"ಶೀಲ ಶೀಲಾ ಕಿ ಜವಾನಿ.. ಹಂ ತೋ ಸೆಕ್ಸಿ ಫಾರ್ ಯು...." ಈ ಹಾಡಿಗೆ ಸ್ಟೆಪ್ ಹಾಕ್ತಿದ್ದ.. ಸಣ್ಣ ಮಗುವನ್ನ ನೋಡಿದ ತರುಣ್ ನ ಮನಸು.. ಯಾಕೋ.ಕಸಿವಿಸಿ ಆಯಿತು.. ಅದರ ಬೆನ್ನ ಹಿಂದೆಯೇ.. " ತರುಣ್ ನಮ್ಮ ಮುಗುವಿನ ಡಾನ್ಸ್ ಹೇಗಿದೆ.. ??? ಅಂತ ಸ್ವತಃ ಅವರ ಅಮ್ಮನೇ ಕೇಳಿದಾಗ.. ಮನಸಿಲ್ಲದ ಮನಸಿನಿಂದ. ಹುಂ ಚನ್ನಾಗಿದೆ ಎಂದನು. ಆದರೆ ಮನಸು ಹೌಹಾರಿತ್ತು..
ಇನ್ನೂ ನೆಟ್ಟಗೆ ಬಾಲ್ಯದ ಸವಿಯನ್ನೇ ಸವಿಯಾದ ಪುಟ್ಟ ಹುಡುಗಿಗೆ ಎಂತ ಹಾಡುಗಳನ್ನೆಲ್ಲ ತೋರಿಸಿ ಅವರ ಪಾಲಕರು ಅವಳ ನಿಜವಾದ ಬಾಲ್ಯವನ್ನ ಕಸಿದು ಕೊಲ್ಲುತಿಲ್ಲವೇ ಎನಿಸಿತು.
ತರುಣನಿಗೆ ಇನ್ನೂ ನೆನಪಿದೆ, ಆ ಬಾಲ್ಯದ ದಿನಗಳು, ಹಿಂದೆಲ್ಲ ಪಕ್ಕದ ಮನೆಯ ಸುನಿಲ್ ಎಂಬ ತಮ್ಮನ ಸಂಗಡ.. ಕತ್ತಲಾಗುವ ತನಕ ಕ್ರಿಕೆಟ್, ಬುಗರಿ ಗೋಲಿ.ಆಟ ಆಡಿದ್ದು. ಆ ಆಟದಲ್ಲಿ ಎಲ್ಲಾ ತನ್ನದೇ ಗೆಲುವಾಗಬೇಕು ಎಂಬ ಎಲ್ಲಿಯದೋ ಹಠ. ಸೋಲನ್ನು ಜಗಳವಾಗಿ ಪರಿವರ್ತಿಸುವ.. ಛಲ.. ಹಾಗೂ ಗೆಲವು.. ಸಿಗದಿದ್ದರೆ.. ದುಃಖದಲ್ಲೇ.. ಸೋಲನ್ನ ಒಪ್ಪಿಕೊಳ್ಳುವ ಆ ತುಂಟ ಬಾಲ್ಯಇಂದಿನ ಮಕ್ಕಳಿಗೆ ಇಲ್ಲವೇ.
