ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Friday, March 4, 2011

ಹೇ ಅರೆ ಮಲೆನಾಡ.. ಬೆಡಗಿ..
                           ನಿನ್ನ ತುಂಬಾ ಮಿಸ್ ಮಾಡ್ಕೊತ ಇದೀನಿ.. ಕಣೆ.. 
"ಏನು.. ಬಿಟ್ಟು ಹೋಗಬೇಕಿದ್ದರೆ.. ಗೊತ್ತಾಗಲಿಲ್ಲವ.. ನನ್ನ ನೋವು ನಿನಗೆ ಅರ್ಥ ಆಗಲಿಲ್ಲವ.. ಎಲ್ಲಾ ಹುಡುಗರಂತೆ.. ನೀನು..  
ಈಗೇಕೆ.. ನನ್ನ ನೆನಪು..???.. ಏನು.???. ನಾನು ಏನು ಮಾಡಿದೆ..ಎಂದು.. ನನ್ನ ಬಿಟ್ಟು ಹೋದೆ?? ನಿನ್ನ ಮೇಲೆ ನಾನು ಅದೆಷ್ಟು ನಂಬಿಕೆ ಇಟ್ಟಿದ್ದೆ..ಅದಕ್ಕಾಗೆ.. ಬೇರೆಯವರು..ಹೊಟ್ಟೆಕಿಚ್ಚು.. ಪಡುವಷ್ಟು.. ನೀನು ಸಂತೋಷವಾಗಿ ನನ್ನೊಂದಿಗೆ  ಇರಬೇಕೆಂದು.. ನಿನ್ನ ನೋವಿನಲ್ಲೂ.. ನಾ ಜೊತೆ ಇದ್ದೆ... ಅದಾರೋ .. ಕರೆದರೆಂದು.. ಒಂದು ಮಾತು.. ನನ್ನ ಕೇಳದೆ.. ಓದಿ ಹೋದೆಯಲ್ಲ.. ನಿನಗೇಕೆ ಬರಬೇಕು ನನ್ನ ನೆನಪು?? " ಎಂದು.. ಯೋಚಿಸುತ್ತಿರುವೆಯ.. ನನ್ನ ಗೆಳತಿ..

