ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Monday, September 27, 2010

ಇಂದಿನ ಚುನಾವಣೆಯ ಅಣಕ

ಇಂದಿನ ಚುನಾವಣೆಯ ಅಣಕ :
         ಓ ನನ್ನ ಜೀವವೇ,
                                ಹೇಗಿದ್ದೀಯ??? ಎಲ್ಲಿರುವೆ??? ಕ್ಷೇಮವೇನು??? ಎಂದೆಲ್ಲಾ ಕೇಳಲಾರೆ ನಿನೇಲ್ಲಿದ್ದರು ಸುಖದಿನದಂದ ಇರುವೆ ಎಂದೇ ಭಾವಿಸುವೆ.. ಏಕೆ ಎಂದರೆ ನೀನೆ ನಾನಾಗಿರುವಾಗ, ನಾನೇ ನಿನಾಗಿರುವಾಗ, ನಿನಗೆ ನೋವು ಉಂಟಾದರೆ ನನ್ನೀ ಮನ ಸಂತಸದಿಂದ ಇರಲು ಸಾಧ್ಯವೇನು??? ಅಂಥಹ ಪ್ರಶ್ನೆಗಳೆಲ್ಲಾ ನಮ್ಮಿಬ್ಬರ ನಡುವೆ ಅರ್ಥವಿಲ್ಲದ್ದು ಎಂದೇ ನನ್ನ ಒಡಲಾಳದ ಇಂಗಿತ..
                           ನಾನು ನಿನಗೆ ಹೇಳದೆ ಇರುವ ವಿಷಯ ಯಾವುದಾದರು ಇದೆಯೇನು???? ಆದರು ನಾನು ಮತ್ತೊಮ್ಮೆ ನಮ್ಮ ಪಿ. ಯು. ಸಿ ಕಾಲೇಜ್ನಲ್ಲಿ  ವಿದ್ಯಾರ್ಥಿ ಪರಿಷತ್ತಿಗೆ ನಡೆದ  ನಮ್ಮ ಪಾಲಿನ ಮಹಾ ಚುನಾವಣೆಯ ಘಟನೆಯನ್ನು ಹೇಳ ಬಯಸುತ್ತೇನೆ..
           ಹೈಸ್ಚೂಲ್ನಲ್ಲಿ ಸಾಂಸ್ಕ್ರತಿಕ ಮಂತ್ರಿಯಾಗಿ ಚುನಾವಣೆಯಲ್ಲಿ ಗೆಲುವಿನ ಸವಿ ಉಂಡಿದ್ದ ನನಗೆ ದ್ವಿತೀಯ ಪಿ.ಯು.ಸಿಯಲ್ಲೂ ಚುನಾವಣೆಗೆ ನಿಲ್ಲಬೇಕಾದ ಅನಿವಾರ್ಯತೆ ಬಂದಿತು.. ಕಾಲೇಜ್ಗೆ ಹೋಗೋದೇ ಬೇಡ ಕಲ್ತಿರೋದು ಸಾಕು ಯಾವದಾದ್ರು ಕೆಲಸ ಮಾಡಲಿ ಸಾಕು ಎಂಬ ನಮ್ಮ ಮನೆಯ ಯಜಮಾನ ಚಿಕ್ಕಪ್ಪನ ಒತ್ತಡದ ನಡುವೆಯೂ ಏನೋ ಒಂದು ಕಲಿಬೇಕು ಕಲಿಯುತ್ತೇನೆ ಎಂದು ಹಠ ಮಾಡಿ ಸಂಬಂಧಿಕರಾದ ನನ್ನ ಪಾಲಿನ ಪ್ರಾತಃ ಸ್ಮರನಿಯರಾದವರ ಮನೆಯಲ್ಲಿ ಉಳಿದು ಅಮ್ಮ ಕೊಡಿಸಿದ ಸೈಕಲ್ ಏರಿ ನಾನಿಕಟ್ಟ ಸರಕಾರಿ ಪ.ಪೂ.ಕಾಲೇಜ್ ನಾ ವಿದ್ಯಾರ್ಥಿ ಆದೆ.  