ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Thursday, July 28, 2011

ಎಲ್ಲಾ ವಿದ್ಯೆಗಿಂತ ಬದಕುವ ಕಲೆ ಮೇಲು..




"ತರುಣ್.. ಇಲ್ಲಿ ನೋಡೋ.. ಇಲ್ಲಿ ಯಾರೋ.. ಹುಡುಗ.. ತಾನು ರಾಂಕ್ ಬಂದಿಲ್ಲ ಅಂತ ಆತ್ಮಹತ್ಯೆ ಮಾಡ್ಕೊಂದಿದಾನಂತೆ ಕಣೋ ಪಾಪ ಅಲ್ವ???" ಅಂತ ತರುಣನ ಅಮ್ಮ ಟಿ ವಿ ನೋಡ್ತಾನೆ  ಕೂಗಿದಾಗ, facebook ನಲ್ಲಿ ಮೊರೆ ಹುದುಗಿಸಿಕೊಂಡಿದ್ದ ತರುಣ್ ಆ ಲೋಕದಿಂದ ಹೊರ ಬಂದು ಅಮ್ಮನ ಮಾತನ್ನ ಕೇಳಿದ.
ಅದನ್ನ ಕೇಳಿದ ತಕ್ಷಣ  " ಅಮ್ಮ ,ಯಾರಮ್ಮ ಪಾಪ ಬದುಕಲಿಕ್ಕೆ ಹೆದರಿ.. ಸಾವಿಗೆ ಶರಣಾದವನೋ ಅಥವಾ ಅವನಿಗೆ ರಾಂಕ್ ನೀನು ಬರಲೇ ಬೇಕು ಅಂದ್ರೇ ಮಾತ್ರ ನಿನ್ನ ಬದುಕು  ಉಜ್ವಲ ಆಗಿರುತ್ತೆ ಅನ್ನೋದನ್ನ ಚಿಕ್ಕವನಿದ್ದಗಿಂದ ತಲೇಲಿ ತುಂಬಿ.. ಬೆಳೆಸಿದರಲ್ಲ.. ಅಂತ ತಂದೆ ತಾಯಿನೋ ???" ಅಂತ ತಕ್ಷಣ ಕೇಳಿದ.. 
"ಅಂದ್ರೇ?? ನೀನು ಹೇಳೋದು ಏನೋ ಅವನ ಸಾವಿಗೆ.. ಅವರ ಅಪ್ಪ ಅಮ್ಮನೇ ಕಾರಣ ಅಂತನ?? ಯಾವ ತಂದೆ ತಾಯಿಗೆ ತಮ್ಮ ಮಗ.. ಓದಿ ಬುದ್ದಿವಂತ ಆಗಬೇಕು ಅಂತಿರಲ್ಲ ಹೇಳು?? ಹಾಗೇ ಇರೋದು ತಪ್ಪಾ??" 
"ಅಮ್ಮ ತಪ್ಪಲ್ಲ.. ಆದರೆ ತಮ್ಮ ಕನಸನ್ನ ಇದೆರ್ಸ್ಕೊಬೇಕು ಅಂತ   ಅತಿ ಆದ ಒತ್ತಡವನ್ನ ತಮ್ಮ ಮಕ್ಕಳ ಮೇಲೆ  ಹೇರೋದು ತಪ್ಪು ಅಂದೇ. " ಅಂತ ಹೇಳಿ ಅಮ್ಮನನ್ನ ಸಮಾಧಾನ ಮಾಡಿದ. ಆದರೆ ಅವನ ಯೋಚನೆ ಮಾತ್ರ ನಿಲ್ಲಲಿಲ್ಲ.
  ಅಲ್ಲಾ ಯಾಕೆ ತಾನು ರಾಂಕ್ ಬಂದಿಲ್ಲ ಅಂತ  ಪಾಸ್ ಆಗಲಿಲ್ಲ ಅಂತೆಲ್ಲ   ಸಾವಿಗೆ ಶರಣಾಗ್ತಾರೆ ?? ಅವರ ಮನಸ್ಸು ಅಷ್ಟೆಲ್ಲ ಬಾಲಿಶ ಯಾಕೆ??? ಅಲ್ಲಾ.. ಅವರಿಗೆ ಆ ರೀತಿ ಅನ್ನಿಸೋದಾದ್ರು  ಯಾಕೆ ? ಸೋಲನ್ನ ಅರಗಿಸಿ  ಗೆಲ್ಲೋ ಛಲವನ್ನ ಅವರು ಓದಿರೋ ವಿದ್ಯಾಭ್ಯಾಸದಲ್ಲಿ ಇಲ್ಲಾ ಅಂದ್ರೇ ಅಂಥ ಶಿಕ್ಷಣ  ಕಲಿಯೋದದ್ರು ಏನಕ್ಕೆ ?? ಅವರ ಬುದ್ದಿವಂತಿಕೆ ಒಂದೇ ಸೋಲಿಗೆ ನೆಲಕಚ್ಚಿತೇನು??
