವ್ರು.. ಏನೋ ಅಂದ್ರು ಅಂತ ಅವಳನ್ನ ನಾನು ಮಾತಾಡಿಸದೇ ಹೋಗಿದ್ರೆ.. ನಿಜಕ್ಕೂ..ಆ . ಮಗುವಿನಂತ ಗುಣದವಳನ್ನ ತಂಗಿ ಆಗಿ ಪಡೆಯೋ ಅದೃಷ್ಟ ಕಳಕೊಂಡು ಬಿಡ್ತಿದ್ದೆ..
ಅದು ಅಲ್ಲದೆ.. ಅಷ್ಟೊತ್ತಿಗೆ ರಕ್ಷಾ ಬಂಧನ ಹಬ್ಬ ಬಂತು.. ಅವಳು.. ಎಲ್ಲ ಹುಡುಗರ ಮುಂದೇನೆ ನನಗೆ ರಾಖಿನು ಕಟ್ಟದ್ಲು.. ಎಷ್ಟೋ ಜನ.. ರಾಖಿ ಕಟ್ಟಿಸ್ಕೊಂಡು ಕಾಲೇಜ್ ಲೈಫ್ ಅಲ್ಲಿ ಅಣ್ಣ ಆಗ್ತಾರೆ ಅಂತ ಗೊತ್ತಿತ್ತು.. ಆದ್ರೆ.. ನಾನು.. ಅಣ್ಣ ಅಂತ ಆದ ಮೇಲೇನೆ..ರಾಖಿ ಕಟ್ಟಿಸಿಕೊಂಡೆ.. ನನಗಂತೂ.. ತುಂಬಾ ಖುಷಿ ಆಯ್ತು.. ಯಾಕಂದ್ರೆ.. ಉಳಿದವರು.. ನಮ್ಮ ಬಗ್ಗೆ ತಪ್ಪು ಮಾತಾಡೋದು.. ಕಡಿಮೆ ಆಯ್ತಲ್ಲ. ಅಂತ..

ಅದೇನೇ ಇದ್ದರು.. ನಮ್ಮ ಬಿಂದಾಸ್ ಹುಡುಗಿ.. ಇದೆ ಬರೋ ಮೇ ೫ ಕ್ಕೆ ಮದ್ವೆ ಆಗ್ತಿದಲೇ.. ನಿಜಕ್ಕೂ.. ಸಂತೋಷದ ಸಂಗತಿ.. ಮದ್ವೆಗೆ ಹೋಗೋಕೆ ಆಗುತ್ತೋ ಇಲ್ಲವೋ ಗೊತ್ತಿಲ್ಲ.. ಆದರೋ.. ನನ್ನ ಪ್ರೀತಿ ತುಂಬಿದ ಹಾರೈಕೆ  ಮಾತ್ರ.. ಅವಳ ಜೊತೆ ಜೊತೇನೆ ಸದಾ ಇರುತ್ತೆ.."

ಹುಂ ಕೊನೆದಾಗಿ ಒಂದು ಮಾತು.. ಬೆಳ್ಳಗೆ ಇರೋದೆಲ್ಲ ಹಾಲಲ್ಲ.. ಹಾಗೆ.. ಕಣ್ಣಿಗೆ ಕಾನೋದೆಲ್ಲ ಸತ್ಯ ಅಲ್ಲ.. ಅದರಲ್ಲೋ.. ಮಹಿಳ ದಿನವಾದ.. ಇಂದೇ.. ಈ ಪೋಸ್ಟ್ ಮಾಡ್ತಾ ಇದ್ದೀನಿ.. ಬಿಚ್ಚು ಮನಸಿನ ಹುಡುಗಿಯರೆಲ್ಲ ಕೆಟ್ಟವರು ಅನ್ನೋಕಾಗಲ್ಲ.. ಹಾಗೆ.. ಸುಮ್ಮನೆ ಇರೋ.. ಹೆಣ್ಣ ಮಕ್ಕಳೆಲ್ಲ.. ಸಾಚ ಅಂತ ನಾನು ಹೇಳೋಕೆ ತಯಾರಿಲ್ಲ.. ಆದರೂ ಅವರು ಎಂತವ್ರೆ ಆಗಿದ್ರೂ   ಅವರೆಲ್ಲರ ಹೃದಯದಲ್ಲಿ ಕಾಣದೆ ಇದ್ದರು.. ಮಮತೆಯ ತಾಯಿ ಇದ್ದೆ ಇರ್ತಾಳೆ.. ಅದು ನಾನು ನನ್ನ ಇ ತಂಗಿಯಲ್ಲಿ ಕಂಡಿರುವೆ ಅಂದ್ರೆ.. ನೀವು ನಂಬಲೇ ಬೇಕು.. ಹುಂ ನಾನು ಎಲ್ಲರಂತೆ ಆಗಿದ್ದೆ.. ಅವಳಿಂದ ನಾನು ಬದಲಾದೆ..

Friday, March 4, 2011

ಹೇ ಅರೆ ಮಲೆನಾಡ.. ಬೆಡಗಿ..
                           ನಿನ್ನ ತುಂಬಾ ಮಿಸ್ ಮಾಡ್ಕೊತ ಇದೀನಿ.. ಕಣೆ.. 
"ಏನು.. ಬಿಟ್ಟು ಹೋಗಬೇಕಿದ್ದರೆ.. ಗೊತ್ತಾಗಲಿಲ್ಲವ.. ನನ್ನ ನೋವು ನಿನಗೆ ಅರ್ಥ ಆಗಲಿಲ್ಲವ.. ಎಲ್ಲಾ ಹುಡುಗರಂತೆ.. ನೀನು..  
ಈಗೇಕೆ.. ನನ್ನ ನೆನಪು..???.. ಏನು.???. ನಾನು ಏನು ಮಾಡಿದೆ..ಎಂದು.. ನನ್ನ ಬಿಟ್ಟು ಹೋದೆ?? ನಿನ್ನ ಮೇಲೆ ನಾನು ಅದೆಷ್ಟು ನಂಬಿಕೆ ಇಟ್ಟಿದ್ದೆ..ಅದಕ್ಕಾಗೆ.. ಬೇರೆಯವರು..ಹೊಟ್ಟೆಕಿಚ್ಚು.. ಪಡುವಷ್ಟು.. ನೀನು ಸಂತೋಷವಾಗಿ ನನ್ನೊಂದಿಗೆ  ಇರಬೇಕೆಂದು.. ನಿನ್ನ ನೋವಿನಲ್ಲೂ.. ನಾ ಜೊತೆ ಇದ್ದೆ... ಅದಾರೋ .. ಕರೆದರೆಂದು.. ಒಂದು ಮಾತು.. ನನ್ನ ಕೇಳದೆ.. ಓದಿ ಹೋದೆಯಲ್ಲ.. ನಿನಗೇಕೆ ಬರಬೇಕು ನನ್ನ ನೆನಪು?? " ಎಂದು.. ಯೋಚಿಸುತ್ತಿರುವೆಯ.. ನನ್ನ ಗೆಳತಿ..

