ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Friday, February 25, 2011

ಕಾಮನಬಿಲ್ಲಿನಲ್ಲಿ ಒಂದೇ ಬಣ್ಣ ಇರಲು ಸಾಧ್ಯವೇನು??

ಹೇ ನನ್ನ ಮನದನ್ನೆ..


                      ದಯಮಾಡಿ ಕ್ಷಮೆ ಇರಲಿ.. ತುಂಬಾ ದಿನವಾಯಿತು.. ನಿನಗೊಂದು ಓಲೆಯನ್ನ  ಬರೆಯಲಾಗಲಿಲ್ಲ.. ಹುಂ ನನಗೆ ಗೊತ್ತು.. ನೀನು ಇದನ್ನ ನೋಡಿ.. ನಿನ್ನ ಬಾಯಿ ಇಂದ ಬರುವ ಉದ್ಗಾರ ಏನೆಂದು 
" ಅಯ್ಯೋ ಪಾಪಿ ಇನ್ನೂ ಬದುಕಿದ್ದಿಯಾ?? ಅದೇನೋ ಹೇಳ್ತಿದ್ದೆ ನಿನ್ನ ಒಂದು ಕ್ಷಣ ಬಿಟ್ಟು ಬದುಕಿರೋಲ್ಲ ಅಂತ ಏನೇನೋ.. ನಾನೆಲ್ಲೋ ಹೋಗೆ ಬಿಟ್ಟೆ ಅಂದ್ಕೊಂಡನಲ್ವೋ.. ಇನ್ನೂ ಸ್ವಲ್ಪ ತಡದಿದ್ದ್ರೆ.. ಅಷ್ಟೇ... ನಾನು ನಿನ್ನ ನೆನಪಲ್ಲಿ ಅತ್ತು ಅತ್ತು.. ಕಂಬನಿ ಎಲ್ಲಾ ಬತ್ತಿದ.. ಮೇಲೆ ನಾನು ಸಾಯಬೇಕು ಅಂತ ಇದ್ದೆ ಅಂತ ಹಳೆ ಕಾಲದ ಹೆಣ್ಣು ಮಕ್ಕಳಂತೆ ಹೇಳ್ತೀನಿ ಅಂದ್ಕೋ ಬೇಡ.. ಇನ್ನೂ ಒಳ್ಳೆ ಹುಡುಗನ್ನ ಹುಡುಕಲಿಕ್ಕೆ ಹೊರಟಿದ್ದೆ.. ನಿನ್ನ ಪುಣ್ಯ ನನಗೆ ನಿನ್ನ ಅಂತ ಕೋತಿ ಸಿಗಲೇ ಇಲ್ಲವೋ.. ಅದಕ್ಕೆ ಬಚಾವಾದೆ.. ಇನ್ನೊಮ್ಮೆ.. ಹೀಗೆ ಮಾಡದರೆ.. ಮತ್ತೆ  ಈ ಅವಕಾಶ ಸಿಗುತ್ತೆ ಅಂದ್ಕೋ ಬೇಡ.. "ಅಂತ ಗೊಣಗಾಟ ಶುರುವಾಗಿದೆ ಅಂತ ನನಗೆ ಗೊತ್ತು.. ನನ್ನ ಚಿನ್ನು..

  ನನಗೆ ಗೊತ್ತು.. ಚಿನ್ನು.. ನಿನಗೆ ನನ್ನ ಮೇಲೆ ಎಷ್ಟು ಕೋಪ ಬಂದಿದೆ ಅಂತ ಆದ್ರೆ ಏನ್ ಮಾಡಲಿ..ಚಿನ್ನು ನಾನು ನಮ್ಮ ಭವಿಷ್ಯವನ್ನು ಕಟ್ಟಕೋ ಬೇಕಲ್ವ.. ಬರೆ ನಾನು ನೀನು ಕನಸು ಕಾಣತ ಕುತುಬಿಟ್ಟರೆ ಆ ನಮ್ಮ ಕನಸು ನನಸು ಮಾಡ್ಕೊಳ್ಳೋದು ಯಾವಾಗ.. ನನ್ನ ಚಲುವೆ.. ನೀನು ತುಂಬಾ ಜಾಣೆ ಇದನ್ನೆಲ್ಲಾ ಅರ್ಥ ಮಾಡ್ಕೋತಿಯ ಅಂದ್ಕೋತೀನಿ.. ಕಣೆ.. ಹೌದು.. ನಾನು ನಿನ್ನ ಒಂದು ತಿಗಲಿನಲ್ಲಿ ಬಂದಿರಬಹುದಾದ.. ೧೫ ಪತ್ರಗಳಿಗೆ ಒಂದೇ ಪತ್ರದಲ್ಲಿ ಸಾಧ್ಯವಾದಷ್ಟು ಉತ್ತರ ಬರೆದು ಕಳಿಸುತ್ತೇನೆ..  

