ಬೆಂಗಳೂರು ರಾಮ ಜನ್ಮ ಭೂಮಿ ತೀರ್ಪಿಗೊಸ್ಕರ ಬಂದ್ ಆದಗಿನ ಸಂದರ್ಭ
ಇಂದೇಕೋ ಸೊರಗಿದೆ
ನನ್ನವಳ ಮುಖ..
ಗಂಡ ಸತ್ತ ನಾರಿಯಂತೆ..
ಬೀಗ ಬಿದ್ದಿದೆ.. ಪಬ್ ಬಾರ್
ಶಾಲಾ ಕಾಲೇಜ್ ಗಳಿಗೆ
ಅದೇಕೋ ಮೋವ್ನಿಯಾಗಿಹಳು
ನನ್ನ ಬೆಡಗಿ
ಬೇಸರವಾಗಿರಬೇಕು ಅವಳಿಗೆ
ಎಂದಿನ ಟ್ರಾಫಿಕ್ ಜಾಮ್ ಗಳಿಲ್ಲದೆ ..
ಗಿಜಿ ಗುಡುವ ವಾಹನ ಜನಸಂದಣಿ ಕಾಣದೆ
ನಲ್ಲ ನಲ್ಲೆಯರ ಪಿಸುಮಾತ ಕೇಳದೆ...
ಅದಾರದೋ ಬರುವಿಕೆಗೆ ಕಾದು
ಕಾದು ಶಬರಿಯಂತಾಗಿದೆ.. ಅವಳ ಮುಖ
ಒಮ್ಮೊಮ್ಮೆ ಹೆದರಿದ ಕಂದನ
ಚರ್ಯೆ ಕಾಣಿಸಿದೆ ಇವಳ ಕಣ್ಣೊಳಗೆ..
ಗೆಳತಿ, ಈ ಬೆಂಗಳುರೆಂಬ ಮಾಯಕನ್ಯೆಯ
ಬರಿದಾದ ದಾರಿಗಳು...
ನಿನ್ನ ನೆನಪ...ಬಿಡದೆ ತರಿಸಿದೆ...
- ಗಿರಿಜಾಸುತ (ಬೆನಕ)
ಎಂದೋ ಗೀಚಿದ ಸಾಲುಗಳು
No comments:
Post a Comment