ನೀನು ಈ ರೀತಿ.. ಪುಂಖಾನುಪುಂಖವಾಗಿ.. ಪ್ರಶ್ನೆಗಳ ಮಳೆಗರೆದರೆ.. ನಾನು ಏನೆಂದು.. ಉತ್ತರ.. ಹೇಳಿಯೇನು.. ಓಹೋ... ಕ್ಷಮಯಾಧರಿತ್ರಿ.. 
ನೀನು ಹೇಳುವುದು.. ನಿಜ.. ನೀನು ನನಗೇನು ಕಡಿಮೆ ಮಾಡಿದ್ದೆ..??? ನನಗೆ.. ನಿನ್ನಲ್ಲೇ.. ಮುಂದಿನ ಬದುಕನ್ನ ರೂಪಿಸಿಕೊಳ್ಳುವ ಅವಕಾಶವನ್ನ.. ನೀಡಿದೆ.. ಆದರೂ ಎಲ್ಲಾ.. ಕಾಲೇಜ್ ಓದಿದ ತರುಣರಂತೆ ನಾನು.. ನಿನ್ನ ಆ ಆಶ್ರಯವನ್ನ.. ನಿರ್ಲಕ್ಷಿಸಿ. ಓಡಿದೆ..
ಅದೇನೋ ಹೇಳ್ತಾರಲ್ಲ.. ಕೆಲವರಿಗೆ.. ಪಕ್ಕದ ಮನೆಯವಳೇ.. ತಮ್ಮನೆಯವಳಿಗಿಂತ ಸುರಸುಂದರಿ ಅಂತೆ ಕಾಣುತ್ತಾಳೆ.. ಅಂತೆ... ಹಾಗೇ.. ನೀನು ಕೊಟ್ಟ.. ಎಲ್ಲಾ ಸುಖವನ್ನ ಅನುಭವಿಸಿ ಕೊಬ್ಬಿದ್ದ ನನಗೆ.. ದೂರದಲ್ಲಿ.. ಮಾಲುಗಳು..ಆಯಟಿ ಬಿಟಿಗಳನ್ನ.. ಎಂ ಏನ್ ಸಿ ಕಂಪನಿಗಳನ್ನ ತನ್ನ ಮೈಗಳಲ್ಲಿ..ಹೊತ್ತು..ಜೀನ್ಸ್ ಪ್ಯಾಂಟು..ಹಾಗೂ ಟಿ ಶರ್ಟ್ ನಲ್ಲಿ ಕಂಗೊಳಿಸುವ.. ತುಂಬು ಯವ್ವನೆಯಾಗಿ ನಿಂತಿದ್ದಾ..ಆ ಬೆಂಗಳೂರು..ಎಂಬ.. ಕಾಂಕ್ರಿಟ್ ಮಾಯಂಗನೆಯೇ ನಿನಗೀಂತ ಚೆಲುವಾಗಿ ಕಂಡಳು. ಬಹುಶಃ  ಅವಳಿಗೂ ನಿನ್ನ ನೆರಳಲ್ಲಿ.. .. ನನ್ನ ಆ ಸುಖಿ ಮುಖ ಕಂಡು.. ಹೊಟ್ಟೆ ಕಿಚ್ಚು.. ಹುಟ್ಟಿರಬೇಕು.. ಅದಕ್ಕೆ ನನ್ನ.. ಕೈ ಬಿಸಿ ಕರೆದು.. ತನ್ನ ಮಾಯಾ ಜಗತ್ತಿನಲ್ಲಿ.. ಸೇರಿಸಿಕೊಂಡಿತು.. ಆಗ.. ಅವಳ ಕುಡಿ ನೋಟ.. ನಿಜಕ್ಕೂ.. ಎಂತವರಿಗೂ ಮತ್ತೆರಿಸುವಂತಿತ್ತು.. ಅದೇನೋ ಹೇಳ್ತುತ್ತರಲ್ಲ.. ದೂರದ.. ಬೆಟ್ಟದಂತೆ..ತುಂಬಾ ಸುಂದರವಾಗಿ.. ಕಂಡಿತು.. ಅವಳ ಆ ಒನಪು.. ಆ ಲಾವಣ್ಯ..
ಆದರೆ.. ಈಗೀಗ ತಿಳಿಯುತ್ತಿದೆ.. 
ಆಧುನಿಕತೆಯ ಆದ್ಧೂರಿತನದಲ್ಲಿ ತನ್ನ ನಿಸರ್ಗದತ್ತ ಸೌಂದರ್ಯವನ್ನ ಕಳೆದುಕೊಂಡು.. ಉದ್ಯಾನದ ಚೆಲುವೆಯ ಮಾಟವನ್ನ ಕಳಚಿಕೊಂಡು.. ಬರೆಯ ಕಾಂಕ್ರಿಟ್ ಸುಂದರಿ ಆಗಿರುವ.. ಇವಳನ್ನ ನಿನಗೆ ಹೋಲಿಸಬೇಕೆನಿಸಿದೆ.. ಹಾಗೇ ಹೋಲಿಸಲು ಹೋರಾಟಗಳೆಲ್ಲ.. ನನ್ನ ಹುಟ್ಟೂರು.. ಎಷ್ಟು.. ಸುಂದರಿ ಎಂದು.. ಅನಿಸದೆ.. ಇರದು..
ಹೌದು.. ಕಾಲದ ತಕ್ಕೆಯಲ್ಲಿ.. ಅನುಭಾವಿಯಾಗಿರುವ ನೀನು.. ಸಹಜ ಸೌಂದರ್ಯವನ್ನ.. ನಿನ್ನಲ್ಲೇ.. ಅಡಗಿಸಿ ಕೊಂಡಿರುವ.. ರೂಪವತಿ .. ಹಸಿರಿನ.. ಸೀರೆಯಿಂದ ನಿನ್ನ.. ಆ ಗುಡ್ಡ ಬೆಟ್ಟಗಳನ್ನ..ಹುದುಗಿಸಿಕೊಂಡು.. ಜೋಗ.. ಜಲಪಾತವನ್ನ.. ಆ ನಿನ್ನ ಸೀರೆಯ ಸೇರಗಾಗಿಸಿಕೊಂಡು .ಬುರುಡೆ, ಉಂಚಳ್ಳಿ..ಜಲಪಾತಗಳನ್ನ ನಿನ್ನ ಆ ಸೀರೆಯ ನೆರಿಗೆಗಳನ್ನಗಿಸಿಕೊಂಡು.. ಅಘನಾಶಿನಿ ನದಿಯನ್ನೇ ನಿನ್ನ ನೀಲ ಜಡೆಯನ್ನಾಗಿಸಿಕೊಂಡು ಒಯ್ಯಾರದಿ.. ಬಳಕುವ.. ಹದಿ ಹರೆಯದ.. ಚೆಲುವೆ ನೀನು..ಎಷ್ಟೋ ಕಾಲದಿಂದ.. ಒಂದೇ ತೆರನಗಿರುವ.. ಸಹಜ ಸುಂದರಿ ನೀನು..ತಾಯಿ ಕನ್ನಡಮ್ಮ ಭುವನೇಶ್ವರಿಯ ಏಕೈಕ ದೇಗುಲವನ್ನ. ನಿನ್ನ ಕೀರಿಟವನ್ನಾಗಿಸಿಕೊಂಡು ಮಿನುಗುತ್ತಿರುವ..ರೂಪಸಿ ಆಗಿರುವ .. 
 ನಿನಗೂ.. ಈ ಕಾಂಕ್ರೀಟ್  ಸುಂದರಿಗೂ ಹೋಲಿಕೆ ಮಾಡುವುದು ತರವೇನು..???

ಮೊದಲೆಲ್ಲ.. ನಿನ್ನ  ಈ ಸಹಜ ಸೌಂದರ್ಯ ನನಗೆ ಅದೆಷ್ಟು.. ಖುಷಿಯನ್ನ ನೀಡಿದೆ.. ಆ ನಿನ್ನ ಮಡಿಲಲ್ಲಿ.. ಬೆಳೆದ.. ಪುಣ್ಯ ನನ್ನದು..
ಆ ನಿನ್ನ ಮೊಗವನ್ನ.. ನೋಡಲು..ಎಂತವರು.. ಕ್ಲೀನ್ ಬೋಲ್ಡ್.. ನೀನು.. ನಿಜಕ್ಕೂ.. ಚಿರ ಯ್ವವನೆ..
  ಮೊದಲೆಲ್ಲ.. ಆ ಮೀನು ಪೇಟೆ ಜಾಗವನ್ನೇ ನರಕ ಎನ್ನುತಿದ್ದೆ. ಅದೆಷ್ಟು ಗಲೀಜು.. ಮೂಗು ಬಿಡಲಾಗದಷ್ಟು.. ಆದರೆ.. ಅದೊಂದನ್ನು ಬಿಟ್ಟರೆ.. ನಿನ್ನ ಪ್ರತಿ.. ಜಗವು ನಿರ್ಮಲ ನೆಮ್ಮದಿಯ ತಾಣ.. ಅದೇನೋ ಕಣೆ.. ಈಗ ಅನ್ನಿಸುತ್ತಿದೆ.. ಅದೇನು ಮಹಾ ನರಕವೇ ಅಲ್ಲಾ.. ಇಲ್ಲಿನ ಸ್ಲಂ  ಜಾಗಗಳು.. ನಿನ್ನ ಇಡಿ ಶರೀರವನ್ನು.. ಮುಳುಗಿಸುವಷ್ಟು.. ದೊಡ್ಡದಾಗಿದೆ..
 ಆದರೂ.. ಕೃತಕ ಅಲಂಕಾರದಿಂದ.. ಶೋಭಿಸುವ..ಅವಳೇ ಲೋಕದ ಕಣ್ಣಿಗೆ.. ಚೆನ್ನ..
.
ನಾ  ದುಃಖದಲ್ಲಿ ಇದ್ದಾಗೆಲ್ಲ.. ಮೈ ದಡವಿ ನಿನ್ನ ಮಡಿಲ ಮೇಲೆ ಮಲಗಿಸಿ.. ಸಂತೈಸಿದೆ.. ಗೆದ್ದು.. ಬಾ ಮಗನೆ.. ಎಂದು.. ನೀನು ನೀಡುತ್ತಿದ್ದ.. ಆ ಸ್ಪೂರ್ತಿಯ.. ಮಾತುಗಳು.. ನನ್ನ  ಬಳಲಿದ... ಜೀವನಕ್ಕೆ.. ಹೊಸ.. ಚೇತನವನ್ನ.. ನೀಡುತ್ತಿತ್ತು... ಆ ಚೇತನ ನನಗೆ ಮತ್ತೆ ಬೇಕೆನಿಸಿದೆ.. ನಿನ್ನ ಮಡಿಲಲ್ಲಿ ಮಲಗಿ..ನಿನ್ನ ಸಾಂತ್ವನದ..ಮಾತುಗಳನ್ನ ಕೆಳ ಬೇಕೆನಿಸಿದೆ.. 
"ಇದೇನಿದು.. ಇವನು ನಾನು ಬೆಳೆಸಿದ.. ಹುಡಗನ ಬಾಯಿಂದ.. ಬರುತ್ತಿರುವ.. ಮಾತೆ.. ಇಟ್ಟ ಹೆಜ್ಜೆಯನ್ನ.. ಹಿಂದಕ್ಕೆ.. ಹಾಕದಂತೆ.. ಪ್ರೋತ್ಶಹಿಸಿ ಬೆಳೆಸಿದರು.. ನೀನು.. ಹೇಡಿಯಂತೆ.. ಮತ್ತೆ ನನ್ನ ಅಶ್ರಯವೇ ಬೇಕೆನ್ನುವಿಯಲ್ಲ.. ಎಂದು.. ಕೇಳುತ್ತಿರುವೆಯೇನು??"  ಖಂಡಿತ.. ಅನ್ಯಥಾ ಭಾವಿಸದಿರು.. ನಾನು.. ಬೇಡುತ್ತಿರುವುದು.. ನಿನ್ನ ಮಡಿಲಿನಲ್ಲಿ.. ತಲೆ ಇಟ್ಟು. ಮತ್ತೆ ಕೇಳಬೇಕು ಅನ್ನಿಸುತ್ತಿದೆ.. ಆ ನಿನ್ನ ಚೇತನದಾಯಕ ಹಿತ ನುಡಿಗಳನ್ನ.. ನೀನು..ಆ ಹೊಸ ಚೇತನವನ್ನ.. ನೀಡು ಎಂದೆನೇ .. ಹೊರತು.. ರಣಹೇಡಿಯಂತೆ.. ಹಿಂದೆ.. ಓಡಿ ಬಂದು.. ನಿನ್ನ ಆಶ್ರಯ.. ಬೇಡಿಲ್ಲ.. ನಿನ್ನ ಆಶ್ರಯಕ್ಕೆ.. ಬರುವಾ ಆಸೆ ಏನೋ ಇದೆ.. ಆದರೆ.. ಹೇಡಿ ಆಗಿ ಅಲ್ಲಾ.. ವಿಜಯಿ ಆಗಿ.. ಎಷ್ಟೆಂದರೂ.. ನೀನು.. ಬೆಳೆಸಿದ.. ಹುಡುಗ.. ನಾನು.. ನನ್ನ ಕಿಂಚಿತ್ತು.. ಸೇವೆಯನ್ನಾದರೂ.. ನಿನಗಾಗಿ.. ಮುಡಿಪಾಗಿರಿಸ ಬೇಕೆಂದಿದೆ.. ಅದು ನಿನ್ನ ಪ್ರೋತ್ಸಾಹದಿಂದ ಮಾತ್ರ ಸಾಧ್ಯ..
.
ಇಂತಿ ನಿನ್ನ ಹವಿ ಹುಡುಗ..