ವಿಚಿತ್ರವೋ ಏನೋ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿದ ನಾನು ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ!!!! ಗುರುಗಳಿಗೆಲ್ಲ ನೆಚ್ಚಿನ ವಿದ್ಯಾರ್ಥಿಗಳಲ್ಲಿ ನಾನು ಒಬ್ಬ... ಪ್ರಥಮ ವರ್ಷದಲ್ಲಿ ತರಗತಿಗೆ ಮೊದಲಿಗನಾಗಿದ್ದರಿಂದ ವಿದ್ಯಾರ್ಥಿ ಪರಿಷತ್ತಿನಲ್ಲಿ ಸದಸ್ಯತ್ವ ಸ್ಪರ್ದಿಸದೆ ಸಿಕ್ಕಿತ್ತು. ಆದರು ನಮ್ಮ ಗುರುವರ್ಯರೊಬ್ಬರು ನಮ್ಮ ಬ್ಯಾಚಿನಿಂದ ಮಹಿಳಾ  ಪ್ರತಿನಿಧಿಯನ್ನೇ ಆರಿಸಿ ತರಬೇಕೆಂದು ಗಂಡು ಮಕ್ಕಳಾದರೆ ತಮಗೆ ನಿಷ್ಥೆ ತೋರರೆಂಬ ದೂರಾಲೋಚನೆಯಿಂದ ಗಂಡು ಮಕ್ಕಳು ಕೆಲವೇ ಸಂಖ್ಯೆ ಅಲ್ಲಿ ಬಂದಿದ್ದ ದಿನವನ್ನು ಆರಿಸಿ ಧಿಡೀರ ಅಂಥ ಚುನಾವಣೆ ಘೋಷಿಸಲಾಯಿತು.. ಮತ್ತು ಅಂದೇ ನಾಮಪತ್ರ ಸಲ್ಲಿಸಲು ಕಡೆಯ ದಿನ. ಮಾರನೇ ದಿನವೇ ನಮ್ಮ ಸಂಸತ್ತಿನ ಮಹಾ ಚುನಾವಣೆ..                     ಇದನ್ನರಿತು  ಮೊದಲ ವರ್ಷ ಹಾವು ಮುಂಗಸಿ ಅಂತೆ ಕಚ್ಚಾಡುತ್ತಿದ್ದು ಕೊನೆಯ ವರ್ಷದಲ್ಲಿ ಆತ್ಮೀಯ ಮಿತ್ರನಾಗಿದ್ದ ವಿನಯ ದಂತ್ಕಲ್ ನನ್ನು ನಿಲ್ಲಿಸಲು ತಿರ್ಮಾನಿಸಿದೆವು.. ಆದ್ರೆ ಅವಿರೋಧ ಆಯ್ಕೆ ಆದ್ರೆ ಮತ್ತೆ ಬೇಗ ತರಗತಿಗಳು ಆರಂಭವಾಗುತ್ತದೆ ಅದಕ್ಕಾಗಿ ಚುನಾವಣೆ ನಡೆಸೋಣ ಎಂದು ನಿರ್ಧರಿಸಿದೆವು. ಅವನಿಗೆ ಎದುರಾಳಿಯಾಗಿ ಯಾರು ನಿಲ್ಲಲು ತಯಾರಿ ಇಲ್ಲದಿದ್ದಾಗ ನಾನೇ ಸ್ಪರ್ಧಿಸಲು ತೀರ್ಮಾನಿಸಿದೆ... ಅದರ ಹಿಂದಿನ ಕಾರಣ ಇಷ್ಟೇ ತುಂಬಾನೇ ಕಡಿಮೆ ಜನರಿರುವ ನಮ್ಮ ತರಗತಿಯಲ್ಲಿ ಹುದುಗಿಯರ್ದೆ ಸಂಖ್ಯಾ ಬಾಹುಳ್ಯ ಜಾಸ್ತಿ ಇದ್ದರು ಅವರಾರು ನಿಲ್ಲದೆ ಇದ್ದರೆ ಮಾತ್ರ ನಾನು ನಿಲ್ಲುವುದು  ಒಂದು ವೇಳೆ ನಿಂತರೆ ನಾನು ನಿಲ್ಲಬಾರದು ಎಂದು ನಿರ್ಧರಿಸಿದೆ.. ಅವರಾರು ನಿಲ್ಲಲಿಲ್ಲ.. ಆ ದುರ್ಧೈವ ನಂಗೆ ಕಾದಿತ್ತು. 
ಮತ ಯಾಚನೆ ಸಮಯದಲ್ಲಿ ನಮ್ಮ ಆತ್ಮೀಯ ಮಿತ್ರ ಪಕ್ಕ ರಾಜಕಾರಣಿಯಂತೆ ಮತ ಯಾಚಿಸಿದ ಭರವಸೆಯ ಆಶ್ವಾಸನೆಗಳ ಮಹಾಪೂರವನ್ನೇ ಹರಿಸಿದ. ಪ್ರಿಯೆ ಸೋಲನ್ನೇ ಬಯಸಿ ಸ್ಪರ್ಧಿಸಿದವನ ಎದುರು ಭಾರಿ ಬ್ರಹ್ಮಸ್ತ್ರವನ್ನೇ ಬಿಸಿದ್ದ. ನಾನು ಯಾವ ರೀತಿ ಮತ ಯಾಚಿಸಿದೆ ಗೊತ್ತೇನೆ...ಚುನಾವಣೆ ಆಗಲೇಬೇಕೆಂಬ ಮಹೋನ್ನತ ಉದ್ದೇಶ ಬಿಟ್ಟರೆ ಮತ್ತಿನ್ನಾವ ದುರುದ್ದೇಶವು ನನ್ನಲ್ಲಿ ಇರಲಿಲ್ಲ ಅದಕ್ಕಾಗಿಯೇ ಸ್ಪರ್ಧಿಸಿದವನು. ನಾನು " ಪ್ರೀತಿಯ ಗೆಳೆಯರೇ/ತಿಯರೇ ತಮ್ಮಲ್ಲಿ ಕೇಳಿ ಕೊಳ್ಳುವುದಿಷ್ಟೇ,  ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗಳಾದ ನಾವುಗಳು ಮುಂದಿನ ಭವ್ಯ ಭಾರತವನ್ನ ಆಳಲು ನಮ್ಮ ನಮ್ಮ ಪ್ರತಿನಿಧಿಗಳನ್ನ ಆಯ್ಕೆ ಮಾಡುವರಾಗಿರುವದುರಿಂದ , ಇಂದು ವಿದ್ಯಾರ್ಥಿ ಪರಿಷತ್ತಿಗಾಗಿ ನಡೆಯುತ್ತಿರುವ ಈ ಚುನಾವಣೆಯನ್ನು ಒಂದು ಅಣಕವೆಂದು ಭಾವಿಸಿ. ನಾವು ಎಂಥಹ ಪ್ರತಿನಿಧಿಗಳನ್ನ ನಮ್ಮ ದೇಶವನ್ನಾಳಲು ಬರುವ ಚುನಾವಣೆಗಳಲ್ಲಿ ಕಳುಹಿಸುತ್ತೇವೆ ಎಂಬುದನ್ನ ನಾವು ಇಂದು ನಮ್ಮ ಗುರುವರ್ಯರುಗಳಿಗೆ ತೋರಿಸಿ ಕೊಡೋಣ ಎಂದು ನಿರ್ಧರಿಸಿ ಮತ ಚಲಾಯಿಸಿರಿ. ಈಗಾಗಲೇ ನನ್ನ ಗೆಳೆಯ ಹಾಗೂ ಪ್ರತಿಸ್ಪರ್ಧಿ ಇಂದಿನ ಎಲ್ಲಾ ರಾಜಕಾರಣಿಗಳಂತೆ ಆಶ್ವಸನೆಗಳನ್ನ ನೀಡಿದ್ದಾನೆ ನಾನು ನಿಮಗೆ ಯಾವದೇ ಬಗೆಯ ಆಶ್ವಾಸನೆಯನ್ನು, ಆಸೆಯನ್ನು ತೋರಿಸುವ ಪ್ರಯತ್ನ ಮಾಡಲಾರೆ.ನಾನೇ ಏನಾದ್ರು  ಆಯ್ಕೆ ಆದರೆ ಖಂಡಿತ ನನಗೆ ಸಿಗುವ ಅಧಿಕಾರವನ್ನು ನಿಮ್ಮೆಲ್ಲರ ಇಚ್ಹೆಗಳನ್ನ ಪೂರೈಸಲು ಬಳಸುತ್ತೇನೆ.. ನಾನೇ ಗೆಲ್ಲಬೇಕೆನ್ದೆನು ಇಲ್ಲ ನನ್ನ ಗೆಳೆಯ ಗೆದ್ದರೆ innu  ನನಗೆ ಸಂತೋಷ್ ಎಂದು ಕುಳಿತೆ. ಒಂದಂತು ಸತ್ಯ ಭವಿಷ್ಯತ್ತಿನ ಭಾರತದ ಚುನಾವಣೆಗಳು ಯಾವ ರೀತಿ ಇರುತ್ತವೆ ಎಂಬುದನ್ನ ಈ ಚುನಾವಣೆ ತೋರಿಸಿ ಕೊಡಲಿ ಎಂಬ ಆಶಾವಾದಿತನದಿಂದ ಫಲಿತಾಂಶವನ್ನ ಎದುರು ನೋಡುತ್ತಿರುತ್ತೇನೆ..
