ಬಾಲ್ಯದಲ್ಲಿ ಪಕ್ಕದ ಮನೆಗೆ ಸಿಟಿಯಿಂದ ರಜಾ ಸಮಯದಲ್ಲಿ ಅವರ ನೆಂಟರು ಬಂದರು ಎಂದರೆ ಅವರನ್ನ ಕೌತುಕದಿಂದ ನೋಡುತ್ತಿದ್ದ.. ಅವರ ಮಾತನಾಡುವ ದಾಟಿ, ಅವರ ವಿಚಾರಧಾರೆಗಲೆಲ್ಲ ತುಂಬಾ ವಿಭಿನ್ನ ಅನ್ನಿಸುತಿತ್ತು. ಆದರೆ ಆವನ ವಯಸ್ಸಿನ ಮಕ್ಕಳು ಮೈ ತುಂಬಾ ಬಟ್ಟೆ ಹಾಕಿಕೊಳ್ಳದೆ ಇದ್ದುದನ್ನ ನೋಡಿ ಮನಸಿನ್ನಲ್ಲೇ ಮರುಕ ಪಟ್ಟಿದ್ದ. ಒಮ್ಮೆ ಹೀಗೆ ಪಕ್ಕದ ಮನೆಗೆ ಬಂದ ಇವನ ವಯಸ್ಸಿನ ಮಗುವಿನ ಹತ್ತಿರ ಕೇಳಿಯೇ ಬಿಟ್ಟಿದ್ದ.. ಇದೆಂತ ಡ್ರೆಸ್ ನಿನ್ನದು ಮೈ ಎಲ್ಲಾ ಕಾಣುತ್ತಿದೆ?? ಅಂತ. ಅದಕ್ಕೆ ಆ ಹುಡುಗಿ ಹೇಳಿದ್ದಳು ಅಯ್ಯೋ ಇದು ಫಾಶಿಒನ್ ಡ್ರೆಸ್ ಕಣೋ ತರುಣ್ ಎಂದು. ಹೌದಾ ನಮ್ಮಮ್ಮ ಮತ್ತೆ ನಮ್ಮ ಮನೆನಲ್ಲಿ ಮೈ ಕಾಣುವಂತ ಬಟ್ಟೆ ಹಾಕಿಕೊಂಡರೆ ಏನು ಮೈ ತುಂಬಾ ಬಟ್ಟೆ ಹಾಕಿಕೊಲ್ಲೋಕೆ ಆಗದೆ ಇರೋಷ್ಟು ದಾರಿದ್ರ್ಯ ಬಂತೇನೋ ನಮಗೆ ಅಂಥ ಬೈಒದನ್ನ ನೆನಪಿಸಿಕೊಂಡು ತರುಣ್ ಸುಮ್ಮನಾಗಿದ್ದ. ಆಗೆಲ್ಲ ಅಂತವರನ್ನ ಕಂಡಾಗ ಕನಿಕರ ಹುಟ್ಟುತಿತ್ತು. ನಂತರ ಬೆಳೆದು ದೊಡ್ದವನಗುತ್ತ ಹೋದಂತೆ ಅವಳು ಹೇಳಿದ್ದೆ ಸರಿ ಇದು ಈಗಿನವರ ಫಾಶಿಒನ್ ಎಂದು ತಿಳಿದಿತ್ತು. ಅಂತ ಜೀವನ ತನಗೆ ಬೇಡವೇ ಬೇಡ ಎಂದು ಮನದಲ್ಲೇ ನಿರ್ಧರಿಸಿ ಬಿಟ್ಟಿದ್ದ. ಆದರೆ ಏನು ಎಲ್ಲಾ ಇವನ ವಯಸ್ಸಿನವರು ಶಾಲಾ- ಕಾಲೇಜು ಮೆಟ್ಟಿಲು ಹತ್ತುವಾಗ ತಾನು ಏನು ಮಾಡಬೇಕೆಂದು ಸರಿಯಾದ ಮಾರ್ಗದರ್ಶಕರಿಲ್ಲದೆ.. ಕುರಿಯಂತೆ ತಾನು ಹಿಂಬಾಲಿಸಿದ್ದ. ಕ್ರಮೇಣ ಅದರಲ್ಲೇ ಹಿಡಿತ ಸಾಧಿಸಿ ಎಲ್ಲರಿಂದಲೂ ಗುರುತಿಸಿಕೊಳ್ಳುವನ್ತವನಾಗಿದ್ದ. ಹೀಗೆ ಪದವಿಯನ್ನು ಮುಗಿಸಿದ ಹುಡುಗ.. ತನ್ನ ಗೆಳೆಯರೆಲ್ಲ ಮುಂದೆ ಓದಲು ನಡೆದರೆ.. ಇವನಿಗೆ ಮುಂದೆ ಓದಿಸಿ ಅನ್ನಲು ಮನೆಯಲ್ಲಿಯ ಸ್ಥಿತಿ ತಿಳಿದು ಬಾಯಿ ಬರದೆ ಬೆಂಗಳೂರು ಎಂಬ ಮಾಯಾನಗರಿಗೆ ಮನೆಯವರೆಲ್ಲ ಕಳುಹಿಸಿಕೊಟ್ಟ ಮೇಲೆ ಬಂದಿದ್ದ. ಬರುವಾಗ ನೂರಾರು ಕನಸು ಅವನ ಜೊತೆಗಿತ್ತು.. ಹೇಗಾದರೂ ಮಾಡಿ ಸ್ವಲ್ಪ್ ದುಡ್ಡು ಮಾಡಿಕೊಂಡು ಬೇಗನೆ ಊರಿಗೆ ವಾಪಸಾಗಬೇಕು. ಅಲ್ಲೇ ಏನಾದರು ಬಿಸಿನೆಸ್ ಮಾಡಬೇಕು.. ಒಟ್ಟಿನಲ್ಲಿ ಅಪ್ಪ ಅಮ್ಮನ ಕೊನೆ ತನಕ ಚನ್ನಾಗಿ ನೋಡಿ ಕೊಳ್ಳಬೇಕು.. ಆದರೆ ಈಗ ಏನು ಮಾಡಬೇಕೆಂದೇ ತಿಳಿಯದೆ ಚಿಕ್ಕದಾಗಿದ್ದ ರೂಮ್ನಲ್ಲಿ ಬೆಡ್ ಮೇಲೆ ಮಲಗಿ ಯೋಚಿಸುತ್ತಿದ್ದಾನೆ ತರುಣ್.
ಈಗೊಂದು ಪುಟ್ಟ ಕೆಲಸ ಸಿಕ್ಕಿದೆ ಆದರೆ ಊರಲ್ಲಿ ಇದ್ದಾಗಿನ ಗೆಲುವು ಮಾಯವಾಗಿದೆ. ಹೌದು ಮುಂದೊಂದು ದಿನ ಉತ್ತಮವಾದ ಕೆಲಸ ಸಿಕ್ಕೆ ಸಿಗುವುದೆಂಬ ನಂಬಿಕೆ ನಮ್ಮ ತರುಣನಿಗೆ ಇದೆ. ಯಾಕೆಂದರೆ ಅವನು ಊರಲ್ಲಿ ಬುದ್ಧಿವಂತ ಅಂತ ಹೆಸರು ಮಾಡಿದ್ದವನು.. ಎಲ್ಲಾ ತರಗತಿಯನ್ನು ರಾಂಕ್ ಪಡೆಯದಿದ್ದರೂ ಪ್ರಥಮ ದರ್ಜೆ ಯಲ್ಲಿಯೇ ಪಾಸಾಗಿ ಬಂದವನು. ಆದರೆ ಅವನಿಗೆ ತಾನು ಏನು ಅಲ್ಲಾ ಅನ್ನೋದು ಈ ಮಾಯಾನಗರಿಗೆ ಬಂದಾಗಲೇ ಅರಿವಾದದ್ದು. ಯಾಕೆಂದರೆ ಕನ್ನಡ ಮಾದ್ಯಮದಲ್ಲಿ ಓದಿದ ಈ ಹುಡುಗನಿಗೆ, ಕನ್ನಡ ರಾಜಧಾನಿಯಲ್ಲಿ ಕನ್ನಡ ಬಂದವರು ಮಾತನಾಡಲು ಇಂಗ್ಲಿಶ್ ಅನ್ನೇ ಅವಲಂಬಿಸಿ, ತಾವು ಪರಕೀಯರು ಎಂದು ತೋರಿಸಿ ಕೊಳ್ಳುವುದರಲ್ಲೇ ತಮ್ಮ ಜಾಣತನ ಆಡಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ಬೆಂಗಳೂರು ಎಂಬ ಚೆಲುವೆ ಅದೆಷ್ಟು ಜನರಿಗೆ ಆಶ್ರಯ ನೀಡಿದೆಯೋ ಯಾರಿಗೆ ಗೊತ್ತು. ನಮ್ಮ ತರುಣ ವಯಸ್ಸಿನ ತರುಣನಿಗೆ ಇಲ್ಲಿ ಆಶ್ರಯ ಸಿಗಲಾರದು ಎಂಬ ಚಿಂತೆ ಅಲ್ಲಾ.. ಈ ಬೆಂಗಳೂರು ಎಂಬ ಮಾಯಾನಗರಿಗೆ ಬಂದ ಹೊಸತರಲ್ಲಿ ಎಲ್ಲರಿಗೂ ಕಾಡಿರಬಹುದಾದ ಚಿಂತೆ ಇದಾಗಿರಬಹುದು. ಕನಸು ಕಾಣುವ ವಯಸ್ಸಿನಲ್ಲಿ ಚಿಂತೆ ಆವರಿಸಿ ಇಬ್ಬಂದಿತನಕ್ಕೆ ಕಾರಣವಿದೆ.. ಈ ನಗರದಲ್ಲಿ ಅವನು ಹಳೆಯ ತಲೆಮಾರಿನ ಜನರಿಂದ ಹಿಡಿದು.. ಇವನ ವಯೋಮಾನದ ಎಲ್ಲಾ ಜನರ ಮುಖವನ್ನ ನೋಡಿದ್ದಾನೆ.. ಯಾರಲ್ಲೂ ಹಳ್ಳಿಯ ಜನರಲ್ಲಿ ಕಾಣ ಬಹುದಾದ ಸಹಜ ಮಂದಹಾಸ ಕಂಡಿಲ್ಲ.. ಸದಾ ಏನೋ ಕಳೆದು ಕೊಂಡವರಂತೆ ಕಾಣುವ ಮುಖಗಳು.. ದುಡ್ಡು ಮಾಡುವ ಏಕೈಕ ಉದ್ದೇಶದಿಂದಲೇ ತಾವು ಬದುಕಿದ್ದೇವೆ ಎಂಬಂತೆ ಕಾಣುವ ಜನರಿವರು.. ಅವರಂತೆಯೇ ತಾನು.. ಛೆ ಇದೊಂದು ಜೀವನವೇನು.. ಹಳ್ಳಿಯ ಜನರಿಗೆ ಆಸೆಗಳು ಎಷ್ಟೇ ಇದ್ದರು, ತಾವು ಬೆಳೆದ ಪೈರಿಗೆ ಸಮರ್ಪಕವಾದ ಬೆಲೆ ಎಂದು ದೊರೆಯದಿದ್ದರು. . ಆ ನೋವನ್ನು ನುಂಗಿ ತಾವು ಮಾಡುವ ಕೆಲಸದಲ್ಲಿ ನಿಷ್ಠೆಯಿಂದ ದುಡಿದು.. ಆತ್ಮ ತೃಪ್ತಿಯನ್ನ ಕಾಣುತ್ತ ನಗುತ್ತಾರೆ.. ಅಂತ ನಗು ತಿಂಗಳ ತಿಂಗಳ ನಿಯಮಿತವಾಗಿ ಸಂಬಾವನೆ ಪಡೆಯುವ ಈ ನಗರದ ಜನರಲ್ಲಿ ಕಾಣಲು ಸಾಧ್ಯವೇನು??? ಯಾವಾಗಲೂ ತೀರದ ಬಯಕೆಯಲ್ಲೇ ಜೀವನ ಸಾಗಿಸುವ ಈ ಬದುಕೇಕೆ ಅನ್ನಿಸುತ್ತಿದೆ. ಮೊದ ಮೊದಲು ಒಂದು ಕೆಲಸ ಸಿಕ್ಕರೆ ಸಾಕು ಎಂಬ ಚಡಪಡಿಕೆ, ನಂತರ ಒಂದು ಓಡಾಟಕ್ಕೆ ಬೈಕ್ ಆದರು ಹೊಂದುವ ಬಯಕೆ. ಇವುಗಳ ನಡುವೆ ಮದುವೆಯ ಹಂಬಲ. ಅದು ಮುಗಿಯಿತು ನಂತರ ಸ್ವಲ್ಪ ಮೇಲ್ದರ್ಜೆಗೆ ಹೋದನೆಂದರೆ ಒಂದು ಕಾರನ್ನಾದರೂ ಹೊಂದಬೇಕೆಂಬ ಬಯಕೆ. ಅದು ಮುಗಿದ ಮೇಲೆ ಒಂದು ಸಣ್ಣ ಸೈಟ್ ಮಾಡಿ ಒಂದು ಪುಟ್ಟ ಮನೆಯನ್ನೇಕೆ ಕಟ್ಟಿಸಬಾರದು ತಾನು ಎಂಬ ಹಂಬಲಿಕೆ. ಅದು ಮುಗಿದ ಮೇಲೆ ಮತ್ತೊಂದು..ಇಷ್ಟಕ್ಕೆ ಜನ್ಮವೆಲ್ಲ ಮುಗಿಯುತ್ತ ಬಂದಿರುತ್ತೆ. ಇಷ್ಟಾದರೂ ಬಾಲ್ಯದಲ್ಲಿ ಕಾಣುತಿದ್ದ ಮಂದಹಾಸ ಆ ಮೊಗದಲ್ಲಿ ಕಾಣುವುದೇ ಇಲ್ಲಾ.. ಮತ್ತೇನೋ ಚಿಂತೆ.. ಬಹುಷ ತನ್ನ ಹೆತ್ತುರನ್ನ ಮರೆತೆನಲ್ಲ ಎಂಬುದಿರಬೇಕು.. ಈ ತರಹದ ಜೀವನ ಬೇಕೇನು??
ಹೀಗೆ ಬದುಕ ಸವೆಸಿದರೆ ತಾನು ಕಂಡ ಕನಸು ನನಸಾಗುವುದಾದರು ಯಾವಾಗ ?? ಎಂಬುದೇ ತರುಣನ ಚಿಂತೆ. ಹಾಗೊಂದು ವೇಳೆ ಕೃಷಿ ಮಾಡಿಕೊಂಡೆ ಜೀವನ ನಡೆಸೋಣ ಅದರಿಂದ ನಾಲ್ಕಾರು ಜನರಿಗೆ ಕೆಲಸ ನೀಡುವಂತವನಗುತ್ತೇನೆ. ಆದರೆ ಕೃಷಿ ಮಾಡಿಕೊಂಡು ಜೀವನ ನಡೆಸುವಷ್ಟು ಜಮೀನು ಆತನ ತಂದೆಯ ಹತ್ತಿರವಿಲ್ಲ.. ಅದು ಅಲ್ಲದೆ ಹುಟ್ಟ ಒಳ್ಳೆಯ ಓದುಗ ಎಂಬ ಖ್ಯಾತಿ ಬೇರೆ ಅಂತವನು ಮನೆಯ ಬದಿಯಲ್ಲೇ ಉಳಿದರೆ ಜನ ಏನೆಂದಾರು ??
ಅವನು ಒಮ್ಮೊಮ್ಮೆ ಯೋಚಿಸುವುದುಂಟು ಯಾಕೆ ಕೃಷಿಕರಿಗಾಗಿ ಕೊಡ ಮಾಡುವ ಸಾಲದಲ್ಲಿ ಜಮೀನನ್ನು ಪಡೆದು, ಬೇಸಾಯ ಶುರುಮಾಡಬಾರದು. ಒಂದು ವೇಳೆ ಅದರಲ್ಲಿ ಸೋತೆ ಎಂದಾದರೆ.. ನಮ್ಮೂರಿನ ಜನ ಖಂಡಿತ ನಕ್ಕಾರು ಎಂಬ ಭಯ. ಕೃಷಿಕ ಕುಟುಂಬದಲ್ಲೇ ಜನಿಸಿದರು ಯಾವತ್ತು ತನ್ನ ಅಪ್ಪ ಅಮ್ಮನಂತೆ ಮೈ ಬಗ್ಗಿಸಿ ದುಡಿದವನಲ್ಲ.. ಕೆಲಸಕ್ಕೆ ಬಂದವರೋಟ್ಟಿಗೆ ಅಪ್ಪನೊಂದಿಗೆ ಹೊಗುತ್ತಿದ್ದನಾದರೂ ಅವರಂತೆ ಮೈ ಬಗ್ಗಿಸಿ, ಬೆವರು ಸುರಿಸಿ ದುಡಿದವನಲ್ಲ.. ಆದರೆ ಈಗ್ಯಾಕೋ ಅದೇ ಜೀವನ ನೆಮ್ಮದಿ ಅನ್ನಿಸುತ್ತಿದೆ.. ಆದರೆ ಪ್ರತಿ ವರ್ಷ ಅಪ್ಪ, ಚಿಕ್ಕಪ್ಪ ಎಲ್ಲಾ ಮಾತನಾಡುವುದನ್ನ ಕೇಳಿದ್ದಾನೆ.. ಚೊಲೋ ಮಾಡಿ ಓದಿಕಂಡು ಒಳ್ಳೆ ನೌಕರಿ ಸೇರರ್ರೋ ನಮ್ಮ ತರ ನೀವು ಆಗೋದು ಬೇಡ ಅನ್ನೋ ದೊಡ್ಡವರ ಹಿತ ವಚನಗಳನ್ನ ಆದೆಷ್ಟೋ ಬಾರಿ ಕೇಳಿಸಿಕೊಂಡಿದ್ದಾನೆ.. ಆದರು ನಿಜವಾಗಿಯೂ ಅವರಷ್ಟು ಪುಣ್ಯಾತ್ಮರು ಮತ್ತೊಬ್ಬರಿಲ್ಲ.. ಅನ್ನಿಸುತ್ತಿದೆ.. ಈ ಹಾಳು ಪೇಟೆ ಜೀವನಕ್ಕಿಂತ. ಅವರ ಜೀವನ ಎಷ್ಟೋ ಮೇಲು ಅನ್ನಿಸುತ್ತಿದೆ..
.
ಈ ಹಾಳು ಪೇಟೆ ಜೀವನಕ್ಕಿಂತ.... aadaruu bittadi bidadu maaye! baiyuttale baalutteve!
ReplyDeleteChandrika madam.. nija aalda..
ReplyDelete