Friday, February 25, 2011

ಕಾಮನಬಿಲ್ಲಿನಲ್ಲಿ ಒಂದೇ ಬಣ್ಣ ಇರಲು ಸಾಧ್ಯವೇನು??

ಹೇ ನನ್ನ ಮನದನ್ನೆ..


                      ದಯಮಾಡಿ ಕ್ಷಮೆ ಇರಲಿ.. ತುಂಬಾ ದಿನವಾಯಿತು.. ನಿನಗೊಂದು ಓಲೆಯನ್ನ  ಬರೆಯಲಾಗಲಿಲ್ಲ.. ಹುಂ ನನಗೆ ಗೊತ್ತು.. ನೀನು ಇದನ್ನ ನೋಡಿ.. ನಿನ್ನ ಬಾಯಿ ಇಂದ ಬರುವ ಉದ್ಗಾರ ಏನೆಂದು 
" ಅಯ್ಯೋ ಪಾಪಿ ಇನ್ನೂ ಬದುಕಿದ್ದಿಯಾ?? ಅದೇನೋ ಹೇಳ್ತಿದ್ದೆ ನಿನ್ನ ಒಂದು ಕ್ಷಣ ಬಿಟ್ಟು ಬದುಕಿರೋಲ್ಲ ಅಂತ ಏನೇನೋ.. ನಾನೆಲ್ಲೋ ಹೋಗೆ ಬಿಟ್ಟೆ ಅಂದ್ಕೊಂಡನಲ್ವೋ.. ಇನ್ನೂ ಸ್ವಲ್ಪ ತಡದಿದ್ದ್ರೆ.. ಅಷ್ಟೇ... ನಾನು ನಿನ್ನ ನೆನಪಲ್ಲಿ ಅತ್ತು ಅತ್ತು.. ಕಂಬನಿ ಎಲ್ಲಾ ಬತ್ತಿದ.. ಮೇಲೆ ನಾನು ಸಾಯಬೇಕು ಅಂತ ಇದ್ದೆ ಅಂತ ಹಳೆ ಕಾಲದ ಹೆಣ್ಣು ಮಕ್ಕಳಂತೆ ಹೇಳ್ತೀನಿ ಅಂದ್ಕೋ ಬೇಡ.. ಇನ್ನೂ ಒಳ್ಳೆ ಹುಡುಗನ್ನ ಹುಡುಕಲಿಕ್ಕೆ ಹೊರಟಿದ್ದೆ.. ನಿನ್ನ ಪುಣ್ಯ ನನಗೆ ನಿನ್ನ ಅಂತ ಕೋತಿ ಸಿಗಲೇ ಇಲ್ಲವೋ.. ಅದಕ್ಕೆ ಬಚಾವಾದೆ.. ಇನ್ನೊಮ್ಮೆ.. ಹೀಗೆ ಮಾಡದರೆ.. ಮತ್ತೆ  ಈ ಅವಕಾಶ ಸಿಗುತ್ತೆ ಅಂದ್ಕೋ ಬೇಡ.. "ಅಂತ ಗೊಣಗಾಟ ಶುರುವಾಗಿದೆ ಅಂತ ನನಗೆ ಗೊತ್ತು.. ನನ್ನ ಚಿನ್ನು..

  ನನಗೆ ಗೊತ್ತು.. ಚಿನ್ನು.. ನಿನಗೆ ನನ್ನ ಮೇಲೆ ಎಷ್ಟು ಕೋಪ ಬಂದಿದೆ ಅಂತ ಆದ್ರೆ ಏನ್ ಮಾಡಲಿ..ಚಿನ್ನು ನಾನು ನಮ್ಮ ಭವಿಷ್ಯವನ್ನು ಕಟ್ಟಕೋ ಬೇಕಲ್ವ.. ಬರೆ ನಾನು ನೀನು ಕನಸು ಕಾಣತ ಕುತುಬಿಟ್ಟರೆ ಆ ನಮ್ಮ ಕನಸು ನನಸು ಮಾಡ್ಕೊಳ್ಳೋದು ಯಾವಾಗ.. ನನ್ನ ಚಲುವೆ.. ನೀನು ತುಂಬಾ ಜಾಣೆ ಇದನ್ನೆಲ್ಲಾ ಅರ್ಥ ಮಾಡ್ಕೋತಿಯ ಅಂದ್ಕೋತೀನಿ.. ಕಣೆ.. ಹೌದು.. ನಾನು ನಿನ್ನ ಒಂದು ತಿಗಲಿನಲ್ಲಿ ಬಂದಿರಬಹುದಾದ.. ೧೫ ಪತ್ರಗಳಿಗೆ ಒಂದೇ ಪತ್ರದಲ್ಲಿ ಸಾಧ್ಯವಾದಷ್ಟು ಉತ್ತರ ಬರೆದು ಕಳಿಸುತ್ತೇನೆ..  

           ಇವಾಗ ನಿನಗೊಂದು.. ವಿಶಿಷ್ಟ ಕೊರೆತವನ್ನ ಕೊರೆಯಬೇಕೆಂದು.. ಸಿದ್ಧ ಆಗಿದ್ದೇನೆ.. ದಯಮಾಡಿ ಸಹಕರಿಸಿ ಓದು.. ಹೀಗೊಂದು ವಿಚಾರ.. ಕಾಮನ ಬಿಲ್ಲಿನಲ್ಲಿ ಒಂದು ವೇಳೆ ಒಂದೇ ಬಣ್ಣ ಇದ್ದಿದ್ದರೆ ಏನಾಗ್ತಿತ್ತು?? ಅದನ್ನ ಯಾರದ್ರು ಕಾಮನಬಿಲ್ಲು ಅನ್ನುತ್ತಿದ್ದರೆ??? ಹಾಗೇ ಬಾಳಲ್ಲೂ , ಸಮಾಜದಲ್ಲೂ.. ಎಲ್ಲೇಲ್ಲೂ ವೈವಿದ್ಯತೆಯೇ ಇಲ್ಲದಿದ್ದರೆ.. ಎಲ್ಲವು.. ಒಂದೇ ರೀತಿ ಇದ್ದರೆ.. ನಾಳೆಯ ಬದುಕಿನ ಬಗೆಗೆ ಯಾರಾದರು ಕನಸು ಕಾಣುತ್ತಿದ್ದರೆ??? ಜೀವನದಲ್ಲಿ, ಸಮಾಜದಲ್ಲಿ ಆಸಕ್ತಿ ಇರುತ್ತಿತ್ತೆನು?? ಅದು ಅಲ್ಲದೆ.. ನೀನು ನನಗೆ ಯಾಕೆ ಈ ರೀತಿ ಕಾಡುತ್ತಿದ್ದೆ.. ನಾನೇಕೆ ನಿನಗೆ ಕೊರೆಯುತ್ತಿದ್ದೆ.. ಅಲ್ಲವ.. ಹೇ ಏನಾಯ್ತು... ಇವಗಲೇ.. ನಿದ್ದೆ ಹೋದೆಯ.. ಹೇ ನನ್ನ ಬರಹದ ಸ್ಪೂರ್ತಿಯೇ.. ನೀನು ಈ ರೀತಿ ಮೌನಿ ಆದರೆ ಸಹಿಸೇನು.. ಪೀಠಿಕೆಯೇ ಜಾಸ್ತಿ ಆಯಿತು ಅಂತ ಬೈತಿದಿಯ.. ನೆರವಾಗಿ ವಿಷಯಕ್ಕೆ ಬರುತ್ತೇನೆ ಮಾರಾಯ್ತಿ.
.
            ನನ್ನ ಪ್ರಕಾರ ವೈವಿದ್ಯತೆ ಇರುವುದರಿಂದಲೇ ಸಮಾಜ ಸುಂದರವಾಗಿದೆ.. ಸೋಲು ಗೆಲುವು.. ಎಲ್ಲಾ ಇದ್ದರೇನೆ ಬಾಳು ಸೊಗಸಾಗಿರುತ್ತೆ.. ಹಾಗೇ ನಮ್ಮ ಭವ್ಯ ಜಾತ್ಯತೀತ ಭಾರತದಲ್ಲಿ ಜಾತಿ ಅನ್ನೋ ವ್ಯವಸ್ತೆ ಅದರ ಪಾಡಿಗೆ ಅದು  ಒಂದು ಪ್ರಮಾಣದಲ್ಲಿ ಇದ್ದರೇನೆ  ಭಾರತದ ಸಂಸ್ಕೃತಿಗೆ ಒಂದು ಸೊಬಗು.. ಹುಂ ಎಲ್ಲಾ ನಮ್ಮ ಇಂದಿನ ಮೇಧಾವಿಗಳು ನನ್ನ ಈ ಮಾತು ಕೇಳದ್ರೆ ಖಂಡಿತ ಛೀ ಮಾರಿ ಹಾಕ್ತಾರೆ ಅಂತ ಗೊತ್ತು ನನಗೆ .. ಯಾಕೆಂದರೆ.. ಅವರೆಲ್ಲ .. ಜಾತಿ ರಹಿತ ಸಮಾಜದ ನಿರ್ಮತ್ರರಾಗುವ ಕನಸು ಹೊತ್ತವ್ರಲ್ಲ್ವ.. ಅದಕ್ಕೆ ನಾನು ಇಂತ ಅಸಂಬದ್ದ  ವಿಚಾರಗಳನ್ನ ನಿನ್ನಲ್ಲಿ ಹೇಳಿಕೊಳ್ಳುವುದು.. ಹೌದು... ಅವರು ಜಾತಿರಹಿತ ಸಮಾಜ ನಿರ್ಮಾಣ ಮಾಡಿ.. ಮತ್ತೇನು ಮಾಡಿಯಾರು.. ??ಮನುಷ್ಯನ  ಹುಟ್ಟು ಸ್ವಭಾವವನ್ನ ಹೋಗಲಾಡಿಸಲು ಆಗುವುದೇನು?? ಜಾತಿ ಪದ್ಧತಿ  ಹೋಗಿ.. ಪಾಶ್ಚಾತ್ಯರಲ್ಲಿ ಇರುವಂತೆ.. ವರ್ಗ ಮದರಿಯ ಬೇರ್ಪಡುವಿಕೆ ಶುರುವಾಗುವುದು.. ಅಷ್ಟೇ. ಅದೇನು ಇದಕ್ಕಿಂತ ಒಳ್ಳೆಯದೆನು?? ಅದು ಅಲ್ಲದೆ.. ಈ ನಮ್ಮ ಭವ್ಯ ಜಾತ್ಯತೀತ ಭಾರತ ದೇಶದಲ್ಲಿ.. ಜಾತಿ ಆಧಾರದ ಮೇಲೆ ತಮ್ಮ ಬೆಳೆ ಬೇಯಿಸಿಕೊಂಡು.. ಬದುಕುತ್ತಿರುವ.. ರಾಜಕಾರಣಿಗಳ ಪಾಡೇನು?? ಅವರು.. ತಮ್ಮ.. ತಲೆಯನ್ನ.. ದುಡ್ಡು ಮಾಡುವದರ ಜೊತೆಗೆ ಮತ್ತೆ ಹೊಸ ರಣತಂತ್ರಕ್ಕಾಗಿ ಉಪಯೋಗಿಸಬೇಕಲ್ಲ.. ಸುಂದರಿ.. ಅದು ಎಷ್ಟೊಂದು.. ಕಷ್ಟದಾಯಕವಲ್ಲವೇ?? ಪಾಪ..!!!

