ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Thursday, February 24, 2011

ಸುಳ್ಳಿನ ಸುಳಿಯಲ್ಲಿ - (ಅನುಭವ ಕಲಿಸಿದ ಪಾಠ )


  ತರುಣ್ ಅದೇಕೋ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಮಲಗಲು ರೆಡಿ ಆಗಿದ್ದಾಗ ನಡೆದ ಘಟನೆ ಇಂದ ಸ್ವಲ್ಪ ವಿಚಲಿತನಾದ..ಹಾಸಿಗೆಯ ಮೇಲೆ ಅಂಗತಾನೆ ಮಲಗಿ ಹಾಗೇ ಅದಾವುದೋ ನೆನಪಿನ ಲೋಕಕ್ಕೆ. ತೇಲಿ ಹೋದ..  
             "ನನಗೆ ಯಾಕೋ ಗೊತ್ತಿಲ್ಲ.. ಆಗಾಗ ಬಾಲ್ಯದ ದಿನದ ನೆನಪುಗಳು ಕಾಡುತ್ತವೆ.. ಅಂದು ಹಾಗೇ ಆಯಿತು.. ನಮ್ಮ ಚಿಕ್ಕಪ್ಪನಾ ಮಗ ಶಾಲೆ ಮುಗಿದ ಮೇಲೆ ಮನೆಗೆ ಬರಬೇಕಾದವನು.. ರಾತ್ರಿ ನಮ್ಮ ಊಟ ಮುಗಿದ ಮೇಲೆ.. ಮನೆ ಸೇರಿದ.. ಆದಗೂ ಯಾರು ಅವನನ್ನ ಏನು ಹೇಳಲಿಲ್ಲ.. ಕೇಳಲು ಹೋದ ಕೆಲವರಿಗೆ ೨ ನೇ ತರಗತಿಯ ಪುಟ್ಟ ಹುಡುಗ ದಿಟ್ಟ ಸುಳ್ಳುಗಳನ್ನ ಹೇಳಿ ಪುಸುಲಾಯಿಸಿದ. ಅಷ್ಟೊತ್ತಿಗಾದರೂ ಮನೆ ಸೇರಿದನಲ್ಲ ತನ್ನ ಮಗ ಅನ್ನೋ ಧನ್ಯತಾ ಭಾವ ಅವನ ತಾಯಿಯಲ್ಲಿ.. ಅದಕ್ಕಾಗಿ ಆ ವಿಷಯವಾಗಿ.. ಅವನ್ನನ್ನ ಯಾರಾದರು ಕೇಳಿದರೆ.. ತಾಯಿಗೆ ಕೋಪ.. ಇದು ಸಹಜ ಅಲ್ಲವೇ..
ಈ ಘಟನೆಯೇ.. ನನ್ನ ನೆನಪಿನ ಗೂಡಲ್ಲಿ ಹಾಸಿ ಹೊದ್ದು ಮಲಗಿದ್ದ.. ನನ್ನ ಬಾಲ್ಯದ ಘಟನೆಗಳು ಎದ್ದು ಕಾಡ ತೊಡಗಿದವು.. ಆ ಸುಳ್ಳು ಹೇಳುವ ಚಟ ಬಿಡಿಸಿದ ಘಟನೆ ನಿಮಗೆ ಹೇಳಲೇ ಬೇಕು..
ನಾನು ಕೂಡ ಕುಟುಂಬದ ಜಂಜಾಟದಲ್ಲಿ ಎಲ್ಲರು ನನ್ನವರು ಅನ್ನೋ ಭಾವನೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದೆ.. ಅಷ್ಟೊತ್ತಿಗಾಗಲೇ.. ನನ್ನ ಹುಡುಗಾಟಿಕೆಯ ಗುಣದಿಂದಾಗಿ ಎಲ್ಲರಿಗಿಂತ ಖದೀಮ ನಾನಗಿದ್ದೆ.. ಅದಕ್ಕಾಗೆ.. ನಾವೆಲ್ಲ ಆಟ ಆಡುವಾಗ ಯಾರೇ ತಪ್ಪು ಮಾಡಿ ಗಲಾಟೆ ನಡೆದರೂ.. ಅಪ್ಪನಿಗೆ ಆ ಗಲಾಟೆ ಸುದ್ದಿ ಮುಟ್ಟದೆ ಇರುತ್ತಿರಲಿಲ್ಲ ಅದರ ಪರಿಣಾಮ .. ನನಗೆ ಚಂ ಚಂ ಛಡಿಯ ರುಚಿ ಸಿಗದೇ ಇರುತ್ತಿರಲಿಲ್ಲ.. ಇದನ್ನೆಲ್ಲಾ ನೋಡಿದ ನನ್ನ ಅಜ್ಜಿ.. ಬೇಸೆತ್ತು.. ನನ್ನ ಬೇರೆ ಕಡೆ ಹೈಸ್ಚೂಲ್  ಓದಲು.. ಬಿಟ್ಟರು..