ನನ್ನ  ಕಣ್ಣಿಗೆ ಕಾಣೋ  ಹಾಗೇ ಹೇಳಬೇಕೆಂದರೆ  ನನ್ನ ವಯಸಿನವನೆ ಆದ ನನ್ನ ಗೆಳೆಯ ಕಿರಣ್   ಚಿಕ್ಕವನಿದ್ದಗಿಂದ  ಓದೋದ್ರಲ್ಲಿ ತುಂಬಾ ಹಿಂದೆ  ಅದೇ ವೇಳೆ ಎಲ್ಲಾ ನಮ್ಮ ಹಿರಿಯರು  ನಾನು ಬುದ್ಧಿವಂತ ಅಂತ ಅವನ ಮುಂದೇನೆ ಹೊಗೊಲೋರು. ಆಗ  ಅವನಿಗೆ ಆಗುತ್ತಿದ್ದ  ಮಾನಸಿಕ ತಳಮಳ ಇವಾಗ ನನಗೆ ಅರ್ಥ ಆಗುತ್ತಿದೆ. ಇವಾಗ ನೋಡಿ ನಾನು ಇನ್ನೂ ಜೀವನದಲ್ಲಿ  ಓದಿ  ಬದುಕಲಿಕ್ಕಾಗಿ ದೊಡ್ಡ ದೊಡ್ಡ ಕಂಪೆನಿಗಳ ಗುಲಾಮನಾದೆ.( ಕೆಲಸಗಾರನದೆ.) ಅದಕ್ಕೂ ಮೊದಲೇ ನಾನು  ಓದುತ್ತಿರುವಾಗಲೇ ಅವನು  ಅರ್ಧದಲ್ಲೇ ಶಾಲಾ ಶಿಕ್ಷಣಕ್ಕೆ  ತಿಲಾಂಜಲಿ ಹೇಳಿದ. ಆದರೆ ಹೇಡಿ ಅಂತೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ.  ಅದರ ಬದಲು ಬದಕುವ ಕಲೆ ಕಲಿತ  ನಾನು ನನ್ನ ಶಾಲಾ ವಿದ್ಯಾಭ್ಯಾಸ ಮುಗಿಸುವುದರೋಳಗೆನೆ, ಅವನು ಜೀವನದಲ್ಲಿ  ನೆಲೆ ಕಂಡು ಕೊಂಡಿದ್ದ.  ತಾನು ಯಾರಿಗೂ ಕಡಿಮೆ ಏನು ಅಲ್ಲಾ ಎಂದು ತೋರಿಸಿ ಕೊಟ್ಟ. ಆವನ ಎದುರಿಗೆ ಚಿಕ್ಕವನಾಗಿದ್ದಾಗ ಎಲ್ಲರಿಂದ ಬುದ್ಧಿವಂತ ಎಂದು ಕರೆಸಿಕೊಳ್ಳುತ್ತ.. ಸದಾ ಶಾಲಾ ವಿದ್ಯಾಭ್ಯಾಸದಲ್ಲಿ ಮುಂದಿದ್ದು  ಬದಕುವ ಕಲೆ ಕಲಿಯಲು, ಪರದಾಡುತ್ತಿದ್ದ ನನ್ನ ಅಂತವನು ತುಂಬಾ ಕುಬ್ಜ ಆಗಿ ಬಿಟ್ಟೆ. ಆದರೆ ನಾನು ಸದಾ ಅವನಿಂದ ಸ್ಪೂರ್ತಿ ಪಡೆದೆ. ನಾನು ಸೋತಾಗಳು ಅವನೇ ನನಗೆ ಸ್ಪೂರ್ತಿ ಆದ. 
ಅಂತಹ ಸ್ಪೂರ್ತಿಯ ಚಿಲುಮೆಗಳು ಇತಿಹಾಸದ ಪುಟ ಹುಡುಕಿದರೆ ಅನೇಕರು ಸಿಗುವರು,  ನಿಜ ಹೇಳ ಬೇಕೆಂದರೆ ಸೋಲನ್ನು  ಗೆಲುವನ್ನಾಗಿಸುವ 
  ಛಲವನ್ತಿಕೆಯ ಬದುಕಿನ ಕಲೆಯನ್ನ ಕಲಿತು, ಬೆಳೆಸಿಕೊಂಡು ಸೋಲಿಗೂ ಸಡ್ಡು ಹೊಡೆದು ಗೆಲುವಿನ ನಗೆ ನಕ್ಕವರೇ ನಮ್ಮ ಇತಿಹಾಸದಲ್ಲಿ ಸಾಧಕರಾಗಿ ಸದಾ ಮಿನುಗುತ್ತಿರುವರಲ್ಲವೇ? 
ಈಗ ನೀವೇ ಹೇಳಿ ರಾಂಕ್ ಬರಲಿಲ್ಲ ಎಂದೋ ತಾನು ಬಯಸಿದವರು ಸಿಗಲಿಲ್ಲ ಎಂದೋ ಆತ್ಮಹತ್ಯೆ ಮಾಡಿಕೊಳ್ಳುವವರು ನಿಜಕ್ಕೂ ಬುದ್ಧಿವಂತರೋ ?? ಅಲ್ಲಾ  ಹೇಡಿಗಳೋ  ನೀವೇ ಹೇಳಿ?? ಇಂತವರು ಸಾಯುವ ಮೊದಲು ತಮ್ಮನ್ನು ನಂಬಿರುವವರ ಬಗ್ಗೆ ಒಮ್ಮೆ ಯೋಚಿಸಬಾರದೇಕೆ? ಸೋಲನ್ನ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧನೆಯ ಸವಿಯನ್ನ ಸವಿಯಬಾರದೇಕೆ ??  ನಿಜ ಹೇಳಿ ಅಂತವರು ಸತ್ತಾಗ ಪಾಪ ಅನ್ನಬೇಕೆ ಅಥವಾ  ಹೇಡಿಗಳು ಅನ್ನಬೇಕೆ?? ಎಂದೇನೇನೋ.. ಮನಸಿನಲ್ಲೇ ಲೆಕ್ಕಾಚಾರ ಹಾಕಿ.. ಕೊನೆಗೂ.. ಅರ್ಥವಾಗದೇ ತನ್ನ ಮನದ ತುಮುಲವನ್ನ ತನ್ನ ಡೈರಿ ಅಲ್ಲಿ ಬರಹ ಆಗಿಸಲು.. ನಡೆದ..