           ಇವಾಗ ನಿನಗೊಂದು.. ವಿಶಿಷ್ಟ ಕೊರೆತವನ್ನ ಕೊರೆಯಬೇಕೆಂದು.. ಸಿದ್ಧ ಆಗಿದ್ದೇನೆ.. ದಯಮಾಡಿ ಸಹಕರಿಸಿ ಓದು.. ಹೀಗೊಂದು ವಿಚಾರ.. ಕಾಮನ ಬಿಲ್ಲಿನಲ್ಲಿ ಒಂದು ವೇಳೆ ಒಂದೇ ಬಣ್ಣ ಇದ್ದಿದ್ದರೆ ಏನಾಗ್ತಿತ್ತು?? ಅದನ್ನ ಯಾರದ್ರು ಕಾಮನಬಿಲ್ಲು ಅನ್ನುತ್ತಿದ್ದರೆ??? ಹಾಗೇ ಬಾಳಲ್ಲೂ , ಸಮಾಜದಲ್ಲೂ.. ಎಲ್ಲೇಲ್ಲೂ ವೈವಿದ್ಯತೆಯೇ ಇಲ್ಲದಿದ್ದರೆ.. ಎಲ್ಲವು.. ಒಂದೇ ರೀತಿ ಇದ್ದರೆ.. ನಾಳೆಯ ಬದುಕಿನ ಬಗೆಗೆ ಯಾರಾದರು ಕನಸು ಕಾಣುತ್ತಿದ್ದರೆ??? ಜೀವನದಲ್ಲಿ, ಸಮಾಜದಲ್ಲಿ ಆಸಕ್ತಿ ಇರುತ್ತಿತ್ತೆನು?? ಅದು ಅಲ್ಲದೆ.. ನೀನು ನನಗೆ ಯಾಕೆ ಈ ರೀತಿ ಕಾಡುತ್ತಿದ್ದೆ.. ನಾನೇಕೆ ನಿನಗೆ ಕೊರೆಯುತ್ತಿದ್ದೆ.. ಅಲ್ಲವ.. ಹೇ ಏನಾಯ್ತು... ಇವಗಲೇ.. ನಿದ್ದೆ ಹೋದೆಯ.. ಹೇ ನನ್ನ ಬರಹದ ಸ್ಪೂರ್ತಿಯೇ.. ನೀನು ಈ ರೀತಿ ಮೌನಿ ಆದರೆ ಸಹಿಸೇನು.. ಪೀಠಿಕೆಯೇ ಜಾಸ್ತಿ ಆಯಿತು ಅಂತ ಬೈತಿದಿಯ.. ನೆರವಾಗಿ ವಿಷಯಕ್ಕೆ ಬರುತ್ತೇನೆ ಮಾರಾಯ್ತಿ.
.
            ನನ್ನ ಪ್ರಕಾರ ವೈವಿದ್ಯತೆ ಇರುವುದರಿಂದಲೇ ಸಮಾಜ ಸುಂದರವಾಗಿದೆ.. ಸೋಲು ಗೆಲುವು.. ಎಲ್ಲಾ ಇದ್ದರೇನೆ ಬಾಳು ಸೊಗಸಾಗಿರುತ್ತೆ.. ಹಾಗೇ ನಮ್ಮ ಭವ್ಯ ಜಾತ್ಯತೀತ ಭಾರತದಲ್ಲಿ ಜಾತಿ ಅನ್ನೋ ವ್ಯವಸ್ತೆ ಅದರ ಪಾಡಿಗೆ ಅದು  ಒಂದು ಪ್ರಮಾಣದಲ್ಲಿ ಇದ್ದರೇನೆ  ಭಾರತದ ಸಂಸ್ಕೃತಿಗೆ ಒಂದು ಸೊಬಗು.. ಹುಂ ಎಲ್ಲಾ ನಮ್ಮ ಇಂದಿನ ಮೇಧಾವಿಗಳು ನನ್ನ ಈ ಮಾತು ಕೇಳದ್ರೆ ಖಂಡಿತ ಛೀ ಮಾರಿ ಹಾಕ್ತಾರೆ ಅಂತ ಗೊತ್ತು ನನಗೆ .. ಯಾಕೆಂದರೆ.. ಅವರೆಲ್ಲ .. ಜಾತಿ ರಹಿತ 



ಸಮಾಜದ ನಿರ್ಮತ್ರರಾಗುವ ಕನಸು ಹೊತ್ತವ್ರಲ್ಲ್ವ.. ಅದಕ್ಕೆ ನಾನು ಇಂತ ಅಸಂಬದ್ದ  ವಿಚಾರಗಳನ್ನ ನಿನ್ನಲ್ಲಿ ಹೇಳಿಕೊಳ್ಳುವುದು.. ಹೌದು... ಅವರು ಜಾತಿರಹಿತ ಸಮಾಜ ನಿರ್ಮಾಣ ಮಾಡಿ.. ಮತ್ತೇನು ಮಾಡಿಯಾರು.. ??ಮನುಷ್ಯನ  ಹುಟ್ಟು ಸ್ವಭಾವವನ್ನ ಹೋಗಲಾಡಿಸಲು ಆಗುವುದೇನು?? ಜಾತಿ ಪದ್ಧತಿ  ಹೋಗಿ.. ಪಾಶ್ಚಾತ್ಯರಲ್ಲಿ ಇರುವಂತೆ.. ವರ್ಗ ಮದರಿಯ ಬೇರ್ಪಡುವಿಕೆ ಶುರುವಾಗುವುದು.. ಅಷ್ಟೇ. ಅದೇನು ಇದಕ್ಕಿಂತ ಒಳ್ಳೆಯದೆನು?? ಅದು ಅಲ್ಲದೆ.. ಈ ನಮ್ಮ ಭವ್ಯ ಜಾತ್ಯತೀತ ಭಾರತ ದೇಶದಲ್ಲಿ.. ಜಾತಿ ಆಧಾರದ ಮೇಲೆ ತಮ್ಮ ಬೆಳೆ ಬೇಯಿಸಿಕೊಂಡು.. ಬದುಕುತ್ತಿರುವ.. ರಾಜಕಾರಣಿಗಳ ಪಾಡೇನು?? ಅವರು.. ತಮ್ಮ.. ತಲೆಯನ್ನ.. ದುಡ್ಡು ಮಾಡುವದರ ಜೊತೆಗೆ ಮತ್ತೆ ಹೊಸ ರಣತಂತ್ರಕ್ಕಾಗಿ ಉಪಯೋಗಿಸಬೇಕಲ್ಲ.. ಸುಂದರಿ.. ಅದು ಎಷ್ಟೊಂದು.. ಕಷ್ಟದಾಯಕವಲ್ಲವೇ?? ಪಾಪ..!!!

 "ಹುಂ ನಿನಗ್ಯಾಕೆ ಇವೆಲ್ಲ ನಿನಾಯಿತು ನಿನ್ನ ಬದುಕಾಯಿತು.. ಅಂತ ಇರೋಕಗಲ್ವ ಅಂಥ ಬೈತಿದಿಯ.. "ಹುಂ.. ಜಾತ್ಯತಿತತೆಯ ಬಗ್ಗೆ ಮಾತನಾಡುವ.. ಹುಂಬ.. ಹಾಗೂ ಮೇಧಾವಿ.. ಬೊಗಳೆ ಭಟ್ಟರನ್ನ ಕಂಡಾಗ ಮೈ ಎಲ್ಲಾ ಉರಿಊತ್ತದೆ  ಗೆಳತಿ.. 
ಅಲ್ಲಾ ಅಂತವರಿಗೆಲ್ಲ ಒಂದು ಖಾಸಗಿ ಪ್ರಶ್ನೆ.. ಕೇಳಬೇಕು.. ಅನ್ನಿಸುತ್ತಿದೆ.. ಅಂಥವರ  ಮಕ್ಕಳು  ಬೇರೆ ಉನ್ನತ ಜಾತಿಯ ಕನ್ಯೆಯನ್ನ/ಹುಡುಗನನ್ನ ಮದುವೆ ಆದರೆ.. ಅವರು ಖಂಡಿತ..ಸಂತೋಷದಿಂದ  ಒಪ್ಪುವರು ಅಂಥ ನನಗೆ ಗೊತ್ತು.. ಅದೇ.. ಅವರ ಜಾತಿಗಿಂತ ನಿಮ್ನ ವರ್ಗದ ಹುಡುಗ/ಹುಡುಗಿ ಯನ್ನ ಮದುವೆಯಾಗಿ ಬಂದರೆ ಅವರು ಅದನ್ನ ಅಷ್ಟೇ ಸಂತೋಷವಾಗಿ ಸ್ವೀಕರಿಸುವರೆನು?? ಹುಂ ಮೇಲಿಂದ.. ಒಪ್ಪಿದರು..ಅವರ ಒಳ ಮನಸ್ಸು ಕೊರಗುತ್ತಲೇ ಇರುವುದು..ಇದು ಮಾತ್ರ ದಿಟ..ಕಣೆ.. ಹಾಗಾದಾಗಲೇ.. ಅವರ ನೈಜ ಬಣ್ಣ ಬಯಲಾಗುವುದು..
ಅದಕ್ಕೆ ನಾನು ಹೇಳಿದ್ದು.. ಪಾಶ್ಚಿಮಾತ್ಯರಿಗೆ  ವರ್ಗ ಪದ್ಧತಿ ಹೇಗೋ ಹಾಗೇ ನಮಗೆ ಜಾತಿ ಪದ್ಧತಿ.. ಹುಂ ನನಗೆ ಗೊತ್ತು.. ನೀನು ಮನಸಿನಲ್ಲೇ.. ಇವನು ಪಕ್ಕ.. ಸಂಪ್ರದಾಯವಾದಿ ಅಂತ ಗೊಣಗುತ್ತಿರುವೆ ಅಂತ ಗೊತ್ತು.. 
ಇಲ್ಲಾ ಕಣೆ ನಾನು ವಾಸ್ತವವಾದಿ.. ನನಗೆ ನಿಸರ್ಗ, ಸಮಾಜ.. ಮನುಷ್ಯರು ಅವರ ನೈಜ ಆಗಿ ಕಂಡರೆನೆ ತುಂಬಾ ಇಷ್ಟ.. ಹೌದು.. 
ನೀನು ಲಂಗದಾವನಿಯಲ್ಲಿ ಕಂಡಷ್ಟು ಚಂದ ಪ್ಯಾಂಟು ಶರ್ಟು ಹಾಕಿದರೆ ಕಾಣಲಾರೆ.. ಎಂದು ನಾನು ಅದೆಷ್ಟು ಬಾರಿ ನಿನಗೆ ಹೇಳಿಲ್ಲ.. ಹಾಗೇ..  ನೀನು ಚಂದ ಕಾಣುತ್ತಿಯ ಅಂದ ಮಾತ್ರಕ್ಕೆ ನೀನು ಅಧುನಿಕ ಉಡುಗೆ ತೊಡಲೇ ಬಾರದು ಎಂದು ನಾನು ಎಂದಾದರು ಹೇಳಿರುವೆನೇನು???? 
ಅದೇ ರೀತಿ.. ಜಾತಿ ವ್ಯವಸ್ಥೆಯಲ್ಲಿಯ  ಎಲ್ಲಾ ಲೋಪ ದೋಷಗಳನ್ನು ನಾನು ಸಮರ್ಥಿಸುತ್ತಿಲ್ಲ ಕೂಸೇ.. ಅದನ್ನ ಮಾಡಿದವರು..ನಮ್ಮ ಹಿಂದಿನವರು.. ಅದು ಅಂದಿನದು..ನಾವು ಕಾಲಕ್ಕೆ ತಕ್ಕಂತೆ ಅದನ್ನ ಬದಲಾಯಿಸಿಕೊಳ್ಳಬೇಕು.. ಹಾಗಂತ.. ಅದನ್ನ ನಿರ್ನಾಮವೇ ಮಾಡಬೇಕು ಅನ್ನುವುದು ತಪ್ಪು.. ಏನಂತೀಯ .. ನನ್ನ ಮನದ ಒಡತಿಯೇ..?? 
 ಬರೆ ಇದೆ ಆಯಿತು.. ನಮ್ಮಿಬ್ಬರ ಬಗೆಗಿನ ಕುಶಲೋಪರಿ ನಡೆದೇ ಇಲ್ಲವಲ್ಲೋ ಅಂಥ ಹೇಳ್ತಿದಿಯ?? ಹೇ ಗುಬ್ಬಿ.. ನಿನ್ನ ನೋಡ್ಬೇಕು ಅನ್ನಿಸ್ತಿದೆ ಕಣೆ.. ಆದಷ್ಟು ಬೇಗ.. ಇಲ್ಲಿಂದ.. ಓಡಿ ಬಂದು ಬಿಡುತ್ತೇನೆ.. ಯಾಕೋ ನಿನ್ನ ಮಡಿಲಲ್ಲಿ.. ಮಲಗಿ.. ನಾವು.. ಕಂಡ ಕನಸುಗಳ ಮತ್ತೊಮ್ಮೆ ಮೆಲುಕು ಹಾಕಬೇಕು ಅನ್ನಿಸಿದೆ..
              ಹೌದು.. ಆಲೆಮನೆ ಶುರು ಆಯ್ತಾ??? ನನ್ನ ಕರೆದೆ ಇಲ್ಲ??? ಕ್ಷಮೆ ಇರಲಿ.. ನೀನು ಮೊನ್ನೆ ಕಳಿಸಿದ ಪತ್ರದಲ್ಲಿ ಕರೆದಿರಬೇಕು.. ಅದನ್ನು ಇನ್ನು ಒಡೆದು ಓದಿಲ್ಲ..  
ಇಂತಿ ಎಂದೆದಿಗೂ ನಿನ್ನ ಉಸಿರಾಗಿರುವವ
~ ಕಮಲು ~
-- 

-- 

5 comments:

  1. ಚನ್ನಾಗಿದೆ..ವಿವಾಹಗಳ ತಾಕಲಾಟದ ವಿಮರ್ಶೆ.
    ಕಾಗುಣಿತ ..ದೀರ್ಘ ಹ್ರಸ್ವಗಳು ಟೈಪಿಂಗ್ ಭರದಲ್ಲಿ ಮಿಸ್ ಆಗಿವೆ..(ಅನ್ಯಥಾ ಭಾವಿಸಬೇಡಿ)

    ReplyDelete
  2. ತಪ್ಪಿದ್ದನ್ನ ತಿದ್ದಿ ಓದಿದ್ದಕ್ಕೆ.. ಧನ್ಯವಾದಗಳು..ಆ ತಪ್ಪನ್ನ.. ಮುಂದಾಗದಂತೆ ಎಚ್ಚರ ವಹಿಸುವೆ..

    ReplyDelete
  3. "ಹೌದು.. ಆಲೆಮನೆ ಶುರು ಆಯ್ತಾ??? ನನ್ನ ಕರೆದೆ ಇಲ್ಲ??? ಕ್ಷಮೆ ಇರಲಿ.. ನೀನು ಮೊನ್ನೆ ಕಳಿಸಿದ ಪತ್ರದಲ್ಲಿ ಕರೆದಿರಬೇಕು.. ಅದನ್ನು ಇನ್ನು ಒಡೆದು ಓದಿಲ್ಲ".....ನಿಜ ಜೀವನದಲ್ಲಿ ಇಂಥಾ ತಪ್ಪು ಆಗದಿರಲಿ ಸಹೋದರ !

    ReplyDelete
  4. ಹುಂ ಅಕ್ಕಯ್ಯ.. ಲೇಖನ.. ಸರಿ ಆಯ್ದ???

    ReplyDelete