              ಫಲಿತಾಂಶ ಏನು ಬಂದಿರಬಹುದು ನನ್ನ ಚಿನ್ನು... ಈ ನಿನ್ನ ಹೀರೋ  ನಿನಗೆ ಮಾತ್ರ ಒಳ್ಳೆಯವನು ಉಳಿದವರಿಗೆಲ್ಲ ಅಯೋಗ್ಯ ಎಂಬುದು  ಈ ಚುನಾವಣೆ ಕಳಿಸಿ ಕೊಟ್ಟಿತು.. ಹೀನ ಮಾನವಾಗಿ ಸೋತಿದ್ದೆ..  ಆದರು ನಮ್ಮ ತಂತ್ರ ಫಲಿಸಿತ್ತು ನಮ್ಮ ಗೆಳೆಯ ಗೆದ್ದಿದ್ದ.. ನನ್ನ ಸೋಲನ್ನು ಅಣಕಿಸಿ ಕೇಳಿದ ನಮ್ಮ ಕನ್ನಡ ಗುರುಗಳಿಗೆ ನಾನು ಹೇಳಿದ ಉತ್ತರವೇನು ಗೊತ್ತೇನು ನನ್ನ ಚಿನ್ನ, ಒಂದು ರೀತಿಯಲ್ಲಿ ನನ್ನ ಉತ್ತರ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎನ್ನುವ ಜಟ್ಟಿ ಧೋರಣೆಯಂತೆ ಯಾವಾಗಲು ನಿನ್ನ ಮುಂದೆ ಸೋತಾಗ ಆಡುತ್ತಿದ್ದೆನಲ್ಲ ಅಂಥ ಒಣ ಸಮರ್ಥನೆ ಅಂಥ ಈಗ ಅನ್ನಿಸುತ್ತಿದೆ.   "ಸರ್ ನನಗೆ ಬೇಸರವಗುತ್ತಿರುವುದು  ನನ್ನ ಸೋಲಿಗಲ್ಲ. ನಿಜಕ್ಕೂ ಮನಸ್ಸು ಭಾರವಾಗುತ್ತಿರುವುದು ನಮ್ಮ ಕಾಲದಲ್ಲಿ ಆದರು ಭಾರತದ ಆಡಳಿತದ ಚುಕ್ಕಾಣಿಯನ್ನ ದಕ್ಷರು ಹಿಡಿಯುವರೆಂದು ಕನಸು ಕಾಣುತ್ತಿದ್ದೆ.. ಆದರೆ ಅದೆಲ್ಲ ಬರೆ ಭ್ರಮೆ ಎಂಬುದನ್ನ ನನ್ನ ಮಿತ್ರರು  ಈ ಚುನಾವಣೆಯ ಮೂಲಕ ಸಾಭಿತು ಪಡಿಸಿದರು ಎಂದೆ.
    ಆದರೆ ನಾನು ಹೇಳಿದ್ದು ಸರಿ ಅಂಥ ನನಗೆ ನನ್ನ ನೆಚ್ಚಿನ ಗುರುಗಳಾಗಿದ್ದ ಹಾಗೂ ನಮ್ಮ ರಾಜ್ಯಶಾಸ್ತ್ರದ ಗುರುಗಳಾಗಿದ್ದ ಯು.ಸಿ. ಶಾಸ್ತ್ರಿಗಳು ನನ್ನ ಪರವಾಗಿ, ನಡೆದಿರುವದು ಏನೆಂದು ಕನ್ನಡ ಗುರುಗಳಿಗೆ ತಿಳಿಯಪಡಿಸಿ, ಅವರು ನನ್ನ ಬೆನ್ನು ನೇವರಿಸಿದಾಗ ನಿಜಕ್ಕೂ ನಾನು ಸೋಲಿನಲ್ಲು ಗೆಲವು ಕಂಡಿದ್ದೆ..


     ಗೆಲುವಿನ ಉನ್ಮಾದತೆಯಲ್ಲಿ ಮೈ ಮರೆತಿದ್ದ ನನ್ನ ಗೆಳೆಯ ಕೊಟ್ಟ ಅಶ್ವಾಸನೆಗಳನ್ನ ಜಾರಿ ತರಲು ಪ್ರಯತ್ನಿಸಿ ವಿಫಲನಾಗಿದ್ದ. ದಿನದಾಂತ್ಯಕ್ಕೆ ನನ್ನ ಮನ ಭಾರವಾಗಲು ನನ್ನ ಮಿತ್ರ ಹೇಳಿದ ಒಂದು ಮಾತು ಸಾಕಾಯಿತು  ನನ್ನ ಆ ಕಾಲದ ಪ್ರತಿಸ್ಪರ್ಧಿ ಮತ್ತು ನನ್ನ ಮನ ಸೆಳೆದ ಹುಡುಗಿ ನನಗೆ ಓಟು ಹಾಕಲಿಲ್ಲ ಅದನ್ನು ನಾನು ಗುರುತಿಸಿದೆ ಅವಳು ನನಗೆ ಮತ ಹಾಕಿದಳು.. ಎಂದು ಆತ ಖುಷಿ ಅಲ್ಲಿ ಹೇಳಿ ಬಿಟ್ಟ.. ನಿಜ ಹೇಳು ಗೆಳತಿ ನಾವು ಯಾರ ಮೇಲಾದರೂ ಭರವಸೆ ಇಟ್ಟುಕೊಳ್ಳುವುದು ತಪ್ಪೇನು?? ಅದೊಂದೇ ಸಂಗತಿ ನನ್ನೆಲ್ಲ ಖುಷಿಯನ್ನು ನೂಚ್ಚು ನೂರು ಮಾಡಿತ್ತು.. ಈಗ ನೆನೆಸಿಕೊಂಡರೆ ಎಷ್ಟು ಸಿಲ್ಲಿ ಎನ್ನಿಸುತ್ತದೆ.. ಇಷ್ಟಕ್ಕೂ ಅವಳು ಓಟು ಹಾಕಿದ್ದ ಆದ್ರು ಯಾರಿಗೆ ನನ್ನ ಆತ್ಮೀಯ ಗೆಳೆಯನಿಗಲ್ಲವೇ..ಅದು ಅಲ್ಲದೆ ನನ್ನ ಮತ ಯಾಚನೆಯಲ್ಲೂ ನನಗೆ ಸಂತೋಷ ಆಗುವುದು ನನ್ನ ಗೆಳೆಯ ಗೆದ್ದರೆ ಮಾತ್ರ ಎಂದಿದ್ದೆನಲ್ಲವೇ ಎಂದು & ಒಂದು ವೇಳೆ,  ನೀನೆ ಆ ಜಾಗದಲ್ಲಿ ಇದ್ದರು ನನ್ನ ಗೆಳೆಯನಿಗೆ ಓಟು ಹಾಕುತ್ತಿದ್ದೆ ಅಲ್ಲವೇನು??? ಎಂದು ಸಮಾದನಿಸಿಕೊಂಡೆ.. ಅಷ್ಟರೊಳಗೆ ನನ್ನ ಆತ್ಮೀಯ ಗೆಳೆಯ ನನ್ನ ಸಮಾಧಾನ  ಮಾಡಲು ಹೇಳಿದ್ದೇನು ಗೊತ್ತೇ.. ನಿನಗೆ ರಾಜಕೀಯವೆಲ್ಲ ಬೇಡ ಓದಿನಲ್ಲಿ ಮುಂದುವರಿದರೆ ಅವಳಿಗೂ ಪೈಪೋಟಿ ಕೊಡಲು ನೀನು ಸಿಗುತ್ತಿಯ ಎಂಬ ದೂರಾಲೋಚನೆ ಇಂದ ಅವಳು ಮತ ಅವನಿಗೆ ಹಾಕಿದಳಂತೆ... 


ಗೆಳತಿ ನಿಜ ಏನು ಎನ್ನುವುದು ಅವಳಿಗೆ ಗೊತ್ತು??? ನಿನಗೆ ಏನಾದರು ನಿಮ್ಮ ಮಹಿಳೆಯರ ಮನಸ್ಸು ಯಾವಾಗ ಹೇಗೆ ಎಂದಾದರು ತಿಳಿದಿದೆಯೇನು???? 

ತಿಳಿದಿದ್ದರೆ ಉತ್ತರಿಸು ಅವಳು ನನ್ನ ಇಷ್ಟದ ಹುಡುಗಿ ಎಂದು ಹೇಳಿದೆನೆಂದು ಕೋಪಿಸದಿರು... ನನ್ನ ಜೀವವೇ??? ಇಷ್ಟ ಎಂದಾಕ್ಷಣ ಅವರೆಲ್ಲ ನಿನ್ನ ಅಂತೆ ನನ್ನ ಜೀವ ಆಗಲು ಸಾಧ್ಯವೇನು ನನ್ನ ಮನದೊದತಿಯೇ???  
ಇಂತಿ ನಿನ್ನವ
ಬೆನಕ

 

2 comments: