ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Saturday, August 13, 2011

ಪ್ರೀತಿಯ ಹುಡುಗಿಗೊಂದು ಪತ್ರ.

ಪ್ರೀತಿಯ ಗೆಳತಿ,
                     ಹೇಗಿದ್ದೀಯ? ನೀ ಕಳಿಸಿದ ಎಲ್ಲಾ ಪತ್ರಗಳನ್ನ ಓದಿ ಮುಗಿಸಲು ಸಮಯವೇ ಇರಲಿಲ್ಲ, ಅದಕ್ಕಾಗಿ ಈ ಪತ್ರ ಬರೆಯಲು ತುಂಬಾ ದಿನಾ ಆಯ್ತು. ನೀನು ಕ್ಷೇಮವಾಗಿರುವೆ ಎಂದು, ನನ್ನ ನೆನಪು ಸದಾ ಕಾಡುತ್ತಿದೆ ಎಂದು ಬರೆದ ನಿನ್ನ ಮುದ್ದಾದ ಪತ್ರ ನೋಡಿ ತಕ್ಷಣ ನೀ ಇರುವಲ್ಲಿಗೆ ಓಡಿ ಬರಬೇಕು ಅನ್ನಿಸಿತು. ಹುಂ ಇದೆಲ್ಲ ಬರಿ ಬೊಗಳೆ ಎಂದು ನೀನು ಕೋಪಿಸಿ ಕೊಂಡಿರುವೆ ಎಂದು ಅನ್ನಿಸುತ್ತಿದೆ. ಆ ಕೋಪದ ಬೇಗೇ ನನ್ನ ಮನಸಿಗೂ ತಟ್ಟಿ ಮಳೆಗಾಲದ ಈ ಚಳಿಯಲ್ಲೂ ಬೆವರುವಂತಾಗಿದೆ. ಅದಕ್ಕಾಗೆ ಈ ಲೇಖನ. ಮೊದಲೇ ಕ್ಷಮೆ ಕೋರುವೆ ಚಿನ್ನು. I Miss You a Lot . ನಿನ್ನ ನೆನಪಾಗದ ದಿನಗಳಿಲ್ಲ ಚಿನ್ನು. ಅದರೇನು ಮಾಡೋಣ ಹೇಳು ನಾನು ಇಲ್ಲಿ. ನೀ ಅಲ್ಲಿ.
 ಹೇಯ್ ನಮಗಿಬ್ಬರಿಗೂ ಈ ತಿಂಗಳು ಎಷ್ಟು ಇಷ್ಟ ಅಲ್ಲವೇ. ಎಲ್ಲೇಲ್ಲೂ   ನಮ್ಮ ನೆಚ್ಚಿನ ಹಸಿರಿನ ಬಣ್ಣದಿಂದ ಕಂಗೊಳಿಸುವ ಈ ಅಗಸ್ಟ್ ತಿಂಗಳ ಅದೇನೋ ಎಲ್ಲಾ ಬಗೆಯ ಜನರಿಗೂ ಇಷ್ಟವಾಗುವ ತಿಂಗಳು ಅಲ್ಲವೇನು. ಭಾರತೀಯನಾದ ನನಗಂತೂ, ಈ ತಿಂಗಳು ಇಷ್ಟವಾಗಲು ತುಂಬಾನೇ ಕಾರಣವಿದೆ. ಅದರಲ್ಲಿ ಬಹು ಮುಖ್ಯ ಕಾರಣ ನೀನು.

ಇನ್ನುಳಿದ ಕಾರಣ ಹೇಳಬೇಕೆಂದರೆ ಸಾಮಾಜಿಕವಾಗಿ ಎಲ್ಲೇಲ್ಲೂ ಸುಂದರ ಹಸಿರಿನ ತೋರಣ ಭೂ ಮಾತೆಯನ್ನ ಸಿಂಗರಿಸುವ ಕಾಲವಿದು. ನಮ್ಮೂರಿನ ತೋಟ ಹೊಲ ಗದ್ದೆಗಳೆಲ್ಲ ಹಸಿರಿನ ಸೀರೆಯನ್ನುಟ್ಟು ವೈಯಾರದಿಂದ ನಾಚುತ್ತಿರುತ್ತವೆ. ಇನ್ನೂ ನಮ್ಮೂರಿನ ಜನರೆಲ್ಲಾ ಮೈ ಕೆಸಾರಗಿಸಿ ಕೊಂಡು ಧೋ ಎಂದು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಕೈ ತುತ್ತಿಗಾಗಿ ಸೂರ್ಯ ತನ್ನ ಕೆಲಸ ಮುಗಿಸಿ ಪಡುವಣದಿ ಮರೆಯಾಗುವವರೆಗೂ ದುಡಿದು, ದಣಿದು. ಮನೆ ಸೇರುವ ಆ ಸೊಬಗನ್ನ ನೆನೆದರೆ ಮೈ ಪುಳಕಿಸುತ್ತದೆ.
ಧಾರ್ಮಿಕವಾಗಿ ಅಂತು ತುಂಬಾ ಸಡಗರದ ತಿಂಗಳು ಈ ಅಗಸ್ಟ್. ಅಷ್ಟೇ ಆಷಾಡದ  ತಿಂಗಳ
ಮೈಲಿಗೆಯನ್ನ ತೊಳೆದು ಕೊಂಡು ಶ್ರಾವಣದ ಸಡಗರ ಆರಂಭ ಆಗಿರುತ್ತದೆ. ಅಂದರೇ ಎಲ್ಲಾ ದೇವಾಲಯಗಳು ಶ್ರಾವಣದ ದಿನ ನಿತ್ಯ ನೂತನವಾಗಿ ಭಕ್ತಾದಿಗಳ ಆಗರವಾಗಿ ಕಾಣಿಸಲು ಆರಂಭಿಸುತ್ತವೆ. ಆದರಲ್ಲೂ ಹಿಂದೂಗಳ ಹಬ್ಬಗಳ ಸಾಲು ಸಾಲು ಈ ತಿಂಗಳಿನಲ್ಲೇ ಆರಂಭ ಆಗುವುದು ಅಳಿಯನ ಅಮಾವಾಸ್ಯೆ , ರಕ್ಷಾ ಬಂಧನ , ವರ ಮಹಾಲಕ್ಷ್ಮಿ ಹಬ್ಬ. ಶ್ರಾವಣ ಮಾಸದ ಪ್ರತಿ ದಿನವು ಒಂದೊಂದು ದೇವರಿಗೆ ವಿಶೇಷ ದಿನ ಅಂದ ಮೇಲೆ ನಿಮಗೆ ಇನ್ನೇನು ಹೇಳುವುದು ಧಾರ್ಮಿಕವಾಗಿ ತುಂಬಾ ಸಡಗರದ ಮಾಸ ಈ ತಿಂಗಳು. ಹೌದು ಈ ಸಲ friendship day ಗೆ ನೀನು ಕಳಿಸಿದ ಉಡುಗೊರೆ ಬಂದಿದೆ. ನಾನು ಕಳಿಸಿದ್ದು ಬಂದಿದೆಯೇನು ಗೆಳತಿ? ಮತ್ತೊಂದು ವಿಷಯ ಹೇಳಲೇ ಬೇಕು ಎಲ್ಲಾ ಸಹೋದರ ಸಹೋದರಿಯರಿಗೂ ಸಂಭ್ರಮದ ಆಚರಣೆಯಾದ ರಕ್ಷಾ ಬಂಧನದ ಹಬ್ಬ ಇದೆ ತಿಂಗಳಲ್ಲವೇ? ಹೇ ಕೋತಿ, ನಿನ್ನ ಅಂತ ಹುಡುಗಿಯರಿಗಂತೂ ಬಿಡು ಇದು ಸಕಾಲ. ಕೆಲವು ತಿಂಗಳಿಂದ ಹಿಂದೆ ಬಿದ್ದಿರಬಹುದಾದ ನಿಮ್ಮ ಪ್ರೇಮಿಗಳಿಗೆ  ಕ್ಷಣಾರ್ಧದಲ್ಲಿ ಸಹೋದರ ಪಟ್ಟ ದಯಾ ಪಾಲಿಸಿ ಬಿಡುವಿರಿ. ನನಗೆ ಒಂದು ಅರ್ಥವಾಗಿಲ್ಲ ನಿನ್ನೆ ಮೊನ್ನೆವರೆಗೂ ಪ್ರೀತಿಸುವೆ ಎಂದವನಿಗೆ ಸಹೋದರ ಸ್ಥಾನವನ್ನ ನೀವೇನೋ ಕೊಡುವಿರಿ ಯಾಕೆಂದರೆ ನೀವು ಆ ಭಾವನೆಯನ್ನ ಹೊಂದಿರದೆ ಇರುವದರಿಂದ. ಆದರೆ ಪಾಪದ ಹುಡುಗನ ಭಾವನೆಗೆ ಬೆಲೆ ಎಲ್ಲಿ? ರಕ್ಷಾ ಬಂಧನ ಕಟ್ಟಿದ ಮಾತ್ರಕ್ಕೆ ಅವನ ಭಾವನೆ ಬದಲಾಯಿಸಿಕೊಳ್ಳುವುದು ಎಷ್ಟು ಕಷ್ಟ ಅಲ್ಲವೇ? ಸದ್ಯ ನಿನಗೊಂದು ತುಂಬು ಹೃದಯದ ಧನ್ಯವಾದ, ನೀನು ಇತರರಿಗೆ ರಕ್ಷಾ ಬಂಧನದಲ್ಲಿ ಬಿಳಿಸಿದಂತೆ ನನ್ನನ್ನು ಬಿಳಿಸದೆ ಇರುವುದಕ್ಕೆ. ಹೌದು ಈ ಸಲ ರಕ್ಷಾ ಬಂಧನದಲ್ಲಿ ಎಷ್ಟು ಉಡುಗೊರೆ ಸ್ವೀಕರಿಸಿದೆ? ಹಾಗೂ ಇನ್ನೆಷ್ಟು ಹುಡುಗರಿಗೆ ಸಹೋದರ ಸ್ಥಾನ ದಯಾ ಪಾಲಿಸಿದೆ?

ಇನ್ನೂ ರಾಜಕೀಯವಾಗಿ ಹೇಳುವುದಾದರೆ ಈ ತಿಂಗಳು ಪ್ರತಿಯೊಬ್ಬ ಭಾರತೀಯನು ಒಂದಿಲ್ಲೊಂದು ರೀತಿಯಲ್ಲಿ ದೇಶಾಭಿಮಾನ ತೋರುವ ದಿನಗಳು. ನಮ್ಮ ಪವಿತ್ರ ಭಾರತ ಭೂಮಿ ಬ್ರಿಟಿಷರ ದಾಸ್ಯತ್ವದಿಂದ ಮುಕ್ತಿ ಪಡೆದ ದಿನ ಬರುವುದು ಇದೆ ತಿಂಗಳಲ್ಲವೇ  ( ಅಗಸ್ಟ್ ೧೫. ) ನಮ್ಮ ದೇಶದ ಬಂಧ ಮುಕ್ತಿಗಾಗಿ ತಮ್ಮ ಬದುಕನ್ನ ಬಲಿದಾನ ಮಾಡಿದ ಅದೆಷ್ಟೋ ಅಸಂಖ್ಯಾತ ಪುಣ್ಯಾತ್ಮರನ್ನ ಭಾಷಣಗಳ ಮೂಲಕ ನಮ್ಮ ನಾಡಿನ ಗಣ್ಯ ವ್ಯಕ್ತಿಗಳು ನೆನೆಸಿಕೊಳ್ಳುವುದು ಹಾಗೂ ನಮ್ಮ ಅಂತ ಶ್ರೀಸಾಮಾನ್ಯರು ಮನಸಲ್ಲೇ ವಂದನೆ ಅರ್ಪಿಸುವುದಕ್ಕೆ ಇರುವ ಪುಣ್ಯ ದಿನ ಇದೆ ತಿಂಗಳ ೧೫. ಹಲವು ಬಾರಿ ಈ ತಿಂ
ಗಳು ಬಂದಾಗಲೆಲ್ಲ ನನಗೆ ಅನಿಸಿದೆ. ಅಲ್ಲಾ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಆ ಮಹನಿಯರ ಮಹತ್ತಾದ ಉದ್ದೇಶ ಇಂದು ಇಡೆರಿದೆಯೇ ಎಂದು? ಅವರೇನಾದರೂ ಇಂತ ರಾಜಕೀಯ ಆಡಳಿತವನ್ನ ಬಯಸಿದ್ದರೇನು? ಅಂತ ಮಹನೀಯರು ಏನಾದರು ಬ್ರಷ್ಟಾಚಾರ ತುಂಬಿದ ಆಡಳಿತ ವ್ಯವಸ್ಥೆಯನ್ನ ಕಂಡಿದ್ದರೆ ಏನು ಅಂದು ಕೊಲ್ಲುತಿದ್ದಿರ ಬಹುದು? ಬಹುಷಃ ಅವರೆಲ್ಲ ತಾವೇಕೆ ಇಷ್ಟೆಲ್ಲಾ ಹೊರಾಡಿದೆವು? ನೇಣಿಗೆ ಕೊರಳನ್ನ ಒಡ್ಡಿದೆವು? ಇದು ಈ ರೀತಿ ಆಗುತ್ತೆ ಅಂತ ಗೊತ್ತಿದ್ದರೆ ನಾವು ನಮ್ಮ ಸ್ವಾರ್ಥವನ್ನ ಬಯಸಿಕೊಂಡು ಬಾಳನ್ನ ಬದುಕುತ್ತಿದ್ದೆವಲ್ಲ ಎಂದು ಶೋಕಿತರಾದರೆ ಆಶ್ಚರ್ಯವಿಲ್ಲ ಅಲ್ಲವೇ? ಅದೇನೇ ಇರಲಿ ಈ ಸಲವೂ ಮತ್ತೆ ಬಂದಿದೆ ಅಗಸ್ಟ್ ೧೫ ಬನ್ನಿ ನಮಿಸೋಣ ಭಾರತ ಮಾತೆಯ ಹೆಮ್ಮೆಯ ಕುವರರಿಗೆ. ಹುತಾತ್ಮರಿಗೆ. ಹುಂ ಅಲ್ಲೆಲ್ಲೋ ಭಾರತ ಮಾತಾಕಿ ಜೈ ಎಂಬ ಘೋಷ ಕೇಳಿಸಲು ಶುರು ಆಗಿದೆ ಅಂದರೇ ಅರ್ಥವಾಯಿತಲ್ಲ ಗೆಳತಿ.
ಇದಕ್ಕೆಲ್ಲ ನಿನ್ನ ಬಳಿ ಸಮಂಜಸ ಉತ್ತರ ಇಹುದೆಂದು ಅಂದುಕೊಂಡಿರುವೆ ಒಹ್ ಸುವಿಚರಿಣಿ, ಈ ನನ್ನ ಗೊಂದಲವನ್ನ ಮುಂದಿನ ಪತ್ರದಲ್ಲಿ ನಿವಾರಿಸು. ಹುಂ ಭಾರತ ಮಾತೆಯ ಹೆಮ್ಮೆಯ ಪುತ್ರಿಯೇ ನಿನಗಿದೆ ಹುಟ್ಟು ಹಬ್ಬದ ಶುಭಾಶಯಗಳು. ನೀನು ನೂರುಕಾಲ ನನಗಾಗಿ ನಗು ನಗುತ ಸುಂದರ ಬಾಳನ್ನು ಬದುಕು. ಎಂದು ಈ ಪುಟ್ಟ ಹೃದಯ ಮಿಡಿಯುತ್ತಿದೆ. ಇದರೊಟ್ಟಿಗೆ ಒಂದು ಪುಟ್ಟ ಉಡುಗೊರೆ ಕಳಿಸಿರುವೆ. ಮರೆಯದೆ ಸ್ವೀಕರಿಸು.  ನಿನ್ನ ಕಾಣ ಬೇಕೆಂಬ ಹಂಬಲ ನನಗಾಗುತ್ತಿದೆ. ಖಂಡಿತ ಈ ಭಾದ್ರಪದ ಶುಕ್ಲದ ಚೌತಿಯ ದಿನದಂದು ನಾನು ಊರಿಗೆ ಬರುವೆ. ನಿನ್ನ ಕೈ ಹಿಡಿದು ನಮ್ಮ ಡೊಳ್ಳು ಹೊಟ್ಟೆಯ  ಗಣಪತಿ ಯನ್ನ ನೋಡಲು ಹೋಗೋಣ. ಏನು? ಸರಿನಾ? ತುಂಬಾ ಕನಸು ಕಾಣದಿರು ಅನ್ನುತ್ತಿರುವೆಯ? ನನಸಾಗಿಸಿಕೊಳ್ಳುವೆ. ನಿನಿರುವಾಗ ನನಗೇಕೆ ಚಿಂತೆ. ನಿನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸು. ಹುಂ ನಮ್ಮ ಮನೆ ಕಡೆಗೂ ಹೊಗುತ್ತಿರು. ಈ ಸಲ ಚಕ್ಕಲಿ ನನಗಾಗಿ ಸ್ವಲ್ಪ್ ಜಾಸ್ತಿ ಮಾಡಲು ನಿಮ್ಮ ಅಮ್ಮನಿಗೆ ತಿಳಿಸು.

ಇಂತಿ ನಿನ್ನ ಹವಿ ಹುಡುಗ.
ಕಮಲು.