"ನಲ್ಮೆಯ ಗೆಳೆಯ,
ಆರಮಿದ್ಯನೋ. ದೋಸ್ತ.. ಮನೇಲಿ ಎಲ್ಲಾ ಎಂಥ ಮಾಡ್ತಿದ್ದ. ಇದೇನಪ್ಪ ಪ್ರೀತಿಯಲ್ಲಿ ಬಿದ್ದವು ಕೂಡ.. ಪ್ರೇಮ ಪತ್ರ ಬರೆಯ ಕಾಲ ಅಲ್ಲದೆ ಇರೋ ಈ ಕಾಲದಲ್ಲಿ ನಿನಗೆ ಎಂತಕೆ ಈ ಪತ್ರ ಬರಿತಿದ್ದಿ ಅಂತ ಹೇಳಿ ಆಶ್ಚರ್ಯ ಆಗ್ತಿದ್ದ!!! ಆ ನಿನ್ನ ಕೌತುಕ ಕೆಲವೇ ಕ್ಷಣದಲ್ಲಿ ಮರೆಯಾಗುತು. ಆದರೆ ಈ ನನ್ನ ಪತ್ರನಾ ಪೂರ್ತಿ ಓದು ಪ್ಲೀಸ್. ಏನೇ ಹೇಳು ದೋಸ್ತ ಬರವಣಿಗೆಯಲ್ಲಿ ನಾವು ಮಗುವಿನಂತೆ ನಮ್ಮ ಭಾವನೆಯನ್ನ ವ್ಯಕ್ತ ಪಡಿಸಲಾಗ್ತು ಯಾಕಂದ್ರೆ ನಮಗೆ ಓದುವವರ ಭಾವನೆಗಳು ನಾವು ಏನು ಹೇಳವು ಹೇಳಿ ಮಾಡಿದ್ವೋ ಅದನ್ನ ಹೇಳಲೇ ಅಡ್ಡಿ ಆಗ್ತಿಲ್ಲೆ.. ಅಲ್ಲದ.
ನನ್ನ ನೋವನ್ನ ನಿನ್ನ ಹತ್ರ ಹೇಳಿ ಕೊಳ್ಳವು ಹೇಳಿ ಈ ಪತ್ರ ಬರಿತಿದ್ದಿ, " ಸುದೀ, ನಿನ್ನ ತಂಗಿ ನಾ ನಾನು ತುಂಬಾ ಇಷ್ಟ ಪಡ್ತಿದ್ದಿ ಕಣೋ, ಅವಳಿಗೂ ನಾನು ಅಂದ್ರೇ ತುಂಬಾ ಇಷ್ಟ, ನಂಗವು ನಿನ್ನ ಮತ್ತೆ ನಿನ್ನ ಅಪ್ಪ ಅಮ್ಮನ, ಒಪ್ಪಿಗೆ ಸಿಕ್ಕದರೆ ಮದ್ವೆ ಆಗವು ಮಾಡಿದ್ಯ.. ಏನ್ ಹೇಳ್ತೆ?" ಅಂತ ನೀನು ಕೇಳಿದ್ದು, ಅದಕ್ಕೆ "ವಿಶು, ಖಂಡಿತ ಈ ವಿಷ್ಯ ನನ್ನ ಅಪ್ಪ ಅಮ್ಮನ ಹತ್ರ ಮಾತಾಡ್ತಿ' ಅಂತ ನಿನಗೆ ಹೇಳಿದಿದ್ದಿ. ಆಗ ನೀನು ತುಂಬಾ ಖುಶಿನು ಪಟ್ಟಿದಿದ್ದೆ. ನಂತರ ಯೋಚನೆ ಮಾಡದಿ ನನ್ನ ಮುದ್ದಿನ ತಂಗಿನ ನಿನಗೆ ಎಂತಕೆ ಕೊಡವು? ಅದು ನೀನು ಜಮೀನು ನೋಡ್ಕಂಡು ಮನೆ ಬದಿಗೆ ಇದ್ದವ.
ಈಗಂತೂ ಜಮೀನು ನೋಡ್ಕಂಡು ಮನೆ ಬದಿಗೆ ಇರದು ಅಂದ್ರೇ ಅದರಂತ ದರಿದ್ರ ಮತ್ತೊಂದಿಲ್ಲೇ.. ಸಮಯಕ್ಕೆ ಸರಿಯಾಗಿ ಕೆಲ್ಸದವು ಸಿಗ್ತಿವಿಲ್ಲೇ. ಎಲ್ಲಾ ಕೆಲ್ಸನು ನಾವೇ ಮಾಡ್ಕ್ಯಳವು, ಕೆಲ್ಸದವು ಸಿಕ್ಕದ್ರು ಅವು ಕೇಳದಷ್ಟು ಕೊಟ್ಟು ಕೆಲಸ ಮಾದಿಸ್ಕ್ಯಳವು . ನಮ್ಮಲ್ಲಿ ಹಳ್ಳಿ ರಾಜಕೀಯ ಹೇಳದು ನಾವು ಅಕ್ಕ ಪಕ್ಕದವರ ಹತ್ರ ಸರಿಯಾಗಿ ಇರದೇ ಕಷ್ಟ. ಇನ್ನೂ ಸರಿ ಇದ್ದಾರುನು ಅಕ್ಕ ಪಕ್ಕದವು ನಮ್ಮ ಸಹಾಯಕ್ಕೆ ಬತ್ತವನ ಹೇಳೋ ಹಂಗು ಇಲ್ಲೇ.. ಯಾಕಂದ್ರೆ ಅಕ್ಕ ಪಕ್ಕದಲ್ಲಿ ಇರೋ ಮನೆ ಎಲ್ಲಾ ವಯೋ ವೃದ್ಧರೆ ಇರ್ತ್ವೆ ಹೊರತು ನಮ್ಮ ಅಂತ ಯುವಕರು ಯಾರು ಸಿಗ್ತ್ವಿಲ್ಲೇ, ಸಿಕ್ಕದ್ರು ಅವು ಓದ್ತಾ ಇರ್ತ.. ಅವಕೆ ಜಮೀನು ಕೆಲಸಕ್ಕೆ ಬಾರಲೇ ಹೇಳಲೇ ಮನಸು ಬತ್ತಿಲ್ಲೆ. ಇಂಥ ಸ್ಥಿತಿ ಕಂಡೆ ಅಲ್ಲದ ನಾನು ಬೆಂಗಳೂರಿಗೆ ಬಂದು ಕೆಲಸ ಮಾಡ್ತಿದ್ದದ್ದು !!! ನನ್ನ ತಂಗಿಗೆ ಇಂಥ ಕಷ್ಟದ ಜೀವನ ಬೇಡವೇ ಬೇಡ . ನನ್ನ ತಂಗಿ ತುಂಬಾ ಓದದೆ ಇದ್ದಿಕ್ಕು ಆದರೆ ಇವತ್ತಲ್ಲ ನಾಳೆ ಅವಳಿಗೆ ದೊಡ್ಡ ನೌಕರಿಯಲ್ಲಿ ಇರೋ ಅಂದ್ರೇ ಸಾಫ್ಟ್ವೇರ್ ಇಂಜಿನಿಯರ್ ಅಂತವರನ್ನ ಯಾರಗಾದ್ರು ಕೊಟ್ಟು ಮದ್ವೆ ಮಾಡವು ಹೇಳಿ ನಿರ್ಧಾರ ಮಾಡಿ ಅದನ್ನೇ ಅಪ್ಪನ ಮನದಲ್ಲಿ ತುರುಕಿ.. ನನ್ನ ಅಪ್ಪನಾ ಮೂಲಕ ಹೇಳಸಿ, ನೀನು ನನ್ನ ತಂಗಿನ ಮದ್ವೆ ಆಗದೆ ಹೋದಂಗೆ ಮಾಡದಿ. ಅವಳಿಗೆ ಬೇರೆ ಕಡೆ ಒಳ್ಳೆ ಹುಡುಗನ್ನ ನೋಡಿ ಮದ್ವೇನು ಮಾಡದ್ಯ. ಹುಡುಗ ಒಳ್ಳೆ ಕೆಲಸದಲ್ಲೂ ಇದ್ದಿದ್ದ.. ಆದರೆ ನಷಿಬ ನೋಡು, ಅವಳು ಚನ್ನಗಿರವು ಹೇಳಿ ನಾನು ಹಂಗೆ ಮಾಡದಿ ಆದರೆ ಅವಳಿಗೆ ಆ ಯೋಗ ಇತ್ತಿಲ್ಲೇ.. ಮದ್ವೆ ಆಗಿ ವರುಷ ಕಳೆಯೋ ಒಟ್ಟಿಗೆ ಚನ್ನಗಿದ್ದ ಅವಳ ಸಂಸಾರಕ್ಕೆ ಯಾರ್ ಕಣ್ಣು ಬಿತ್ತೋ ಗೊತ್ತಿಲ್ಲೆ, ಅವರಿಬ್ಬರೂ ಕಾರಲ್ಲಿ ಹೋಗ್ತಿರಕ್ಕದ್ರೆ ಆಕ್ಸಿಡೆಂಟ್ ಆಗಿ, ನನ್ನ ಒಬ್ಬಳೇ ಮುದ್ದಿನ ತಂಗಿ ಎರಡು ಕಾಲು ಕಳಕಂಡು ಜೀವಂತ್ ಶವ ಆಗೋತು.
ಇತ್ತಲಾಗೆ ನಮ್ಮ ಮನೆಳು ಅಮ್ಮ ಸತ್ತು ಹೋದ ಮೇಲೆ ನಾನು ಊರಿಗೆ ಬಂದು ಜಮೀನು ನೋಡ್ಕಂಡು ಇರದು ಅನಿವಾರ್ಯ ಆಗೋತು, ಯಾಕಂದ್ರೆ ಅಪ್ಪನ ಹತ್ರ ಇಲ್ಲೇ ನಾ ಇರುವಲ್ಲೇ ಬಾ ಅಂದ್ರೇ, ನನ್ನವಳು ಇದ್ದ ಮನೆ ಬಿಟ್ಟು ಬರಲೇ ಆಗ್ತಿಲ್ಲೆ.. ನೀನೆ ಬೇಕಾದ್ರೆ ಬಾ ಅಂದ.. " ಎಲ್ಲಾ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಹೇಳಿ" ಮತ್ತೆ ಮನೆಗೆ ಬಂದು ಜಮೀನು ನೋಡಲೇ ಹನಕದಿ. ಕಾಲ ಎಷ್ಟ್ ಬೇಗ ಬದಲಾಗ್ತು ಅಲ್ಲದ ದೋಸ್ತ? ಆವತ್ತು ನಾನು ನಿನಗೆ ಅಹಂಕಾರದಲ್ಲಿ ಮಾಡಿದ ಅನ್ಯಾಯಕ್ಕೆ ಆ ವಿಧಿ ನನಗೆ ಶಿಕ್ಷೆ ಕೊಟ್ಟೆ ಬಿಟ್ಟಚು. ನನಗು ಮದ್ವೆ ಆಗ ಅನಿವಾರ್ಯತೆ ಬಂತು.. ಆದ್ರೆ ನಾನು ಇವಾಗ ಜಮೀನು ನೋಡ್ಕಂಡು ಮನೆಲಿರವಾಗಿದ್ದಕ್ಕೆ ಯಾರು ಹೆಣ್ಣು ಕೊಡವು ಇಲ್ಲೇ ನಮ್ಮ ಜಾತಿಲಿ. ಎಲ್ಲಾ ನಾನು ಯೋಚನೆ ಮಾಡದಂಗೆ, ಮಾಡದ.. ಅನ್ನಿಸ್ತು. ಅಂತು ಯಾವದೋ ಅನಾಥ ಹುಡುಗಿನ ಮದ್ವೆ ಆದಿ ಅವಳಿಗೆ ನಮ್ಮ ಜಾತಿ ಸಂಸ್ಕಾರ ಒಂದು ಚೂರು ಇಲ್ಲೇ.. ಅಂತ ಹೇಳಲೇ ನನಗೆ ಸುಮಾರಾಗ್ತು.. ನಿನಗೆ ನಾನು ಅನ್ಯಾಯ ಮಾಡದಿ. ಆದ್ರೆ ನಿನಗೆ ಒಳ್ಳೇದೆ ಆತು.. ನಮ್ಮ ಜಾತಿ ಕೂಸೇ ಸಿಕ್ಕಚು. ನೀನು ಒಳ್ಳೆ ರೀತಿ ಇಂದಾನೆ ಇದ್ದೆ. ಆದರೆ ನನ್ನ ಸ್ಥಿತಿ ನೋಡು, ನನಗೆ ನನ್ನವಳ ಕರ್ಕಂಡು ನಮ್ಮ ನೆಂಟರು - ಇಷ್ಟರ ಮನೆಗೆ ಹೋಗಲೇ ನಾಚಿಕೆ. ನಿನ್ನ ಅಂತ ಗೆಳೆಯರ ಎದುರು ತಲೆ ಎತ್ತಿ ನಿಲ್ಲೋ ಅರ್ಹತೆನೇ ಕಳಕಂಡಿಗಿಡಿ, ದೋಸ್ತ.. ನನ್ನ ತಪ್ಪಿಗೆ ಸರಿಯಾದ ಪ್ರಾಯಶ್ಚಿತ ಆಗೋತು.. ಈ ನನ್ನ ನೋವನ್ನ ಯಾರಿಗೂ ಹೆಲ್ಕಳಲೇ ಆಗ್ತಾ ಇಲ್ಲೇ.. ನನ್ನ ಒಳಗೆ ನನ್ನ ಬಗ್ಗೆನೇ ದ್ವೇಷ ಹುಟ್ತತ, ಇದ್ದು ನನ್ನ ತಂಗಿಯ ನಿನಗಾದ್ರು ಕೊಟ್ಟು ಮದ್ವೆ ಮಾಡಿದ್ದರೆ ಇವಾಗ ಅವಳನ್ನ ನೋಡವು ಅನ್ನಿಸದಾಗ ನಿಮ್ಮ ಮನೆಗೆ ಬಂದು ನೋಡಲಾದ್ರು ಆಗ್ತಿತ್ತು.. ಆದ್ರೆ ಅವಳಿದ್ದ ಪರದೇಶದಲ್ಲಿ.. ಅಲ್ಲಿಗೆ ಹೋಗೋ ಹಂಗು ಇಲ್ಲೇ.. ಇಲ್ಲಿ ನನ್ನ ದುಃಖ ಯಾರತ್ರ ಹೆಲ್ಕಲವು ತಿಳಿತ ಇಲ್ಲೇ.. ಅದಕ್ಕಾಗಿ ವಿಧಿ ಇಲ್ಲದೆ ನಿನಗೆ ಪತ್ರ ಬರದಿ.. ಬಹುಷ ಇದು ನನ್ನ ಕೊನೆಯ ಪತ್ರ.. ಈ ನಿನ್ನ ಗೆಳೆಯನನ್ನ ಕ್ಷಮಿಸು,
ಇಂತಿ ನಿನ್ನ ಸುಧಿ
ಇದನ್ನ ಓಡಿ ಮುಗ್ಸಿ ಏನೋ ಎಡವಟ್ಟು ಆಜು ಅಂದ್ಕಂಡು ಅವರ ಮನೆಗೆ ಫೋನ್ ಮಾಡದರೆ, ಅವ ಇವತ್ತು ಬೆಳಗ್ಗೆ ಆತ್ಮಹತ್ಯೆ ಮಾದ್ಕಂಜ ಹೇಳಿ ಆ ಕಡೆ ಇಂದ ಸುದ್ದಿ ಬಂತು..
ಅವನ ಅಂತಿಮ ದರ್ಶನಕ್ಕೆ ಹೋಗವು ಇನ್ನೂ.. ಆದರೂ ಅವನನ್ನ ನನ್ನ ಗೆಳೆಯ ಹೇಳಕಲೆ ನನಗೆ ನಾಚಿಕೆ ಆಗ್ತಾ ಇದ್ದು. ಅವ ನನಗೆ ಮೋಸ ಮಾಡದ ಅಂತ ಖಂಡಿತ ಅಲ್ಲಾ. ಜೀವನದ ಸವಾಲಿಗೆ ಉತ್ತರಿಸಲು ಹೆದರಿ ಹೇಡಿ ಹಂಗೆ ಆತ್ಮಹತ್ಯೆ ಮಾಡ್ಕಂಡ ಹೇಳಿ. ನಿಜಕ್ಕೂ ಅವನು ಹೇಡಿ ಅನ್ನಿಸ್ತ ಇದ್ದು? ಆದರೆ ಅವನು ಮಾಡಿದ ತಪ್ಪ? ಸರಿ ನಾ ?