ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Monday, September 27, 2010

ಇಂದಿನ ಚುನಾವಣೆಯ ಅಣಕ

ಇಂದಿನ ಚುನಾವಣೆಯ ಅಣಕ :
         ಓ ನನ್ನ ಜೀವವೇ,
                                ಹೇಗಿದ್ದೀಯ??? ಎಲ್ಲಿರುವೆ??? ಕ್ಷೇಮವೇನು??? ಎಂದೆಲ್ಲಾ ಕೇಳಲಾರೆ ನಿನೇಲ್ಲಿದ್ದರು ಸುಖದಿನದಂದ ಇರುವೆ ಎಂದೇ ಭಾವಿಸುವೆ.. ಏಕೆ ಎಂದರೆ ನೀನೆ ನಾನಾಗಿರುವಾಗ, ನಾನೇ ನಿನಾಗಿರುವಾಗ, ನಿನಗೆ ನೋವು ಉಂಟಾದರೆ ನನ್ನೀ ಮನ ಸಂತಸದಿಂದ ಇರಲು ಸಾಧ್ಯವೇನು??? ಅಂಥಹ ಪ್ರಶ್ನೆಗಳೆಲ್ಲಾ ನಮ್ಮಿಬ್ಬರ ನಡುವೆ ಅರ್ಥವಿಲ್ಲದ್ದು ಎಂದೇ ನನ್ನ ಒಡಲಾಳದ ಇಂಗಿತ..




                           ನಾನು ನಿನಗೆ ಹೇಳದೆ ಇರುವ ವಿಷಯ ಯಾವುದಾದರು ಇದೆಯೇನು???? ಆದರು ನಾನು ಮತ್ತೊಮ್ಮೆ ನಮ್ಮ ಪಿ. ಯು. ಸಿ ಕಾಲೇಜ್ನಲ್ಲಿ  ವಿದ್ಯಾರ್ಥಿ ಪರಿಷತ್ತಿಗೆ ನಡೆದ  ನಮ್ಮ ಪಾಲಿನ ಮಹಾ ಚುನಾವಣೆಯ ಘಟನೆಯನ್ನು ಹೇಳ ಬಯಸುತ್ತೇನೆ..




           ಹೈಸ್ಚೂಲ್ನಲ್ಲಿ ಸಾಂಸ್ಕ್ರತಿಕ ಮಂತ್ರಿಯಾಗಿ ಚುನಾವಣೆಯಲ್ಲಿ ಗೆಲುವಿನ ಸವಿ ಉಂಡಿದ್ದ ನನಗೆ ದ್ವಿತೀಯ ಪಿ.ಯು.ಸಿಯಲ್ಲೂ ಚುನಾವಣೆಗೆ ನಿಲ್ಲಬೇಕಾದ ಅನಿವಾರ್ಯತೆ ಬಂದಿತು.. ಕಾಲೇಜ್ಗೆ ಹೋಗೋದೇ ಬೇಡ ಕಲ್ತಿರೋದು ಸಾಕು ಯಾವದಾದ್ರು ಕೆಲಸ ಮಾಡಲಿ ಸಾಕು ಎಂಬ ನಮ್ಮ ಮನೆಯ ಯಜಮಾನ ಚಿಕ್ಕಪ್ಪನ ಒತ್ತಡದ ನಡುವೆಯೂ ಏನೋ ಒಂದು ಕಲಿಬೇಕು ಕಲಿಯುತ್ತೇನೆ ಎಂದು ಹಠ ಮಾಡಿ ಸಂಬಂಧಿಕರಾದ ನನ್ನ ಪಾಲಿನ ಪ್ರಾತಃ ಸ್ಮರನಿಯರಾದವರ ಮನೆಯಲ್ಲಿ ಉಳಿದು ಅಮ್ಮ ಕೊಡಿಸಿದ ಸೈಕಲ್ ಏರಿ ನಾನಿಕಟ್ಟ ಸರಕಾರಿ ಪ.ಪೂ.ಕಾಲೇಜ್ ನಾ ವಿದ್ಯಾರ್ಥಿ ಆದೆ.  ವಿಚಿತ್ರವೋ ಏನೋ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿದ ನಾನು ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ!!!! ಗುರುಗಳಿಗೆಲ್ಲ ನೆಚ್ಚಿನ ವಿದ್ಯಾರ್ಥಿಗಳಲ್ಲಿ ನಾನು ಒಬ್ಬ... ಪ್ರಥಮ ವರ್ಷದಲ್ಲಿ ತರಗತಿಗೆ ಮೊದಲಿಗನಾಗಿದ್ದರಿಂದ ವಿದ್ಯಾರ್ಥಿ ಪರಿಷತ್ತಿನಲ್ಲಿ ಸದಸ್ಯತ್ವ ಸ್ಪರ್ದಿಸದೆ ಸಿಕ್ಕಿತ್ತು. ಆದರು ನಮ್ಮ ಗುರುವರ್ಯರೊಬ್ಬರು ನಮ್ಮ ಬ್ಯಾಚಿನಿಂದ ಮಹಿಳಾ  ಪ್ರತಿನಿಧಿಯನ್ನೇ ಆರಿಸಿ ತರಬೇಕೆಂದು ಗಂಡು ಮಕ್ಕಳಾದರೆ ತಮಗೆ ನಿಷ್ಥೆ ತೋರರೆಂಬ ದೂರಾಲೋಚನೆಯಿಂದ ಗಂಡು ಮಕ್ಕಳು ಕೆಲವೇ ಸಂಖ್ಯೆ ಅಲ್ಲಿ ಬಂದಿದ್ದ ದಿನವನ್ನು ಆರಿಸಿ ಧಿಡೀರ ಅಂಥ ಚುನಾವಣೆ ಘೋಷಿಸಲಾಯಿತು.. ಮತ್ತು ಅಂದೇ ನಾಮಪತ್ರ ಸಲ್ಲಿಸಲು ಕಡೆಯ ದಿನ. ಮಾರನೇ ದಿನವೇ ನಮ್ಮ ಸಂಸತ್ತಿನ ಮಹಾ ಚುನಾವಣೆ.. 



                    ಇದನ್ನರಿತು  ಮೊದಲ ವರ್ಷ ಹಾವು ಮುಂಗಸಿ ಅಂತೆ ಕಚ್ಚಾಡುತ್ತಿದ್ದು ಕೊನೆಯ ವರ್ಷದಲ್ಲಿ ಆತ್ಮೀಯ ಮಿತ್ರನಾಗಿದ್ದ ವಿನಯ ದಂತ್ಕಲ್ ನನ್ನು ನಿಲ್ಲಿಸಲು ತಿರ್ಮಾನಿಸಿದೆವು.. ಆದ್ರೆ ಅವಿರೋಧ ಆಯ್ಕೆ ಆದ್ರೆ ಮತ್ತೆ ಬೇಗ ತರಗತಿಗಳು ಆರಂಭವಾಗುತ್ತದೆ ಅದಕ್ಕಾಗಿ ಚುನಾವಣೆ ನಡೆಸೋಣ ಎಂದು ನಿರ್ಧರಿಸಿದೆವು. ಅವನಿಗೆ ಎದುರಾಳಿಯಾಗಿ ಯಾರು ನಿಲ್ಲಲು ತಯಾರಿ ಇಲ್ಲದಿದ್ದಾಗ ನಾನೇ ಸ್ಪರ್ಧಿಸಲು ತೀರ್ಮಾನಿಸಿದೆ... ಅದರ ಹಿಂದಿನ ಕಾರಣ ಇಷ್ಟೇ ತುಂಬಾನೇ ಕಡಿಮೆ ಜನರಿರುವ ನಮ್ಮ ತರಗತಿಯಲ್ಲಿ ಹುದುಗಿಯರ್ದೆ ಸಂಖ್ಯಾ ಬಾಹುಳ್ಯ ಜಾಸ್ತಿ ಇದ್ದರು ಅವರಾರು ನಿಲ್ಲದೆ ಇದ್ದರೆ ಮಾತ್ರ ನಾನು ನಿಲ್ಲುವುದು  ಒಂದು ವೇಳೆ ನಿಂತರೆ ನಾನು ನಿಲ್ಲಬಾರದು ಎಂದು ನಿರ್ಧರಿಸಿದೆ.. ಅವರಾರು ನಿಲ್ಲಲಿಲ್ಲ.. ಆ ದುರ್ಧೈವ ನಂಗೆ ಕಾದಿತ್ತು. 




ಮತ ಯಾಚನೆ ಸಮಯದಲ್ಲಿ ನಮ್ಮ ಆತ್ಮೀಯ ಮಿತ್ರ ಪಕ್ಕ ರಾಜಕಾರಣಿಯಂತೆ ಮತ ಯಾಚಿಸಿದ ಭರವಸೆಯ ಆಶ್ವಾಸನೆಗಳ ಮಹಾಪೂರವನ್ನೇ ಹರಿಸಿದ. ಪ್ರಿಯೆ ಸೋಲನ್ನೇ ಬಯಸಿ ಸ್ಪರ್ಧಿಸಿದವನ ಎದುರು ಭಾರಿ ಬ್ರಹ್ಮಸ್ತ್ರವನ್ನೇ ಬಿಸಿದ್ದ. ನಾನು ಯಾವ ರೀತಿ ಮತ ಯಾಚಿಸಿದೆ ಗೊತ್ತೇನೆ...ಚುನಾವಣೆ ಆಗಲೇಬೇಕೆಂಬ ಮಹೋನ್ನತ ಉದ್ದೇಶ ಬಿಟ್ಟರೆ ಮತ್ತಿನ್ನಾವ ದುರುದ್ದೇಶವು ನನ್ನಲ್ಲಿ ಇರಲಿಲ್ಲ ಅದಕ್ಕಾಗಿಯೇ ಸ್ಪರ್ಧಿಸಿದವನು. ನಾನು " ಪ್ರೀತಿಯ ಗೆಳೆಯರೇ/ತಿಯರೇ ತಮ್ಮಲ್ಲಿ ಕೇಳಿ ಕೊಳ್ಳುವುದಿಷ್ಟೇ,  ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗಳಾದ ನಾವುಗಳು ಮುಂದಿನ ಭವ್ಯ ಭಾರತವನ್ನ ಆಳಲು ನಮ್ಮ ನಮ್ಮ ಪ್ರತಿನಿಧಿಗಳನ್ನ ಆಯ್ಕೆ ಮಾಡುವರಾಗಿರುವದುರಿಂದ , ಇಂದು ವಿದ್ಯಾರ್ಥಿ ಪರಿಷತ್ತಿಗಾಗಿ ನಡೆಯುತ್ತಿರುವ ಈ ಚುನಾವಣೆಯನ್ನು ಒಂದು ಅಣಕವೆಂದು ಭಾವಿಸಿ. ನಾವು ಎಂಥಹ ಪ್ರತಿನಿಧಿಗಳನ್ನ ನಮ್ಮ ದೇಶವನ್ನಾಳಲು ಬರುವ ಚುನಾವಣೆಗಳಲ್ಲಿ ಕಳುಹಿಸುತ್ತೇವೆ ಎಂಬುದನ್ನ ನಾವು ಇಂದು ನಮ್ಮ ಗುರುವರ್ಯರುಗಳಿಗೆ ತೋರಿಸಿ ಕೊಡೋಣ ಎಂದು ನಿರ್ಧರಿಸಿ ಮತ ಚಲಾಯಿಸಿರಿ. ಈಗಾಗಲೇ ನನ್ನ ಗೆಳೆಯ ಹಾಗೂ ಪ್ರತಿಸ್ಪರ್ಧಿ ಇಂದಿನ ಎಲ್ಲಾ ರಾಜಕಾರಣಿಗಳಂತೆ ಆಶ್ವಸನೆಗಳನ್ನ ನೀಡಿದ್ದಾನೆ ನಾನು ನಿಮಗೆ ಯಾವದೇ ಬಗೆಯ ಆಶ್ವಾಸನೆಯನ್ನು, ಆಸೆಯನ್ನು ತೋರಿಸುವ ಪ್ರಯತ್ನ ಮಾಡಲಾರೆ.ನಾನೇ ಏನಾದ್ರು  ಆಯ್ಕೆ ಆದರೆ ಖಂಡಿತ ನನಗೆ ಸಿಗುವ ಅಧಿಕಾರವನ್ನು ನಿಮ್ಮೆಲ್ಲರ ಇಚ್ಹೆಗಳನ್ನ ಪೂರೈಸಲು ಬಳಸುತ್ತೇನೆ.. ನಾನೇ ಗೆಲ್ಲಬೇಕೆನ್ದೆನು ಇಲ್ಲ ನನ್ನ ಗೆಳೆಯ ಗೆದ್ದರೆ innu  ನನಗೆ ಸಂತೋಷ್ ಎಂದು ಕುಳಿತೆ. ಒಂದಂತು ಸತ್ಯ ಭವಿಷ್ಯತ್ತಿನ ಭಾರತದ ಚುನಾವಣೆಗಳು ಯಾವ ರೀತಿ ಇರುತ್ತವೆ ಎಂಬುದನ್ನ ಈ ಚುನಾವಣೆ ತೋರಿಸಿ ಕೊಡಲಿ ಎಂಬ ಆಶಾವಾದಿತನದಿಂದ ಫಲಿತಾಂಶವನ್ನ ಎದುರು ನೋಡುತ್ತಿರುತ್ತೇನೆ..




              ಫಲಿತಾಂಶ ಏನು ಬಂದಿರಬಹುದು ನನ್ನ ಚಿನ್ನು... ಈ ನಿನ್ನ ಹೀರೋ  ನಿನಗೆ ಮಾತ್ರ ಒಳ್ಳೆಯವನು ಉಳಿದವರಿಗೆಲ್ಲ ಅಯೋಗ್ಯ ಎಂಬುದು  ಈ ಚುನಾವಣೆ ಕಳಿಸಿ ಕೊಟ್ಟಿತು.. ಹೀನ ಮಾನವಾಗಿ ಸೋತಿದ್ದೆ..  ಆದರು ನಮ್ಮ ತಂತ್ರ ಫಲಿಸಿತ್ತು ನಮ್ಮ ಗೆಳೆಯ ಗೆದ್ದಿದ್ದ.. ನನ್ನ ಸೋಲನ್ನು ಅಣಕಿಸಿ ಕೇಳಿದ ನಮ್ಮ ಕನ್ನಡ ಗುರುಗಳಿಗೆ ನಾನು ಹೇಳಿದ ಉತ್ತರವೇನು ಗೊತ್ತೇನು ನನ್ನ ಚಿನ್ನ, ಒಂದು ರೀತಿಯಲ್ಲಿ ನನ್ನ ಉತ್ತರ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎನ್ನುವ ಜಟ್ಟಿ ಧೋರಣೆಯಂತೆ ಯಾವಾಗಲು ನಿನ್ನ ಮುಂದೆ ಸೋತಾಗ ಆಡುತ್ತಿದ್ದೆನಲ್ಲ ಅಂಥ ಒಣ ಸಮರ್ಥನೆ ಅಂಥ ಈಗ ಅನ್ನಿಸುತ್ತಿದೆ.   "ಸರ್ ನನಗೆ ಬೇಸರವಗುತ್ತಿರುವುದು  ನನ್ನ ಸೋಲಿಗಲ್ಲ. ನಿಜಕ್ಕೂ ಮನಸ್ಸು ಭಾರವಾಗುತ್ತಿರುವುದು ನಮ್ಮ ಕಾಲದಲ್ಲಿ ಆದರು ಭಾರತದ ಆಡಳಿತದ ಚುಕ್ಕಾಣಿಯನ್ನ ದಕ್ಷರು ಹಿಡಿಯುವರೆಂದು ಕನಸು ಕಾಣುತ್ತಿದ್ದೆ.. ಆದರೆ ಅದೆಲ್ಲ ಬರೆ ಭ್ರಮೆ ಎಂಬುದನ್ನ ನನ್ನ ಮಿತ್ರರು  ಈ ಚುನಾವಣೆಯ ಮೂಲಕ ಸಾಭಿತು ಪಡಿಸಿದರು ಎಂದೆ.




    ಆದರೆ ನಾನು ಹೇಳಿದ್ದು ಸರಿ ಅಂಥ ನನಗೆ ನನ್ನ ನೆಚ್ಚಿನ ಗುರುಗಳಾಗಿದ್ದ ಹಾಗೂ ನಮ್ಮ ರಾಜ್ಯಶಾಸ್ತ್ರದ ಗುರುಗಳಾಗಿದ್ದ ಯು.ಸಿ. ಶಾಸ್ತ್ರಿಗಳು ನನ್ನ ಪರವಾಗಿ, ನಡೆದಿರುವದು ಏನೆಂದು ಕನ್ನಡ ಗುರುಗಳಿಗೆ ತಿಳಿಯಪಡಿಸಿ, ಅವರು ನನ್ನ ಬೆನ್ನು ನೇವರಿಸಿದಾಗ ನಿಜಕ್ಕೂ ನಾನು ಸೋಲಿನಲ್ಲು ಗೆಲವು ಕಂಡಿದ್ದೆ..






     ಗೆಲುವಿನ ಉನ್ಮಾದತೆಯಲ್ಲಿ ಮೈ ಮರೆತಿದ್ದ ನನ್ನ ಗೆಳೆಯ ಕೊಟ್ಟ ಅಶ್ವಾಸನೆಗಳನ್ನ ಜಾರಿ ತರಲು ಪ್ರಯತ್ನಿಸಿ ವಿಫಲನಾಗಿದ್ದ. ದಿನದಾಂತ್ಯಕ್ಕೆ ನನ್ನ ಮನ ಭಾರವಾಗಲು ನನ್ನ ಮಿತ್ರ ಹೇಳಿದ ಒಂದು ಮಾತು ಸಾಕಾಯಿತು  ನನ್ನ ಆ ಕಾಲದ ಪ್ರತಿಸ್ಪರ್ಧಿ ಮತ್ತು ನನ್ನ ಮನ ಸೆಳೆದ ಹುಡುಗಿ ನನಗೆ ಓಟು ಹಾಕಲಿಲ್ಲ ಅದನ್ನು ನಾನು ಗುರುತಿಸಿದೆ ಅವಳು ನನಗೆ ಮತ ಹಾಕಿದಳು.. ಎಂದು ಆತ ಖುಷಿ ಅಲ್ಲಿ ಹೇಳಿ ಬಿಟ್ಟ.. ನಿಜ ಹೇಳು ಗೆಳತಿ ನಾವು ಯಾರ ಮೇಲಾದರೂ ಭರವಸೆ ಇಟ್ಟುಕೊಳ್ಳುವುದು ತಪ್ಪೇನು?? ಅದೊಂದೇ ಸಂಗತಿ ನನ್ನೆಲ್ಲ ಖುಷಿಯನ್ನು ನೂಚ್ಚು ನೂರು ಮಾಡಿತ್ತು.. ಈಗ ನೆನೆಸಿಕೊಂಡರೆ ಎಷ್ಟು ಸಿಲ್ಲಿ ಎನ್ನಿಸುತ್ತದೆ.. ಇಷ್ಟಕ್ಕೂ ಅವಳು ಓಟು ಹಾಕಿದ್ದ ಆದ್ರು ಯಾರಿಗೆ ನನ್ನ ಆತ್ಮೀಯ ಗೆಳೆಯನಿಗಲ್ಲವೇ..ಅದು ಅಲ್ಲದೆ ನನ್ನ ಮತ ಯಾಚನೆಯಲ್ಲೂ ನನಗೆ ಸಂತೋಷ ಆಗುವುದು ನನ್ನ ಗೆಳೆಯ ಗೆದ್ದರೆ ಮಾತ್ರ ಎಂದಿದ್ದೆನಲ್ಲವೇ ಎಂದು & ಒಂದು ವೇಳೆ,  ನೀನೆ ಆ ಜಾಗದಲ್ಲಿ ಇದ್ದರು ನನ್ನ ಗೆಳೆಯನಿಗೆ ಓಟು ಹಾಕುತ್ತಿದ್ದೆ ಅಲ್ಲವೇನು??? ಎಂದು ಸಮಾದನಿಸಿಕೊಂಡೆ.. ಅಷ್ಟರೊಳಗೆ ನನ್ನ ಆತ್ಮೀಯ ಗೆಳೆಯ ನನ್ನ ಸಮಾಧಾನ  ಮಾಡಲು ಹೇಳಿದ್ದೇನು ಗೊತ್ತೇ.. ನಿನಗೆ ರಾಜಕೀಯವೆಲ್ಲ ಬೇಡ ಓದಿನಲ್ಲಿ ಮುಂದುವರಿದರೆ ಅವಳಿಗೂ ಪೈಪೋಟಿ ಕೊಡಲು ನೀನು ಸಿಗುತ್ತಿಯ ಎಂಬ ದೂರಾಲೋಚನೆ ಇಂದ ಅವಳು ಮತ ಅವನಿಗೆ ಹಾಕಿದಳಂತೆ... 


ಗೆಳತಿ ನಿಜ ಏನು ಎನ್ನುವುದು ಅವಳಿಗೆ ಗೊತ್ತು??? ನಿನಗೆ ಏನಾದರು ನಿಮ್ಮ ಮಹಿಳೆಯರ ಮನಸ್ಸು ಯಾವಾಗ ಹೇಗೆ ಎಂದಾದರು ತಿಳಿದಿದೆಯೇನು???? 

ತಿಳಿದಿದ್ದರೆ ಉತ್ತರಿಸು ಅವಳು ನನ್ನ ಇಷ್ಟದ ಹುಡುಗಿ ಎಂದು ಹೇಳಿದೆನೆಂದು ಕೋಪಿಸದಿರು... ನನ್ನ ಜೀವವೇ??? ಇಷ್ಟ ಎಂದಾಕ್ಷಣ ಅವರೆಲ್ಲ ನಿನ್ನ ಅಂತೆ ನನ್ನ ಜೀವ ಆಗಲು ಸಾಧ್ಯವೇನು ನನ್ನ ಮನದೊದತಿಯೇ???  




ಇಂತಿ ನಿನ್ನವ
ಬೆನಕ

 

Friday, September 24, 2010

ಸಾರ್ವಜನಿಕ ಗಣಪತಿ ಉತ್ಸವ ಪ್ರಸ್ತುತ ಕಾಲಕ್ಕೆ ಬೇಕೇ???








        "ನನ್ನ  ನಲ್ಮೆಯ ಮನದಾಳದ ಮಿಡಿತವೆ,

                                 ಗಣೇಶನ ಹಬ್ಬ ಬಂತೆಂದರೆ ಎಲ್ಲಿಲ್ಲದೆ ನನ್ನ ಇ ಮನ ಕುಣಿಯುವುದು, ಆ ಹಬ್ಬದಲ್ಲಿ ಮಾತ್ರ ಅಲ್ಲವೇ ಗಣೇಶನಿಗೆ ಪ್ರೀಯವೆಂದು ಚಕ್ಕುಲಿ, ಪಂಚಕಜ್ಜಾಯ, ಮೋದಕ, ಕರ್ಜಿಕಾಯಿ, ಎಳ್ಳು ಉಂಡೆ ಹೀಗೆ ಹಲವು ವಿಧದ ಭಕ್ಷ್ಯ ಭೋಜ್ಯಗಳನ್ನೂ ಸವಿಯಲು ಸಾಧ್ಯವಾಗುತ್ತಿದ್ದುದು. ಅದು ಅಲ್ಲದೆ.. ಹಬ್ಬದ ಕೆಲವು ದಿನ ಮೊದಲೇ.. ಏನೇನೋ ನೆಪ ಹೇಳಿ ನಾವಿಬ್ಬರು ಶಾಲೆಗೆ ಗೈರು ಬಂಡಿಯ ಮುಂದೆ ಹಾಜರು ಎಂದು ಆಗುತ್ತಿದ್ದುದು.. ಅದೇನೋ ಕಾಣೆ ಉದ್ದ ಸೊಂಡಲಿನ, ಆಗಲ ಕಿವಿಯ, ದೊಡ್ಡ ಹೊಟ್ಟೆಯ  ಅತ್ಯಾಧ್ಬುತ ಕಾರ್ಟೂನ್ ಅಂತಿರುವ ಗಣೇಶನೆಂದರೆ ಇಬ್ಬರಿಗೂ ಅಚ್ಚು ಮೆಚ್ಚು.  ಅವನ ಆ ಆಕಾರಕ್ಕೆ ಬರಲು ಕಾರಣವಿರುವ ಅತಿ ರಂಜಿತ ಕಥೆಗಳನ್ನ ಕೇಳುತ್ತಲೇ ಬೆಳೆದೆವು.

                          ಸಿದ್ದಾಪುರವೆಂಬ ಅಂದಿನ ನಮ್ಮ ಮಹಾನಗರಿಗೆ ಸಾರ್ವಜನಿಕ ಗಣಪತಿ ನೋಡಲು ಮಾರನೇ ದಿನ ಸಂಜೆಯ ನಸು ಕಪ್ಪಿನಲ್ಲಿ ಕೈ ಕೈ ಹಿಡಿದು ಪಿಸು ಮಾತಾಡುತ್ತ ನಡೆಯುತ್ತಿದ್ದೆವು.ಆಗೆಲ್ಲ ದೊಡ್ಡದಾಗಿ ಸದ್ದು ಮಾಡುವ ಸಿಡಿಮದ್ದುಗಳನ್ನ ಸಿಡಿಸಿದಾಗ ನನ್ನ ಮನ ಕುಷಿಪಡುತ್ತಿತ್ತು ಯಾಕೆಂದರೆ ನೀನು ಇನ್ನಷ್ಟು ನನ್ನ ಬಿಗಿಯಾಗಿ ಹಿಡಿದಿರುತ್ತಿದ್ದೆಯಲ್ಲ ಎಂದು..    ಗೆಳತಿ ಈ ಸಲದ ಗಣೇಶ್ ಹಬ್ಬಕ್ಕೆ ಬೆಂಗಳೂರೆಂಬ ಮಾಯಾ ನಗರಿ ಯಾವ ರೀತಿ ಸಜ್ಜಾಗಿದೆ ಎಂದು ನಿನ್ನಲ್ಲಿ ಹೇಳಬೇಕು.. ಎಂದು ಆತುರದಿಂದ ಓಡೋಡಿ ಬಂದೆ.. ಬಾಲ್ಯದಿಂದಲೂ  ನನ್ನ ಕೊರೆತವನ್ನ ಸಹನೆಯಿಂದ ಕೇಳಿದವಳು ನೀನು. ನಿನಲ್ಲದೆ ಇನ್ನಾರು ಕೇಳುವರು??? ಆದರೆ ನೀನು ಸಿಗಲಿಲ್ಲ... ಅದಕ್ಕಾಗಿಯೇ ಈ ನನ್ನ ಕೊರೆತ..

           ಮೊನ್ನೆ ಮೊನ್ನೆ ಎಂದಿನಂತೆ ಗಣೇಶ, ತಾಯಿ ಸಹಿತ ಮನೆ ಮನೆಗೂ ಬಂದು ಆಶೀರ್ವದಿಸಿ ತೆರಳಿದ.. ಬರೆ   ಮನೆ ಮನೆಗೆ ಅಂದರೇ ತಪ್ಪಾದಿತು.. ಬೀದಿ  ಬೀದಿಗಳಲ್ಲಿ ಚರಂಡಿ ಸ್ಲ್ಮ, ಮತ್ತು  ಜನರೇ ಓಡಾಡಲು ಅಸಹ್ಯ ಪಡುವ ಜಾಗಗಳಲ್ಲಿಯೂ ಹಾದು ಹೋದ.. ಬೆಂಗಳೂರು ಅಂಥ ಮಹಾನಗರಿ ಅಲ್ಲಿ ಇನ್ನು ಗಣೇಶ ಕೆಲವು ಬಿದಿಗಳಲ್ಲಿ ಬಂದಿಲ್ಲ. ಬರುವ ತಯಾರಿಯಲ್ಲಿದ್ದಾನೆ.. ಇಂಥ ಸಂಧರ್ಭದಲ್ಲಿ ನನಗೆ ಈ ಮೇಲಿನ ಪ್ರಶ್ನೆ ಕಾಡುತ್ತಿದೆ.... ನನ್ನ ಮನದ ಈ  ಪ್ರಶ್ನೆಗೆ ನೀನು ಉತ್ತರಿಸುವೆಯೆಂದು ನಂಬಿರುವೆ...

         ಲೋಕಮಾನ್ಯರು ನಮ್ಮಲ್ಲಿ ಒಗ್ಗಟ್ಟನ್ನ ತಂದು ಸ್ವಾತಂತ್ರ್ಯಕ್ಕಾಗಿ ಹೊರಡುವಂತ ಉತ್ಕಟವಾದ ದೇಶ ಪ್ರೇಮದ ಜಾಗ್ರತಿಗಾಗಿ ಈ ಗಣೇಶ್ ಹಬ್ಬವನ್ನು  ಸಾರ್ವತ್ರಿಕಗೊಳಿಸಿದರೆಂದು  ಇತಿಹಾಸ ಓದಿದ ನಮ್ಮಗಳಿಗೆಲ್ಲ ಗೊತ್ತಿದೆ.. ಆದ್ರೆ ಇಂದಿನ ಮತ್ತು ಅಂದಿನ ಸಾರ್ವತ್ರಿಕ ಗಣೇಶೋತ್ಸವದ ಆಚರಣೆಗಳು ಎಷ್ಟು ಭಿನ್ನ. ಇಂದಿನ ಸಮಾಜದಲ್ಲಿ ನಾವು ಆಚರಿಸುವ ಗಣೇಶೋತ್ಸವ  ಯಾವ ಹಂತ ತಲುಪಿದೆ ಎಂದರೆ ನಿಜಕ್ಕೂ ತಿಲಕರೆನಾದರೂ ಇದ್ದಿದ್ದರೆ ಹುಟ್ಟ ಕ್ರಾಂತಿಕಾರಿಗಳಾದ ಅವರು ಬಹುಷಃ   ಕೂಡಲೇ ಇದನ್ನ ಪ್ರತಿಭಟಿಸುತ್ತಿದ್ದರು... ಆಗ ಅವರನ್ನು ನಾವು ಯಾವ ರೀತಿ ಕರೆಯುತ್ತಿದ್ದೆವು ವಯಸ್ಸಾದ ಅರಳು ಮರಳು ಎಂದೇ..??? ಅರೆಹುಚ್ಚೂ ಎಂದೇ??? ಈ ಸಮಾಜ ಯಾವ ಮಹಾಪುರುಷರನ್ನ ಬದುಕಿರುವಾಗ ಹೋಗಲಿದೆ ಹೇಳು??? ನನ್ನನ್ನೇ ತಗೋ ನೀನು ಹತ್ತಿರವಿರುವಾಗಲೆಲ್ಲ ಕೋತಿ ತರಹಇರುವೆಯೆಂದು  ಕೆಣಕಿ ಈಗ ನೀನು ಸನಿಹವಿಲ್ಲವೆಂಬ ಕಾರಣಕ್ಕೋ ನಾನರಿಯೆ. ನಿಜಕ್ಕೂ ನೀನು ಎಷ್ಟು ಸಹಜ ಸುಂದರಿ ಎಂದು ದಿನವು ಜಪಿಸುತ್ತಿಲ್ಲವೇ?? ಅಂತೆಯೇ ನಮ್ಮ ಸಮಾಜ ..