ನೀನು ಈ ರೀತಿ.. ಪುಂಖಾನುಪುಂಖವಾಗಿ.. ಪ್ರಶ್ನೆಗಳ ಮಳೆಗರೆದರೆ.. ನಾನು ಏನೆಂದು.. ಉತ್ತರ.. ಹೇಳಿಯೇನು.. ಓಹೋ... ಕ್ಷಮಯಾಧರಿತ್ರಿ.. 
ನೀನು ಹೇಳುವುದು.. ನಿಜ.. ನೀನು ನನಗೇನು ಕಡಿಮೆ ಮಾಡಿದ್ದೆ..??? ನನಗೆ.. ನಿನ್ನಲ್ಲೇ.. ಮುಂದಿನ ಬದುಕನ್ನ ರೂಪಿಸಿಕೊಳ್ಳುವ ಅವಕಾಶವನ್ನ.. ನೀಡಿದೆ.. ಆದರೂ ಎಲ್ಲಾ.. ಕಾಲೇಜ್ ಓದಿದ ತರುಣರಂತೆ ನಾನು.. ನಿನ್ನ ಆ ಆಶ್ರಯವನ್ನ.. ನಿರ್ಲಕ್ಷಿಸಿ. ಓಡಿದೆ..
ಅದೇನೋ ಹೇಳ್ತಾರಲ್ಲ.. ಕೆಲವರಿಗೆ.. ಪಕ್ಕದ ಮನೆಯವಳೇ.. ತಮ್ಮನೆಯವಳಿಗಿಂತ ಸುರಸುಂದರಿ ಅಂತೆ ಕಾಣುತ್ತಾಳೆ.. ಅಂತೆ... ಹಾಗೇ.. ನೀನು ಕೊಟ್ಟ.. ಎಲ್ಲಾ ಸುಖವನ್ನ ಅನುಭವಿಸಿ ಕೊಬ್ಬಿದ್ದ ನನಗೆ.. ದೂರದಲ್ಲಿ.. ಮಾಲುಗಳು..ಆಯಟಿ ಬಿಟಿಗಳನ್ನ.. ಎಂ ಏನ್ ಸಿ ಕಂಪನಿಗಳನ್ನ ತನ್ನ ಮೈಗಳಲ್ಲಿ..ಹೊತ್ತು..ಜೀನ್ಸ್ ಪ್ಯಾಂಟು..ಹಾಗೂ ಟಿ ಶರ್ಟ್ ನಲ್ಲಿ ಕಂಗೊಳಿಸುವ.. ತುಂಬು ಯವ್ವನೆಯಾಗಿ ನಿಂತಿದ್ದಾ..ಆ ಬೆಂಗಳೂರು..ಎಂಬ.. ಕಾಂಕ್ರಿಟ್ ಮಾಯಂಗನೆಯೇ ನಿನಗೀಂತ ಚೆಲುವಾಗಿ ಕಂಡಳು. ಬಹುಶಃ  ಅವಳಿಗೂ ನಿನ್ನ ನೆರಳಲ್ಲಿ.. .. ನನ್ನ ಆ ಸುಖಿ ಮುಖ ಕಂಡು.. ಹೊಟ್ಟೆ ಕಿಚ್ಚು.. ಹುಟ್ಟಿರಬೇಕು.. ಅದಕ್ಕೆ ನನ್ನ.. ಕೈ ಬಿಸಿ ಕರೆದು.. ತನ್ನ ಮಾಯಾ ಜಗತ್ತಿನಲ್ಲಿ.. ಸೇರಿಸಿಕೊಂಡಿತು.. ಆಗ.. ಅವಳ ಕುಡಿ ನೋಟ.. ನಿಜಕ್ಕೂ.. ಎಂತವರಿಗೂ ಮತ್ತೆರಿಸುವಂತಿತ್ತು.. ಅದೇನೋ ಹೇಳ್ತುತ್ತರಲ್ಲ.. ದೂರದ.. ಬೆಟ್ಟದಂತೆ..ತುಂಬಾ ಸುಂದರವಾಗಿ.. ಕಂಡಿತು.. ಅವಳ ಆ ಒನಪು.. ಆ ಲಾವಣ್ಯ..
ಆದರೆ.. ಈಗೀಗ ತಿಳಿಯುತ್ತಿದೆ.. 
ಆಧುನಿಕತೆಯ ಆದ್ಧೂರಿತನದಲ್ಲಿ ತನ್ನ ನಿಸರ್ಗದತ್ತ ಸೌಂದರ್ಯವನ್ನ ಕಳೆದುಕೊಂಡು.. ಉದ್ಯಾನದ ಚೆಲುವೆಯ ಮಾಟವನ್ನ ಕಳಚಿಕೊಂಡು.. ಬರೆಯ ಕಾಂಕ್ರಿಟ್ ಸುಂದರಿ ಆಗಿರುವ.. ಇವಳನ್ನ ನಿನಗೆ ಹೋಲಿಸಬೇಕೆನಿಸಿದೆ.. ಹಾಗೇ ಹೋಲಿಸಲು ಹೋರಾಟಗಳೆಲ್ಲ.. ನನ್ನ ಹುಟ್ಟೂರು.. ಎಷ್ಟು.. ಸುಂದರಿ ಎಂದು.. ಅನಿಸದೆ.. ಇರದು..
ಹೌದು.. ಕಾಲದ ತಕ್ಕೆಯಲ್ಲಿ.. ಅನುಭಾವಿಯಾಗಿರುವ ನೀನು.. ಸಹಜ ಸೌಂದರ್ಯವನ್ನ.. ನಿನ್ನಲ್ಲೇ.. ಅಡಗಿಸಿ ಕೊಂಡಿರುವ.. ರೂಪವತಿ .. ಹಸಿರಿನ.. ಸೀರೆಯಿಂದ ನಿನ್ನ.. ಆ ಗುಡ್ಡ ಬೆಟ್ಟಗಳನ್ನ..ಹುದುಗಿಸಿಕೊಂಡು.. ಜೋಗ.. ಜಲಪಾತವನ್ನ.. ಆ ನಿನ್ನ ಸೀರೆಯ ಸೇರಗಾಗಿಸಿಕೊಂಡು .ಬುರುಡೆ, ಉಂಚಳ್ಳಿ..ಜಲಪಾತಗಳನ್ನ ನಿನ್ನ ಆ ಸೀರೆಯ ನೆರಿಗೆಗಳನ್ನಗಿಸಿಕೊಂಡು.. ಅಘನಾಶಿನಿ ನದಿಯನ್ನೇ ನಿನ್ನ ನೀಲ ಜಡೆಯನ್ನಾಗಿಸಿಕೊಂಡು ಒಯ್ಯಾರದಿ.. ಬಳಕುವ.. ಹದಿ ಹರೆಯದ.. ಚೆಲುವೆ ನೀನು..ಎಷ್ಟೋ ಕಾಲದಿಂದ.. ಒಂದೇ ತೆರನಗಿರುವ.. ಸಹಜ ಸುಂದರಿ ನೀನು..ತಾಯಿ ಕನ್ನಡಮ್ಮ ಭುವನೇಶ್ವರಿಯ ಏಕೈಕ ದೇಗುಲವನ್ನ. ನಿನ್ನ ಕೀರಿಟವನ್ನಾಗಿಸಿಕೊಂಡು ಮಿನುಗುತ್ತಿರುವ..ರೂಪಸಿ ಆಗಿರುವ .. 
 ನಿನಗೂ.. ಈ ಕಾಂಕ್ರೀಟ್  ಸುಂದರಿಗೂ ಹೋಲಿಕೆ ಮಾಡುವುದು ತರವೇನು..???

ಮೊದಲೆಲ್ಲ.. ನಿನ್ನ  ಈ ಸಹಜ ಸೌಂದರ್ಯ ನನಗೆ ಅದೆಷ್ಟು.. ಖುಷಿಯನ್ನ ನೀಡಿದೆ.. ಆ ನಿನ್ನ ಮಡಿಲಲ್ಲಿ.. ಬೆಳೆದ.. ಪುಣ್ಯ ನನ್ನದು..
ಆ ನಿನ್ನ ಮೊಗವನ್ನ.. ನೋಡಲು..ಎಂತವರು.. ಕ್ಲೀನ್ ಬೋಲ್ಡ್.. ನೀನು.. ನಿಜಕ್ಕೂ.. ಚಿರ ಯ್ವವನೆ..
  ಮೊದಲೆಲ್ಲ.. ಆ ಮೀನು ಪೇಟೆ ಜಾಗವನ್ನೇ ನರಕ ಎನ್ನುತಿದ್ದೆ. ಅದೆಷ್ಟು ಗಲೀಜು.. ಮೂಗು ಬಿಡಲಾಗದಷ್ಟು.. ಆದರೆ.. ಅದೊಂದನ್ನು ಬಿಟ್ಟರೆ.. ನಿನ್ನ ಪ್ರತಿ.. ಜಗವು ನಿರ್ಮಲ ನೆಮ್ಮದಿಯ ತಾಣ.. ಅದೇನೋ ಕಣೆ.. ಈಗ ಅನ್ನಿಸುತ್ತಿದೆ.. ಅದೇನು ಮಹಾ ನರಕವೇ ಅಲ್ಲಾ.. ಇಲ್ಲಿನ ಸ್ಲಂ  ಜಾಗಗಳು.. ನಿನ್ನ ಇಡಿ ಶರೀರವನ್ನು.. ಮುಳುಗಿಸುವಷ್ಟು.. ದೊಡ್ಡದಾಗಿದೆ..
 ಆದರೂ.. ಕೃತಕ ಅಲಂಕಾರದಿಂದ.. ಶೋಭಿಸುವ..ಅವಳೇ ಲೋಕದ ಕಣ್ಣಿಗೆ.. ಚೆನ್ನ..
.
ನಾ  ದುಃಖದಲ್ಲಿ ಇದ್ದಾಗೆಲ್ಲ.. ಮೈ ದಡವಿ ನಿನ್ನ ಮಡಿಲ ಮೇಲೆ ಮಲಗಿಸಿ.. ಸಂತೈಸಿದೆ.. ಗೆದ್ದು.. ಬಾ ಮಗನೆ.. ಎಂದು.. ನೀನು ನೀಡುತ್ತಿದ್ದ.. ಆ ಸ್ಪೂರ್ತಿಯ.. ಮಾತುಗಳು.. ನನ್ನ  ಬಳಲಿದ... ಜೀವನಕ್ಕೆ.. ಹೊಸ.. ಚೇತನವನ್ನ.. ನೀಡುತ್ತಿತ್ತು... ಆ ಚೇತನ ನನಗೆ ಮತ್ತೆ ಬೇಕೆನಿಸಿದೆ.. ನಿನ್ನ ಮಡಿಲಲ್ಲಿ ಮಲಗಿ..ನಿನ್ನ ಸಾಂತ್ವನದ..ಮಾತುಗಳನ್ನ ಕೆಳ ಬೇಕೆನಿಸಿದೆ.. 
"ಇದೇನಿದು.. ಇವನು ನಾನು ಬೆಳೆಸಿದ.. ಹುಡಗನ ಬಾಯಿಂದ.. ಬರುತ್ತಿರುವ.. ಮಾತೆ.. ಇಟ್ಟ ಹೆಜ್ಜೆಯನ್ನ.. ಹಿಂದಕ್ಕೆ.. ಹಾಕದಂತೆ.. ಪ್ರೋತ್ಶಹಿಸಿ ಬೆಳೆಸಿದರು.. ನೀನು.. ಹೇಡಿಯಂತೆ.. ಮತ್ತೆ ನನ್ನ ಅಶ್ರಯವೇ ಬೇಕೆನ್ನುವಿಯಲ್ಲ.. ಎಂದು.. ಕೇಳುತ್ತಿರುವೆಯೇನು??"  ಖಂಡಿತ.. ಅನ್ಯಥಾ ಭಾವಿಸದಿರು.. ನಾನು.. ಬೇಡುತ್ತಿರುವುದು.. ನಿನ್ನ ಮಡಿಲಿನಲ್ಲಿ.. ತಲೆ ಇಟ್ಟು. ಮತ್ತೆ ಕೇಳಬೇಕು ಅನ್ನಿಸುತ್ತಿದೆ.. ಆ ನಿನ್ನ ಚೇತನದಾಯಕ ಹಿತ ನುಡಿಗಳನ್ನ.. ನೀನು..ಆ ಹೊಸ ಚೇತನವನ್ನ.. ನೀಡು ಎಂದೆನೇ .. ಹೊರತು.. ರಣಹೇಡಿಯಂತೆ.. ಹಿಂದೆ.. ಓಡಿ ಬಂದು.. ನಿನ್ನ ಆಶ್ರಯ.. ಬೇಡಿಲ್ಲ.. ನಿನ್ನ ಆಶ್ರಯಕ್ಕೆ.. ಬರುವಾ ಆಸೆ ಏನೋ ಇದೆ.. ಆದರೆ.. ಹೇಡಿ ಆಗಿ ಅಲ್ಲಾ.. ವಿಜಯಿ ಆಗಿ.. ಎಷ್ಟೆಂದರೂ.. ನೀನು.. ಬೆಳೆಸಿದ.. ಹುಡುಗ.. ನಾನು.. ನನ್ನ ಕಿಂಚಿತ್ತು.. ಸೇವೆಯನ್ನಾದರೂ.. ನಿನಗಾಗಿ.. ಮುಡಿಪಾಗಿರಿಸ ಬೇಕೆಂದಿದೆ.. ಅದು ನಿನ್ನ ಪ್ರೋತ್ಸಾಹದಿಂದ ಮಾತ್ರ ಸಾಧ್ಯ..
.
ಇಂತಿ ನಿನ್ನ ಹವಿ ಹುಡುಗ..

4 comments:

  1. ನಿಜವಾಗಲೂ... ಹೇಳಿರುವದು ಸತ್ಯ ಕಣೋ... . "ಇರುವದೆಲ್ಲವ ಬಿಟ್ಟು ಇರದಿದುದರ ಕಡೆಗೆ ತುಡಿವುದೇ ಜೀವನ" ಎಷ್ಟು ವಾಸ್ತವ! ..... ನೋಡು... ವಾರಾನ್ತ್ಯಾ ನಾವು ಹೋಗುವದು ಹಳ್ಳಿ ಕಡೆಗೆ... ಅಂದ್ರೆ ನಿಜವಾದ ಶಾಂತಿ ಕಾಣುವದು ಅಲ್ಲೇ!
    ಅದರಲ್ಲೂ ಉತ್ತರ ಕನ್ನಡ ದ ಮಣ್ಣಿನ ಮಕ್ಕಳಿಗೆ ಇಂತಹಾ ಭಾವನೆ ಹೆಚ್ಚೇನೂ! ಬೇರೆಯವರಿಗೂ ಇರಬಹುದು.... ಅವರವರ ದೃಷ್ಟಿಗೆ ಬಿಟ್ಟದ್ದು!..

    ReplyDelete
  2. ಧನ್ಯವಾದಗಳು. ನಿಜ ಅಕ್ಕ.. ಕಳೆದು ಕೊಳ್ಳುವವರೆಗೂ ನಮ್ಮ ಹತ್ರ ಏನು ಇತ್ತು ಅನ್ನೋದು ಗೊತ್ತಿರತಿಲ್ಲೇ.. ಕಳದ ಮೇಲೇನೆ.. ಅದರ ಮಹತ್ವ ತಿಳಿಯದು..

    ReplyDelete
  3. Hay,,,,,nija,,,miss ada vastuvina value,,gotago tanaka,,adu nammida tumba dura hogirthu

    ReplyDelete