ಜಾತ್ರೆಯಲ್ಲಿ ಬೆಳೆದವನಿಗೆ ಏಕಾಂತದ ಜೀವನ ಹೇಗೆ ಹಿಡಿಸಿತು.. ಆ ಮನೆ ನಿಜಕ್ಕೂ.. ನನ್ನ ಪಾಲಿಗೆ ದೇವರ ಮನೆ ಅಂತೆ ಅವರು.. ತಮ್ಮ ಮನೆಯ ಮಗನಂತೆ ನನ್ನ ನೋಡಿಕೊಲ್ಲುತಿದ್ದರು.. ನನಗೆ ಯಾಕೋ.. ಆ ಗಲಾಟೆ ಇಲ್ಲದ ಜೀವನ ಹಿಡಿಸಲಾರಾದೆ ಹೋಗಿದ್ದೆ.. ಅವರ ಮನೆಯವರಿಗೂ ನಾನು ಸಾಕಸ್ಟು ನೋವನ್ನ ನೀಡಿರಬೇಕು.. ಆದರೇನು.. ಕ್ರಮೇಣ ಏಕಾಂತದ ಜೀವನ ಒಗ್ಗಿ ಹೋಯಿತು.. ಹೊಸ ಗೆಳೆಯರ ಪರಿಚಯ ಆಯಿತು.. ಮಳೆಗಾಲ ಮುಗಿದು.. ಚಳಿಗಾಲ ಬಂತು.. 
ಮಳೆಗಾಲದಲ್ಲಿ.. ಎಲ್ಲಾ ಕಡೆ ಹಸಿರಾಗುವ ಕಳವಾದರೆ.. ಮಕ್ಕಳ ಮನಸಿಗೆ ಅದು ಬೇಸರದ ಕಾಲವಲ್ಲವೇ.. ಚಳಿಗಾಲ ಬಂತು.. ಅಲ್ಲಿನ ಎಲ್ಲಾ ಮಿತ್ರರ ಸಂಗಡ.. ಸೇರಿ.. ನನ್ನ ಬಾಲವು ಚಿಗುರ ತೊಡಗಿತು.. ಹಾಗೇ ಪರಿಚಿತ ಆದವರಲ್ಲಿ.. ವರುಣ್ ಕೂಡ ಒಬ್ಬ ತುಂಬಾ ಶ್ರೀಮಂತರ ಮನೆಯವನು... ದಿನವು.. ಹೈಸ್ಚೂಲ್ಗೆ ಸೈಕಲ್ ತರುತ್ತಿದ.. ನಾನು ಪಾದಚಾರಿ ಒಂದೇ ದಾರಿಯಲ್ಲಿ ಹೋಗುವವರು ಅಂದ ಮೇಲೆ ಕೇಳಬೇಕೆ.. ಇನ್ನೂ ಆತ್ಮೀಯತೆ ಬೆಳೆಯಿತು..
 ಒಂದು ಶನಿವಾರ.. ಮದ್ಯಾನ್ಹ ಹೈಸ್ಚೂಲ್ ಮುಗಿಸಿ ಮನೆಯಕಡೆ ಹೋಗುವಾಗ.. ಅವನು.. ಹೇಯ್ ದೋಸ್ತ್.. ಸೈಕಲ್ ಹತ್ತು.. ಬೇಗ ಹೋಗೋಣ ಅಂತ.. ಹೇಳಿದ.. ನಾನು.. ಅವನ ಮಾತನ್ನು ಕೇಳಿ.. ಸೈಕಲ್ ಹತ್ತಿ.. ಒಂದು ಸ್ವಲ್ಪ್ ದೂರ ಬಂದಿರಬಹುದು.. ಅವನ ನಾಗಲೋಟದ ಸೈಕಲ್ ಸವಾರಿಯ ಆನಂದ ಸವಿಯುತ್ತಿರುವಗಲೇ.. ಒಂದು ಕ್ಷಣ ಏನಾಯಿತು ಎಂದು ತಿಳಿಯುವಷ್ಟರಲ್ಲಿ  ಇಬ್ಬರು.. ಕೆಳ ಬಿದ್ದಿದ್ದೆವು..
 ಅವನು ನನ್ನಂತೆ ಬೇರೆಯವರ ಮನೆಯಿಂದ ಸ್ಚೂಲ್ಗೆ ಬರುತ್ತಿದ್ದವನು.. ಇಬ್ಬರಿಗೂ ಏನು ಮಾಡಬೇಕೆಂದೇ ತೋಚಲಿಲ್ಲ.. ಇಬ್ಬರು.. ಸೈಕಲ್.. ಅಪಘಾತ ಆಗಿ ಹೀಗೆ ಪೆಟ್ಟಾಯಿತು ಅನ್ನಲು ಭಯ.. ಆದುದರಿಂದ.. ಇಬ್ಬರು.. ನೋವಿನ ಮದುವಿನಲ್ಲೇ.. ಆಸ್ಪತ್ರೆ ಗೆ ಸೇರುವ ದಾರಿಯಲ್ಲಿ ಮಾತನಾಡಿಕೊಂಡೆವು.. ನಾನು ಎಂದಿನಂತೆ ನಡೆದೇ ಹೋಗುತ್ತಿದ್ದೆ.. ಅವನು.. ಸೈಕಲ್ ಹೊಡೆದು ಕೊಂಡು.. ನನ್ನ ದಾಟುವ ವೇಳೆಗೆ ಸರಿಯಾಗಿ.. ಒಂದು ಲಾರಿಯವನು ಬಂದ.. ಇದರಿಂದ.. ಬ್ಯಾಲೆನ್ಸ್ ತಪ್ಪಿ.. ಅವನು ನನಗೆ ಗುದ್ದಿದ.. ಅದು ಅಲ್ಲದೆ.. ಅವನು ಬಿದ್ದ.. ಇದು..ನಾವು.. ನಮ್ಮ ಪಳಕರಲ್ಲಿ ಹೇಳ್ಬೇಕು ಅಂದು.. ನಿರ್ಧರಿಸಿದ್ದು.. 
        ನಂತರ.. ಆಸ್ಪತ್ರೆಯಲ್ಲಿ ಡಾಕ್ಟರ ಕೂಡ.. ಇ ಘಟನೆ ಹೇಗಾಯಿತು ಅಂತ ಕೇಳಲಾಗಿ.. ಇಬ್ಬರು.. ಇದನ್ನೇ ಹೇಳಿದೆವು.. ಅಂತೂ.. ಆ ದಿನ ಮನೆ ತಲುಪುವುದು ಸಂಜೆ ಆಯಿತು.. ನಾನು ಉಳಿದ ಮನೆಯಲ್ಲಿ ದೊಡ್ಡಪ್ಪ.. ಗಾಭರಿಯಿಂದ.. ಅಣ್ಣನನ್ನ ಕಳುಹಿಸಿ ಊರೆಲ್ಲ ಹುದುಕಿಸಿದ್ದ.. ನಾನು ಮನೆಗೆ ಹೋದಾಗ.. ಅವರು.. ಇದು ಹೇಗಾಯಿತು.. ಅಂತ ಕೇಳ್ದಾಗ.. ಮತ್ತೆ ಅದೇ ಸುಳ್ಳು.. ಅದನ್ನ ಕೆದಕಲು ಇನ್ನೇನೋ ಕೇಳಿದಾಗ ಅದನ್ನ ಸಮರ್ಥನೆಗೆ ಇನ್ನೊಂದು.. ಸುಳ್ಳು.. ಹೀಗೆ ನನ್ನ ಸುಳ್ಳುಗಳ ಕಂತೆ ಬೆಳೆಯುತ್ತಲೇ ಹೋಯಿತು.. ಅತ್ತ ನನ್ನ ಮಿತ್ರ ವರುಣ ಏನು ಮಾಡಿಕೊಂದಿರುವನೋ ಎಂಬ ಚಿಂತೆ.. ಅವನು ನನ್ನ ಅಂತೆ.. ಹೇಳಿದ್ದರೆ ಒಳ್ಳೆಯದು.. ಆದರೆ.. ವಿಚಿತ್ರ ಅಂದರೇ.. ಆ ಸತ್ಯಕ್ಕೆ.. ಆದರೆ ಇರುವುದು ಒಂದೇ ರೂಪ.. ಆದರೆ ಸುಳ್ಳಿಗೆ.. ಎಲ್ಲರು ಒಂದೇ ರೀತಿ ಹೇಳಲಾದಿತೆ?? ಅವನೊಂದು.. ನಾನೊಂದು.. ಸುಳ್ಳುಗಳ ಕತೆಯನ್ನೇ ಸೃಷ್ಟಿಸಿ ಬಿಟ್ಟೆವು.. 
 ನಂತರ ಅದು ಹೇಗೋ ಏನೋ.. ನಮ್ಮ ಪಾಲಕರ ಮನೆಯವರು ಅವರ ಮನೆಗೆ ಫೋನ್ ಮಾಡಿ ವಿಚಾರಿಸಲಾಗಿ.. ಎಲ್ಲಾ ಬಟಾ ಬಯಲು.. ನಮ್ಮ ಮಿಥ್ಯದ ಅರಮನೆ ಗಾಳಿ ಗೋಪುರವಾಗಿತ್ತು..  ಹುಂ ಇನ್ನೇನು ಮಾಡುವುದು.. ನಿಜ ಒಪ್ಪಿಕೊಳ್ಳದೆ ವಿಧಿ ಇಲ್ಲಾ ಎಂದು ತೋಚಿದಾಗ ಇಬ್ಬರು. ನಮ್ಮ ನಮ್ಮ ಮನೆಗಳಲ್ಲಿ.. ನಿಜ ಒಪ್ಪಿಕೊಂಡೆವು.. ಆದರೆ.. ನಾವು ಆಡಿದ ನಾಟಕದಿಂದಾಗಿ ಎಲೆಲ್ಲೂ ನಾವು.. ಸೈಕಲ್ ಮಿತ್ರರು ಎಂದೆ ಕರೆಸಿಕೊಳ್ಳುವ ಹಾಗಾಯಿತು 
 ನಮ್ಮನ್ನು ಛೇಡಿಸಲು ಒಂದು ಸಾಧನ ಆಯಿತು.. ನನಗೆ ನನ್ನ ಮೇಲೇನೆ ಯಾಕೋ.. ಮುಜುಗುರ ಆಗ ತೊಡಗಿತು.. ಅಂದೆ ನಿರ್ಧರಿಸಿದೆ.. ಸುಳ್ಳು ಎಂದಿಗೂ ಮತ್ತಷ್ಟು  ನೋವನ್ನ ನಮಗೆ ತರುತ್ತದೆಯೇ ಹೊರತು.. ಸುಖವನ್ನಲ್ಲ.. ಅದೇ ನಿಜ ಹಾಗಲ್ಲ.. ಇಂದಲ್ಲ ನಾಳೆ.. ಹೊರ ಬಂದೆ ಬರುತ್ತದೆ.. ತುಂಬಾ ತಡವಾಗಿ ತಿಳಿದಷ್ಟು ನಮ್ಮ ಆತ್ಮೀಯರಿಗೆ ನಮ್ಮ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ.. ಅಂದಿನಿಂದ ಇಲ್ಲಿವರೆಗೂ ನಡೆದದ್ದನ್ನ ಇದ್ದ ಹಾಗೇ  ಒಪ್ಪಿ ಕೊಳ್ಳುವ ಗುಣ ನನ್ನಲ್ಲಿ ಬೆಳೆದು ಬಂದಿತು..
       ಅದೇ ನಾನು ಹುಟ್ಟಿದ ಮನೆಯಲ್ಲೇ ಇದ್ದರೆ ಈ ಅನುಭವ ಬೇರೆಯದೇ ಆಗಿರುತಿತ್ತು.. ಅನ್ನಿಸುತ್ತದೆ.. ಯಾಕೆಂದರೆ.. ಅಪ್ಪನ ಹೊಡೆತಕ್ಕಿಂತ.. ಸುಳ್ಳೇ ಹಿತ ಎನಿಸುತಿತ್ತೋ ಏನೋ.. ಜೊತೆಗೆ ಅಮ್ಮನ ಮಮತೆ...ಜೊತೆ ಇರುತ್ತಿತ್ತಲ್ಲ..
ಅದನ್ನ ನೆನೆಯುತ್ತ ನೆನೆಯುತ್ತ.. ನನ್ನ ಮನಸು.. ವಂದನೆ ಹೇಳಿತು.. ಆ ನನ್ನ ಪಾಲಕರಿಗೆ.. ಎಂತ ಪುನ್ಯತ್ಮರಪ್ಪ ಅವರು.. ಅಂಥವರ ಮನೆಯಲ್ಲಿ ನಾನು ಬದುಕಿದ್ದೆ ಎನ್ನಲು.. ನನಗೆಷ್ಟು ಖುಷಿ..ಅಂತವರ ನೆರಳಲ್ಲಿ ಬೆಳೆದ ನಾನೇ ಧನ್ಯ.. ಎನ್ನುತ್ತಾ.. ಮಗ್ಗುಲು.. ಬದಲಾಯಿಸಿದ.." ತರುಣ.. ಆ ಸವಿ ನೆನಪನ್ನ ಮನಸಾರೆ ನೆನೆಯುತ್ತ.. ನಿದ್ರಾ ದೇವಿಯಲ್ಲಿ ಲೀನನಾದ..

~ಕಮಲು~

8 comments:

  1. ಅಬ್ಬಾ ನಾ ಹೇಳಿದ್ದೇ ಹೇಳಿದ್ದು ದಿನಕ್ಕೊಂದು article ಹಾಕಲೆ ಸ್ಟಾರ್ಟ್ ಮಾಡಿದ್ಯಲೋ.....
    very nice..... ಚಂದಾ ಬರೀದೆ.
    ಅದ್ಕೆ ಹೇಳೋದು... ಸೈಕಲ್ ಸ್ವಲ್ಪ ನಿಧಾನಕ್ಕೆ ಹೊಡಿಯವು ಅಂತಾ......

    ReplyDelete
  2. ದೋಸ್ತ.. ಯಾಕಾದ್ರೂ ಕೆಲದ್ನೋ ಅನ್ನಿಸ್ತಿದ್ದೆನ ಅಲ್ದಾ.. ಏನೋ ಬರೆಯ್ವು ಅನ್ನಿಸ್ಚು ಬರದು ಬಿಟ್ಟಿ.. ಕಷ್ಟ ಪಟ್ಟು ಓದಿದ್ದಕ್ಕೆ ಥ್ಯಾಂಕ್ಸ್.. ಇಷ್ಟ ಆಗಿದ್ದರೆ.. ಇನ್ನೂ .. ಥ್ಯಾಂಕ್ಸ್..

    ReplyDelete
  3. ಜಾತ್ರೆಯಲ್ಲಿ ಬೆಳೆದವನಿಗೆ ಏಕಾಂತದ ಜೀವನ ಹೇಗೆ ಹಿಡಿಸಿತು..... tumbaa istavaada maatu... benaka... hinge baritaa iro brother... olle style iddu ninna baravanigeyalli...

    ReplyDelete
  4. ನಿಜ ಮೇಡಂ ಏಕಾಂತದಲ್ಲಿ ಬೆಳೆದ ಜನಕ್ಕೆ.. ಜನ ಜಂಗುಳಿಯಲ್ಲಿ ಬೇರೆಯದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತಿದ್ದೂ..
    ಆದೇ ರೀತಿ ಜನ ಜಂಗುಳಿಯಲ್ಲಿ ಬೆರೆತು ಬದುಕುತ್ತಿದ್ದವನನ್ನ ತುಂಬಾ ಒಳ್ಳೆಯ ಏಕಾಂತದ ಜಾಗಕ್ಕೆ ತಗೆದು ಕೊಂಡು ಹೋಗಿ ಬಿಟ್ಟರು..
    ಅದಕಿಂತ ತನಗೆ ಮೊದಲಿನ ಜಗವೇ ಇಷ್ಟ ಅನ್ನೋ ಭಾವ ಅವನಲ್ಲಿ ಸದಾ ಇರ್ತು.. ಯಾಕಂದ್ರೆ.. ಅದೇನೋ ಅಲ್ಲಿ ಎಲ್ಲಾ ಇದ್ದರು .. ಅವನ್ದ್ದೇನೋ ಕಳಕೊಂಡ ಭಾವ ಅವನದಗಿರ್ತು.. ಅದನ್ನೇ ಹೇಳ ಪ್ರಯತ್ನ ಮಾಡಿದ್ದಿ.. ಆಷ್ಟೇ.. ಹುಂ ತುಂಬು ಹೃದಯದ ಧನ್ಯವಾದಗಳು.. ಆಕ್ಕ ನನ್ನ ಬ್ಲಾಗ್ ಅನ್ನ ಕಷ್ಟ ಪಟ್ಟು ಓದಿ ಇಷ್ಟ ಪಟ್ಟು .. ಕಾಮೆಂಟ್ ಮಾಡಿ.. ಪ್ರೀತಿಯಿಂದ ಹಾರೈಸಿದ್ದಕ್ಕೆ..

    ReplyDelete
  5. ಬರ್ದಿದ್ದು ಚೆನ್ನಾಗೇ ಇದ್ದು..

    ReplyDelete
  6. ಸತ್ಯಕ್ಕೆ ಇರುವುದು ಒಂದೇ ರೂಪ.. ಆದರೆ ಸುಳ್ಳಿಗೆ..

    really.... i agree with u....
    jo bhi kaho sachha kaho....

    ReplyDelete