                        ದೇಶ ಪ್ರೇಮದ ಒಗ್ಗಟ್ಟಿನ ಸಂಕೇತವಾಗಿ ಅಂದು ಆರಂಭವಾದ ಗಣೇಶೋತ್ಸವಕ್ಕೂ ಇಂದಿನ ಗಣೇಶೋತ್ಸವದ ಆಚರಣೆಗೂ ಎಷ್ಟೆಲ್ಲಾ ಅಜಗಜಾಂತರ ಇಂಥ ಗಣೇಶೋತ್ಸವ ನಮಗೆ ಬೇಕೇ?

                 ಗಣೇಶ್ ಹಬ್ಬ ಬಂತೇದರೆ ಸಾಕು ನಾಯಿ ಕೊಡೆ ಗಳಂತೆ ಏಳುವ ಗಣೇಶೋತ್ಸವ ಸಂಘಗಳು, ಯಾರು ಯಾರಿಂದಲೋ ಹಣ ಸಂಗ್ರಹಿಸಿ ಗಣೇಶನನ್ನು ತರುತ್ತವೆ.. ನಿಜಕ್ಕೂ ಮನಸ್ಸು ಭಾರವಾಗುವುದು.. ಆ ನಮ್ಮ ನೆಚ್ಚಿನ ಗಣೇಶನನ್ನು ಮಾರಾಟದ ಸರಕಿನಂತೆ.. ದುಡ್ಡು ಮಾಡುವ ಸಾಧನದಂತೆ ನಡೆಸಿಕೊಳ್ಳುವುದನ್ನು ನೋಡಿ.. ನಿಜವಾದ ದೇಶಪ್ರೇಮವು ಇಲ್ಲ.. ದೇವರ ಮೇಲಿನ ಭಕ್ತಿಯನ್ನು ನಾ ಕಾಣೆ ಗೆಳತಿ ನೀನೆ ಎಲ್ಲಾದರು ಕಂಡಿರುವೆಯ???  ಸಂಗ್ರಹಿಸಿದ ಹಣವನ್ನು ಯಾವ ಸಾಮಾಜಿಕ, ಸಾಂಸ್ಕ್ರತಿಕ ಕೆಲಸಗಳಿಗೆ  ಬಳಸಿರುವುದನ್ನ ನಾನು ಅರಿಯೆನು, ನಿನಗೆ ಏನಾದ್ರು  ತಿಳಿದಿದೆಯೇನು ನನ್ನ ಒಲವೇ.  ಗಣೇಶನನ್ನು ವಿಸರ್ಜಿಸಿ ಕಳುಹಿಸಿ ಕೊಡುವ ಬಗೆ ಕಂಡಾಗ  ನಿಜಕ್ಕೂ ಮನಕ್ಕೆ ಘಾಸಿ ಆಗುತ್ತದೆ.... ಅಲ್ಲಾ ಗೆಳತಿ, ಈ  ಕಾಮೊದ್ರೆಕಿತ ಸಿನೆಮ ಹಾಡುಗಳಿಗೂ.. ಬ್ರೇಕು ಡಾನ್ಸ್ ಗಳಿಗೂ.. ಕುಡಿತದ ಮೋಜು ಮಸ್ತಿಗೂ ಆ ನಮ್ಮ ಮುದ್ದು ಗಣಪನಿಗೂ ಎಲ್ಲಿಯ ಸಂಭಂದ... ಅವೆಲ್ಲದರ ಅರ್ಥವೇನು ಸುವಿಚಾರಿಣಿ ???

                ಆ ಸಂಘಟನೆಗಳು,  ಆ ಹಣಗಳನ್ನು ಯಾವುದಾದರು ಸಾಮಾಜಿಕ, ಸಾಂಸ್ಕ್ರತಿಕ ಕೆಲಸಗಳಿಗೆ ಸದ್ವಿನಿಯೋಗ ಮಾಡಿದ್ದರೆ ಎಷ್ಟು ಚೆಂದ... ಆ ನಮ್ಮ ಗಣಪನಿಗೂ ಬಹುಷಃ ಆನಂದವಗುತ್ತಿತೇನೋ... ಆದ್ರೆ ಈ ಸಂಘಟನೆಗಳು ಗಣೇಶ ಹಬ್ಬ ಮುಗಿದ ಮೇಲೆ ಮಾಯವಾಗುತ್ತವೆ.. ಇನ್ನೂ ಅವುಗಳನ್ನ ಕಾಣಬೇಕಾದರೆ ಮತ್ತೆ ಗಣೇಶ ಹಬ್ಬವೇ ಬರಬೇಕು... ಪ್ರತಿ ಚುನಾವಣೆಗಳಲ್ಲಿ ನಮ್ಮ ರಾಜಕೀಯ ಪ್ರತಿನಿಧಿಗಳು ನಮ್ಮ ಕಾಲುತಾಗುವಂತೆ... ಇನ್ನೊಂದು ಗಣೇಶ್ ಹಬ್ಬಕ್ಕೆ ಇವರುಗಳು ಹಾಜರ್... ಎಂಥ ವಿಚಿತ್ರ !!!

                 ಓ ನನ್ನ ಒಡತಿ ನನ್ನ ಮನದ ಬೇಗುದಿಯನ್ನ ಅರುಹಿದ್ದೇನೆ ಇವಾವುವೂ ನೀನು ಈ ವರ್ಷದ   ಗಣೇಶ ಹಬ್ಬದಲ್ಲಿ ನನ್ನೊಟ್ಟಿಗೆ ಕಾಲ ಕಳೆಯಲಿಲ್ಲ ಎಂಬ ಬೇಸರದಿಂದ ಹೊರಹೊಮ್ಮಿದವು ಎಂದು ಹಗುರಾಗಿ ಭಾವಿಸದಿರು..    ಆದರು ನಿನ್ನೊಟ್ಟಿಗೆ ಗಣೇಶನನ್ನು ನೋಡಲು ತಿರುಗಿರುವುದನ್ನ ನೆನೆಸಿಕೊಂಡಾಗಲೆಲ್ಲ ಗಣೇಶೋತ್ಸವ ಬೇಕು ಅನ್ನಿಸದಿರಲು ಸಾಧ್ಯವೇ...ಕೈ ಕೈ ಹಿಡಿದು ಗಣೇಶನ್ ನೋಡುವ ಆ ಸಂಬ್ರಮದಗಳಿಗೆ ಮತ್ತೆ ಬಾರದೆಂದು ತಿಳಿದು ನಾನು ಈ ಮಾತು ಹೇಳುತ್ತಿಲ್ಲ ... ಆ ಸವಿ ನೆನೆಪು ಏನೇ ಇದ್ದರು... ಅದು ತುಂಬಾ ಮಾನಸಿಕ ವೇದನೆ.. ಪದಗಳಲ್ಲಿ ಬಂಧಿಸಲಾಗದ ಮನದ ಹಸಿಯಾದ ಗಾಯ ಕಾಣೆ ಅದು ನಮ್ಮಿಬ್ಬರಿಗೆ ಸಂಬಂದಿಸಿದ ಖಾಸಗಿ ವಿಚಾರ..
                            
                 ಆ ಬೇಸರ ಏನಿದ್ದರು... ಇದು ಮಾತ್ರ ತುಂಬಾ ಸಾಮಾಜಿಕ ಕಳಕಳಿಯಿಂದ ಹೊರಹೊಮ್ಮಿದ ಪ್ರಶ್ನೆಗಳು... ನೀನು ನಂಗೆ ಸಮಂಜಸವಾಗಿ ಉತ್ತರಿಸುವೆಯೇನು ??  ಉತ್ತರಿಸುವೆ ಎಂದೇ ನಂಬಿರುವೆ...
                               
ನಿನ್ನ ಪ್ರೀತಿಯ,
ಬೆನಕ..
             "ಸುಮುಖ" ಅಕ್ಟೋಬರ್ ೨೦೧೦ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Wednesday, September 8, 2010

ಮೊದಲ ಪ್ರೇಮ ಪತ್ರ

" ಪ್ರೀತಿಯ ಬೆನ್,
                  ನಾನು ಈ ಪತ್ರ ನಿನಗೆ ಯಾಕೆ ಬರದಿರುವೆ  ಅಂಥ ಯೋಚಸದೇನೆ ಇದನ್ನ ಓದಿ ನನಗೆ ಉತ್ತರಿಸು.... ನೀನು ನಂಬುವುದಾದರೆ ನಂಬು ಬಿಟ್ಟರೆ ಬಿಡು, ಇದನ್ನ ಅಕ್ಷರಶಃ ಬರೆಯುವಾಗ ಅಳುತ್ತ ಬರೆದಿರುವೆ....ನಾನು ಇಷ್ಟು ದಿನ  ನಿನ್ನ ಹತ್ರ  ಹೇಳಲೇ ಬಾರದು ಅಂಥ ಇದ್ದೆ.ಆದ್ರೆ... ಇವತ್ತು ಅದೇನೋ ಹೇಳವು ಅನಿಸುತಿದೆ 
ಹೇಳುವೆ  ಓದು. 
           
                     ನಿಜ ಹೇಳು, ಮಿಂಚು (ಅದೇ ನಿನ್ನ ದೇವರು ಕೊಟ್ಟ ತಂಗಿ), ನಿನಗೆ ಪರಿಚಯವಾಗೊದ್ಕಿಂತ  ಎಷ್ಟೋ ಮೊದಲು ನಮ್ಮಿಬ್ಬರ ಪರಿಚಯ ಆಗಿತ್ತು ಅಲ್ದಾ?? ಆ  ದಿನ  ನನ್ನ ಡೈರಿ ಯಲ್ಲಿ ಬರೆದ ಪುಟವನ್ನ ಎಷ್ಟು ಸಲ ತಿರುವಿ ಹಾಕಿರುವೇನೋ ಗೊತ್ತಿಲ್ಲ... ಖಂಡಿತ ಆ ಪುಟವನ್ನ ಆ ದಿನವನ್ನ ನಾನು ಖಂಡಿತ ಮರೆಯಲಾರೆ.. ನಿನಗೆ ಆ ದಿನ ನೆನಪಿದೆಯ ?? ಅವಳು ನಿನಗೆ ಪರಿಚಯವಾಗುವ ಮೊದಲೇ ನಮ್ಮ ನಡುವೆ ಎಷ್ಟೆಲ್ಲಾ misunderstanding ಗಳು ಬಂದು ನಂತರ ಕರಗಿದ್ದವು ಅಲ್ಲವ?  ವಿಷಯ ಹೇಳ್ತಿ ಕೇಳು ಯಾವಾಗಲು ನಾನು ಅವಳು ಜೊತೆಗೆ ಇದ್ದರು ನೀನು ಮೊದಲೆಲ್ಲ ನನ್ನ ಮಾತ್ರ ಮಾತನಾಡಿಸುತ್ತಿದ್ದೆ ಅದು ಸಾಧ್ಯವಿಲ್ಲ ಎಂದಾದರೆ  ನಗುವನ್ನಾದ್ರು ಬಿರಿ  ಮರೆಯಗುತ್ತಿದ್ದೆ.. ನಂತರ ನನಗೆ cuty ಗರ್ಲ್ ಎಂದೆಲ್ಲಾ ನೀನು ಕರೆಯುವಷ್ಟು ಹತ್ತಿರವಾಗಿದ್ದೆ.. ನಿಜ ಅದೇನೋ ಅರಿಯೆ ನಿನ್ನ ಕಾಮೆಂಟ್ ಗಳು ನನಗೆ ಖುಷಿ ಕೊಡುತ್ತಿತ್ತು..
                ಅವಳ ಪರಿಚಯ ಆದಗಳಿಂದ ನನ್ನ ಕಡೆಗನಿಸುತ್ತಿರುವುದು ಯಾಕೆ??? ನಾನು ಅವಳ ಜೊತೇನೆ ಇದ್ದರು ಅವಳೊಂದಿಗೆ ಮಾತ್ರ ಮಾತನಾಡುತ್ತಿ ವಿನಃ ಒಮ್ಮೆಯೂ ನನ್ನ ಹತ್ತಿರ ಮಾತಾಡುತ್ತಿಲ್ಲ ಹಾಗೆ ನೀನು ವರ್ತಿಸಿದ ದಿನವೆಲ್ಲ ನಾನೆಷ್ಟು ನೊಂದಿರುವೇನು ಗೊತ್ತ??? 
                   ಅವಳು ಬರದೆ ಇರುವ ದಿನ ನಾನೊಬ್ಬಳೆ ಬರುತ್ತಿರುವುದನ್ನ ಕಂಡು ಇಂದಾದರೂ ನೀನು ನನ್ನ ಒಂದಿಗೆ ಮಾತಾಡುವೆ ಎಂದು ಮನ ಖುಷಿ ಪಡುತಿತ್ತು, ಆದರೆ ನೀನು ನನ್ನ ನೋಡಿದವನೇ  ಮಿಂಚು ಯಾಕೆ ಬರಲಿಲ್ಲ ಎಂದು ಕೇಳಿ ಅದಕ್ಕೆ ನಾನು ಉತ್ತರಿಸುತ್ತಿದ್ದಂತೆ ಮಾಯವಗುತ್ತಿದ್ದೆ.. ಆಗೆಲ್ಲಾ ನಾನು ಎಷ್ಟು ಅತ್ತಿದ್ದೆ... ನನ್ನ ಬಾಳಿನಲ್ಲಿ ಒಬ್ಬ ಒಳ್ಳೆಯ ಗೆಳೆಯ ಸಿಕ್ಕನಲ್ಲ ಎಂದು ಸಂತೋಷ ಪಡುತ್ತಿರುವಾಗಲೇ ಯಾಕೆ ದೂರಾದೆ????
         ನಾನು ಮಿಂಚುವಿನಂತೆ ಬಿಚ್ಚು ಮನದ ಗೆಳತಿಯಲ್ಲ.. ಕಣೋ.. ಅವಳ ಗೆಳೆಯರೆಲ್ಲ ಅವಳೊಟ್ಟಿಗೆ ಮಾತಾಡುವಾಗ ನೀನೊಬ್ಬನೇ ನನ್ನ ಮಾತಾಡಿಸುತ್ತಿದ್ದೆ... ಅದು ಅವಳ ಪರಿಚಯವಾಗುವ ಮೊದಲು ಆಗೆಲ್ಲ ನಾನು ಎಷ್ಟು ಖುಷಿ ಪಟ್ಟಿದ್ದೆ ಗೊತ್ತೇನು???  ನನಗೆ ಅರಿವಿಲ್ಲದಂತೆ ನೀನು ನನ್ನ ಮನ ಗೆದ್ದಿದ್ದೆ ಅಂದರೇ ತಪ್ಪಾಗಲಾರದು.. ಬಹುಷಃ ನೀನು ಅವಳೊಂದಿಗೆ ಮಾತಾಡದೆ ನನ್ನೋದಿಗೆ ಮಾತ್ರ ಮಾತಡುತ್ತಿದ್ದುದೆ ನನ್ನ ಆ ಸಂತೋಷಕ್ಕೆ ಕಾರಣವಿರಬೇಕು... ನೀನು ಅವಳನ್ನ ತಂಗಿ ಎಂದು ತಿಳಿದಿರುವೆ ಅವಳೊಂದಿಗೆ ನೀನು ಮಾತಾಡಿದರೆ ತಪ್ಪು ಎಂದು ನಾನು ಹೇಗೆ ತಾನೆ ಹೇಳಲಿ... ಅವಳೊಂದಿಗೆ ಮಾತಾಡುತ್ತ ನನ್ನ ನೀನೇಕೆ ದೂರ ಮಾಡಿದೆ ಇದು ಸರಿಯೇನು??? ನನ್ನ ಕನಸನ್ನ ಯಾಕೆ ಒಡೆದೆ??? ಹೇಳು, ಹೇಳು ನಾನು ಒಂಟಿ ಎಂದು ತಿಳಿದು ಬದುಕುತ್ತಿರುವಾಗ ನನ್ನ ಹೃದಯವೆಂಬ ಗೂಡಿಗೆಕೆ ನನ್ನ ಅನುಮತಿ ಕೇಳದೆ ದಾಳಿ ಮಾಡಿದೆ... ಆ ಖುಷಿಯನ್ನ ನಾ ಅನುಭವಿಸುತ್ತಿರುವಾಗಲೇ ವಿನಾಕಾರಣ ಯಾಕೆ ನನ್ನ ದೂರ ಮಾಡಿದೆ????
                      ಗೆಳೆತನವೆಲ್ಲ ಪೊಳ್ಳು ಎಂದು ನಾನು ಬಾವಿಸಿದ್ದ ದಿನಗಳಲ್ಲಿ ಗೆಳೆತನದ ಸಿಹಿಯ ಹಂಚಿ ಯಾಕೆ ವಿನಾಕಾರಣ ನನ್ನ ದೂರ ತಳ್ಳಿದೆ.... ಬೆನ್ ಇದು ನನ್ನ ಒಡಲಾಳದ ಮಾತು ನಿನಗೆ ಅರ್ಥವಗುತ್ತಿದೆಯೇ????  ಹಾಗೇ ಇದಕ್ಕೆ  ನಿನ್ನ ಬಳಿ ಸಮರ್ಥನಿಯ ಉತ್ತರಗಳು ಇದ್ದಿರಬಹುದು ಅವಾವುದು ನಾನು ಪಟ್ಟ ದುಖಃವನ್ನ ಮರೆಸಲಾರವು ಈ ನೀ ಕೊಟ್ಟ ನೋವು ನಿನ್ನ ಮೇಲಿನ ಮೊದಲಿನ ಆಶಾಭಾವವನ್ನು ದೂರ ಮಾಡಿದೆ ನೀನು ಎಲ್ಲಾ ಹುಡುಗರಂತೆ..... ಎಂದು ಕಾಣುವಂತಾಗಿದೆ.. ನೆನಪಿರಲಿ..  "
    
ಇಂತಿ ನಿನ್ನ
                                                                     ಲಂಗದಾವಣಿ ಹುಡುಗಿ
            

ನನ್ನ ಮೊದಲ ಚುನಾವಣೆ

 ಮರೆಯಲಾಗದ ಚುನಾವಣೆ :
                      ಪ್ರಾಥಮಿಕ ವಿದ್ಯಾಬ್ಯಾಸವನ್ನ ನಮ್ಮುರಿನಲ್ಲೇ ಮುಗಿಸಿದ್ದ ನಾನು ಹೈಸ್ಚೂಲ್ಗೆಂದು.. ಬಿದ್ರಕಾನ್ ಎಂಬ ಹಳ್ಳಿಯನ್ನ ಸೇರಿದೆ. ಅಲ್ಲಿವರೆಗೂ " ಕುರುಡರ ಸಾಮ್ರಾಜ್ಯದಲ್ಲಿ ಒಕ್ಕನ್ನಿನವನೇ ಮೇಲು" ಎಂಬಂತೆ ನಮ್ಮೂರಿನ ನಮ್ಮ ಶಾಲೆಯಲ್ಲಿ ನಾನೇ ಎಲ್ಲದರಲ್ಲೂ ಮೊದಲಿಗ.. !!!
                  
                      ಬಿದ್ರಕಾನ್ ನಲ್ಲಿ ಹೈಸ್ಚೂಲ್ಗೆ ಸೇರಿದ ಮೇಲೆ ನಮ್ಮದೊಂದು ಗುಂಪೇ ರಚನೆ ಯಾಯಿತು.. ಮನೋಜ್ ಉಳ್ಳಾನೆ, ಸುಮಂತ ಚಟ್ಟ್ನಲ್ಲಿ, ನಾಗರಾಜ್, ಪ್ರದೀಪ್ ಜಾಗಣೆ, ಗುರುಪ್ರಸಾದ ಹಿಪನಳ್ಲಿ... ವಿನಯ ಮಾವಿನಹಳ್ಳಿ, ಹರ್ಷ, ಹೀಗೆ ೧೦ -೧೧ ಮಂದಿಯಿದ್ದ ನಾವು ೮ ನೇ ಕ್ಲಾಸ್ ನಿಂದಲೇ ನಮ್ಮದೇ ಸಾಮ್ರಾಜ್ಯವಿದು ಎನ್ನುತ್ತಾ ಹೈಸ್ಚೂಲ್ ಜೀವನ ನಡೆಸುತ್ತಿದ್ದೆವು, ಹೀಗಿರಲು ಕಾಲ ಚಕ್ರ ತಿರುಗಿ ಅಂತು ೧೦ ನೇ ತರಗತಿಗೆ ಬಂದದ್ದಾಯಿತು..