 "ಹುಂ ನಿನಗ್ಯಾಕೆ ಇವೆಲ್ಲ ನಿನಾಯಿತು ನಿನ್ನ ಬದುಕಾಯಿತು.. ಅಂತ ಇರೋಕಗಲ್ವ ಅಂಥ ಬೈತಿದಿಯ.. "ಹುಂ.. ಜಾತ್ಯತಿತತೆಯ ಬಗ್ಗೆ ಮಾತನಾಡುವ.. ಹುಂಬ.. ಹಾಗೂ ಮೇಧಾವಿ.. ಬೊಗಳೆ ಭಟ್ಟರನ್ನ ಕಂಡಾಗ ಮೈ ಎಲ್ಲಾ ಉರಿಊತ್ತದೆ  ಗೆಳತಿ.. 
ಅಲ್ಲಾ ಅಂತವರಿಗೆಲ್ಲ ಒಂದು ಖಾಸಗಿ ಪ್ರಶ್ನೆ.. ಕೇಳಬೇಕು.. ಅನ್ನಿಸುತ್ತಿದೆ.. ಅಂಥವರ  ಮಕ್ಕಳು  ಬೇರೆ ಉನ್ನತ ಜಾತಿಯ ಕನ್ಯೆಯನ್ನ/ಹುಡುಗನನ್ನ ಮದುವೆ ಆದರೆ.. ಅವರು ಖಂಡಿತ..ಸಂತೋಷದಿಂದ  ಒಪ್ಪುವರು ಅಂಥ ನನಗೆ ಗೊತ್ತು.. ಅದೇ.. ಅವರ ಜಾತಿಗಿಂತ ನಿಮ್ನ ವರ್ಗದ ಹುಡುಗ/ಹುಡುಗಿ ಯನ್ನ ಮದುವೆಯಾಗಿ ಬಂದರೆ ಅವರು ಅದನ್ನ ಅಷ್ಟೇ ಸಂತೋಷವಾಗಿ ಸ್ವೀಕರಿಸುವರೆನು?? ಹುಂ ಮೇಲಿಂದ.. ಒಪ್ಪಿದರು..ಅವರ ಒಳ ಮನಸ್ಸು ಕೊರಗುತ್ತಲೇ ಇರುವುದು..ಇದು ಮಾತ್ರ ದಿಟ..ಕಣೆ.. ಹಾಗಾದಾಗಲೇ.. ಅವರ ನೈಜ ಬಣ್ಣ ಬಯಲಾಗುವುದು..
ಅದಕ್ಕೆ ನಾನು ಹೇಳಿದ್ದು.. ಪಾಶ್ಚಿಮಾತ್ಯರಿಗೆ  ವರ್ಗ ಪದ್ಧತಿ ಹೇಗೋ ಹಾಗೇ ನಮಗೆ ಜಾತಿ ಪದ್ಧತಿ.. ಹುಂ ನನಗೆ ಗೊತ್ತು.. ನೀನು ಮನಸಿನಲ್ಲೇ.. ಇವನು ಪಕ್ಕ.. ಸಂಪ್ರದಾಯವಾದಿ ಅಂತ ಗೊಣಗುತ್ತಿರುವೆ ಅಂತ ಗೊತ್ತು.. 
ಇಲ್ಲಾ ಕಣೆ ನಾನು ವಾಸ್ತವವಾದಿ.. ನನಗೆ ನಿಸರ್ಗ, ಸಮಾಜ.. ಮನುಷ್ಯರು ಅವರ ನೈಜ ಆಗಿ ಕಂಡರೆನೆ ತುಂಬಾ ಇಷ್ಟ.. ಹೌದು.. 
ನೀನು ಲಂಗದಾವನಿಯಲ್ಲಿ ಕಂಡಷ್ಟು ಚಂದ ಪ್ಯಾಂಟು ಶರ್ಟು ಹಾಕಿದರೆ ಕಾಣಲಾರೆ.. ಎಂದು ನಾನು ಅದೆಷ್ಟು ಬಾರಿ ನಿನಗೆ ಹೇಳಿಲ್ಲ.. ಹಾಗೇ..  ನೀನು ಚಂದ ಕಾಣುತ್ತಿಯ ಅಂದ ಮಾತ್ರಕ್ಕೆ ನೀನು ಅಧುನಿಕ ಉಡುಗೆ ತೊಡಲೇ ಬಾರದು ಎಂದು ನಾನು ಎಂದಾದರು ಹೇಳಿರುವೆನೇನು???? 
ಅದೇ ರೀತಿ.. ಜಾತಿ ವ್ಯವಸ್ಥೆಯಲ್ಲಿಯ  ಎಲ್ಲಾ ಲೋಪ ದೋಷಗಳನ್ನು ನಾನು ಸಮರ್ಥಿಸುತ್ತಿಲ್ಲ ಕೂಸೇ.. ಅದನ್ನ ಮಾಡಿದವರು..ನಮ್ಮ ಹಿಂದಿನವರು.. ಅದು ಅಂದಿನದು..ನಾವು ಕಾಲಕ್ಕೆ ತಕ್ಕಂತೆ ಅದನ್ನ ಬದಲಾಯಿಸಿಕೊಳ್ಳಬೇಕು.. ಹಾಗಂತ.. ಅದನ್ನ ನಿರ್ನಾಮವೇ ಮಾಡಬೇಕು ಅನ್ನುವುದು ತಪ್ಪು.. ಏನಂತೀಯ .. ನನ್ನ ಮನದ ಒಡತಿಯೇ..?? 
 ಬರೆ ಇದೆ ಆಯಿತು.. ನಮ್ಮಿಬ್ಬರ ಬಗೆಗಿನ ಕುಶಲೋಪರಿ ನಡೆದೇ ಇಲ್ಲವಲ್ಲೋ ಅಂಥ ಹೇಳ್ತಿದಿಯ?? ಹೇ ಗುಬ್ಬಿ.. ನಿನ್ನ ನೋಡ್ಬೇಕು ಅನ್ನಿಸ್ತಿದೆ ಕಣೆ.. ಆದಷ್ಟು ಬೇಗ.. ಇಲ್ಲಿಂದ.. ಓಡಿ ಬಂದು ಬಿಡುತ್ತೇನೆ.. ಯಾಕೋ ನಿನ್ನ ಮಡಿಲಲ್ಲಿ.. ಮಲಗಿ.. ನಾವು.. ಕಂಡ ಕನಸುಗಳ ಮತ್ತೊಮ್ಮೆ ಮೆಲುಕು ಹಾಕಬೇಕು ಅನ್ನಿಸಿದೆ..
              ಹೌದು.. ಆಲೆಮನೆ ಶುರು ಆಯ್ತಾ??? ನನ್ನ ಕರೆದೆ ಇಲ್ಲ??? ಕ್ಷಮೆ ಇರಲಿ.. ನೀನು ಮೊನ್ನೆ ಕಳಿಸಿದ ಪತ್ರದಲ್ಲಿ ಕರೆದಿರಬೇಕು.. ಅದನ್ನು ಇನ್ನು ಒಡೆದು ಓದಿಲ್ಲ..  
ಇಂತಿ ಎಂದೆದಿಗೂ ನಿನ್ನ ಉಸಿರಾಗಿರುವವ
~ ಕಮಲು ~
-- 

-- 

Thursday, February 24, 2011

ಸುಳ್ಳಿನ ಸುಳಿಯಲ್ಲಿ - (ಅನುಭವ ಕಲಿಸಿದ ಪಾಠ )


  ತರುಣ್ ಅದೇಕೋ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಮಲಗಲು ರೆಡಿ ಆಗಿದ್ದಾಗ ನಡೆದ ಘಟನೆ ಇಂದ ಸ್ವಲ್ಪ ವಿಚಲಿತನಾದ..ಹಾಸಿಗೆಯ ಮೇಲೆ ಅಂಗತಾನೆ ಮಲಗಿ ಹಾಗೇ ಅದಾವುದೋ ನೆನಪಿನ ಲೋಕಕ್ಕೆ. ತೇಲಿ ಹೋದ..  
             "ನನಗೆ ಯಾಕೋ ಗೊತ್ತಿಲ್ಲ.. ಆಗಾಗ ಬಾಲ್ಯದ ದಿನದ ನೆನಪುಗಳು ಕಾಡುತ್ತವೆ.. ಅಂದು ಹಾಗೇ ಆಯಿತು.. ನಮ್ಮ ಚಿಕ್ಕಪ್ಪನಾ ಮಗ ಶಾಲೆ ಮುಗಿದ ಮೇಲೆ ಮನೆಗೆ ಬರಬೇಕಾದವನು.. ರಾತ್ರಿ ನಮ್ಮ ಊಟ ಮುಗಿದ ಮೇಲೆ.. ಮನೆ ಸೇರಿದ.. ಆದಗೂ ಯಾರು ಅವನನ್ನ ಏನು ಹೇಳಲಿಲ್ಲ.. ಕೇಳಲು ಹೋದ ಕೆಲವರಿಗೆ ೨ ನೇ ತರಗತಿಯ ಪುಟ್ಟ ಹುಡುಗ ದಿಟ್ಟ ಸುಳ್ಳುಗಳನ್ನ ಹೇಳಿ ಪುಸುಲಾಯಿಸಿದ. ಅಷ್ಟೊತ್ತಿಗಾದರೂ ಮನೆ ಸೇರಿದನಲ್ಲ ತನ್ನ ಮಗ ಅನ್ನೋ ಧನ್ಯತಾ ಭಾವ ಅವನ ತಾಯಿಯಲ್ಲಿ.. ಅದಕ್ಕಾಗಿ ಆ ವಿಷಯವಾಗಿ.. ಅವನ್ನನ್ನ ಯಾರಾದರು ಕೇಳಿದರೆ.. ತಾಯಿಗೆ ಕೋಪ.. ಇದು ಸಹಜ ಅಲ್ಲವೇ..
ಈ ಘಟನೆಯೇ.. ನನ್ನ ನೆನಪಿನ ಗೂಡಲ್ಲಿ ಹಾಸಿ ಹೊದ್ದು ಮಲಗಿದ್ದ.. ನನ್ನ ಬಾಲ್ಯದ ಘಟನೆಗಳು ಎದ್ದು ಕಾಡ ತೊಡಗಿದವು.. ಆ ಸುಳ್ಳು ಹೇಳುವ ಚಟ ಬಿಡಿಸಿದ ಘಟನೆ ನಿಮಗೆ ಹೇಳಲೇ ಬೇಕು..
ನಾನು ಕೂಡ ಕುಟುಂಬದ ಜಂಜಾಟದಲ್ಲಿ ಎಲ್ಲರು ನನ್ನವರು ಅನ್ನೋ ಭಾವನೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದೆ.. ಅಷ್ಟೊತ್ತಿಗಾಗಲೇ.. ನನ್ನ ಹುಡುಗಾಟಿಕೆಯ ಗುಣದಿಂದಾಗಿ ಎಲ್ಲರಿಗಿಂತ ಖದೀಮ ನಾನಗಿದ್ದೆ.. ಅದಕ್ಕಾಗೆ.. ನಾವೆಲ್ಲ ಆಟ ಆಡುವಾಗ ಯಾರೇ ತಪ್ಪು ಮಾಡಿ ಗಲಾಟೆ ನಡೆದರೂ.. ಅಪ್ಪನಿಗೆ ಆ ಗಲಾಟೆ ಸುದ್ದಿ ಮುಟ್ಟದೆ ಇರುತ್ತಿರಲಿಲ್ಲ ಅದರ ಪರಿಣಾಮ .. ನನಗೆ ಚಂ ಚಂ ಛಡಿಯ ರುಚಿ ಸಿಗದೇ ಇರುತ್ತಿರಲಿಲ್ಲ.. ಇದನ್ನೆಲ್ಲಾ ನೋಡಿದ ನನ್ನ ಅಜ್ಜಿ.. ಬೇಸೆತ್ತು.. ನನ್ನ ಬೇರೆ ಕಡೆ ಹೈಸ್ಚೂಲ್  ಓದಲು.. ಬಿಟ್ಟರು..
ಜಾತ್ರೆಯಲ್ಲಿ ಬೆಳೆದವನಿಗೆ ಏಕಾಂತದ ಜೀವನ ಹೇಗೆ ಹಿಡಿಸಿತು.. ಆ ಮನೆ ನಿಜಕ್ಕೂ.. ನನ್ನ ಪಾಲಿಗೆ ದೇವರ ಮನೆ ಅಂತೆ ಅವರು.. ತಮ್ಮ ಮನೆಯ ಮಗನಂತೆ ನನ್ನ ನೋಡಿಕೊಲ್ಲುತಿದ್ದರು.. ನನಗೆ ಯಾಕೋ.. ಆ ಗಲಾಟೆ ಇಲ್ಲದ ಜೀವನ ಹಿಡಿಸಲಾರಾದೆ ಹೋಗಿದ್ದೆ.. ಅವರ ಮನೆಯವರಿಗೂ ನಾನು ಸಾಕಸ್ಟು ನೋವನ್ನ ನೀಡಿರಬೇಕು.. ಆದರೇನು.. ಕ್ರಮೇಣ ಏಕಾಂತದ ಜೀವನ ಒಗ್ಗಿ ಹೋಯಿತು.. ಹೊಸ ಗೆಳೆಯರ ಪರಿಚಯ ಆಯಿತು.. ಮಳೆಗಾಲ ಮುಗಿದು.. ಚಳಿಗಾಲ ಬಂತು.. 
ಮಳೆಗಾಲದಲ್ಲಿ.. ಎಲ್ಲಾ ಕಡೆ ಹಸಿರಾಗುವ ಕಳವಾದರೆ.. ಮಕ್ಕಳ ಮನಸಿಗೆ ಅದು ಬೇಸರದ ಕಾಲವಲ್ಲವೇ.. ಚಳಿಗಾಲ ಬಂತು.. ಅಲ್ಲಿನ ಎಲ್ಲಾ ಮಿತ್ರರ ಸಂಗಡ.. ಸೇರಿ.. ನನ್ನ ಬಾಲವು ಚಿಗುರ ತೊಡಗಿತು.. ಹಾಗೇ ಪರಿಚಿತ ಆದವರಲ್ಲಿ.. ವರುಣ್ ಕೂಡ ಒಬ್ಬ ತುಂಬಾ ಶ್ರೀಮಂತರ ಮನೆಯವನು... ದಿನವು.. ಹೈಸ್ಚೂಲ್ಗೆ ಸೈಕಲ್ ತರುತ್ತಿದ.. ನಾನು ಪಾದಚಾರಿ ಒಂದೇ ದಾರಿಯಲ್ಲಿ ಹೋಗುವವರು ಅಂದ ಮೇಲೆ ಕೇಳಬೇಕೆ.. ಇನ್ನೂ ಆತ್ಮೀಯತೆ ಬೆಳೆಯಿತು..
 ಒಂದು ಶನಿವಾರ.. ಮದ್ಯಾನ್ಹ ಹೈಸ್ಚೂಲ್ ಮುಗಿಸಿ ಮನೆಯಕಡೆ ಹೋಗುವಾಗ.. ಅವನು.. ಹೇಯ್ ದೋಸ್ತ್.. ಸೈಕಲ್ ಹತ್ತು.. ಬೇಗ ಹೋಗೋಣ ಅಂತ.. ಹೇಳಿದ.. ನಾನು.. ಅವನ ಮಾತನ್ನು ಕೇಳಿ.. ಸೈಕಲ್ ಹತ್ತಿ.. ಒಂದು ಸ್ವಲ್ಪ್ ದೂರ ಬಂದಿರಬಹುದು.. ಅವನ ನಾಗಲೋಟದ ಸೈಕಲ್ ಸವಾರಿಯ ಆನಂದ ಸವಿಯುತ್ತಿರುವಗಲೇ.. ಒಂದು ಕ್ಷಣ ಏನಾಯಿತು ಎಂದು ತಿಳಿಯುವಷ್ಟರಲ್ಲಿ  ಇಬ್ಬರು.. ಕೆಳ ಬಿದ್ದಿದ್ದೆವು..
 ಅವನು ನನ್ನಂತೆ ಬೇರೆಯವರ ಮನೆಯಿಂದ ಸ್ಚೂಲ್ಗೆ ಬರುತ್ತಿದ್ದವನು.. ಇಬ್ಬರಿಗೂ ಏನು ಮಾಡಬೇಕೆಂದೇ ತೋಚಲಿಲ್ಲ.. ಇಬ್ಬರು.. ಸೈಕಲ್.. ಅಪಘಾತ ಆಗಿ ಹೀಗೆ ಪೆಟ್ಟಾಯಿತು ಅನ್ನಲು ಭಯ.. ಆದುದರಿಂದ.. ಇಬ್ಬರು.. ನೋವಿನ ಮದುವಿನಲ್ಲೇ.. ಆಸ್ಪತ್ರೆ ಗೆ ಸೇರುವ ದಾರಿಯಲ್ಲಿ ಮಾತನಾಡಿಕೊಂಡೆವು.. ನಾನು ಎಂದಿನಂತೆ ನಡೆದೇ ಹೋಗುತ್ತಿದ್ದೆ.. ಅವನು.. ಸೈಕಲ್ ಹೊಡೆದು ಕೊಂಡು.. ನನ್ನ ದಾಟುವ ವೇಳೆಗೆ ಸರಿಯಾಗಿ.. ಒಂದು ಲಾರಿಯವನು ಬಂದ.. ಇದರಿಂದ.. ಬ್ಯಾಲೆನ್ಸ್ ತಪ್ಪಿ.. ಅವನು ನನಗೆ ಗುದ್ದಿದ.. ಅದು ಅಲ್ಲದೆ.. ಅವನು ಬಿದ್ದ.. ಇದು..ನಾವು.. ನಮ್ಮ ಪಳಕರಲ್ಲಿ ಹೇಳ್ಬೇಕು ಅಂದು.. ನಿರ್ಧರಿಸಿದ್ದು.. 
        ನಂತರ.. ಆಸ್ಪತ್ರೆಯಲ್ಲಿ ಡಾಕ್ಟರ ಕೂಡ.. ಇ ಘಟನೆ ಹೇಗಾಯಿತು ಅಂತ ಕೇಳಲಾಗಿ.. ಇಬ್ಬರು.. ಇದನ್ನೇ ಹೇಳಿದೆವು.. ಅಂತೂ.. ಆ ದಿನ ಮನೆ ತಲುಪುವುದು ಸಂಜೆ ಆಯಿತು.. ನಾನು ಉಳಿದ ಮನೆಯಲ್ಲಿ ದೊಡ್ಡಪ್ಪ.. ಗಾಭರಿಯಿಂದ.. ಅಣ್ಣನನ್ನ ಕಳುಹಿಸಿ ಊರೆಲ್ಲ ಹುದುಕಿಸಿದ್ದ.. ನಾನು ಮನೆಗೆ ಹೋದಾಗ.. ಅವರು.. ಇದು ಹೇಗಾಯಿತು.. ಅಂತ ಕೇಳ್ದಾಗ.. ಮತ್ತೆ ಅದೇ ಸುಳ್ಳು.. ಅದನ್ನ ಕೆದಕಲು ಇನ್ನೇನೋ ಕೇಳಿದಾಗ ಅದನ್ನ ಸಮರ್ಥನೆಗೆ ಇನ್ನೊಂದು.. ಸುಳ್ಳು.. ಹೀಗೆ ನನ್ನ ಸುಳ್ಳುಗಳ ಕಂತೆ ಬೆಳೆಯುತ್ತಲೇ ಹೋಯಿತು.. ಅತ್ತ ನನ್ನ ಮಿತ್ರ ವರುಣ ಏನು ಮಾಡಿಕೊಂದಿರುವನೋ ಎಂಬ ಚಿಂತೆ.. ಅವನು ನನ್ನ ಅಂತೆ.. ಹೇಳಿದ್ದರೆ ಒಳ್ಳೆಯದು.. ಆದರೆ.. ವಿಚಿತ್ರ ಅಂದರೇ.. ಆ ಸತ್ಯಕ್ಕೆ.. ಆದರೆ ಇರುವುದು ಒಂದೇ ರೂಪ.. ಆದರೆ ಸುಳ್ಳಿಗೆ.. ಎಲ್ಲರು ಒಂದೇ ರೀತಿ ಹೇಳಲಾದಿತೆ?? ಅವನೊಂದು.. ನಾನೊಂದು.. ಸುಳ್ಳುಗಳ ಕತೆಯನ್ನೇ ಸೃಷ್ಟಿಸಿ ಬಿಟ್ಟೆವು.. 
 ನಂತರ ಅದು ಹೇಗೋ ಏನೋ.. ನಮ್ಮ ಪಾಲಕರ ಮನೆಯವರು ಅವರ ಮನೆಗೆ ಫೋನ್ ಮಾಡಿ ವಿಚಾರಿಸಲಾಗಿ.. ಎಲ್ಲಾ ಬಟಾ ಬಯಲು.. ನಮ್ಮ ಮಿಥ್ಯದ ಅರಮನೆ ಗಾಳಿ ಗೋಪುರವಾಗಿತ್ತು..  ಹುಂ ಇನ್ನೇನು ಮಾಡುವುದು.. ನಿಜ ಒಪ್ಪಿಕೊಳ್ಳದೆ ವಿಧಿ ಇಲ್ಲಾ ಎಂದು ತೋಚಿದಾಗ ಇಬ್ಬರು. ನಮ್ಮ ನಮ್ಮ ಮನೆಗಳಲ್ಲಿ.. ನಿಜ ಒಪ್ಪಿಕೊಂಡೆವು.. ಆದರೆ.. ನಾವು ಆಡಿದ ನಾಟಕದಿಂದಾಗಿ ಎಲೆಲ್ಲೂ ನಾವು.. ಸೈಕಲ್ ಮಿತ್ರರು ಎಂದೆ ಕರೆಸಿಕೊಳ್ಳುವ ಹಾಗಾಯಿತು 
 ನಮ್ಮನ್ನು ಛೇಡಿಸಲು ಒಂದು ಸಾಧನ ಆಯಿತು.. ನನಗೆ ನನ್ನ ಮೇಲೇನೆ ಯಾಕೋ.. ಮುಜುಗುರ ಆಗ ತೊಡಗಿತು.. ಅಂದೆ ನಿರ್ಧರಿಸಿದೆ.. ಸುಳ್ಳು ಎಂದಿಗೂ ಮತ್ತಷ್ಟು  ನೋವನ್ನ ನಮಗೆ ತರುತ್ತದೆಯೇ ಹೊರತು.. ಸುಖವನ್ನಲ್ಲ.. ಅದೇ ನಿಜ ಹಾಗಲ್ಲ.. ಇಂದಲ್ಲ ನಾಳೆ.. ಹೊರ ಬಂದೆ ಬರುತ್ತದೆ.. ತುಂಬಾ ತಡವಾಗಿ ತಿಳಿದಷ್ಟು ನಮ್ಮ ಆತ್ಮೀಯರಿಗೆ ನಮ್ಮ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ.. ಅಂದಿನಿಂದ ಇಲ್ಲಿವರೆಗೂ ನಡೆದದ್ದನ್ನ ಇದ್ದ ಹಾಗೇ  ಒಪ್ಪಿ ಕೊಳ್ಳುವ ಗುಣ ನನ್ನಲ್ಲಿ ಬೆಳೆದು ಬಂದಿತು..
       ಅದೇ ನಾನು ಹುಟ್ಟಿದ ಮನೆಯಲ್ಲೇ ಇದ್ದರೆ ಈ ಅನುಭವ ಬೇರೆಯದೇ ಆಗಿರುತಿತ್ತು.. ಅನ್ನಿಸುತ್ತದೆ.. ಯಾಕೆಂದರೆ.. ಅಪ್ಪನ ಹೊಡೆತಕ್ಕಿಂತ.. ಸುಳ್ಳೇ ಹಿತ ಎನಿಸುತಿತ್ತೋ ಏನೋ.. ಜೊತೆಗೆ ಅಮ್ಮನ ಮಮತೆ...ಜೊತೆ ಇರುತ್ತಿತ್ತಲ್ಲ..
ಅದನ್ನ ನೆನೆಯುತ್ತ ನೆನೆಯುತ್ತ.. ನನ್ನ ಮನಸು.. ವಂದನೆ ಹೇಳಿತು.. ಆ ನನ್ನ ಪಾಲಕರಿಗೆ.. ಎಂತ ಪುನ್ಯತ್ಮರಪ್ಪ ಅವರು.. ಅಂಥವರ ಮನೆಯಲ್ಲಿ ನಾನು ಬದುಕಿದ್ದೆ ಎನ್ನಲು.. ನನಗೆಷ್ಟು ಖುಷಿ..ಅಂತವರ ನೆರಳಲ್ಲಿ ಬೆಳೆದ ನಾನೇ ಧನ್ಯ.. ಎನ್ನುತ್ತಾ.. ಮಗ್ಗುಲು.. ಬದಲಾಯಿಸಿದ.." ತರುಣ.. ಆ ಸವಿ ನೆನಪನ್ನ ಮನಸಾರೆ ನೆನೆಯುತ್ತ.. ನಿದ್ರಾ ದೇವಿಯಲ್ಲಿ ಲೀನನಾದ..

~ಕಮಲು~

Wednesday, February 23, 2011

ಅಮ್ಮ ಕೊಡಿಸಿದ ಸೈಕಲ್


           ಅಮ್ಮ ಕೊಡಿಸಿದ ಸೈಕಲ್ 


                    " ನಿನಗೆ  ಯಾಕೋ ಮಾರಾಯ ಈ ಸೈಕಲ್ ಇನ್ನೂ.. ಯಾವದಾದ್ರು ಗುಜರಿಗೆ ಕೊಡು . ಅಲ್ಲಾ ನೀನು ಅಂತು.. ಇನ್ನೂ ಅದನ್ನ ಹೊಡೆಯೋದು  ಅಷ್ಟರಲ್ಲೇ ಇದೆ ..  ನೀನು ಪಟ್ಟಣದಿಂದ ಬರೋದು ಯಾವಾಗ?? ಇದನ್ನ ಹೊಡೆಯೋದು ಯಾವಾಗ..??? ಇನ್ನೂ ಬಂದ್ರು.. ಬೈಕ್ , ಕಾರು, ಅಂತವುಗಳಲ್ಲಿ ತಿರುಗೋ ಜಮಾನ ಬಂದಿದೆ.." ಎಂದು  ಸೈಕಲ್ ಅಂಗಡಿಯ ರಾಯರು  ಸೈಕಲ್ ಅನ್ನ  ಆಯ್ಲಿಂಗ್ ಮಾಡ್ತಾ ಇದ್ರೆ.. 

 ನನಗೆ ಯಾಕೋ ಅವರ ಮಾತು ಅಷ್ಟು ಸರಿ ಬರಲಿಲ್ಲ.. 
                    ಆದರೂ ಅವ್ರು ಹಿರಿಯರು ನಾನು ಚಿಕ್ಕವನಿದ್ದಗಿಂದ ನೋಡಿದ ಮನುಷ್ಯ. ಅವರು ನನ್ನ ತಿಳುವಳಿಕೆ ಬಂದಾಗಲಿಂದ ನೋಡ್ತಿದೀನಿ.. ಎಂತ ಶ್ರಮ ಜೀವಿ. ಅವರು ಸ್ವಲ್ಪ ಕೂಡ ಬದಲಾಗಿಲ್ಲ.. ಅವರ ಅಂಗಡಿಯಂತೆ  ಅವರು ಕೂಡ.. ಅದು ಅಲ್ಲದೆ.. ಅವರು ಯಾವತ್ತು ತಪ್ಪು ಮಾತನಾಡುವವ್ರಲ್ಲ. ಅದೇ ಈ ಸೈಕಲ್ ತಗೋಳುವಾಗ ಅವರು ನೀಡಿದ ಸಲಹೆನ ನಾನು ಹೇಗೆ ತಾನೆ ಮರಿಲಿ. ಆ ಮಾತುಗಳು ಇನ್ನೂ ನನ್ನ ಮನದಲ್ಲಿ ಹಸಿಯಾಗಿದೆ " ಏನೋ ತರುಣ ನಿಮ್ಮ ಅಪ್ಪ ಅದೇನೋ ಕಷ್ಟ ಪಟ್ಟು ಹಣ ಹೊಂದಸಿ ನಿನಗೆ ಸೈಕಲ್ ಕೊಡಿಸ್ತಿದಾರೆ. ಅದು ನೀನು ಚನ್ನಾಗಿ ಓದಲಿ ಅಂತ. ಇದನ್ನ ನೀನು ನಿನ್ನ ಕೊನೆ ಕಾಲದ ವರೆಗೂ  ಇಟ್ಟುಕೊಂಡು ಇರಬೇಕು. ಅಂತ ಒಳ್ಳೆ ಮಾಲು ನಾನು ನಿನಗೆ ಕೊಡ್ತಿದೀನಿ.. ಯಾಕಂದ್ರೆ ನಿಮ್ಮ ಮನೆಯಲ್ಲಿ ಎಷ್ಟೋ ದಿನ ಊಟ ಮಾಡಿದಿನಿ ಅದನ್ನ ಮರೆಯೋಕಗುತ್ತ??  ಹಾಗಾಗೆ ದುಡ್ಡಿನ ಮುಖ ನೋಡದೇನೆ.. ಎಲ್ಲಕಿಂತ ಒಳ್ಳೆ ಸೈಕಲ್ ನಿನಗೆ ಕೊಡ್ತಿದೀನಿ.. ಹುಂ ಅದ್ರು ಸಣ್ಣ ಆಸೆ ಏನು ಅಂದ್ರೇ ನೀನು ನಿಮ್ಮ ಅಪ್ಪನ ಹಾಗೇ ಏನು ಓದದೆ ಇರಬಾರದು. ಅವ್ರ ಆಸೇನ ಇದೆರಿಸ್ಬೇಕು ತಿಳಿತ.. ಹಾಗೇ ನನ್ನ ಆಸೆ ಏನಪ್ಪಾ ಅಂದ್ರೇ.. ಪ್ರತಿ ಬಾರಿ ಈ ಸೈಕಲ್ ರಿಪೇರಿ ಬಂದಾಗ ನನ್ನ ಅಂಗಡಿಗೆ ಬರಬೇಕು ತಿಳಿತಲ್ಲ.." ಎಂತ ಮಾತುಗಳು..
ಹೌದು ಆ ಸೈಕಲ್ ನಾನು ಮಾರಬೇಕೆನು??? ಅಂತ ದಾರಿದ್ರ್ಯ ನನಗೆ ಇನ್ನೂ ಬಂದಿಲ್ಲ.. ಅದು ಅಮ್ಮ ಅಂದು ನನಗೆ ಕೊಡಿಸದಿದ್ದರೆ.. ಬಹುಶಃ ನಾನು ಕಾಲೇಜ್ ಜೀವನವನ್ನ ಇಷ್ಟು ಯಶಸ್ವಿಯಾಗಿ.. ಮುಗಿಸುತ್ತಿರಲಿಲ್ಲವೇನೋ.. ಒಟ್ಟು ಕುಟುಂಬದಲ್ಲಿಯಾ  ಯಜಮಾನನಗಿದ್ದ ಚಿಕ್ಕಪ್ಪ ನನ್ನನ್ನು ಕಾಲೇಜ್ ಗೆ ಕಲಿಸಲಾಗುವುದಿಲ್ಲ ಎಂದು ಹೇಳಿದಾಗ... ಛಲದಿಂದ ..ನಾನು ಹೋಗೆ ತೀರುತ್ತೇನೆ ಎಂದು.. ನಿರ್ಧರಿಸಿ  ಎಲ್ಲರು.. ಖಾಸಗಿ ಕಾಲೇಜ್ ಗೆ ಹೋದರೆ.. ನಾನು ಕಲಾ ವಿದ್ಯಾರ್ಥಿ ಆಗಿ ಸರಕಾರಿ ಕಾಲೇಜ್ ಸೇರಿದೆ.. ಅದನ್ನ  ಕಂಡು ಅದಕ್ಕೆ ಬೆಂಬಲವಾಗಿ ನಿಂತು.. ತಾನು ಕಷ್ಟ ಕಾಲಕ್ಕೆ ಬೇಕೆಂದು.. ಅಡಿಕೆ ಸುಲಿದೋ, ಗೇರು ಬೀಜ ಮಾರಿಯೋ ಕೂಡಿಟ್ಟ ಹಣವನ್ನ ಕೊಟ್ಟು.. ಈ ದುಡ್ಡಿನಿಂದ.. ಒಂದು ಸೈಕಲ್ ತಗೋ ಎಂದು.. ಕೊಟ್ಟಾಗ.. ನನಗೆ ಆಗ ಹೊಸ ಆಸೆ ಮೈಗೆದರಿತ್ತು.. ಅದು.. ಅಲ್ಲದೆ.. ಆ ಸೈಕಲ್ನಾ  ಸಹಾಯದಿಂದ ಎಷ್ಟೋ ದುಡಿಮೆಗಳನ್ನ ಮಾಡಿ.. ನನ್ನ ಓದಿಗೆ ಸಾಕಾಗುವಷ್ಟನ್ನ ಸಂಪಾದಿಸಿಕೊಳ್ಳಲು ಸಹಾಯಕವಾಯಿತು.. ಅದನ್ನ ಮಾರುವುದೇ...  

ಅವರನ್ನ ನೋಯಿಸೋ ಮನಸಾಗದೆ.. ಸಮಾದನದಲ್ಲೇ ಹೇಳದೆ.. " ಇಲ್ಲಾ ರಾಯರೆ ನಾನು ಅದನ್ನ ಕೊಡಲ್ಲ."
          ಯಾಕೋ ಹಾಗೇ ಹೇಳ್ತಿದಿಯ ಇವಾಗ ಇಂತ ಹಳೆ ಸೈಕಲ್ ಆಯ್ಲಿಂಗ್ ಮಾಡ್ಸಿ ಕೊಟ್ಟರೆ ಎಂತ ಒಳ್ಳೆ ಬೆಲೆ ಇದೆ ಅಂತ ನಿನಗೆ ಗೊತ್ತಿಲ್ವ.. ನೀನು ಕೊಂಡ ಬೆಲೆಗೆ ಇದನ್ನ ಇವಾಗ ಮಾರಬಹುದೋ ಹುಚ್ಚಪ್ಪ ಅದು ಅಲ್ಲದೆ ನನಗೆ  ತುಂಬಾ ಜನ ಕೇಳ್ತಿದ್ದಾರೆ ಎಲ್ಲಾದರು ಇದ್ರೆ ಕೊಡ್ಸಿ ಅಂತ." ಅಂತ ಹೇಳ್ತುತ್ತ ತಮ್ಮ ಬೆಲೆಯ ಪೈಜಾಮವನ್ನ ಒಮ್ಮೆ ಮೇಲೇರಿಸಿಕೊಂಡು.. ಚೈನ್ ಬಾಕ್ಸ್ ಅನ್ನ ಸಾರಿಸಿ.. ಬೆಂಡ್ ತೆಗೆದು ರೆಡಿ ಆಗಿದ್ದ ಗಾಲಿಯನ್ನ ಸೇರಿಸ ತೊಡಗಿದರು..
 " ದುಡ್ಡಿನ ಆಸೆಗೆ ಇದನ್ನ ಕೊಡೋವಷ್ಟು ವ್ಯಾಪಾರೀ ಮನೋಭಾವ ನನ್ನದಲ್ಲ ರಾಯರೇ.. ನಿಮಗೆ ಬೇರೆ ಎಲ್ಲಾದರು ಸಿಕ್ಕದರೆ ಕೊಡಿ.. ಇದು ನನ್ನ ಬಾಳಿನಲ್ಲಿ ಬೆಲೆ ಕಟ್ಟಲಾಗದ್ದು.. ಇದು ಪಡೆದ ದಿನದಿಂದ ಹಿಡಿದು ಇಲ್ಲಿವರೆಗೂ ನಾನು ನಿಮ್ಮಲ್ಲೇ ರಿಪೇರಿ ಮಾಡಿಸಿರುವೆ.. ನಾನು ಏನಾದ್ರು ಬಾಕಿ  ದುಡ್ಡು ಕೊಡೋದು ಇದ್ರೆ ಹೇಳಿ ಕೊಟ್ಟು ಬಿಡುತ್ತೇನೆ.." ಅಂತ ಹೇಳಿ ಅವರ ಅಂಗಡಿಯ  ಕುರ್ಚಿಯಲ್ಲಿ ಆಸೀನನಾದೆ. 
   
        ಹಾಗೇನು ಇಲ್ಲವೋ ಮಾರಾಯ.. ಸುಮ್ಮನೆ ಮುದ್ಕಿಗೆ ಸಿಂಗಾರ ಮಾಡದ ಹಾಗೇ ಇದಕ್ಕೆ ಪ್ರತಿ ವರ್ಷ ಊರಿಗೆ ಬಂದಾಗಲು ನನ್ನ ಅಂಗಡಿಗೆ ತಂದು  ರಿಪೇರಿ ಮಾಡಿಸ್ತಿ. ಯಾಕೆ ಸುಮ್ಮನೆ ಅದಕ್ಕೆ ಖರ್ಚು ಅಂತ ಹೇಳ್ದೆ. ಅಷ್ಟೇ.
ಅಂತ ಸೈಕಲ್ ನಾ ಪೆಡಲ್ ಸರಿ ಮಾಡ ತೊಡಗಿದರು.
                    ನಿಮಗೆ ಬೇಜಾರಾಗಲ್ಲ ಅಂದ್ರೇ ಒಂದು ಮಾತು ರಾಯರೆ.. ನಾನು ನಿಮ್ಮ ಹತ್ರ ಈ ಸೈಕಲ್ ತಗೋಳುವಾಗ ನಾನು ಇದ್ದ ಸ್ಥಿತಿಯಲ್ಲಿ ಇರೋ ಅಂತ ಯಾರದ್ರು.. ಬಡ ಪ್ರತಿಭಾವಂತ ಹುಡುಗ ಇದ್ರೆ ಹೇಳಿ.. ಅವನಿಗೆ ಕಲಿಲಿಕ್ಕೆ ಸಹಾಯ ಆಗುತ್ತೆ ಅನ್ನೋದಾದ್ರೆ.. ಇದನ್ನ ಅವನು ಬಳಸ್ಕೊಳ್ಳಲಿ.. ಆದರೆ ಅವನಿಗೆ ಇದನ್ನ ಮಾರಲ್ಲ. ಅವನಿಗೆ ಇದರ ರಿಪೇರಿ ಖರ್ಚು ಕೂಡ ನಾನೇ ಬರ್ಸ್ತಿನಿ..ಅವನು ಓದು ಮುಗಿದ ತಕ್ಷಣ ಅದನ್ನ ನನಗೆ ಕೊಡಬೇಕು.. ಅಂತವ್ರಿದ್ರೆ ಹೇಳಿ.. ಯಾಕಂದ್ರೆ ಇದು.. ನನ್ನ ಅಮ್ಮ ಕೊಡಿಸಿದ ಸೈಕಲ್. ನಿಮಗೆ ಇದು ಬರಿ ಸೈಕಲ್ ತರ ಮಾತ್ರ ಕಾಣ್ಸುತ್ತೆ . ಆದರೆ ಇದ್ರಲ್ಲಿ ನನಗೆ ಅಮ್ಮನ ಕಷ್ಟದ ದಿನಗಳ  ನೆನಪು.. ಕಾಣುತ್ತೆ.. ನನಗೆ ನನ್ನ ಕಾಲೇಜ್ ದಿನದಿಂದನು ಇಲ್ಲಿವರೆಗೂ ಇವನು ನನಗೆ ಒಳ್ಳೆ ಸಂಗಾತಿ.. ಯಾವತ್ತು ನನಗೆ ಮೋಸ ಮಾಡಿಲ್ಲ.. ಮನುಷ್ಯರಂತೆ.. ನಾನು ಬಿದ್ದಾಗ ನಕ್ಕಿಲ್ಲ.. ನನ್ನ ಅಳುವಿನಲ್ಲೂ ಮೌನಿ ಆಗಿ ನಾನು ಇರುವೆ ಗೆಳೆಯ ಎಂದಿದೆ.. ನಾನು ನಗುವಾಗಲು.. ನಿನ್ನ ಜೊತೆಯಲ್ಲೇ ಇರ್ತೇನೆ.. ಮರಿಬೇಡ ಅಂತ ಅದು ಮೌನಿಯಾಗೆ ನನ್ನ ಹತ್ರ ಹೇಳಿದೆ..  ಇವನು ನನಗೆ ನಿಜ ಹೇಳ್ಬೇಕು ಅಂದ್ರೇ ಯಾವತ್ತು ನನಗೆ ಒಂದು ಹೊರೆ ಅಂತ ಅನ್ಸೆ ಇಲ್ಲಾ.. ಯಾಕೋ ಗೊತ್ತಿಲ್ಲ.. ಇವಾಗ ಅವನನ್ನ ಕಳಕೊಲ್ಲದು ಅಂದ್ರೇ.. ಮುತ್ತು ಕೊದವ್ಳು  ಬಂದಾಗ ತುತ್ತು ಕೊಟ್ಟ ಹೆತ್ತ ತಾಯೀ ನಾ ಮರೆತಂತೆ ಆನ್ಸುತ್ತೆ.. ನನಗೆ ನನ್ನ ಅಮ್ಮ ಅಪ್ಪ ಹಾಗೂ ನನ್ನ ಬೆಳೆಸಿದವರು ಇದ್ದಂತೆ ಈ ಸೈಕಲ್ ಕೂಡ.. ಇದಕ್ಕೂ ಜೀವ ಇದೆ.. ಅದು ನನ್ನ ಮನಸಿನಲ್ಲಿ . ರಾಯರೆ.. ನೀವೇ ಹೇಳಿದ್ರಿ.. ನೆನಪಿದೆಯ.. ನಿಮ್ಮಷ್ಟು ವಯಸ್ಸು ಆಗೋವರೆಗೂ ಇದನ್ನ ನಿನ್ನ ಹತ್ರ ಇಟ್ಟು ಕೊಂಡಿರಬೇಕು  ಅಂತ ಆಗ ಉದಾಪೆಯಗೆ ನಿಮ್ಮ ಮಾತು ತಗೊಂಡಿದ್ದೆ.. ಇವಾಗ ನಿಮ್ಮ ಮಾತು ನಿಜ ಅನ್ಸ್ತಿದೆ.. ರಾಯರೆ.. ನನಗೆ ನಿಮ್ಮಷ್ಟು ಕಾಲ ಬದುಕೋ ಅದೃಷ್ಟ ಇದೆಯೋ ಇಲ್ಲವೋ.. ಆದ್ರೆ ನನ್ನ ಕಡೆ ಘಳಿಗೆವರೆಗೂ ಇದು ನನ್ನ ಜೊತೇನೆ ಇರುತ್ತೆ.. ಅಂಥ ಮಾತ್ರ ಹೇಳಬಲ್ಲೆ..
ನನ್ನ ಆ ಹಳೆ ನೆನಪಿಂದ ಹೊರ ಬಂದು  ಸೈಕಲ್ ರೆಡಿ ಆಗಿರಬಹುದು ಅಂತ ತಿರುಗಿ ನೋಡ್ತೀನಿ.. ರಾಯರು ನನ್ನ ಪಕ್ಕದಲ್ಲಿ ಸೈಕಲ್ ತಂದು ನಿಲ್ಲಸ್ತ.. ನನ್ನ ಹೆಗಲ ಮೇಲೆ ಕೈ ಹಾಕಿ ಹೇಳದ್ರು.. 
" ಮಗ ನೀನು ನಿಮ್ಮ ಅಪ್ಪನ ತರಾನೆ.. ಗುಣ ಅಂದ್ರೇ ಹೀಗಿರಬೇಕು... ಈಗಿನ ಕಾಲದಲ್ಲಿ ವಯಸ್ಸಾದ ನನ್ನ ಅಂತ ಮನುಷ್ಯರನ್ನೇ ನೀನು ಏನು ಕಡದಿರೋದು? ಅಂತ ಹೇಳಿ ವ್ರುದ್ದಶ್ರಮಕ್ಕೆ ಸೇರಿಸೋ ಈ ಕಾಲದಲ್ಲಿ.. ಜೀವ ಇರದ ಈ ಸೈಕಲ್ ಕೂಡ ನನ್ನ ಸಂಗಾತಿ.. ಅದನ್ನ ನಿನ್ನ ಹಿರಿಯರನ್ನ ನೋಡಿಕೊಂದಂತೆ ನೋಡ್ಕೋತೀನಿ ಅಂದ್ಯಲ್ಲ.. ನಿಜಕ್ಕೂ ಖುಷಿ ಆಯ್ತು.." ಅಂತ ಅವರ ಕಣ್ಣಲ್ಲಿನ ನೀರು ಒರೆಸಿ ಕೊಂಡರು. 
ರಾಯರೇ ಏನಾಯ್ತು ನಿಮಗೆ ನಿಮ್ಮನ್ನ ನಿಮ್ಮ ಮಕ್ಕಳು...
ಅವರ ಕತೆ ಏನ್ ಕೇಳ್ತಿಯ ಮಗ.. ನನ್ನ ಮತ್ತೆ ನನ್ನವಳನ್ನ ವ್ರುದ್ದಶ್ರಮಕ್ಕೆ ಸೇರಸ್ಲಿಕ್ಕೆ ಹೊರ್ತಿದ್ರು.. ನಾನು ಶಕ್ತಿ ಇರೋ ತನಕ.. ದುಡದೆ ಬದಕ್ತಿನಿ ಅಂತ ಮತ್ತೆ ಅಂಗಡಿ ಅಲ್ಲೇ ಕೆಲಸ ಮಾಡ್ತಿದೀನಿ.. ಹಾಗೇ ಇಷ್ಟ ದಿನ ನನ್ನ ಜೊತೆ ಇರೋವಳನ್ನು..ಕೂಡ ನಾನೇ ನೋಡ್ಕೊತಿದಿನಿ..ಯಾವದಕ್ಕೂ ಇರಲಿ ಅಂತ ಸ್ವಲ್ಪ್ ದುಡ್ಡು ಅವಳ ಹೆಸ್ರನಲ್ಲೇ ಇಟ್ಟಿದ್ದೆ ಅದು ಈಗ ಅನುಕೂಲಕ್ಕೆ ಬಂತು..

ನೀನು ಮಾತ್ರ ನಿಮ್ಮ ಅಪ್ಪ ಅಮ್ಮಂಗೆ ಎಂದು ಹಾಗೇ ಮಾಡಬೇಡ ಮಗ.. ನೀನು ಈಗ ಆಡಿದ ಮಾತಿನಂತೆ ನಡ್ಕೋ..ನೀನು ನಡ್ಕೊತಿಯ ಅಂತ ನನ್ನ ಹೃದಯ ಹೇಳ್ತಾ ಇದೆ ಕಣೋ..
 ತಗೋ ನಿನ್ನ ಸೈಕಲ್ ರೆಡಿ ಇದೆ.. ಹುಂ ಇದನ್ನ ಇಟ್ಟ ಕೊಳ್ಳಿ ರಿಪೇರಿ ಚಾರ್ಜು.. ಚೇಂಜ್ ಏನು ಕೊಡೋದು ಬೇಡ.. ಅಂತ ಹೇಳ್ದೆ.. ನಿಮ್ಮ ಕೈ ಅಲ್ಲಿ ರೆಡಿ ಆದ ಸೈಕಲ್ ಅಂದ್ರೇ.. ಅದು ಮುದ್ಕಿನು.. ಹದಿ ವಯಸ್ಸಿಗೆ ಬಂದ ಹಾಗಿದೆ ರಾಯರೆ.. ಇಂತ ಸೈಕಲ್ ಮಾರೋದ.. ಛೇ ಯಾವತ್ತು ಆಗಲ್ಲ.. ಅಂತ ಹೇಳಿ ಅವ್ರಿಗೆ ಧನ್ಯವಾದ ಹೇಳಿ.. ಸೈಕಲ್ ಏರಿದೆ.. ಮತ್ತೆ ನನ್ನ ಗತಕಾಲದ ಸಂಗಾತಿ ಯೊಂದಿಗೆ ಹಳೆಯ ನೆನಪುಗಳ ಮೆಲುಕು ಹಾಕುತ್ತ..
ಆದರು ಬಿಡದೆ ಕಾಡುತ್ತಿದೆ.. ನಮ್ಮ ರಾಯರ ಕೊನೆಯ ಮಾತು. 
~ಕಮಲು~ .  
--
BΣПΛKΛ KЯ