ಇನ್ನೂ ಶಾಲೆ ಮುಗಿದ ಮೇಲೆ ದಾರಿಯಲ್ಲಿ ಆ ಆ ಕಾಲಕ್ಕೆ ಸರಿಯಾಗಿ ಸಿಗುವ ಪುನ್ನೆರಲು, ಜಂಬೆ, ಪೇರಲ, ನೆಲ್ಲಿ, ಚಳ್ಳೆ, ಬಿಕ್ಕೆ, ಹಲಗೆ, ಕೌಳಿ, ಬಿಳೆ ಮುಳ್ಳು ಹಣ್ಣು, ಇತ್ಯಾದಿ ಇವೆಲ್ಲವನ್ನು ಮೆಲ್ಲುತ್ತ.. ಅದರಲ್ಲೂ.. ಎಲ್ಲರಿಗಿಂತ ಜಾಸ್ತಿ ತಿನ್ನಬೇಕು ಎನ್ನುವ ಹಠದಿಂದ ಎಲ್ಲರಿಗಿಂತ ಮೊದಲು, ಆ ಸ್ಥಳಗಳಲ್ಲಿ ಹಾಜರಾಗಿ, ಆ ಫಲಗಳನ್ನ ಹೊತ್ತು ನಿಂತ ಆ ಗಿಡಗಳಿಗೆ, ಯಾಕಾದರೂ ತಾವು ಈ ಜನ್ಮ ತಾಳಿದೆವೋ ಅನಿಸುವಷ್ಟು ಗೋಳು ಕೊಡುವ ಆ ದಿನಗಳನ್ನ ನೆನೆಸಿಕೊಂಡರೆ ಅದೇನೋ ಖುಷಿ. ಆ ಬಾಲ್ಯದ ಗೆಳೆಯರು ಒಂದಾದಾಗ ಸಿಗುವ ಆ ಹಳೆಯ ನೆನಪುಗಳು ಇಂದಿನ ಮಕ್ಕಳಿಗೆ ಸಿಗುವುದೇನು???
ಇಗಲೇ ಟಿ.ವಿ.ಯಾ ಕಂಪ್ಯೂಟರ್ ನಾ ಹುಳುಗಳಾಗುತ್ತಿರುವ ಅವರು ತನ್ಮೂಲಕ ಅದರ ನಡುವೆಯೇ ತಮ್ಮ ಮಧುರ ಬಾಲ್ಯವನ್ನ ಕಳೆಯುತ್ತಿರುವ ಇಂದಿನ ಬಾಲಕರನ್ನ ಕಂಡಾಗ ಈ ಪ್ರಶ್ನೆ ಉದ್ಭವಿಸದಿರದು ಅಲ್ಲವೇ.??
ಮುಂದೊಂದು ದಿನ. ಜೀವನದ ಅಂತಿಮದ ದಿನದವರೆಗೂ ಅದೇ ಟಿ.ವಿ., ಕಂಪ್ಯೂಟರ್ ಎಂಬ ದೈತ್ಯ ರಾಕ್ಷಸರ ನಡುವೆಯೇ ಕಳೆಯ ಬೇಕೆಂಬ ಭಾವನೆ ಆ ಬೆಳೆದ ಮಗುವಿನಲ್ಲಿ. ಬಂದಾಗ, ಅದಕ್ಕೆ ಹಳೆಯದನ್ನ ನೆನಪಿಸಿಕೊಂಡು ಖುಷಿ ಪಡಲು ಅಂತಹ ಬಾಲ್ಯ ಅವುಗಳಿಗೆ ಲಭ್ಯವಿದೆಯೇ???
ಇಗಲೇ ನಾವು ಕಾಲೇಜ್ನಲ್ಲಿ ಇದ್ದಾಗಲೂ ಗೊತ್ತಿಲ್ಲದಂತ ಅದೆಷ್ಟೋ ವಿಷಯಗಳು (ಒಳ್ಳೆಯದ್ದು ಹಾಗೂ ಕೆಟ್ಟದ್ದು) ಇ ನಮ್ಮ ಮಕ್ಕಳಿಗೆ ಗೊತ್ತು. ಅದು ಒಳ್ಳೆಯದೇ ಆಗಿದ್ದರೆ ನಾವು.. ಹೆಮ್ಮೆ ಪಡ ಬಹುದಿತ್ತೇನೋ ಆದರೆ. ಒಳ್ಳೆಯದಕಿಂತ.. ಕೆಟ್ಟದ್ದೇ ಜಾಸ್ತಿ ಆಗಿರುವಾಗ.. ಹೆಮ್ಮೆ ಪಡುವ ಅರ್ಹತೆ.. ಪಾಲಕ, ಪೋಷಕರಾಗಿರುವ ನಮಗಿದೆಯೇ???
ಹಿಂದೆಲ್ಲ.. ಮಗ್ಗಿ..ಮತ್ತು.. ಲೆಕ್ಕಗಳಲ್ಲಿ.. ತಪ್ಪದೆ.. ಪಟ್ ಅಂತ ಹೇಳುವ.. ಹಾಗೂ.. ಸಂಜೆ ಆದಂತೆ.. ಬಾಯಿ ಪಾಠವನ್ನ ತಪ್ಪದೆ ಹೇಳುವ..ಮಕ್ಕಳನ್ನು..ಬುದ್ಧಿವಂತ ಎಂದು.. ಹೊಗಳುತ್ತಿದ್ದರು.. ಅದು ಅಲ್ಲದೆ... ವಿಶೇಷ ಕಾರ್ಯಕ್ರಮದಲ್ಲಿ.. ಊಟದ ವೇಳೆ ಗ್ರಂಥಗಳನ್ನ.. ಹೇಳಿ ಹೊಗಳಿಸಿಕೊಳ್ಳಬೇಕು.. ಎನ್ನುವ..ತುಡಿತ ನಮ್ಮಲ್ಲಿ ಇರುತಿತ್ತು.. ಆದರೆ.. ಇಂದಿನ.. ಬಹುತೇಕ..ಮಕ್ಕಳಲ್ಲಿ ಇವೆಲ್ಲ ಮಾಯವಾಗಿದೆ.. ಅವರು.. ಬೇಗ ದೊಡ್ದವರಗುತ್ತಿದ್ದಾರೆ.. ಅವರು ದೊಡ್ಡವರ ವಿಷಯ ಎನ್ನುವ ಕೆಲವು.. ವಿಷಯಗಳನ್ನ.. ಮುಲಾಜಿಲ್ಲದೆ.. ಕೆಲವೊಮ್ಮೆ ದೊಡ್ಡವರು..ನಾಚುವಂತೆ ಆಡ ಬಲ್ಲರು..
ಇಂದಿನ ಮಕ್ಕಳು ನಮಗಿಂತ ಬುದ್ದಿವಂತರು.. ನಿಜ.. ಆದರೆ.. ಅವರು.. ಸರಿಯಾದ ದಾರಿಯಲ್ಲಿ ಬೆಳೆಯುತ್ತಿದ್ದಾರೆಯೇ..?? ಆಥವ.. ನಮ್ಮ ಮಕ್ಕಳು.. ಬುದ್ದಿವಂತರು.. ಎನ್ನಿಸಿಕೊಲ್ಲಬೇಕು ಎಂದು.. ಅವರ ಬಾಲ್ಯವನ್ನ.. ನಮ್ಮ ಕೈ ಆರೇ.. ಕಸಿದು ಕೊಳ್ಳುತ್ತಿದ್ದೆವೆಯೇ..???
ಇದೆಲ್ಲ.. ಆಲೋಚನೆಗಳು. ತರುಣ ನಾ ಮನಸಿನಲ್ಲಿ.. ಹರಿದಾಡಿ.. ಕೊನೆಗೆ ತಮ್ಮ ಆ ಬಾಲ್ಯವೇ ಸೊಗಸು.. ಅದಕ್ಕಾಗಿ.. ತನ್ನ ತಂದೆ ತಾಯಿ.. ಹಾಗೂ.. ಪೋಷಕರಿಗೆ.. ಮನಸಾರೆ.. ಕೃತಜ್ಞತೆ ಸಲ್ಲಿಸಿದ..
good one... am agreed. yaa the new generation is losing natural happiness. only electronic devices and mobiles are their world....
ReplyDeletethank u shishu...
ReplyDelete