             ಆಗ ಚುನಾವಣೆಯ ಘಾಟು ನಮಗೂ ಬಡಿಯಿತು.. ಚುನಾವಣೆಯ ದಿನದಂದು ಎಲ್ಲಾ  ಸಮಾವೇಶಗಳನ್ನ  ನಡೆಸುತ್ತಿದ್ದ ೯ ನೇ ಕ್ಲಾಸ್ ಸೇರಿದ್ದೆವು.. ನಮ್ಮ ಗುಂಪಿನಿಂದ ಎಲ್ಲರು ಒಂದೊಂದು ವಿಭಾಗಕ್ಕೆ ನಿಂತಿದ್ದರು.. ಓದಿ ಓದಿ ಆದ ಕೂಚು ಭಟ್ಟ ಎಂದೇ ಎಲ್ಲರಿಂದಲೂ ಕರೆಸಿಕೊಳ್ಳುತ್ತಿದ್ದ ಕಲಾದರನು ನಮ್ಮ ಗೆಳೆಯರ ಸ್ಪರ್ಧಿಸದೇ ಬಿಟ್ಟಿದ್ದ  ಸಾಂಸ್ಕ್ರತಿಕ ವಿಭಾಗಕ್ಕೆ ನಿಂತ ಅವನಿಗೆ ವಿರುದ್ಧ ಯಾರು ??? ಅಂಥ ನಾವೆಲ್ಲ ಮನಸಿನಲ್ಲೇ ಯೋಚಿಸುತ್ತಿರುವಾಗಲೇ ಯಾರೋ ನನ್ನ ಮಿತ್ರ ನನ್ನ ಹೆಸರು ಕೂಗಿದ ಅಲ್ಲಿವರೆಗೂ ಚುನಾವಣೆ ಎಂದರೇನೆ ಏನು ತಿಳಿಯದ ನಾನು ಗೆಳೆಯರ ಒತ್ತಾಯದ ಮೇರೆಗೆ ಸಮ್ಮತಿಸಿದೆ.. ಹೇಗೂ ನನ್ನ ಎದುರಾಳಿ ನನಗಿಂತ ಎಲ್ಲರಿಗೂ   ಚಿರಪರಿಚಿತ.. ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿ ಆಗಿದ್ದುದರಿಂದ ನನಗೆ ಸೋಲೇ ನಿಶ್ಚಿತ ಎಂದು ಭಾವಿಸಿದ್ದೆ..
           ಅದರಲ್ಲೂ ನನಗೆ ಮೊದಲ ಚುನಾವಣೆ, ಅದೇನೋ ಹೇಳುತ್ತಾರಲ್ಲ ನಾನು ಅವನ ಮುಂದೆ ಬಲಿಪಶುವಿನಂತೆ ಆಗುವೆನೆಂಬ ಭಯ & ಎಲ್ಲರು ವೇದಿಕೆಯ ಮೇಲೇರಿ ಮತ ಯಾಚಿಸಲು ತೊಡಗಿದಾಗ  ನಾನು ಅಕ್ಷರಶಃ ನಡುಗುತ್ತಲೇ ಹೋಗಿ ನಡುಗುವ ದ್ವನಿಯಲ್ಲೇ ಮತಯಾಚಿಸಿ ಬಂದೆ...

           ನಂತರ ಇಂಗ್ಲಿಷ್ ಶಿಕ್ಷಕರಾಗಿದ್ದ ಶ್ರೀ S V ಹೆಗಡೆಯವರು ಚುನಾವಣೆಯ ಫಲಿತಾಂಶ ಹೇಳಲು ಆರಂಭಿಸಿದಾಗ ನಿಜಕ್ಕೂ ದಿಗಿಲಾಗಿತ್ತು.. ನಂತರ ಎಲ್ಲಾ ನನ್ನ ಮಿತ್ರರು ಅವರು ನಿಂತ ವಿಭಾಗದಲ್ಲಿ ಆಯ್ಕೆ ಆದದ್ದು ತಿಳಿದೊಡನೆ ತುಂಬಾ ಹರ್ಷವಾಗ ತೊಡಗಿತು. ಇನ್ನು ನನ್ನ ವಿಭಾಗದ ಫಲಿತಾಂಶ ಕೇಳಿದಾಗ ನಿಜಕ್ಕೂ ನನಗೆ ನಂಬಲು ಸದ್ಯವಗಲೇ ಇಲ್ಲ.. ಹೇಗೂ ನನಗೆ ಸೋಲು ಎಂದು ತಲೆ ತಗಗಿಸಿಕೊನ್ದವನಿಗೆ ನಿಜಕ್ಕೂ ಆಶ್ಚರ್ಯಕಾದಿತ್ತು.. ನನ್ನ ಪ್ರತಿಸ್ಪರ್ಧಿ ೧೮ ಮತ ಪಡೆದಿದ್ದರೆ ನಾನು ಅಮೋಘ ೮೧ ಮತಗಳನ್ನ ಪಡೆದು ವಿಜಯಿ ಆಗಿದ್ದೆ. ಮಾರನೆ ದಿನ ನಮ್ಮ ಹೆಡ್ ಮಾಸ್ಟರ್ ನಮ್ಮ ಕ್ಲಾಸಿನಲ್ಲಿ ಇ ವಿಷ್ಯ ಹೇಳುತ್ತಾ " ಅಲ್ಲಾ ಭತ್ತ್ಗೆರೆ ಈ ರೀತಿ ಗೆಲ್ಲುತ್ತಾನೆ ಅಂಥ ನಾನು ಅಂದ್ಕೊಂಡೆ ಇರಲ್ಲಿಲ್ಲ.. ಅಲ್ಲಾ ನಾನೆನದ್ರು ಎಲೆಕ್ಷನ್ ಗೆ ನಿಂತರೇ ಬಹುಷಃ ನಮ್ಮ ಮನೆಯವರೇ ನನಗೆ ಮತ ಹಾಕೋದಿಲ್ಲ ಅಂತದರಲ್ಲಿ ಇವ ಬೇರೆ ಊರಗೆ ಬಂದು ಈ ರೀತಿ ಗೆಲ್ಲತ ಅಂದ್ರೇ ನಂಬೋದಕ್ಕೆ ಆಗಲ್ಲ.. ನೀನು ಏನು ಗಿಮಿಕ್ಕು ಮಾಡದೇ ಅಂಥ ನಮಗೂ ಹೇಳೋ ಮಾರಾಯ" ಎಂದಾಗ ನಿಜಕ್ಕೂ ಈಡಿ ಕ್ಲಾಸ್ ಬಿದ್ದು ಬಿದ್ದು ನಕ್ಕಿದ್ದೆವು... ನಿಜಕ್ಕೂ ಆ ಗೆಲುವು ಅದೇನೋ ಹೇಳುತ್ತಾರಲ್ಲ ಹೂ ಜೊತೆಗೆ ನಾರು ಭಗವಂತನ ಮುಡಿ ಸೇರಿತು ಅಂತಾರಲ್ಲ ಹಾಗೆ, ನನ್ನ ಗೆಳೆಯರ ಬಳಗದ ಸಹಾಯದಿಂದ ನಾನು ಗೆದ್ದಿದ್ದೆ..


ಆ  ನೆನಪು ಗಳನ್ನ ನೆನೆದಾಗ ತುಂಬಾ ಸಂತಸವಾಗುತ್ತದೆ... ಅಂಥ ದಿನಗಳು ಬೇಕೆಂದರು ಮತ್ತೆ ಬರಲಾರದು ಸವಿ ನೆನಪೊಂದೇ ಶಾಶ್ವತ....

Tuesday, September 7, 2010

ಲವ್... ಆಯ ಮಿಸ್ ಯು

Love... I Miss U...
Oh.. Love I really mis U a lot
Where are you gone...
Without telling a single word..
I missing you lot...
Please Tell..
Any mistakes Done by me???
If I have done, U have all the rights to scold me na???
Do you know how much suffering without U....
Going far away without saying Is it panishment!!!
Ok when it'll took an end??
When does I got you again???
I am waiting... for you...
I am waiting till my last breath...
Don't kill me.. being silent..
If you not ready to come,
Give me the reason.. That's enough..
I can live rest only with a sweet memories
which are given by you....